ಅನುಷ್ಕಾ ಶೆಟ್ಟಿ 40ನೇ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಣೆ

ತೆಲುಗು ಸಿನಿಪ್ರಿಯರ ಪಾಲಿಗೆ ಅರುಂಧತಿ. ಸಾಹಸ ಪ್ರಿಯರಿಗೆ ಭಾಗಮತಿ. ಫ್ಯಾಂಟಿಸಿ ಸಿನಿಮಾ ಆಸಕ್ತರಿಗೆ ಬಾಹುಬಲಿಯ ದೇವಸೇನಾ. ರೋಮ್ಯಾಂಟಿಕ್ ಸಿನಿಮಾಗಳ ರೋಮಿಯೋಗಳಿಗೆ ಸ್ವೀಟಿ. ಕನ್ನಡದ ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿಗೆ ಇಂದು (ನವೆಂಬರ್ 7) 40ನೇ ಹುಟ್ಟು ಹಬ್ಬದ ಸಂಭ್ರಮ. ಸ್ವೀಟಿ ಹುಟ್ಟುಹಬ್ಬಕ್ಕೆ ಆಂಧ್ರ, ತೆಲಂಗಾಣದ ಅಭಿಮಾನಿಗಳು ಒಂದು ದಿನ ಮೊದಲೇ ಸಂಭ್ರಮಾಚರಣೆ ಮಾಡಿದ್ದಾರೆ.

ದಕ್ಷಿಣ ಭಾರತದ ದಿಗ್ಗಜರೊಂದಿಗೆ ನಟಿಸಿರುವ ಅನುಷ್ಕಾ ಶೆಟ್ಟಿಗೆ ತೆಲುಗು ಹಾಗೂ ತಮಿಳಿನಲ್ಲಿ ತನ್ನದೇ ಹೆಸರಿದೆ. ಅನುಷ್ಕಾ ಶೆಟ್ಟಿ ನಟಿಸುವ ಪಾತ್ರಗಳು ಕೇವಲ ಲವ್ ಸ್ಟೋರಿ ಆಗಿರುವುದಿಲ್ಲ. ಪ್ರತಿಯೊಂದು ಪಾತ್ರವೂ ದಶಕಗಳು ನೆನಪಿನಲ್ಲಿಟ್ಟುಕೊಳ್ಳುವಷ್ಟು ಸದ್ದು ಮಾಡುತ್ತವೆ. ಇದೇ ಕಾರಣಕ್ಕೆ ಸ್ವೀಟಿ ಹೊಸ ಸಿನಿಮಾದ ಬಗ್ಗೆ ಅವರ ಫ್ಯಾನ್ಸ್ ಕಾತುರದಿಂದ ಕಾಯುತ್ತಿರುತ್ತಾರೆ. ಈ ಬಾರಿ ಕೂಡ ಅನುಷ್ಕಾ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಣೆ ಆಗುತ್ತೆ ಅಂದುಕೊಂಡಿದ್ದವರಿಗೆ ಸಿಹಿ ಸುದ್ದಿ ಸಿಕ್ಕಿದೆ.

'ನಿಶ್ಯಬ್ಧಂ' ಬಳಿಕ ಅನುಷ್ಕಾ ಶೆಟ್ಟಿ ಸಿನಿಮಾ ರಂಗದಿಂದ ದೂರವಾದರು ಎಂಬ ಗುಲ್ಲೆದ್ದಿತ್ತು. ಅನುಷ್ಕಾ ಶೆಟ್ಟಿ, ಅಂದ ಕಳೆದುಕೊಂಡಿದ್ದಾರೆ, ದೇಹ ತೂಕ ಹೆಚ್ಚಿಸಿಕೊಂಡಿದ್ದಾರೆ ಎಂಬಿತರೆ ಸುದ್ದಿಗಳು ಹರಿದಾಡಿದ್ದವು. ಆದರೆ ಇದೀಗ ತಮ್ಮ ಹುಟ್ಟುಹಬ್ಬದ ದಿನವೇ ತಾವಿನ್ನೂ ಸಿನಿಮಾ ರಂಗದಲ್ಲಿ ಸಕ್ರಿಯವಾಗಿರುವುದಾಗಿ ಸಂದೇಶ ರವಾನಿಸಿದ್ದಾರೆ ನಟಿ.

