100 ಜನ ನೋಡುತ್ತಿರುವಾಗ ಕಾರಿನಲ್ಲಿ ಲಿಪ್‌ಲಾಕ್ ಸೀನ್; 'ಪ್ರೇಮಂ' ಬ್ಯೂಟಿ ಅನುಪಮಾ ಪರಮೇಶ್ವರನ್ ಹೇಳಿದ್ದೇನು?
'ಪ್ರೇಮಂ' ಸಿನಿಮಾ ಮೂಲಕ ದಕ್ಷಿಣ ಭಾರತದ ಕ್ರಶ್ ಎನಿಸಿಕೊಂಡಿದ್ದ ನಟಿ ಅನುಪಮಾ ಪರಮೇಶ್ವರನ್. ಅತೀ ಕಡಿಮೆ ಸಮಯದಲ್ಲಿ ಈ ನಟಿ ದಕ್ಷಿಣ ಭಾರತದ ಎಲ್ಲಾ ಭಾಷೆಯ ಸಿನಿಮಾಗಳಲ್ಲೂ ನಟಿಸಿದ್ದಾರೆ. ಮಲಯಾಳಂ ಚಿತ್ರರಂಗದಿಂದ ವೃತ್ತಿ ಜೀವನ ಆರಂಭಿಸಿದ್ದ ನಟಿಯೀಗ ಕನ್ನಡ, ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಅನುಪಮಾ ಪರಮೇಶ್ವರನ್ ಸ್ಯಾಂಡಲ್‌ವುಡ್‌ಗೂ ಎಂಟ್ರಿ ಕೊಟ್ಟಿದ್ದರು. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯಿಸಿದ್ದ 'ನಟಸಾರ್ವಬೌಮ' ಸಿನಿಮಾದಲ್ಲಿ ನಟಿಸಿ ಗಮನ ಸೆಳೆದಿದ್ದರು. ಆ ಬಳಿಕ ತೆಲುಗು ಸಿನಿಮಾಗಳಲ್ಲಿಯೇ ಹೆಚ್ಚಾಗಿ ನಟಿಸುತ್ತಿದ್ದಾರೆ. ಆರಂಭದಲ್ಲಿ ಪಕ್ಕಾ ಟ್ರೆಡಿಷನಲ್ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದ ನಟಿಯೀಗ ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸದ್ಯಕ್ಕೀಗ ಅನುಪಮಾ ಪರಮೇಶ್ವರನ್ ನಟಿಸಿದ 'ಟಿಲ್ಲು ಸ್ಕ್ವೇರ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದಲ್ಲಿ ಅನುಪಮಾ ಲಿಪ್‌ಲಾಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ದೃಶ್ಯದ ಬಗ್ಗೆ ಅವರ ಅಭಿಮಾನಿಗಳೇ ಟೀಕೆ ಮಾಡಿದ್ದರು. ಹೀಗಾಗಿ ಬಿಡುಗಡೆ ಸಮಯದಲ್ಲಿ ಲಿಕ್‌ಲಾಕ್ ದೃಶ್ಯದಲ್ಲಿ ನಟಿಸಿದ್ದೇಕೆ? ಅಂತಹ ದೃಶ್ಯದಲ್ಲಿ ನಟಿಸುವಾಗ ಸವಾಲುಗಳು ಏನಿತ್ತು? ಅನ್ನೋದನ್ನು ರಿವೀಲ್ ಮಾಡಿದ್ದಾರೆ.
ಟಾಲಿವುಡ್ ಮಂದಿಗೆ ಸರ್ಪ್ರೈಸ್ ಹಿಟ್ ಕೊಟ್ಟಿದ್ದ ಸಿನಿಮಾ 'ಡಿಜೆ ಟಿಲ್ಲು'. ಹೊಸ ಪ್ರತಿಭೆಯ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಈ ಮಟ್ಟಿಗೆ ಸದ್ದು ಮಾಡುತ್ತೆ ಅನ್ನೋದನ್ನೇ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಬಾಕ್ಸಾಫೀಸ್‌ನಲ್ಲಿ ದೊಡ್ಡ ಸಕ್ಸಸ್ ಕಂಡ ಸಿನಿಮಾದ ಸೀಕ್ವೆಲ್ ಮುಂದಾಗಿತ್ತು ಟೀಮ್. ಅದುವೇ 'ಟಿಲ್ಲು ಸ್ಕ್ವೇರ್'. ಈ ಸಿನಿಮಾ ಇದೇ ವಾರ ಬಿಡುಗಡೆಯಾಗುತ್ತಿದೆ.
