ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಗೆಲ್ಲಿಲ್ಲ ಅನುಷ್ಕಾ, ಸಮಂತಾ, ನಯನತಾರಾ : ಇಲ್ಲಿದೆ ಹಿಟ್ & ಫ್ಲಾಪ್‌ಗಳ ಪಟ್ಟಿ!

ದಕ್ಷಿಣ ಭಾರತದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳಿಗೆ ಭಾರೀ ಬೇಡಿಕೆಯಿದೆ. ಸ್ಟಾರ್ ಹೀರೊಯಿನ್ ಡೇಟ್ ಸಿಕ್ಕರೆ ಸಾಕು ಅವರನ್ನೇ ಪ್ರಮುಖ ಪಾತ್ರದಲ್ಲಿ ಇಟ್ಟುಕೊಂಡು ಸಿನಿಮಾ ಮಾಡಲು ರೆಡಿಯಾಗುತ್ತಾರೆ. ನಿರ್ಮಾಪಕರು, ನಿರ್ದೇಶಕರು ಕೂಡ ಸಿನಿಮಾ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ.

ಸ್ಟಾರ್ ನಟಿಯರು ಗ್ರೀನ್ ಸಿಗ್ನಲ್ ಕೊಟ್ಟರೆ ಅವರ ಇಮೇಜಿಗೆ ತಕ್ಕಂತೆ ಸಿನಿಮಾಗಳು ಸೆಟ್ಟೇರುತ್ತವೆ. ಈಗಾಗಲೇ ದಕ್ಷಿಣ ಭಾರತದ ಸ್ಟಾರ್ ನಟಿಯರು ಅದೃಷ್ಟ ಪರೀಕ್ಷೆಗೂ ಮುಂದಾಗಿದ್ದಾರೆ. ಇವರಲ್ಲಿ ಕೆಲವರಿಗೆ ಅಲ್ಪ ಪ್ರಮಾಣದಲ್ಲಿ ಸಕ್ಸಸ್ ಸಿಕ್ಕಿದ್ದರೆ, ಮತ್ತೆ ಕೆಲವರು ಸೋಲು ಕಹಿ ಅನುಭವಿಸಬೇಕಾಗಿದೆ.

Anushka,Samantha, Taapsee Pannu, Nayanthara Female oriented movies hits and flops

ಈಗಾಗಲೇ ದಕ್ಷಿಣ ಭಾರತದ ಸ್ಟಾರ್ ನಟಿಯಾದ ಅನುಷ್ಕಾ ಶೆಟ್ಟಿ, ನಯನತಾರಾ ಹಾಗೂ ತಾಪ್ಸಿ ಪನ್ನು ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರಿಗೆ ಅನುಷ್ಕಾ ಶೆಟ್ಟಿ ಬಿಟ್ಟರೆ, ಉಳಿದವರಿಗೆ ದೊಡ್ಡ ಮಟ್ಟದ ಸಕ್ಸಸ್ ಸಿಕ್ಕಿಲ್ಲ. ಈಗ ಆ ಸಾಲಿಗೆ ಸಮಂತಾ ಕೂಡ ಸೇರಿಕೊಂಡಿದ್ದಾರೆ. ಯಾರಿಗೆ ಸಕ್ಸಸ್ ಸಿಕ್ಕಿದೆ? ಅನ್ನೋ ಡಿಟೈಲ್ಸ್ ಇಲ್ಲಿದೆ.

ಅನುಷ್ಕಾ

ಅಸಲಿಗೆ ದಕ್ಷಿಣ ಭಾರತದಲ್ಲಿ ಮಹಿಳಾ ಪ್ರಧಾನ ಚಿತ್ರಗಳಿಗೆ ಮಾಸ್ ಫೀಲ್ ಕೊಟ್ಟಿದ್ದು ಅನುಷ್ಕಾ ಶೆಟ್ಟಿ. ಈಕೆ ನಟಿಸಿದ 'ಅರುಂಧತಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಸಂಚಲನವನ್ನು ಮೂಡಿಸಿದ್ದರು. ಕೋಡಿ ರಾಮಕೃಷ್ಣ ನಿರ್ದೇಶಿಸಿದ ಸಿನಿಮಾ ಜೇಜಮ್ಮ ಪಾತ್ರ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಆ ಬಳಿಕ ಟಾಲಿವುಡ್‌ನಲ್ಲಿ ಮಹಿಳಾ ಪ್ರಧಾನ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಯಿತು.

Anushka,Samantha, Taapsee Pannu, Nayanthara Female oriented movies hits and flops

'ಅರುಂಧತಿ' ಸಿನಿಮಾ ಬಳಿಕ ಅನುಷ್ಕಾ ಶೆಟ್ಟಿಯ ಫಿಮೇಲ್ ಓರಿಯೆಂಟೆಡ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. 'ಪಂಚಾಕ್ಷರಿ', 'ಸೈಜ್ ಜೀರೋ', 'ಭಾಗಮತಿ', 'ನಿಶ್ಯಬ್ಧಂ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೋಲುಂಡವು. ಇವುಗಳಲ್ಲಿ 'ಭಾಗಮತಿ' ಅವರೇಜ್ ಎನಿಸಿಕೊಂಡಿತ್ತು.

