ಮಗನಿಗಾಗಿ ಹರಕೆ ಹೊತ್ತಿದ್ದ ಪವನ್ ಕಲ್ಯಾಣ್ ಪತ್ನಿ;ತಿರುಮಲದಲ್ಲಿ ಮುಡಿ ಕೊಟ್ಟು ಹರಕೆ ತೀರಿಸಿದ ಅನ್ನಾ
ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಟಾಲಿವುಡ್ ಪವರ್‌ಸ್ಟಾರ್ ಪವನ್ ಕಲ್ಯಾಣ್ ಪತ್ನಿ ತಿರುಮಲದಲ್ಲಿ ಹರಕೆ ತೀರಿಸಿದ್ದಾರೆ. ಭಾನುವಾರ (ಏಪ್ರಿಲ್ 13)ರಂದು ತಿರುಮಲಕ್ಕೆ ಬಂದ ಪವನ್ ಕಲ್ಯಾಣ್ ಪತ್ನಿ ಅನ್ನಾ ಕೊನಿಡೆಲಾ ಮುಡಿಕೊಟ್ಟು ಹರಕೆಯನ್ನು ತೀರಿಸಿದ್ದಾರೆ. ತನ್ನ ಮಗನಿಗಾಗಿ ಹರಕೆ ಮಾಡಿಕೊಂಡಿದ್ದು, ಅದನ್ನು ತೀರಿಸಿದ್ದಾರೆ.
ಪವನ್ ಕಲ್ಯಾಣ್ ಪುತ್ರ ಮಾರ್ಕ್ ಶಂಕರ್ ಇತ್ತೀಚೆಗೆ ಸಿಂಗಾಪುರದಲ್ಲಿ ನಡೆದ ಅಗ್ನಿ ದುರಂತದಲ್ಲಿ ಸಿಲುಕಿದ್ದರು. ಸಮ್ಮರ್ ಕ್ಯಾಂಪ್‌ಗೆಂದು ತೆರಳಿದ್ದ ಮಾರ್ಚ್ ಶಂಕರ್‌ಗೆ ಈ ಅಗ್ನಿ ದುರಂತದಲ್ಲಿ ಗಾಯಗಳಾಗಿತ್ತು. ಮಾರ್ಕ್ ಕೈ ಹಾಗೂ ಕಾಲುಗಳು ಸುಟ್ಟಿದ್ದವು. ಅಲ್ಲದೇ ಹೊಗೆಯನ್ನ ಸೇವಿದ್ದರು ಎಂದು ವರದಿಯಾಗಿತ್ತು. ಈ ಸಂಬಂಧ ಪವನ್ ಕಲ್ಯಾಣ್ ಸಿಂಗಾರಪುರಕ್ಕೆ ತೆರಳಿದ್ದರು.

ಶನಿವಾರ (ಏಪ್ರಿಲ್ 12) ಅಷ್ಟೇ ಪವನ್ ಕಲ್ಯಾಣ್ ತಮ್ಮ ಪತ್ನಿ ಅನ್ನಾ ಕೊನಿಡೆಲಾ ಹಾಗೂ ಪುತ್ರ ಮಾರ್ಕ್ ಶಂಕರ್ ಜೊತೆ ಭಾರತಕ್ಕೆ ಹಿಂತಿರುಗಿದ್ದರು. ಪವನ್ ಕಲ್ಯಾಣ್ ಪುತ್ರ ಮಾರ್ಕ್ ಶಂಕರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಸ್ವದೇಶಕ್ಕೆ ಮರಳಿದ್ದಾರೆ. ಏಪ್ರಿಲ್ 11ರಂದು ಮೆಗಾಸ್ಟಾರ್ ಚಿರಂಜೀವಿ ಸಹೋದರನ ಪುತ್ರ ಮಾರ್ಚ್ ಶಂಕರ್ ಚೇತರಿಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿಯನ್ನು ನೀಡಿದ್ದರು.
ಪುತ್ರ ಅಗ್ನಿ ಅವಘಡದಲ್ಲಿ ಸಿಲುಕಿ ಗಾಯಗೊಂಡಿದ್ದರಿಂದ ಪವನ್ ಕಲ್ಯಾಣ್ ಪತ್ನಿ ಅನ್ನಾ ಕೊನನಿಡೆಲಾ ತಿರುಪತಿ ತಿಮ್ಮಪ್ಪನ ಬಳಿ ಹರಕೆಯನ್ನು ಹೊತ್ತುಕೊಂಡಿದ್ದರು ಎನ್ನಲಾಗಿದೆ. ಹೀಗಾಗಿ ಸಿಂಗಾಪುರದಲ್ಲಿಂದ ಭಾರತಕ್ಕೆ ಹಿಂತಿರುಗುತ್ತಿದ್ದಂತೆ ತಿರುಮಲಕ್ಕೆ ಬಂದು ಮುಡಿಯನ್ನು ನೀಡಿ ಹರಕೆಯನ್ನು ತೀರಿಸಿದ್ದಾರೆ. ಸೋಮವಾರ ಏಪ್ರಿಲ್ 14 ರ ಬೆಳಗ್ಗೆ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಮಾಡಿ, ತಮ್ಮ ಮಗನ ರಕ್ಷಣೆಯ ಮಾಡುವಂತೆ ಪ್ರಾರ್ಥನೆ ಮಾಡಲಿದ್ದಾರೆ.
