ವಿಕ್ಟರಿ ವೆಂಕಟೇಶ್ ಜೊತೆ ನಂದಮೂರಿ ಕಲ್ಯಾಣ್ ರಾಮ್; ಟಾಲಿವುಡ್‌ನಲ್ಲಿ ಮತ್ತೊಂದು ಕಾಂಬಿನೇಷನ್

ಕೆಲವು ಕಾಂಬಿನೇಷನ್‌ಗಳೇ ಹಾಗೇ. ಅವರು ಒಟ್ಟಿಗೆ ಸೇರಿದರು ಅಂದರೆ ಮುಗೀತು, ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸೋದು ಪಕ್ಕಾ ಅಂತಲೇ. ಟಾಲಿವುಡ್‌ನಲ್ಲಿ ಇಂತಹ ಜೋಡಿಗಳು ಸಾಕಷ್ಟು ಸಿಗುತ್ತವೆ. ಹಾಗೇ ಪ್ರತಿ ವರ್ಷನೂ ಹೊಸ ಹೊಸ ಕಾಂಬಿನೇಷನ್ ಅನ್ನು ಹುಟ್ಟಾಕುತ್ತಲೇ ಇರುತ್ತಾರೆ. ಅದರಲ್ಲಿ ನಿರ್ದೇಶಕ ಅನಿಲ್ ರವಿಪುಡಿ ಕೂಡ ಒಬ್ಬರು. ಇವರು ಇಂತಹ ಕಾಂಬಿನೇಷನ್ ಹುಟ್ಟಾಕುವುದರಲ್ಲಿ ಎಕ್ಸ್‌ಪರ್ಟ್‌.

ಮೆಗಾಸ್ಟಾರ್ ಚಿರಂಜೀವಿ-ವಿಕ್ಟರಿ ವೆಂಕಟೇಶ್ ಇಬ್ಬರನ್ನೂ ಒಟ್ಟಿಗೆ ಸೇರಿಸಿದ ನಿರ್ದೇಶಕ ಇವರು. ಇಂತಹ ಅಪರೂಪದ ಕಾಂಬಿನೇಷನ್‌ ಅನ್ನು ಕಣ್ತುಂಬಿಕೊಳ್ಳುವುದಕ್ಕೆ ತೆಲುಗು ಪ್ರೇಕ್ಷಕರು ಕೂಡ ಸಿಕ್ಕಾಪಟ್ಟೆ ಇಷ್ಟ ಪಡುತ್ತಾರೆ. ಹೀಗಾಗಿ ಅನಿಲ್ ರವಿಪುಡಿ ಕಾಂಬಿನೇಷನ್ ಸಿನಿಮಾಗಳನ್ನೇ ಹೆಚ್ಚಾಗಿ ನಿರ್ದೇಶನ ಮಾಡುತ್ತಾರೆ. ಈಗ ಮತ್ತೊಂದು ಕಾಂಬಿನೇಷನ್ ಮೂಲಕ ವಾಪಾಸ್ ಬರುತ್ತಿದ್ದಾರೆ.

Anil Ravipudi directed Victory Venkatesh and Kalyan Ram new movie announced

ಅನಿಲ್ ರವಿಪುಡಿ ತಮ್ಮ ಫೇವರಿಟ್ ಆಕ್ಟರ್ ವಿಕ್ಟರಿ ವೆಂಕಟೇಶ್ ಜೊತೆ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ಈ ಸಿನಿಮಾ ಸೆಟ್ಟೇರಿದೆ. ಒಂದರ ಹಿಂದೊಂದು ಸೂಪರ್‌ ಹಿಟ್ ಸಿನಿಮಾಗಳನ್ನು ನೀಡುತ್ತ ಬಂದಿದ್ದಾರೆ. ಹೀಗಾಗಿ ಈ ಸಿನಿಮಾ ಬಗ್ಗೆ ಕುತೂಹಲ ದುಪ್ಪಟ್ಟಾಗಿದೆ. ಅದಕ್ಕೆ ಕಾರಣ ಸಿನಿಮಾದ ಸ್ಟಾರ್‌ಕಾಸ್ಟ್.

