ಮತ್ತೆ ಶೂಟಿಂಗ್ ಮರಳಿದ ಆಂಧ್ರ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್
ಹೈದರಾಬಾದ್: ಟಾಲಿವುಡ್‌ನ ಪವರ್‌ಸ್ಟಾರ್ ಹಾಗೂ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಪವನ್ ಕಲ್ಯಾಣ್ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಆಂಧ್ರ ಪ್ರದೇಶ ಚುನಾವಣೆಗೂ ಮುನ್ನ ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಆದರೆ, ಚುನಾವಣೆಯಲ್ಲಿ ಸಕ್ರಿಯರಾಗಿದ್ದರಿಂದ ಆ ಸಿನಿಮಾಗಳಿಗೆ ಬ್ರೇಕ್ ಕೊಟ್ಟಿದ್ದರು. ಅದುವೇ 'ಹರಿಹರ ವೀರ ಮಲ್ಲು'.
ಆಂಧ್ರ ಪ್ರದೇಶದ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷಕ್ಕೆ ಜನರು ಆಶೀರ್ವಾದ ಮಾಡಿದ್ದರು. ಇನ್ನೊಂದು ಕಡೆ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷಕ್ಕೂ ಬಹುಮತ ಸಿಕ್ಕಿತ್ತು. ಮೊದಲೇ ಮೈತ್ರಿ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸಿದ್ದರಿಂದ ಇಬ್ಬರೂ ಸೇರಿ ಸರ್ಕಾರ ರಚನೆ ಮಾಡಿದ್ದಾರೆ. ಹೀಗಾಗಿ ಪವನ್ ಕಲ್ಯಾಣ್‌ಗೆ ಉಪಮುಖ್ಯಮಂತ್ರಿ ಸ್ಥಾನ ಒಲಿದು ಬಂದಿತ್ತು.

ಪವನ್ ಕಲ್ಯಾಣ್ ಉಪಮುಖ್ಯ ಮಂತ್ರಿಯಾದ ಬೆನ್ನಲ್ಲೇ ಸಿಕ್ಕಾಪಟ್ಟೆ ಬ್ಯುಸಿಯಾಗಿಬಿಟ್ಟರು. ಅಲ್ಲಿಗೆ ಈಗಾಗಲೇ ಒಪ್ಪಿಕೊಂಡಿದ್ದರು ಸಿನಿಮಾಗಳು ಮತ್ತೆ ಸೆಟ್ಟೇರುವುದು ಅನುಮಾನ ಎಂದೇ ಭಾವಿಸಲಾಗಿತ್ತು. ಅಭಿಮಾನಿಗಳು ಕೂಡ ಪವನ್ ಕಲ್ಯಾಣ್ ಸಿನಿಮಾ ನೋಡುವ ಆಸೆಯನ್ನು ಕೈ ಬಿಟ್ಟಿದ್ದರು. ಆದ್ರೀಗ ಪವನ್ ಕಲ್ಯಾಣ್ 'ಹರಿಹರ ವೀರ ಮಲ್ಲು' ಸಿನಿಮಾ ಸೆಟ್ಟಿನಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ.
ಪವರ್‌ಸ್ಟಾರ್ ಸ್ವತ: ಖುದ್ದಾಗಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೊವನ್ನು ಹಂಚಿಕೊಂಡಿದ್ದಾರೆ. ಈ ಫೋಟೊ ವೈರಲ್ ಆಗುತ್ತಿದ್ದಂತೆ ಟಾಲಿವುಡ್ ಪವರ್‌ಸ್ಟಾರ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಮತ್ತೆ ಪವನ್ ಕಲ್ಯಾಣ್ ಸಿನಿಮಾಗಳನ್ನು ತೆರೆಮೇಲೆ ನೋಡುವ ಆಸೆ ಚಿಗುರೊಡೆದಿದೆ. ಒಪ್ಪಿಕೊಂಡು ಸಿನಿಮಾಗಳನ್ನು ತಮ್ಮ ಬ್ಯುಸಿ ಕೆಲಸದ ನಡುವೆಯೇ ಮುಗಿಸುತ್ತಿದ್ದಾರೆ.