 40ನೇ ಹುಟ್ಟುಹಬ್ಬಕ್ಕೆ ಅನುಷ್ಕಾ ಹೊಸ ಸಿನಿಮಾ

40ನೇ ಹುಟ್ಟುಹಬ್ಬಕ್ಕೆ ಅನುಷ್ಕಾ ಹೊಸ ಸಿನಿಮಾ

ನಿರೀಕ್ಷೆಯಂತೆ ಅನುಷ್ಕಾ ಶೆಟ್ಟಿ ತನ್ನ ಹುಟ್ಟುಹಬ್ಬದಂದು ಹೊಸ ಸಿನಿಮಾದ ಘೋಷಣೆ ಮಾಡಿದ್ದಾರೆ. ಬಾಹುಬಲಿ ಬಳಿಕ ಅನುಷ್ಕಾ ಶೆಟ್ಟಿ ಸೈಲೆಂಟ್ ಆಗಿದ್ದನ್ನು ಕಂಡು ಅಭಿಮಾನಿಗಳು ಬೇಸರದಲ್ಲಿದ್ದರು. ಬಾಹುಬಲಿ ಬಳಿಕ ತೆರೆಕಂಡ ನಿಶ್ಯಬ್ದಂ ಸಿನಿಮಾ ಕೂಡ ಅಷ್ಟಾಗಿ ಸದ್ದು ಮಾಡಲಿಲ್ಲ. ನವೀನ್ ಪೊಲಿಶೆಟ್ಟಿ ಹಾಗೂ ಅನುಷ್ಕಾ ಕಾಂಬಿನೇಷನ್‌ನಲ್ಲೊಂದು ಸಿನಿಮಾ ಸೆಟ್ಟೇರಿದೆಯಷ್ಟೇ ಹೆಚ್ಚಿನ ಸುಳಿವು ಸಿಗುತ್ತಿಲ್ಲ. ಆದರೆ, ಬರ್ತ್‌ಡೇ ಖುಷಿಯಲ್ಲಿ ಹೊಸ ಚಿತ್ರ ಘೋಷಣೆಯಾಗಿದ್ದು, ಅನುಷ್ಕಾ ಸಿನಿಮಾ ಬಗ್ಗೆ ಕುತೂಹಲ ದುಪ್ಪಟ್ಟಾಗಿದೆ.

 ಮಿರ್ಚಿ, ಭಾಗಮತಿ ನಿರ್ಮಿಸಿದ ಸಂಸ್ಥೆ ಜೊತೆ 3ನೇ ಸಿನಿಮಾ

ಮಿರ್ಚಿ, ಭಾಗಮತಿ ನಿರ್ಮಿಸಿದ ಸಂಸ್ಥೆ ಜೊತೆ 3ನೇ ಸಿನಿಮಾ

ಯುವಿ ಕ್ರಿಯೇಷನ್ ತೆಲುಗಿನ ದುಬಾರಿ ನಿರ್ಮಾಣ ಸಂಸ್ಥೆ. ಇತ್ತೀಚೆಗೆ ಪ್ರಭಾಸ್ ಅಭಿನಯಿಸಿದ್ದ ಸಾಹೋ ಅಂತಹ ಅದ್ಧೂರಿ ಸಿನಿಮಾವನ್ನು ನಿರ್ಮಾಣ ಮಾಡಿದ ಸಂಸ್ಥೆಯಿದು. ಇದೇ ಸಂಸ್ಥೆಯೊಂದಿಗೆ ಅನುಷ್ಕಾ ಶೆಟ್ಟಿ ಹೊಸ ಸಿನಿಮಾ ಸೆಟ್ಟೇರಲಿದೆ. ಇನ್ನೂ ಹೆಸರಿಡದ ಈ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಲು ಸಾಕಷ್ಟು ಕಾರಣವಿದೆ. 2013ರಲ್ಲಿ ಯುವಿ ಕ್ರಿಯೇಷನ್ ನಿರ್ಮಿಸಿದ್ದ ಮಿರ್ಚಿ ಚಿತ್ರದಲ್ಲಿ ಅನುಷ್ಕಾ ಬ್ಯೂಟಿ ಕ್ವೀನ್ ಆಗಿ ಕಾಣಿಸಿಕೊಂಡಿದ್ದರು. 2018ರಲ್ಲಿ ಇದೇ ಸಂಸ್ಥೆ ನಿರ್ಮಿಸಿದ್ದ ಭಾಗಮತಿಯಲ್ಲಿ ಫಿಯರ್‌ಲೆಸ್ ಕ್ವೀನ್ ಆಗಿ ಕಂಡಿದ್ದರು. ಈಗ ಅನುಷ್ಕಾಗಾಗಿ ಯುವಿ ಕ್ರಿಯೇಷನ್ ನಿರ್ಮಿಸುತ್ತಿರುವ ಮೂರನೇ ಸಿನಿಮಾ ಹೇಗಿರುತ್ತೆ ಅನ್ನು ಕುತೂಹಲ ದುಪ್ಪಟ್ಟಾಗಿದೆ.