'ಟಿಲ್ಲು ಸ್ಕ್ವೇರ್' ಸಿನಿಮಾದಲ್ಲಿ 'ಪ್ರೇಮಂ' ಬ್ಯೂಟಿ ಅನುಪಮಾ ಪರಮೇಶ್ವರನ್ ಸಖತ್ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಸಿನಿಮಾದ ಪೋಸ್ಟರ್ ಹಾಗೂ ತುಣುಕುಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಅನುಪಮಾ ನಾಯಕನೊಂದಿಗೆ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕಂಡಿದ್ದಾರೆ. ಈ ದೃಶ್ಯಗಳ ಬಗ್ಗೆ ಸಿನಿಮಾ ಬಿಡುಗಡೆಗೂ ಮುನ್ನ ಓಪನ್ ಆಗಿ ಮಾತಾಡಿದ್ದಾರೆ. ಇಂತಹ ಬೋಲ್ಡ್ ಪಾತ್ರಗಳಲ್ಲಿ ನಟಿಸಿದ್ದು ಏಕೆ? ಅನ್ನೋದನ್ನು ರಿವೀಲ್ ಮಾಡಿದ್ದಾರೆ.

"ತೆರೆಮೇಲೆ ಯಾವಾಗಲೂ ಮುದ್ದಾದ ನಾಯಕಿಯ ಪಾತ್ರದಲ್ಲಿ ನಟಿಸುವುದಕ್ಕೆ ಇಷ್ಟ ಪಡುತ್ತೇನೆ. ಹೀಗೆ ಹಾಟ್ ಹೀರೋಯಿನ್ ಆಗಿ ನಟಿಸುತ್ತೇನೆ ಎಂದುಕೊಂಡಿರಲಿಲ್ಲ. ನನಗೆ ಸರಳವಾದ ಪಾತ್ರದಲ್ಲಿ ನಟಿಸಿ ಬೇಜಾರಾಗಿತ್ತು. ಈ ವೇಳೆ 'ಟಿಲ್ಲು ಸ್ಕ್ವೇರ್' ಸಿನಿಮಾದಲ್ಲಿ ಲಿಲ್ಲಿ ಪಾತ್ರದ ಬಗ್ಗೆ ಕೇಳಿದಾಗ ನನ್ನನ್ನೇ ಹೊಸ ರೀತಿಯ ಅನುಭವ ಆಗಿತ್ತು. ನನ್ನನ್ನು ನಾನೇ ಹೊಸ ರೀತಿಯಲ್ಲಿ ನೋಡಬಹುದು ಎನಿಸಿತ್ತು." ಎಂದು ಅನುಪಮಾ ಪರಮೇಶ್ವರನ್ ಪಾತ್ರದ ಬಗ್ಗೆ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಕಾಲಿನೊಳಗೆ ಲಿಪ್‌ಲಾಕ್ ಸೀನ್ ಮಾಡುವುದು ಅಷ್ಟು ಸುಲಭವಲ್ಲ. ಇಂತಹ ದೃಶ್ಯವನ್ನು ಮಾಡುವಾಗ ಸುಮಾರು 100 ಜನ ಇರುತ್ತಾರೆ. ಅವರೆಲ್ಲರ ಮುಂದೆ ಹಾಗೆ ರೊಮ್ಯಾಂಟಿಕ್ ಆಗಿ ನಟಿಸುವುದು ತುಂಬಾನೇ ಕಷ್ಟವೆಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಕಾರಿನಲ್ಲಿ ಇಂತಹ ದೃಶ್ಯದಲ್ಲಿ ನಟಿಸುವುದು ಕಷ್ಟವೆನಿಸಿತ್ತು. ಈ ದೃಶ್ಯ ಮಾಡುವಾಗ ತುಂಬಾ ಅನಾನುಕೂಲವಾಯ್ತುಎಂದು ಹೇಳಿದ್ದಾರೆ.
ಇನ್ನು ಇಂತಹ ರೊಮ್ಯಾಂಟಿಕ್ ದೃಶ್ಯವನ್ನು ಮಾಡುವಾಗ ನಾವೂ ಎಂಜಾಯ್ ಮಾಡುತ್ತೇವೆ ಎಂದು ಜನರು ಊಹಿಸುತ್ತಾರೆ. ಅದರೆ, ಅದು ಅವರ ತಪ್ಪು ಕಲ್ಪನೆ ಎಂದು ಅನುಪಮಾ ಹೇಳಿಕೊಂಡಿದ್ದಾರೆ. ಲಿಪ್‌ಲಾಕ್ ಇಲ್ಲವೇ ಚುಂಬನದ ದೃಶ್ಯಗಳನ್ನು ಮಾತ್ರ ನೋಡಬಹುದು. ಆದರೆ, ಅಂತಹ ದೃಶ್ಯ ಮಾಡುವಾಗ ಒಂದು ಅನುಭವವಿರಬೇಕು. ಅದು ಪ್ರೇಕ್ಷಕರ ಮನವೊಲಿಸುವಂತೆ ಇರಬೇಕು ಎಂದಿದ್ದಾರೆ. 'ಟಿಲ್ಲು ಸ್ಕ್ವೇರ್' ಸಿನಿಮಾ ಇದೇ ಮಾರ್ಚ್ 29ರಂದು ರಿಲೀಸ್ ಆಗುತ್ತಿದೆ.


Click it and Unblock the Notifications











