ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಅನುಷ್ಕಾ ಶೆಟ್ಟಿ ಭಾವನಾತ್ಮಕ ಬರಹ
ಸುಶಾಂತ್ ಸಿಂಗ್ ರಜಪೂತ್ ಸಾವಿನ ಹಿನ್ನೆಲೆಯಲ್ಲಿ ಅನೇಕ ನಟ ನಟಿಯರು ನಾವು ಮಾನಸಿಕವಾಗಿ ಹೇಗೆ ಸದೃಢರಾಗಿರಬೇಕು, ಮುಖ್ಯವಾಗಿ ಒಬ್ಬರಿಗೊಬ್ಬರು ಸಂಪರ್ಕ ಇಟ್ಟುಕೊಳ್ಳುವ ಮೂಲಕ ಹೇಗೆ ನೆರವಾಗಬಹುದು ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
Recommended Video
ಈ ಘಟನೆ ಯಾಕೆ ಆಯಿತು? ಹೇಗೆ ಆಯಿತು ಎಂಬ ತರ್ಕದ ಹಿನ್ನೆಲೆಯಲ್ಲಿ ನಾವು ಗಂಭೀರವಾಗಿ ಹಾಗೂ ಭಾವನಾತ್ಮಕವಾಗಿ ಯೋಚಿಸಬೇಕಾದ ಅಂಶಗಳಿವೆ. ಅವುಗಳ ಬಗ್ಗೆ ನಟಿ ಅನುಷ್ಕಾ ಶೆಟ್ಟಿ ಅರ್ಥಪೂರ್ಣವಾಗಿ ಬರೆದಿದ್ದಾರೆ. '
ನಮ್ಮಲ್ಲಿನ ಪ್ರತಿಯೊಬ್ಬರೂ ನಿಭಾಯಿಸುವ ಮಾರ್ಗ ತಿಳಿದಿದ್ದರೆ ಮಾತ್ರ ಅಂತಹ ಸನ್ನಿವೇಶವನ್ನು ಎದುರಿಸುತ್ತೇವೆ. ಯಾರೂ ಇಲ್ಲಿ ಪರಿಪೂರ್ಣರಲ್ಲ. ಸರಿಯಾದ ಮಾರ್ಗ, ತಪ್ಪು ದಾರಿ ಎಂಬುದಿಲ್ಲ. ಏಕೆಂದರೆ ನಾವು ಜೀವನದಲ್ಲಿ ಸಾಗಲು ರೋಡ್ ಮ್ಯಾಪ್ ಇಟ್ಟುಕೊಂಡು ಹುಟ್ಟಿದವರಲ್ಲ. ಯಾರಿಗೂ ಇದು ಸಿಕ್ಕಿರುವುದಿಲ್ಲ. ನಾವು ಪ್ರತಿಯೊಬ್ಬರೂ ನಮ್ಮದೇ ರೀತಿಯಲ್ಲಿ ದೊಡ್ಡಮಟ್ಟದಲ್ಲಿ ಅಥವಾ ಚಿಕ್ಕದಾಗಿ ದುರ್ಬಲರಾಗಿರುತ್ತೇವೆ ಎಂದಿದ್ದಾರೆ ಅನುಷ್ಕಾ ಶೆಟ್ಟಿ. ಮುಂದೆ ಓದಿ...

ಎಲ್ಲರಿಗೂ ಅವರದೇ ಮಾರ್ಗವಿದೆ
ನಮ್ಮಲ್ಲಿ ಪ್ರತಿಯೊಬ್ಬರೂ ಒಳಗಿನಿಂದ ಭಗ್ನಗೊಂಡಿರುತ್ತೇವೆ. ಮತ್ತು ಅದು ಸಾಮಾನ್ಯ. ಕೆಲವರು ಸಹಾಯಕ್ಕಾಗಿ ಜೋರಾಗಿ ಅಳುತ್ತಾರೆ, ಕೆಲವರು ಮೌನವಾಗಿ ಅಳುತ್ತಾರೆ. ಕೆಲವರು ವಿಹ್ವಲರಾಗುತ್ತಾರೆ. ಇನ್ನು ಕೆಲವರು ಅದನ್ನು ಹೇಗೋ ತಣಿಸಿಕೊಳ್ಳುತ್ತಾರೆ. ಪ್ರತಿಯೊಬ್ಬರಿಗೂ ಅವರದೇ ರೀತಿಯಿದೆ. ಇನ್ನು ಕೆಲವರು ಅಸಹಾಯಕರಾಗುತ್ತಾರೆ.

