2 ವರ್ಷಗಳ ಬಳಿಕ ಕಾಣಿಸಿಕೊಂಡ ಅನುಷ್ಕಾ ಶೆಟ್ಟಿ: ಸ್ವೀಟಿ ಲುಕ್ ನೋಡಿ ಫ್ಯಾನ್ಸ್ ಶಾಕ್!
ಕರ್ನಾಟಕದ ಕರಾವಳಿಯ ಬೆಡಗಿ ಅನುಷ್ಕಾ ಶೆಟ್ಟಿ ಇತ್ತೀಚೆಗೆ ಹೆಚ್ಚಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ.ಸುಮಾರು ಎರಡು ವರ್ಷಗಳಿಂದ ಅನುಷ್ಕಾ ಶೆಟ್ಟಿ ನೋಡಿದವರಿಲ್ಲ. ಸಿನಿಮಾ ಕಾರ್ಯಕ್ರಮಗಳಲ್ಲೂ ಯಾರೂ ಕಂಡಿಲ್ಲ. ಅಭಿಮಾನಿಗಳ ಜೊತೆನೂ ಕಂಡಿಲ್ಲ.
ಕೆಲವು ದಿನಗಳ ಹಿಂದಷ್ಟೇ ಅನುಷ್ಕಾ ಶೆಟ್ಟಿ ಅಭಿಮಾನಿಗಳ ಕಣ್ಣಿಗೆ ಬಿದ್ದಿದ್ದಾರೆ. 'ಬಾಹುಬಲಿ 2' ಬಳಿಕ ನಟಿಸಿದ 'ನಿಶ್ಯಬ್ದಂ' ಸಿನಿಮಾ ಕೂಡ 2020ರಲ್ಲೇ ರಿಲೀಸ್ ಆಗಿತ್ತು. ಆ ಬಳಿಕ ಒಂದೇ ಒಂದು ಸಿನಿಮಾನೂ ರಿಲೀಸ್ ಆಗಿಲ್ಲ. ಈ ಕಾರಣ ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಕೊಂಚ ನಿರಾಸೆ ಆಗಿದ್ದಂತೂ ನಿಜ.
ಈ ಮಧ್ಯೆ ಅನುಷ್ಕಾ ಶೆಟ್ಟಿ ಸಿನಿಮಾಗಳಿಗಿಂತ ಅವರ ಮದುವೆ ಬಗ್ಗೆ ಸುದ್ದಿಗಳು ಬಂದು ಹೋಗುತ್ತಿತ್ತು. ಮತ್ತೆ ಗಾಳಿ ಸುದ್ದಿ ಅಂತಲೇ ತಣ್ಣಗಾಗುತ್ತಿತ್ತು. ಈಗ ಕೊನೆಗೂ ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಕಾಣಿಸಿಕೊಂಡಿದ್ದಾರೆ. ಅಸಲಿಗೆ ಸ್ವೀಟಿ ಕಂಡಿದ್ದೆಲ್ಲಿ? ಅವರನ್ನು ನೋಡಿ ಫ್ಯಾನ್ಸ್ ಶಾಕ್ ಆಗಿದ್ದೇಕೆ? ತಿಳಿಯಲು ಮುಂದೆ ಓದಿ.

ಶಿವರಾತ್ರಿಯಂದು ಅನುಷ್ಕಾ ಶೆಟ್ಟಿ ಪ್ರತ್ಯಕ್ಷ
ಸುಮಾರು ಎರಡು ವರ್ಷ ಅನುಷ್ಕಾ ಶೆಟ್ಟಿ ಅಭಿಮಾನಿಗಳ ಕಣ್ಣಿಗೆ ಬಿದ್ದಿರಲಿಲ್ಲ. ಅನುಷ್ಕಾ ಹೊಸ ಸಿನಿಮಾ ಅನೌನ್ಸ್ ಆಗಿದ್ದರೂ, ಹೆಚ್ಚು ಮಾಹಿತಿ ಏನೂ ಇರಲಿಲ್ಲ. ಹೀಗಾಗಿ ಫ್ಯಾನ್ಸ್ ಕೂಡ ಕೈಚಲ್ಲಿ ಕೂತಿದ್ದರು. ಆದ್ರೀಗ ದಿಢೀರನೇ ಶಿವರಾತ್ರಿ ಕಾರ್ಯಕ್ರಮವೊಂದರಲ್ಲಿ ಕುಟುಂಬದ ಜೊತೆ ಪ್ರತ್ಯಕ್ಷ ಆಗಿದ್ದಾರೆ. ವೈಟ್ ಅಂಡ್ ವೈಟ್ ಡ್ರೆಸ್‌ನಲ್ಲಿ ಸಿಂಪಲ್ ದರ್ಶನ ಕೊಟ್ಟಿರೋ ಅನುಷ್ಕಾ ಶೆಟ್ಟಿಯನ್ನು ಕಂಡ ಅಭಿಮಾನಿಗಳು ಶಾಕ್ ಆಗಿದ್ದಾರೆ.

