ಅನುಷ್ಕಾ ಶೆಟ್ಟಿಯ 48ನೇ ಸಿನಿಮಾ 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಬಗ್ಗೆ ಹೀಗೊಂದು ಸುದ್ದಿ: ಅದೇನಾಗುತ್ತೋ?

ಬ್ಯೂಟಿ ಅನುಷ್ಕಾ ಶೆಟ್ಟಿ ಹೊಸ ಸಿನಿಮಾ ಬಗ್ಗೆ ಟಾಲಿವುಡ್‌ನಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ನವೀನ್ ಪೋಲಿಶೆಟ್ಟಿ ಜೊತೆ ಸ್ವೀಟಿ ನಟಿಸುತ್ತಿರುವ ಸಿನಿಮಾ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಸದ್ದು ಮಾಡುತ್ತಿದೆ. ಈ ಸಿನಿಮಾವನ್ನು ಯುವಿ ಕ್ರಿಯೇಷನ್ ಸದ್ದು ಮಾಡುತ್ತಿದೆ.

ಬೇಸಿಗೆ ಮುಗಿಯುವುದರೊಳಗೆ 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಸಿನಿಮಾ ಬಿಡುಗಡೆಯಾಗುತ್ತಿದೆ. ಮಹೇಶ್ ಅನುಷ್ಕಾ ಶೆಟ್ಟಿಯ ಸಿನಿಮಾವನ್ನು ನಿರ್ದೇಶಕನ ಮಾಡುತ್ತಿದ್ದಾರೆ. ಸದ್ಯ ಹರಿದಾಡುತ್ತಿರುವ ಸುದ್ದಿ ಏನಂದ್ರೆ, ಈ ಚಿತ್ರದ ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕುಗಳು ದೊಡ್ಡ ಮೊತ್ತಕ್ಕೆ ಮಾರಾಟ ಆಗಿದೆಯಂತೆ. ಇದೇ ಈಗ ಅನ್ನೋದು ಲೇಟೆಸ್ಟ್ ಸುದ್ದಿ.

Anushka Shetty Starrer Miss Shetty Mr. Polishetty Movie Ott Rights Sold for Zee 5

ಅನುಷ್ಕಾ ಶೆಟ್ಟಿಯ 48ನೇ ಸಿನಿಮಾ

'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಅನುಷ್ಕಾ ಶೆಟ್ಟಿ ನಟಿಸುತ್ತಿರುವ 48ನೇ ಸಿನಿಮಾ. ಅದೂ ಅಲ್ಲದೆ ಸುಮಾರು 5 ವರ್ಷಗಳ ಬಳಿಕ ಅನುಷ್ಕಾ ಶೆಟ್ಟಿ ಸಿನಿಮಾ ರಿಲೀಸ್‌ಗೆ ರೆಡಿಯಾಗಿರುವುದರಿಂದ ಫ್ಯಾನ್ಸ್ ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಈ ಮಧ್ಯೆ ಸಿನಿಮಾ ಓಟಿಟಿ ಹಾಗೂ ಸ್ಯಾಟಲೈಟ್ ಹಕ್ಕುಗಳು ಮಾರಾಟ ಆಗಿದೆ ಅನ್ನೋ ಸುದ್ದಿ ಓಡಾಡುತ್ತಿದೆ.

ಅನುಷ್ಕಾ ಶೆಟ್ಟಿ ಹಾಗೂ ನವೀನ್ ಪೋಲಿಶೆಟ್ಟಿ ಕಾಂಬಿನೇಷನ್ ಒಂದ್ಕಡೆ, ಇನ್ನೊಂದ್ಕಡೆ ಯುವಿ ಕ್ರಿಯೇಷನ್ಸ್ ಪ್ರೊಡಕ್ಷನ್ ಹೌಸ್.. ಇವೆಲ್ಲವೂ ಸೇರಿ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಸಿನಿಮಾ ಮೇಲೆ ಕ್ರೇಜ್ ಹೆಚ್ಚಾಗಿದೆ. ಹೀಗಾಗಿ ಓಟಿಟಿ ವೇದಿಕೆಗಳು ಸಿನಿಮಾವನ್ನು ಕೊಂಡುಕೊಳ್ಳುವುದಕ್ಕೆ ತುದಿಗಾಲ್ಲಿ ನಿಂತಿದ್ದರು. ಈಗಾಗಲೇ ಓಟಿಟಿ ಹಕ್ಕುಗಳನ್ನು ಯುವಿ ಕ್ರಿಯೇಷನ್ ಸೇಲ್ ಮಾಡಿದೆ ಅನ್ನೋ ಸುದ್ದಿ ಓಡಾಡುತ್ತಿದೆ.