"ಅತಿಯಾದ ರಾಜಕೀಯ ಶೆಡ್ಯೂಲ್‌ಗಳ ಬಳಿಕ ನಾನು ನನ್ನ ಕೆಲವು ಸಮಯವನ್ನು ಬಹಳ ದಿನಗಳಿಂದ ಹಾಗೇ ಉಳಿದಿದ್ದ ಕೆಲಸಕ್ಕೆ ನೀಡಿದ್ದೇನೆ" ಎಂದು ಆಂಧ್ರ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ 'ಹರಿಹರ ವೀರ ಮಲ್ಲು' ಶೂಟಿಂಗ್ ಸೆಟ್ಟಿನ ಫೋಟೊಗಳನ್ನು ಹಂಚಿಕೊಳ್ಳುವುದರ ಜೊತೆ ಶೇರ್ ಮಾಡಿಕೊಂಡಿದ್ದಾರೆ. ಇಲ್ಲಿಂದ ಪವನ್ ಫ್ಯಾನ್ಸ್ ಮತ್ತೆ ಆಕ್ಟಿವ್ ಆಗಿದ್ದಾರೆ.
'ಹರಿಹರ ವೀರ ಮಲ್ಲು' ಸಿನಿಮಾವನ್ನು ನಿರ್ದೇಶಕ ಕ್ರಿಶ್ ಜಗರ್ಲಮುಡಿ ಆರಂಭ ಆಗಿದ್ದರು. ಆದರೆ, ಸಿನಿಮಾ ಟೇಕಾಫ್ ಆದಲ್ಲಿಂದ ಶೂಟಿಂಗ್ ಆಗಿದ್ದಕ್ಕಿಂತ ಹೆಚ್ಚಾಗಿ ನಿಂತಿದ್ದೇ ಹೆಚ್ಚು. ಹೀಗಾಗಿ ಕ್ರಿಶ್ ಜಗರ್ಲಮುಡಿ ಸಿನಿಮಾದಿಂದ ಹಿಂದೆ ಸರಿದಿದ್ದರು. ಬಳಿಕ ಈ ಸಿನಿಮಾವನ್ನು ಎ ಎಂ ಜ್ಯೋತಿ ಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಇದು ಪವರ್‌ಸ್ಟಾರ್ ಪವನ್ ಕಲ್ಯಾಣ್ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಹೀಗಾಗಿ ಈ ಐತಿಹಾಸಿಕ ಸಿನಿಮಾ ಪವನ್ ಸಿನಿಮಾ ವೃತ್ತಿ ಬದುಕಿಗೆ ತುಂಬಾನೇ ಮುಖ್ಯ.
ಸದ್ಯ ಈ ಸಿನಿಮಾದ ಶೂಟಿಂಗ್ ಅನ್ನು ವಿಜಯವಾಡದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಇಡೀ ತಂಡ ಬೀಡು ಬಿಟ್ಟಿದ್ದು, ಪವನ್ ಕಲ್ಯಾಣ್ ಕೊಟ್ಟಿರುವ ಸಮಯದಲ್ಲಿ ಶೂಟಿಂಗ್ ಮುಗಿಸುವ ಅನಿವಾರ್ಯತೆಯಿದೆ. ಪವನ್ ಕಲ್ಯಾಣ್‌ಗೆ ನಾಯಕಿಯಾಗಿ ನಿಧಿ ಅಗರ್ವಾಲ್ ನಟಿಸಿದ್ದಾರೆ. ಈ ಸಿನಿಮಾವನ್ನು ಎ.ದಯಕರ್ ರಾವ್ ನಿರ್ಮಾಣ ಮಾಡುತ್ತಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಕೀರವಾಣಿ ಈ ಐತಿಹಾಸಿಕ ಸಿನಿಮಾಗೆ ಟ್ಯೂನ್ ಹಾಕುತ್ತಿದ್ದಾರೆ.


Click it and Unblock the Notifications











