ಸಿಂಗಾಪುರದಲ್ಲಿ ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ನೆವಾ ಪಡೆದ ಪದವಿ ಯಾವುದು? ಸೆಲ್ಫಿ ವೈರಲ್

ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಸಿನಿಮಾಗಿಂತ ಹೆಚ್ಚಾಗಿ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಹಾಗಂತ ವೈಯಕ್ತಿಕ ಜೀವನದ ಕಡೆಗೂ ಗಮನ ಹರಿಸಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಮೂರನೇ ಪತ್ನಿ ಅನ್ನಾ ಲೆಜ್ನೆವಾ ಜೊತೆಗೆ ಸಿಂಗಾಪುರದಲ್ಲಿ ತೆಗಿಸಿಕೊಂಡ ಫೋಟೊ ಒಂದು ವೈರಲ್ ಆಗುತ್ತಿದೆ.

ಇದು ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ನೆವಾ ಸಿಂಗಾಪುರದಲ್ಲಿ ಪದವಿ ಪಡೆದ ಬಳಿಕ ತೆಗೆಸಿಕೊಂಡು ಸೆಲ್ಫಿ. ಪವನ್ ಕಲ್ಯಾಣ್ ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ವೇಳೆ ಅನ್ನಾ ಲೆಜ್ನೆವಾ ಆಕ್ಟಿವ್ ಆಗಿದ್ದರು. ಆದ್ರೀಗ ಪತಿ ಉಪಮುಖ್ಯಮಂತ್ರಿ ಆಗುತ್ತಿದ್ದಂತೆ ಹೊಸದೊಂದು ಪದವಿ ಪಡೆದು ಪತಿಯೊಂದಿಗೆ ಕಾಣಿಸಿಕೊಂಡಿದ್ದಾರೆ.

Andra Pradesh Dy CM Pawan Kalyan 3rd wife Anna Lezhneva graduates from NUS Singapore

ಅಂದ್ಹಾಗೆ, ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ನೆವಾ ಸಿಂಗಾಪುರದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇತ್ತೀಚೆಗೆ ಈ ಸಮಾರಂಭ ನಡೆದಿತ್ತು. ಪತ್ನಿ ಪದವಿ ಪಡೆದ ಆ ಕ್ಷಣವನ್ನು ಕಣ್ತುಂಬಿಕೊಳ್ಳಲು ಪವನ್ ಕಲ್ಯಾಣ್ ಕೂಡ ಸಿಂಗಾಪುರಕ್ಕೆ ಹೋಗಿದ್ದರು. ಸಿಂಗಾಪುರದ ನ್ಯಾಷನಲ್ ವಿಶ್ವವಿದ್ಯಾನಿಲಯದಲ್ಲಿ ಆಗ್ನೇಯ ಏಷ್ಯಾ ರಾಷ್ಟ್ರಗಳ ಕಲೆ ಮತ್ತು ಸಾಮಾಜಿಕ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಸಿಂಗಾಪುರದ ನ್ಯಾಷನಲ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಅದ್ಧೂರಿ ಪದವಿ ಸಮಾರಂಭದಲ್ಲಿ ಅನ್ನಾ ಲೆಜ್ನೆವಾಗೆ ಪದವಿ ಪ್ರಧಾನ ಮಾಡಲಾಗಿದೆ. ಈ ವೇಳೆ ಪವನ್ ಕಲ್ಯಾಣ್ ಉಪಸ್ಥಿತಿ ಇತ್ತು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ಹಾಗೂ ವಿಡಿಯೋ ಓಡಾಡುತ್ತಿವೆ. ಈ ಫೋಟೊ, ವಿಡಿಯೋಗಳನ್ನು ನೋಡಿ ಅಭಿಮಾನಿಗಳು ಸಿಂಗಾಪುರದಲ್ಲೂ ಪವನ್ ಸ್ಟೈಲ್ ಹಾಗೂ ಖದರ್ ಬದಲಾಗಿಲ್ಲ ಎಂದು ಕಾಮೆಂಟ್ ಹಾಕುತ್ತಿದ್ದಾರೆ.

Andra Pradesh Dy CM Pawan Kalyan 3rd wife Anna Lezhneva graduates from NUS Singapore

ಪವನ್ ಕಲ್ಯಾಣ್ ಕೂಡ ಪತ್ನಿ ಸಿಂಗಾಪುರ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಖುಷಿಯಲ್ಲಿದ್ದು, ಅಭಿನಂದಿಸಿದ್ದಾರೆ. ಇದೇ ವೇಳೆ ಪತ್ನಿ ಅನ್ನಾ ಲೆಜ್ನೆವಾ ಜೊತೆಗೆ ಸೆಲ್ಫಿಯನ್ನೂ ತೆಗೆಸಿಕೊಂಡಿದ್ದಾರೆ. ಈ ಪೋಟೊಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಮೂಲತ: ರಷ್ಯಾದವರಾಗಿರುವ ಅನ್ನಾ ಲೆಜ್ನೆವಾ ಅಲ್ಲಿನ ಸೇಂಟ್ ಪೀಟರ್ಸ್ಬರ್ಗ್ ಯೂನಿವರ್ಸಿಟಿಯಲ್ಲಿ ಶಿಕ್ಷಣ ಪಡೆದಿದ್ದರು. ಬಳಿಕ ಬ್ಯಾಂಕಾಕ್‌ನ ಚುಲಾಂಗ್‌ಕಾರ್ನ್ ವಿಶ್ವವಿದ್ಯಾಲಯದಿಂದ 'ಥಾಯ್' ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ಈಗ ಸಿಂಗಾಪುರದ ಯೂನಿವರ್ಸಿಟಿಯಿಂದ ಶಿಕ್ಷಣ ಪಡೆದಿದ್ದಾರೆ.

ಅಂದ್ಹಾಗೆ ಪವನ್ ಕಲ್ಯಾಣ್ ಮತ್ತು ಅನ್ನಾ ಲೆಜಿನೋವಾ 'ತೀನ್ ಮಾರ್' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾ 2011 ರಲ್ಲಿ ಬಿಡುಗಡೆಯಾಗಿತ್ತು. ಆ ವೇಳೆ ಇಬ್ಬರ ನಡುವೆ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿತ್ತು. ಎರಡು ವರ್ಷ ಡೇಟಿಂಗ್ ಮಾಡಿದ ಬಳಿಕ ಇವರಿಬ್ಬರೂ 2013 ರಲ್ಲಿ ವಿವಾಹವಾದರು. ಅವರಿಗೆ ಮಾರ್ಕ್ ಶಂಕರ್ ಪವನೋವಿಚ್ ಎಂಬ ಮಗನಿದ್ದಾನೆ.

More from Filmibeat

English summary
Pawan Kalyan 3rd wife Anna Lezhneva graduates from NUS Singapore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X