ಅನುಷ್ಕಾ ಶೆಟ್ಟಿ ಹೀಗಾಗಿದ್ಯಾಕೆ?
ಶಿವರಾತ್ರಿ ಕಾರ್ಯಕ್ರಮಕ್ಕೆ ಬಂದಿದ್ದ ಅನುಷ್ಕಾ ಶೆಟ್ಟಿಯನ್ನು ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಯಾಕಂದ್ರೆ, ಅನುಷ್ಕಾ ಸ್ವಲ್ಪ ತೂಕವನ್ನು ಹೆಚ್ಚಿಸಿಕೊಂಡಿದ್ದಾರೆ. ಅನುಷ್ಕಾ ಶೆಟ್ಟಿ ಮತ್ತೆ ಒಂದು ಸುತ್ತು ದಪ್ಪ ಆಗಿದ್ದಾರೆ ಅಂತ ಅನಿಸುತ್ತಿದೆ. ಶಿವರಾತ್ರಿಗೆ ಕಾರ್ಯಕ್ರಮಕ್ಕೆ ಬಂದ ಅನುಷ್ಕಾ ಶೆಟ್ಟಿಯ ಪೋಟೊಗಳು ಹಾಗೂ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಅನುಷ್ಕಾ ಆರೋಗ್ಯದ ಬಗ್ಗೆ ಏನದು ವರದಿ?
ಕೆಲವು ದಿನಗಳ ಹಿಂದೆ ತೆಲುಗು ಮಾಧ್ಯಮಗಳಲ್ಲಿ ಅನುಷ್ಕಾ ಆರೋಗ್ಯದ ಬಗ್ಗೆ ವರದಿಯಾಗಿದ್ದವು. ಅನುಷ್ಕಾ ಬಲು ಅಪರೂಪ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿತ್ತು. ಅನುಷ್ಕಾ ಒಮ್ಮೆ ನಗುವುದಕ್ಕೆ ಆರಂಭಿಸಿದರೆ,ನಿರಂತರವಾಗಿ 15 ರಿಂದ 20 ನಿಮಿಷ ನಗುತ್ತಲೇ ಇರುತ್ತಾರಂತೆ. ನಗುವನ್ನು ಅವರಿಂದ ಕಂಟ್ರೋಲ್ ಮಾಡಿಕೊಳ್ಳಲು ಸಾಧ್ಯವಿಲ್ಲ. ಹೀಗಂತ ಸ್ವತ: ಅನುಷ್ಕಾ ಶೆಟ್ಟಿನೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾಗಿ ಕೆಲವು ಮಾಧ್ಯಮಗಳಲ್ಲಿ ವರದಿ ಮಾಡಿವೆ.

ಸೆಟ್ಟೇರಿದೆ ಹೊಸ ಸಿನಿಮಾ
'ಬಾಹುಬಲಿ 2' ಬಳಿಕ ಅನುಷ್ಕಾ ಶೆಟ್ಟಿ ಮತ್ತೊಂದು ಹಿಟ್ ಸಿನಿಮಾ ಕೊಡಬೇಕಿದೆ.ಅದಕ್ಕಾಗಿಯೇ ಅವರ ಅಭಿಮಾನಿಗಳೂ ಕೂಡ ಎದುರು ನೋಡುತ್ತಿದ್ದಾರೆ. ಈ ಬೆನ್ನಲ್ಲೇ ಯುವಿ ಕ್ರಿಯೇಷನ್ಸ್ ಈಗಾಗಲೇ ಅನುಷ್ಕಾ ಶೆಟ್ಟಿ ಹಾಗೂ ನವೀನ್ ಪೊಲಿಶೆಟ್ಟಿ ಜೊತೆ ಹೊಸ ಸಿನಿಮಾವನ್ನು ಆರಂಭ ಮಾಡಿದೆ. ಈ ಸಿನಿಮಾ ಯಾವಾಗ ಮುಗಿಯುತ್ತೆ? ಯಾವಾಗ ರಿಲೀಸ್ ಆಗುತ್ತೆ? ಅನ್ನೋ ಮಾಹಿತಿ ಸದ್ಯಕ್ಕಿಲ್ಲ. ಆದರೆ, ಈ ಸಿನಿಮಾ ಆದಷ್ಟು ಬೇಗ ರಿಲೀಸ್ ಆಗಲಿ ಅಂತ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.


Click it and Unblock the Notifications











