ನಿರ್ಮಾಪಕರಿಗೆ ತೊಂದರೆ ನೀಡುತ್ತಿದ್ದಾರೆಯೇ ಅನುಷ್ಕಾ ಶೆಟ್ಟಿ? ಏನಿದು ಆರೋಪ?

ಹೇಮಂತ್ ಮಧುಕರ್ ನಿರ್ದೇಶನದಲ್ಲಿ ಅನುಷ್ಕಾ ಶೆಟ್ಟಿ ಪ್ರಧಾನ ಪಾತ್ರದಲ್ಲಿ ನಟಿಸಿರುವ 'ನಿಶ್ಶಬ್ಧಂ' ತೆರೆಕಾಣಲು ಸಿದ್ಧವಾಗಿತ್ತು. ಆದರೆ ಲಾಕ್‌ಡೌನ್ ಕಾರಣದಿಂದ ಅದಕ್ಕೆ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ. ಈ ಚಿತ್ರ ತೆಲುಗಿನ ಜತೆಗೆ ತಮಿಳಿನಲ್ಲಿಯೂ ಏಕಕಾಲದಲ್ಲಿ ಚಿತ್ರೀಕರಣಗೊಂಡಿದೆ.

ಈ ಸಿನಿಮಾವನ್ನು 2020ರ ಜನವರಿ 30ರಂದೇ ತೆರೆಗೆ ತರಲು ಉದ್ದೇಶಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಏಪ್ರಿಲ್ 2ಕ್ಕೆ ಮುಂದೂಡಲಾಗಿತ್ತು. ಈಗ ತೆರೆಗೆ ತರಲು ಅವರಿಗೆ ಅವಕಾಶ ಸಿಗುತ್ತಿಲ್ಲ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳಿಗೆ ಭಾರಿ ಹಣ ಖರ್ಚಾಗಿದೆ. ಈ ಸಿನಿಮಾ ಸಂಪೂರ್ಣವಾಗಿ ಅಮೆರಿಕದಲ್ಲಿ ಚಿತ್ರೀಕರಣಗೊಂಡಿದೆ. ಹೀಗಾಗಿ ಅದರ ಬಜೆಟ್ ಮುಗಿಲುಮುಟ್ಟಿದೆ. ಈಗ ಸಿನಿಮಾ ಬಿಡುಗಡೆಯಾಗದ ಕಾರಣ ನಿರ್ಮಾಪಕರು ತೀವ್ರ ನಷ್ಟ ಅನುಭವಿಸುವಂತಾಗಿದೆ. ಅದಕ್ಕಾಗಿ ಅವರು ಓಟಿಟಿ ಪ್ಲಾಟ್‌ಫಾರ್ಮ್ ಮೂಲಕ ಸಿನಿಮಾ ಬಿಡುಗಡೆಗೆ ಬಯಸಿದ್ದಾರೆ. ಆದರೆ ಇದಕ್ಕೆ ಅನುಷ್ಕಾ ಶೆಟ್ಟಿ ಅನುಮತಿ ನೀಡುತ್ತಿಲ್ಲ ಎನ್ನಲಾಗಿದೆ. ಮುಂದೆ ಓದಿ...

ಅಭಿಮಾನಿಗಳ ಕಾತರ

ಅಭಿಮಾನಿಗಳ ಕಾತರ

ಅನುಷ್ಕಾ ಶೆಟ್ಟಿ ಸಿನಿಮಾಕ್ಕಾಗಿ ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 'ನಿಶ್ಶಬ್ಧಂ' ಕುರಿತು ಅಪ್‌ಡೇಟ್ಸ್ ನೀಡಿ ಎಂದು ಕೇಳುತ್ತಿದ್ದಾರೆ. ನಿರ್ಮಾಪಕರಾದ ಕೋನಾ ವೆಂಕಟ್ ಮತ್ತು ಟಿಜಿ ವಿಶ್ವ ಪ್ರಸಾದ್ ತಾವು ಸುರಿದ ಹಣಕ್ಕೆ ಬಡ್ಡಿ ಕಟ್ಟಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಿಂಗಳಿಗೆ 50 ಲಕ್ಷ ನಷ್ಟ