ಸಮಂತಾ

ಅನುಷ್ಕಾ ಶೆಟ್ಟಿಯಂತೆ ಟಾಲಿವುಡ್‌ನ ಮತ್ತೊಬ್ಬ ಸ್ಟಾರ್ ನಟಿ ಸಮಂತಾ ಕೂಡ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಿದ್ದರು.'ಯು ಟರ್ನ್', 'ಓ ಬೇಬಿ', 'ಯಶೋದಾ' ಸಿನಿಮಾಗಳಲ್ಲಿ ಸಮಂತಾ ನಟಿಸಿದ್ದರು. ಇದರಲ್ಲಿ 'ಯು ಟರ್ನ್' ಬಿಟ್ಟರೆ ಉಳಿದ ಸಿನಿಮಾ ದೊಡ್ಡ ಮಟ್ಟಕ್ಕೆ ಸದ್ದು ಮಾಡಿಲ್ಲ. ಇತ್ತೀಚೆಗೆ ಗುಣಶೇಖರ್ ನಿರ್ದೇಶಿಸಿದ 'ಶಾಕುಂತಲಂ' ಕೂಡ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದೆ.

ನಯನತಾರಾ

ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಕೂಡ ಲೇಡಿ ಓರಿಯೆಂಟೆಡ್ ಸಿನಿಮಾಗಳಲ್ಲಿ ನಟಿಸಿದ್ದರು. 'ಕೊಲಮಾವು ಕೋಕಿಲ', 'ವಸಂತಕಾಲಂ' ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆದ್ದಿತ್ತು. ಆದ್ರೆ, ಇತ್ತೀಚೆಗೆ 'ಓ 2' ಅನ್ನೋ ಸಿನಿಮಾ ರಿಲೀಸ್ ಆಗಿತ್ತು. ಆದರೆ, ಇದು ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಿಲ್ಲ. ಅಲ್ಲದೆ 'ಕನೆಕ್ಟ್' ಕೂಡ ಸೋಲುಂಡಿತ್ತು.

Anushka,Samantha, Taapsee Pannu, Nayanthara Female oriented movies hits and flops

ಐಶ್ವರ್ಯಾ ರಾಜೇಶ್

ನಯನತಾರ ಬಳಿಕ ಫಿಮೇಲ್ ಓರಿಯೆಂಟೆಡ್ ಸಿನಿಮಾಗಳಲ್ಲಿ ನಟಿಸುತ್ತಿರೋದು ಐಶ್ವರ್ಯಾ ರಾಜೇಶ್. ಈ ನಟಿಯ 'ಗ್ರೇಟ್ ಇಂಡಿಯನ್ ಕಿಚನ್', 'ಡ್ರೈವರ್ ಜಮುನಾ', 'ರನ್ ಬೇಬಿ ರನ್' ಸಿನಿಮಾಗಳಲ್ಲಿ ಜನಮನಗೆದ್ದಿದ್ದಾರೆ. ಐಶ್ವರ್ಯಾ ರಾಜೇಶ್ ಕಮರ್ಷಿಯಲ್ ಸಿನಿಮಾಗಳ ಜೊತೆಗೆ ಫಿಮೇಲ್ ಸಿನಿಮಾಗಳನ್ನೂ ನಟಿಸಿದ್ದಾರೆ. ಇತ್ತೀಚೆಗೆ 'ಗ್ರೇಟ್ ಇಂಡಿಯನ್ ಕಿಚನ್' ತಮಿಳು ಪ್ರೇಕ್ಷಕರನ್ನು ಮೋಡಿ ಮಾಡಲು ಸೋತಿದೆ.

ತಾಪ್ಸಿ

ದಕ್ಷಿಣ ಭಾರತದಿಂದ ಬಾಲಿವುಡ್‌ಗೆ ಹಾರಿರೋ ತಾಪ್ಸಿ ಕೂಡ ಲೇಡಿ ಓರಿಯೆಂಟೆಡ್ ಸಿನಿಮಾದಲ್ಲೇ ನಟಿಸುತ್ತಿದ್ದಾರೆ. 'ಶಭಾಷ್ ಮಿಥು', 'ದೊಬಾರಾ' ಅಂತಹ ಸಿನಿಮಾಗಳು ಪ್ಲಾಪ್ ಲಿಸ್ಟ್ ಸೇರಿವೆ.

ಮಹಿಳಾ ಪ್ರಧಾನ ಸಿನಿಮಾಗಳು ಸೋಲು ಕಾಣುತ್ತಿರುವುದಕ್ಕೆ ಕಂಟೆಂಟ್ ಇಲ್ಲ ಎಂದು ನಂಬಲಾಗಿದೆ. ಕಮರ್ಷಿಯಲ್ ಸಿನಿಮಾದ ಭರಾಟೆಯಲ್ಲಿ ಕಥೆ ಆಯ್ಕೆ ಸೋಲುತ್ತಿದ್ದಾರೆ. ಹಾಗೇ ನಿರ್ದೇಶಕರ ಆಯ್ಕೆ ಕೂಡ ಸರಿಯಿಲ್ಲ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ.

More from Filmibeat

English summary
Anushka,Samantha, Taapsee Pannu, Nayanthara Female oriented movies hits and flops, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X