ಈ ಬಾರಿ ವಿಕ್ಟರಿ ವೆಂಕಟೇಶ್ ಜೊತೆ ಈ ಬಾರಿ ನಂದಮೂರಿ ಕುಟುಂಬದ ಹೀರೊ ಸೇರಿಕೊಂಡಿದ್ದಾರೆ. ವೆಂಕಟೇಶ್‌ಗೆ ಜೊತೆಯಾಗಿ ನಂದಮೂರಿ ಕಲ್ಯಾಣ್ ರಾಮ್ ನಾಯಕನಾಗಿ ನಟಿಸುತ್ತಿದ್ದಾರೆ. ಇಷ್ಟೇ ಅಲ್ಲದೆ, ಇವರಿಬ್ಬರೊಂದಿಗೆ ಇಬ್ಬರು ನಾಯಕಿಯರೂ ಇದ್ದಾರೆ. ಬಹುಭಾಷಾ ನಟಿ ಕೀರ್ತಿ ಸುರೇಶ್ ಹಾಗೂ ಕೃತಿ ಶೆಟ್ಟಿ ಈ ಸಿನಿಮಾದಲ್ಲಿ ನಾಯಕಿಯರಾಗಿ ನಟಿಸುತ್ತಿದ್ದಾರೆ.

ಅನಿಲ್ ರವಿಪುಡಿ ನಿರ್ದೇಶನದ ಈ ಹೊಸ ಸಿನಿಮಾದ ಮುಹೂರ್ತದಲ್ಲಿ ನಿರ್ಮಾಪಕ ದಿಲ್ ರಾಜು ಹಾಗೂ ಸಿರೀಶ್ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ಸಿನಿಮಾದ ಸ್ಕ್ರಿಪ್ಟ್ ಅನ್ನು ನಿರ್ದೇಶಕ ಅನಿಲ್ ರವಿಪುಡಿ ಮತ್ತು ನಿರ್ಮಾಪಕ ಸಾಹು ಗರಪತಿ ಅವರಿಗೆ ಹಸ್ತಾಂತರ ಮಾಡಿದರು. ಹೈದರಾಬಾದ್‌ನಲ್ಲಿ ನಡೆದ ಅದ್ದೂರಿ ಮುಹೂರ್ತ ಸಮಾರಂಭದಲ್ಲಿ ವಿಕ್ಟರಿ ವೆಂಕಟೇಶ್, ಕಲ್ಯಾಣ್ ರಾಮ್, ಕೀರ್ತಿ ಸುರೇಶ್ ಮತ್ತು ಕೃತಿ ಶೆಟ್ಟಿ ಭಾಗವಹಿಸಿದ್ದರು. ಈ ವೇಳೆ ಈ ನಾಲ್ಕು ಮಂದಿ ನಟಿಸಿರುವ ಮೊದಲ ಶಾಟ್‌ಗೆ ಅಲ್ಲು ಅರವಿಂದ್ ಕ್ಲಾಪ್‌ ಮಾಡಿದರು. ಸುರೇಶ್ ಬಾಬು ಕ್ಯಾಮೆರಾ ಸ್ವಿಚ್‌ ಆನ್ ಮಾಡಿದರೆ, ಖ್ಯಾತ ನಿರ್ಮಾಪಕ ಕೆ ರಾಘವೇಂದ್ರ ರಾವ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ್ದರು.

ಶೈನ್ ಸ್ಕ್ರೀನ್ಸ್ ಬ್ಯಾನರ್‌ನಲ್ಲಿ ಸಾಹು ಗರಪತಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಪ್ರಾಜೆಕ್ಟ್ ನ್ನು ಸುರೇಶ್ ಪ್ರೊಡಕ್ಷನ್ಸ್, ಅರ್ಚನಾ ಮತ್ತು ಜೀ ಸ್ಟುಡಿಯೋಸ್ ಪ್ರಸ್ತುತಪಡಿಸುತ್ತಿವೆ. ಇನ್ನು ಈ ಸಿನಿಮಾ ಪಕ್ಕ ಕಾಮಿಡಿ ಎಂಟರ್ಟೈನರ್ ಆಗಿದ್ದು, 2027ರ ಸಂಕ್ರಾಂತಿಗೆ ಈ ಸಿನಿಮಾ ಬಿಡುಗಡೆ ಮಾಡುವುದಕ್ಕೆ ನಿರ್ಧರಿಸಲಾಗಿದೆ.
ಜಿವಿ ಪ್ರಕಾಶ್ ಕುಮಾರ್ ಸಂಗೀತ ನೀಡುತ್ತಿದ್ದು, ಸಮೀರ್ ರೆಡ್ಡಿ ಕ್ಯಾಮರಾವರ್ಕ್, ತಮ್ಮಿರಾಜು ಎಡಿಟಿಂಗ್ ಮಾಡುತ್ತಿದ್ದಾರೆ.

English summary
Anil Ravipudi directed Victory Venkatesh and Kalyan Ram new movie announced
Read more about: venkatesh telugu movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X