 ನ್ಯೂ ಏಜ್ ಎಂಟರ್‌ಟೈನರ್ ಸಿನಿಮಾ

ನ್ಯೂ ಏಜ್ ಎಂಟರ್‌ಟೈನರ್ ಸಿನಿಮಾ

ಅನುಷ್ಕಾ ಶೆಟ್ಟಿಯ ಹೊಸ ಸಿನಿಮಾ ಕೂಡ ನ್ಯೂ ಏಜ್ ಎಂಟರ್‌ಟೈನರ್ ಎಂದು ಯುವಿ ಕ್ರಿಯೇಷನ್ ಸಂಸ್ಥೆ ಹೇಳಿಕೊಂಡಿದೆ. ರಾ ರಾ ಕೃಷ್ಣಯ್ಯ ಸಿನಿಮಾದ ನಿರ್ದೇಶಕ ಮಹೇಶ್ ಬಾಬು ಪಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಹೊಸ ಸಿನಿಮಾಗಾಗಿ ಅನುಷ್ಕಾ ಶೆಟ್ಟಿ ತೂಕ ಇಳಿಸಿಕೊಂಡು ಹೊಸ ಅವತಾರವೆತ್ತಲಿದ್ದಾರೆ ಎನ್ನಲಾಗಿದೆ. ಇನ್ನು ಅನುಷ್ಕಾ ಶೆಟ್ಟಿ ಜೊತೆ ಯಾರೆಲ್ಲಾ ನಟಿಸುತ್ತಾರೆ? ಇದು ಅನುಷ್ಕಾ ಪ್ರಧಾನ ಸಿನಿಮಾನೇನಾ? ಯಾರೆಲ್ಲಾ ಸಿನಿಮಾದಲ್ಲಿ ನಟಿಸಿಸುತ್ತಾರೆ ಅನ್ನೊ ಮಾಹಿತಿಯನ್ನು ಯುವಿ ನಿರ್ಮಾಣ ಸಂಸ್ಥೆ ಬಿಟ್ಟುಕೊಟ್ಟಿಲ್ಲ.

 ಪ್ಯಾನ್ ಇಂಡಿಯಾ ಸ್ಟಾರ್ ಅನುಷ್ಕಾ ಶೆಟ್ಟಿ

ಪ್ಯಾನ್ ಇಂಡಿಯಾ ಸ್ಟಾರ್ ಅನುಷ್ಕಾ ಶೆಟ್ಟಿ

ಅರುಂಧತಿ, ಭಾಗಮತಿ ಸಿನಿಮಾಗಳಿಂದ ಸೌತ್ ಇಂಡಿಯಾ ಸ್ಟಾರ್ ಆಗಿದ್ದ ಅನುಷ್ಕಾ ಶೆಟ್ಟಿಗೆ ಬಾಹುಬಲಿ ಸಿನಿಮಾ ಪ್ಯಾನ್ ಇಂಡಿಯಾ ಇಮೇಜ್ ಕೊಟ್ಟಿದೆ. ಇಲ್ಲಿಂದ ಅನುಷ್ಕಾ ಶೆಟ್ಟಿ ಚಿಕ್ಕ ಪುಟ್ಟ ಸಿನಿಮಾಗಳನ್ನು ಒಪ್ಪಿಕೊಳ್ಳಿತ್ತಿಲ್ಲ. ಕಥೆ ಹಾಗೂ ನಿರ್ಮಾಣ ಸಂಸ್ಥೆಯನ್ನು ಗಮನದಲ್ಲಿಟ್ಟುಕೊಂಡೇ ಹೊಸ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ. ಹೀಗಾಗಿ ರಾಧೆ ಶ್ಯಾಮ್, ಸಾಹೋ ಅಂತ ದುಬಾರಿ ಸಿನಿಮಾಗಳ ನಿರ್ಮಾಣ ಸಂಸ್ಥೆಗೆ ಅನುಷ್ಕಾ ಶೆಟ್ಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

More from Filmibeat

English summary
After Mirchi And Bhagamathi Actress Anushka Shetty has come on board for a project that will be Produced by UV Creations.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X