ತಿರುಮಲದಲ್ಲಿ ಮುಡಿ ಕೊಡುವ ವೇಳೆ ಪವನ್ ಕಲ್ಯಾಣ್ ಅನುಪಸ್ಥಿತಿಯಿತ್ತು. ಆದರೆ, ಸೋಮವಾರ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಕೂಡ ಪತ್ನಿಯೊಂದಿಗೆ ಸೇರಿಕೊಂಡು ವಿಶೇಷ ಪೂಜೆಯನ್ನು ಸಲ್ಲಿಸುವ ಸಾಧ್ಯತೆಯಿದೆ. ಸದ್ಯ ಪವನ್ ಕಲ್ಯಾಣ್ ಪುತ್ರ ಮಾರ್ಕ್ ಶಂಕರ್ ಮನೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಪವನ್ ಕಲ್ಯಾಣ್ ಪತ್ನಿ ಅನ್ನಾ ಕೊನಿಡೆಲಾ ರಷ್ಯಾದ ನಾಗರೀಕರಾಗಿದ್ದು, ರಷ್ಯಾದ ಕ್ರಿಶ್ಚಿಯನ್ ಧರ್ಮವನ್ನು ಪಾಲಿಸುತ್ತಾರೆ. ತಿರುಮಲ ತಿರುಪತಿ ದೇವಸ್ಥಾನಗೆ ಅನ್ಯಧರ್ಮಿಯರು ಯಾರೇ ಭೇಟಿ ಕೊಟ್ಟರೂ, ಅಲ್ಲಿ ಅವರು ವೆಂಕಟೇಶ್ವರ ಸ್ವಾಮಿಯ ಮೇಲೆ ನಂಬಿಕೆ ಇರುವುದಾಗ ಅಲ್ಲಿನ ಅಧಿಕಾರಿ ಬಳಿಕ ಫೋಷಣೆ ಮಾಡಬೇಕಾಗುತ್ತೆ. ಇದು ದೇವಸ್ಥಾನದ ನಿಯಮ. ಅನ್ನಾ ಕೊನಿಡೆಲಾ ಕೂಡ ವೆಂಕಟೇಶ್ವರನ ಮೇಲೆ ನಂಬಿಕೆ ಇರುವುದಾಗಿ ಸಹಿಯನ್ನು ಮಾಡಿದ್ದಾರೆ ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲಾಗಿದೆ.
" ಸಂಪ್ರದಾಯದಂತೆ ಪದ್ಮಾವತಿ ಕಲ್ಯಾಣ ಕಟ್ಟೆಯಲ್ಲಿ ಅನ್ನಾ ಕೊನಿಡೆಲಾ ಮುಡಿಯನ್ನು ನೀಡಿದ್ದಾರೆ." ಎಂದು ಜನಸೇನಾ ಪಾರ್ಟಿ ಪ್ರತಿಕಾ ಹೇಳಿಯನ್ನು ಬಿಡುಗಡೆ ಮಾಡಿದ್ದಾರೆ. ಹಾಗೇ ತಿರುಮಲ ತಿರುಪತಿ ದೇವಸ್ಥಾನಂ (TTD) ನಿಯಮದ ಪ್ರಕಾರ, ರಷ್ಯಾದ ಸಂಪ್ರದಾಯಿಕ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರಾಗಿರುವ ಅನ್ನಾ ಕೊನಿಡೆಲಾ ಅಲ್ಲಿನ ಗಾಯತ್ರಿ ಸದನದಲ್ಲಿ ದೇವಸ್ಥಾನದ ಅಧಿಕಾರಿಗಳ ಸಮ್ಮುಖದಲ್ಲಿ ವೆಂಕಟೇಶ್ವರನ ಮೇಲೆ ನಂಬಿಕೆ ಇರುವುದಾಗಿ ಸಹಿಯನ್ನು ಮಾಡಿದ್ದಾರೆಂದು ಪತ್ರಿಕಾ ಹೇಳಿಕೆಯಲ್ಲಿ ಹೇಳಲಾಗಿದೆ.


Click it and Unblock the Notifications











