ಪ್ರಭಾಸ್ ಜತೆಗಿನ ಸಂಬಂಧದ ಬಗ್ಗೆ ಕೊನೆಗೂ ಬಾಯ್ಬಿಟ್ಟ ಅನುಷ್ಕಾ ಶೆಟ್ಟಿ ಹೇಳಿದ್ದೇನು?

'ಬಾಹುಬಲಿ' ಮತ್ತು 'ದೇವಸೇನಾ' ಜೋಡಿಯನ್ನು ಕಂಡ ಸಿನಿ ಪ್ರೇಕ್ಷಕರು ವಿಸ್ಮಿತರಾಗಿದ್ದರು. ಇದು ನಿಜಜೀವನದಲ್ಲಿಯೂ ಜೋಡಿಯಾದರೆ ಚೆನ್ನ ಎಂದವರೇ ಹೆಚ್ಚು. ಅದರಲ್ಲಿಯೂ ನಿರ್ಮಾಪಕರೊಬ್ಬರ ಮಗನನ್ನು ಅನುಷ್ಕಾ ಶೆಟ್ಟಿ ಮದುವೆಯಾಗುತ್ತಾರೆ ಎಂಬ ಸುದ್ದಿ ಹರಡಿದಾಗ ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿತ್ತು. ಪ್ರಭಾಸ್ ಹಾಗೂ ಅನುಷ್ಕಾ ಇಬ್ಬರ ಜೋಡಿ ಅದ್ಭುತವಾಗಿರಲಿದೆ ಎನ್ನುವುದು ಅವರ ಅಭಿಪ್ರಾಯ.

ಆದರೆ ಅನುಷ್ಕಾ ಹಾಗೂ ಪ್ರಭಾಸ್ ಇಬ್ಬರೂ ತಮ್ಮ ನಡುವಿನ ಸಂಬಂಧದ ಬಗ್ಗೆ ಮೌನ ಕಾಪಾಡಿಕೊಂಡು ಬಂದಿದ್ದರು. ಇತ್ತೀಚೆಗೆ ಅನುಷ್ಕಾ ಶೆಟ್ಟಿ ಜನ್ಮದಿನದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ನಟಿ ಚಾರ್ಮಿ ಕೌರ್ 'ಯಾವಾಗ ಮದುವೆ' ಎಂದು ಕೇಳಿದ್ದರು. ಅದಕ್ಕೆ ಅನುಷ್ಕಾ ತಮಗೂ ಅದು ಗೊತ್ತಿಲ್ಲ. ಯಾವಾಗ ಸಮಯ ಬರುತ್ತದೆಯೋ ಆಗ ಎಂದಿದ್ದರು. ಈಗ ಸಂದರ್ಶನವೊಂದರಲ್ಲಿ ಅನುಷ್ಕಾ ನೀಡಿರುವ ಹೇಳಿಕೆ ಅವರ ಮತ್ತು ಪ್ರಭಾಸ್ ಅಭಿಮಾನಿಗಳಿಗೆ ಆಘಾತ ನೀಡಿದೆ. ಹಾಗಾದರೆ ಪ್ರಭಾಸ್-ಅನುಷ್ಕಾ ಮದುವೆ ನಿಜಕ್ಕೂ ನಡೆಯುವುದಿಲ್ಲವೇ? ಎಂದು ಪ್ರಶ್ನಿಸುತ್ತಿದ್ದಾರೆ.