Anushka Shetty Starrer Miss Shetty Mr. Polishetty Movie Ott Rights Sold for Zee 5

ಓಟಿಟಿ ರೈಟ್ಸ್ ಸೇಲ್

'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಸಿನಿಮಾ ಜೀ 5ಗೆ ಸೇಲ್ ಆಗಿದೆ ಅನ್ನೋ ಸುದ್ದಿ ಓಡಾಡುತ್ತಿದೆ. ಹೌದು, 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಸಿನಿಮಾದ ಸ್ಯಾಟಲೈಟ್ ಹಾಗೂ ಡಿಜಿಟಲ್ ರೈಟ್ಸ್ ಅನ್ನು ಜೀ ಗ್ರೂಪ್ ಖರೀದಿ ಮಾಡಿದೆ ಅಂತ ವರದಿಯಾಗಿವೆ. ಸಿನಿಮಾ ಬಿಡುಗಡೆ ಬಳಿಕ ಸ್ಯಾಟಲೈಟ್ ಹಾಗೂ ಓಟಿಟಿ ಎರಡರಲ್ಲೂ ಸ್ಟ್ರೀಮಿಂಗ್ ಆಗಲಿದೆ ಎನ್ನಲಾಗಿದೆ.

ಅನುಷ್ಕಾ ಶೆಟ್ಟಿಯ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾದ 'ಭಾಗಮತಿ'ಯ ಹಿಂದಿ ಹಾಗೂ ತಮಿಳು ಚಾಪ್ಟರ್‌ಗಳು ಜೀ 5ನಲ್ಲಿದೆ. ಇದರೊಂದಿಗೆ ಜೀ 5 'ಸೈಜ್ ಜೀರೊ' ಅನ್ನೂ ಖರೀದಿಸಿದೆ. ಇದೇ ಮೊದಲ ಬಾರಿಗೆ ಅನುಷ್ಕಾ ಶೆಟ್ಟಿ 'ಶೆಫ್' ಆಗಿ ಕಾಣಿಸಿಕೊಳ್ಳುತ್ತಿದ್ದು, ಜೀ 5 ಖರೀದಿ ಮಾಡಲು ಇದೇ ಕಾರಣ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಜೀ 5 ಆಗಲಿ, ಯುವಿ ಕ್ರಿಯೇಷನ್ ಆಗಿಲಿ ಈ ಬಗ್ಗೆ ಮಾಹಿತಿ ನೀಡಿಲ್ಲ.

ಸಿನಿಮಾದ ಹೈಲೈಟ್ ಏನು?

'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಅಂತರಾಷ್ಟ್ರೀಯ ಶೆಫ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರೋ ಸ್ಟಿಲ್‌ನಲ್ಲಿ ಅನುಷ್ಕಾ ಶೆಫ್ ಅನ್ನೋದು ಹೈಲೈಟ್ ಆಗಿದೆ. ಆದರೆ, ಅನುಷ್ಕಾ ಶೆಟ್ಟಿ ಹಾಗೂ ನವೀನ್ ಪೋಲಿಶೆಟ್ಟಿ ಇಬ್ಬರು ಸಿನಿಮಾ ಹೇಗೆ ಕಾಣಿಸಿಕೊಳ್ಳುತ್ತಾರೆ? ಕಥೆ ಇಬ್ಬರ ನಡುವೆ ಹೇಗೆ ಸಾಗುತ್ತೆ? ಅನ್ನೋದೇ ಕಥೆ.

ಇದು ಅನುಷ್ಕಾ ಶೆಟ್ಟಿಯ 48ನೇ ಸಿನಿಮಾ. ಯುವಿ ಕ್ರಿಯೇಷನ್ಸ್‌ ಬ್ಯಾನರ್‌ನಲ್ಲಿ ಅನುಷ್ಕಾ ಶೆಟ್ಟಿ ಈಗಾಗಲೇ 'ಮಿರ್ಚಿ' ಹಾಗೂ 'ಭಾಗಮತಿ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಎಲ್ಲಾ ಸಿನಿಮಾಗಳು ಯಶಸ್ಸು ಕಂಡಿದ್ದವು. ಈಗ ಇದೇ ಸಂಸ್ಥೆಯ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸುವ ತರಾತುರಿಯಲ್ಲಿದ್ದಾರೆ. ಈ ಸಿನಿಮಾ ತೆಲುಗು, ಕನ್ನಡ, ತಮಿಳು, ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.

More from Filmibeat

English summary
Anushka Shetty Starrer Miss Shetty Mr. Polishetty Movie Ott Rights Sold for Zee 5, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X