ಕರುಣಾಳುಗಳಾಗೋಣ
ನಮ್ಮದೇ ಸಣ್ಣ ಮಾರ್ಗಗಳ ಮೂಲಕ ಒಬ್ಬರಿಗೊಬ್ಬರು ಆ ಒಡಕನ್ನು ಮುಚ್ಚುವ ಸುಂದರ ಬಗೆಯನ್ನು ಕಲಿತುಕೊಳ್ಳೋಣ. ಹೆಚ್ಚು ಕರುಣಾಳುಗಳಾಗಲು ಕಲಿಯೋಣ. ಅನುಭೂತಿ ತೋರುವುದನ್ನು ಕಲಿಯೋಣ, ಇನ್ನೂ ಹೆಚ್ಚಿನ ಸಹಾನುಭೂತಿ ತೋರಿಸಲು ಕಲಿಯೋಣ, ಮತ್ತಷ್ಟು ಪ್ರೀತಿಸುವುದನ್ನು ಕಲಿಯೋಣ, ಇನ್ನಷ್ಟು ಕೇಳಿಸಿಕೊಳ್ಳುವುದನ್ನು ಕಲಿಯೋಣ.

ನಾವೆಲ್ಲರೂ ಮನುಷ್ಯರು
ಸಂವಹಿಸುವುದನ್ನು ತಿಳಿಯೋಣ, ದುರ್ಬಲವಾಗುವುದನ್ನು ಕಲಿಯೋಣ, ಗಟ್ಟಿಯಾಗುವುದನ್ನೂ ಕಲಿತುಕೊಳ್ಳೋಣ, ನಾವು ಒಳಗಿನಿಂದ ಏನು ಫೀಲ್ ಮಾಡಿಕೊಳ್ಳುತ್ತೇವೆಯೋ ಅದನ್ನು ಅಳವಡಿಸಿಕೊಳ್ಳೋಣ ಮತ್ತು ಬೆಳೆಯೋಣ. ನಾವೆಲ್ಲರೂ ಮನುಷ್ಯರು. ಒಂದು ನಗು, ಒಂದು ಕೇಳುವ ಕಿವಿ, ಒಂದು ಮೃದುವಾದ ಸ್ಪರ್ಶ, ನಮ್ಮ ಉಪಸ್ಥಿತಿ ಮತ್ತೊಬ್ಬ ಪರಿಚಿತ ಅಥವಾ ಅಪರಿಚಿತ ವ್ಯಕ್ತಿಗೆ ನಮ್ಮ ತಿಳಿವಳಿಕೆಯಾಚೆಗೆ ವ್ಯತ್ಯಾಸ ನೀಡಬಹುದು.

ಬದಲಾವಣೆ ನಿಧಾನ
ನಾವು ತತ್‌ಕ್ಷಣದಲ್ಲಿ ಎಲ್ಲವನ್ನೂ ಬದಲಿಸಲು ಅಥವಾ ಪರಿಹಾರ ಮಾಡಲು ಶಕ್ತರಾಗದೆಯೇ ಇರಬಹುದು. ಆದರೆ ಒಂದು ಸಣ್ಣ ಹೆಜ್ಜೆ ವ್ಯತ್ಯಾಸ ಮಾಡಬಲ್ಲದು. ಲಕ್ಷಾಂತರ ಗಳಿಗೆಗಳ ನಡುವೆ ನಿಧಾನವಾಗಿ ನಡೆಯುವ ಬದಲಾವಣೆಗಳು ಒಂದೇ ರೀತಿ ಕಾಣಿಸುತ್ತವೆಯಂತೆ. ಸುರಕ್ಷಿತವಾಗಿರಿ. ಒಬ್ಬರಿಗೊಬ್ಬರು ಸಹಾಯ ಮಾಡಿ. ನಾವೆಲ್ಲರೂ ಮನುಷ್ಯರು. ಸದಾ ನಗುತ್ತಿರಿ ಎಂದು ಅನುಷ್ಕಾ ಬರೆದಿದ್ದಾರೆ.


Click it and Unblock the Notifications