ಇಬ್ಬರ ಕೆಮಿಸ್ಟ್ರಿ ಅದ್ಭುತ

ಇಬ್ಬರ ಕೆಮಿಸ್ಟ್ರಿ ಅದ್ಭುತ

ತೆಲುಗು ಚಿತ್ರರಂಗದಲ್ಲಿ ಅತಿ ಹೆಚ್ಚು ಇಷ್ಟಪಡಲಾದ ಜೋಡಿಯೆಂದರೆ ಅದು ಅನುಷ್ಕಾ ಮತ್ತು ಪ್ರಭಾಸ್. ಅವರ ನಡುವಿನ ಕೆಮಿಸ್ಟ್ರಿ ಅದ್ಭುತ ಎಂದೇ ಹೇಳಲಾಗುತ್ತದೆ. ಇನ್ನೊಂದೆಡೆ ಅವರ ನಡುವೆ ಏನೋ ನಡೆಯುತ್ತಿದೆ ಎಂಬ ಅನುಮಾನ ಅಭಿಮಾನಿಗಳಲ್ಲಂತೂ ಇದ್ದೇ ಇದೆ.

ಕೊನೆಗೂ ಪ್ರಭಾಸ್ ಬಗ್ಗೆ ಮಾತು

ಕೊನೆಗೂ ಪ್ರಭಾಸ್ ಬಗ್ಗೆ ಮಾತು

ತಮ್ಮ 'ಬಾಹುಬಲಿ' ಸಹನಟನ ಜತೆಗಿನ ಸಂಬಂಧದ ಕುರಿತ ಊಹಾಪೋಹಗಳನ್ನು ಅನುಷ್ಕಾ ಮತ್ತೆ ಮತ್ತೆ ನಿರಾಕರಿಸುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅನುಷ್ಕಾ ಕೊನೆಗೂ ಪ್ರಭಾಸ್ ಜತೆಗಿನ ನಂಟು ಹಾಗೂ ಒಡನಾಟದ ಬಗ್ಗೆ ತುಟಿಬಿಚ್ಚಿದ್ದಾರೆ.

ಮುಂಜಾನೆ ಗೆಳೆಯರು

ಮುಂಜಾನೆ ಗೆಳೆಯರು

'ನನಗೆ ಪ್ರಭಾಸ್ 15 ವರ್ಷಗಳಿಂದ ಗೊತ್ತು. ನನ್ನ ಬೆಳಿಗಿನ ಜಾವ 3 ಗಂಟೆಯ ಸ್ನೇಹಿತರಲ್ಲಿ ಅವರೂ ಒಬ್ಬರು. ನಮ್ಮಿಬ್ಬರ ನಡುವೆ ಯಾವಾಗಲೂ ತಳುಕು ಹಾಕಲಾಗುತ್ತದೆ, ಏಕೆಂದರೆ ನಮ್ಮಿಬ್ಬರಿಗೂ ಮದುವೆಯಾಗಿಲ್ಲ ಮತ್ತು ಪರದೆ ಮೇಲೆ ಅದ್ಭುತ ಜೋಡಿಯಾಗಿ ಕಾಣಿಸುತ್ತೇವೆ' ಎಂದಿದ್ದಾರೆ.

ಇಬ್ಬರದೂ ಒಂದೇ ರೀತಿ ವ್ಯಕ್ತಿತ್ವ

ಇಬ್ಬರದೂ ಒಂದೇ ರೀತಿ ವ್ಯಕ್ತಿತ್ವ

'ನಮ್ಮ ಇಬ್ಬರ ಮಧ್ಯೆ ಯಾವುದೇ ಬೇರೆ ಸಂಬಂಧ ಇದ್ದರೂ ಈ ವೇಳೆಗಾಗಲೇ ಅದನ್ನು ಬಹಿರಂಗಪಡಿಸಿರುತ್ತಿದ್ದೆವು. ನಾವಿಬ್ಬರೂ ಒಂದೇ ರೀತಿಯ ವ್ಯಕ್ತಿತ್ವವುಳ್ಳವರು. ನಮಗೆ ಸಂಬಂಧಿಸಿದ ಯಾವುದೇ ಸಂಗತಿಗಳನ್ನು, ಭಾವನೆಗಳನ್ನು ಮುಚ್ಚಿಡುವುದಿಲ್ಲ' ಎಂದು ಅನುಷ್ಕಾ ದಪ್ಪನೆಯ ಗೆರೆ ಎಳೆದಿದ್ದಾರೆ.