ತಿಂಗಳಿಗೆ 50 ಲಕ್ಷ ನಷ್ಟ

ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಮಾಡಲು ಸಾಧ್ಯವಿಲ್ಲದ ಕಾರಣ ನಿರ್ಮಾಪಕರು ಅಮೆಜಾನ್ ಪ್ರೈಮ್‌ನಲ್ಲಿ ಸಿನಿಮಾ ಬಿಡುಗಡೆ ಮಾಡಲು ಉದ್ದೇಶಿಸಿದ್ದಾರೆ. ಇದಕ್ಕೆ ಅನುಷ್ಕಾ ಶೆಟ್ಟಿ ಅವರ ಅನುಮತಿ ಅಗತ್ಯವಾಗಿದೆ. ಆದರೆ ಅನುಷ್ಕಾ ಓಟಿಟಿ ಬಿಡುಗಡೆಗೆ ಒಪ್ಪುತ್ತಿಲ್ಲ. ಹೀಗಾಗಿ ನಿರ್ಮಾಪಕರು ಇದರಿಂದಾಗಿ ತಿಂಗಳಿಗೆ 50 ಲಕ್ಷ ರೂ. ನಷ್ಟ ಅನುಭವಿಸುತ್ತಿದ್ದಾರಂತೆ.

ಅಮೆಜಾನ್ ಒಪ್ಪಂದದ ನಿಯಮ

ಅಮೆಜಾನ್ ಒಪ್ಪಂದದ ನಿಯಮ

ಅಮೆಜಾನ್ ಪ್ರೈಮ್‌ನಲ್ಲಿನ ಒಪ್ಪಂದದ ನಿಯಮಾವಳಿ ಪ್ರಕಾರ ಸಿನಿಮಾ ಬಿಡುಗಡೆಗೆ ಅನುಷ್ಕಾ ಶೆಟ್ಟಿ ಅವರ ಅನುಮತಿ ಬೇಕೇ ಬೇಕು. ಚಿತ್ರಮಂದಿರದಲ್ಲಿಯೇ ಬಿಡುಗಡೆ ಮಾಡಬೇಕು ಎನ್ನುವುದು ಅವರ ಬಯಕೆಯಾಗಿರಬಹುದು.

ಅನುಷ್ಕಾ ಬೈಟ್ಸ್ ಬೇಕು

ಅನುಷ್ಕಾ ಬೈಟ್ಸ್ ಬೇಕು

ಅಮೆಜಾನ್ ಪ್ರೈಮ್ ಒಪ್ಪಂದ ನಿಮಯದ ಪ್ರಕಾರ ಸಿನಿಮಾ ಖರೀದಿಸಲು ಅನುಷ್ಕಾ ಅನುಮತಿ ಮತ್ತು ಅವರ ಪ್ರಮೋಷನ್ ಬೈಟ್ಸ್ ಬೇಕು. ನಿರ್ಮಾಪಕರಿಗೆ ಆಗುತ್ತಿರುವ ಆರ್ಥಿಕ ಹೊರೆಯನ್ನು ಇಳಿಸಲು ಅನುಷ್ಕಾ ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ನಿರ್ಮಾಪಕರ ಮಗನ ಬೆಂಬಲ

ನಿರ್ಮಾಪಕರ ಮಗನ ಬೆಂಬಲ

ಅನೇಕ ವೆಬ್ ಸೀರೀಸ್‌ಗಳು, ಸಿನಿಮಾಗಳು ಇತ್ತೀಚೆಗೆ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗುತ್ತಿವೆ. ಆದರೆ ಅನುಷ್ಕಾ ಶೆಟ್ಟಿ ಯಾಕೆ ಸಹಕರಿಸುತ್ತಿಲ್ಲ ಎಂಬ ಪ್ರಶ್ನೆ ಉದ್ಭವಿಸಿದೆ. ಇನ್ನೊಂದೆಡೆ ನಿರ್ಮಾಪಕರ ಮಗ ಕೂಡ ಅನುಷ್ಕಾ ಬೆಂಬಲಕ್ಕೆ ನಿಂತಿದ್ದು, ಆನ್‌ಲೈನ್ ಬಿಡುಗಡೆಗೆ ವಿರೋಧ ವ್ಯಕ್ತಪಪಡಿಸಿದ್ದಾರೆ ಎನ್ನಲಾಗಿದೆ.

More from Filmibeat

English summary
Nishabdham producer wanted to release the movie on Amazon Prime due to heavy loss. But reports says Anushka Shetty is not willing to give her permission.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X