ಪ್ರಭಾಸ್ ಅಭಿಮಾನಿಗಳಿಗೆ ಬೇಸರ

ಪ್ರಭಾಸ್ ಅಭಿಮಾನಿಗಳಿಗೆ ಬೇಸರ

ಅನುಷ್ಕಾರ ಈ ಹೇಳಿಕೆ ಪ್ರಭಾಸ್ ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಉಂಟುಮಾಡಿದೆ. ಪ್ರಭಾಸ್, ಅನುಷ್ಕಾ ಶೆಟ್ಟಿಯ ಬಾಯ್ ಫ್ರೆಂಡ್ ಅಲ್ಲ, ಆದರೆ ಸ್ಪೆಷಲ್ ಫ್ರೆಂಡ್ ಎಂಬ ಹೇಳಿಕೆಯನ್ನು ಅರಗಿಸಿಕೊಳ್ಳಲು ಅವರಿಗೆ ಆಗುತ್ತಿಲ್ಲ. ಇದೇ ಮೊದಲ ಬಾರಿಗೆ ಅನುಷ್ಕಾ, ಪ್ರಭಾಸ್ ಕುರಿತು ಮಾತನಾಡಿರುವುದು. ಆದರೆ ಅದು ಅಭಿಮಾನಿಗಳು ನಿರೀಕ್ಷಿಸಿದಂತೆ ಇಲ್ಲ.

ನಿರ್ದೇಶಕನ ಜತೆ ಮದುವೆ ವದಂತಿ

ನಿರ್ದೇಶಕನ ಜತೆ ಮದುವೆ ವದಂತಿ

ನಿರ್ಮಾಕರೊಬ್ಬರ ಮಗನ ಎರಡನೆಯ ಮದುವೆ ವಿಚಾರದಲ್ಲಿ ಅನುಷ್ಕಾ ಹೆಸರು ಕೇಳಿಬಂದಿತ್ತು. ಈ ವದಂತಿಯನ್ನು ಅನುಷ್ಕಾ ನಿರಾಕರಿಸಿದ್ದಾರೆ. ನಿರ್ದೇಶಕ ಪ್ರಕಾಶ್ ಕೊವೆಲಮುಡಿ ಜತೆ ಅನುಷ್ಕಾ ಮದುವೆಯಾಗುತ್ತಾರೆ ಎನ್ನಲಾಗಿತ್ತು. ಪ್ರಕಾಶ್ 2017ರಲ್ಲಿ ತಮ್ಮ ಮೊದಲ ಪತ್ನಿ ಕನಿಕಾ ಧಿಲ್ಲೋನ್ ಅವರಿಂದ ದೂರವಾಗಿದ್ದರು. ಈ ವದಂತಿಗಳು ತಮ್ಮ ಕುಟುಂಬಕ್ಕೂ ತೊಂದರೆಯುಂಟುಮಾಡುತ್ತಿದೆ ಎಂದು ಅನುಷ್ಕಾ ಹೇಳಿದ್ದಾರೆ.

ಮದುವೆಯೇ ದೊಡ್ಡ ಸಂಗತಿಯೇ?

ಮದುವೆಯೇ ದೊಡ್ಡ ಸಂಗತಿಯೇ?

ಹಾಗೆಯೇ ತಮ್ಮ ಮದುವೆ ವಿಚಾರದ ಅದೇ ರೀತಿಯ ಪ್ರಶ್ನೆಗಳ ಬಗ್ಗೆ ಅನುಷ್ಕಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮದುವೆ ಎನ್ನುವುದು ಏಕೆ ಅಷ್ಟೊಂದು ದೊಡ್ಡ ಸಂಗತಿಯಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.

More from Filmibeat

English summary
Anushka Shetty denied any relationship with Prabhas and said he is one of my 3 am friend.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X