ಗೋಲ್ಡನ್ ಅವರ್‌ನಲ್ಲಿ ಟ್ರೀಟ್ಮೆಂಟ್ ಕೊಟ್ಟು ಸಾಯಿ ಧರ್ಮತೇಜರನ್ನು ರಕ್ಷಿಸಿದ್ದು ಹೇಗೆ?

ನಟ ಸಾಯಿ ಧರ್ಮತೇಜ ಅವರು ಪ್ರಸ್ತುತ ಅಪೋಲೋ ಆಸ್ಪತ್ರೆಯಲ್ಲಿ ನುರಿತ ವೈದ್ಯರ ಅಬ್ಸರ್ವೇಷನ್ ನಲ್ಲಿ ಟ್ರೀಟ್ಮೆಂಟ್ ಪಡೆಯುತ್ತಿದ್ದಾರೆ. ನಿನ್ನೆಯಿಂದ ಪ್ರಜ್ಞಾಹೀನ ರಾಗಿದ್ದ ಅವರು ಕೆಲವು ನಿಮಿಷಗಳ ಹಿಂದೆ ಅಷ್ಟೇ ಪ್ರಜ್ಞೆಗೆ ಮರಳಿದ್ದಾರೆ. 24 ಗಂಟೆ ವೆಂಟಿಲೇಟರ್ ನಲ್ಲಿ ಅಪೋಲೋ ಸಿಬ್ಬಂದಿ ಟ್ರೀಟ್ಮೆಂಟ್ ನಡೆಸುತ್ತಿದ್ದಾರೆ.

ಪ್ರಾಣಾಪಾಯದಿಂದ ಪಾರಾಗಿರುವ ಸಾಯಿ ಧರ್ಮತೇಜ ಅವರನ್ನು ಆಕ್ಸಿಡೆಂಟ್ ಆದ ತಕ್ಷಣ, ಸಮಯಕ್ಕೆ ಸರಿಯಾಗಿ ಸರಿಯಾದ ಟ್ರೀಟ್ಮೆಂಟ್ ಕೊಟ್ಟು ಕಾಪಾಡಿದ್ದು ಹೇಗೆ ಮತ್ತು ಯಾರು? ಅವರಿಗೆ ಆ ಕ್ಷಣಕ್ಕೆ ನೀಡಿದ ಟ್ರೀಟ್ಮೆಂಟ್ ಎಂತಹದು. ಇದರ ಸಂಪೂರ್ಣ ಮಾಹಿತಿ ಫಿಲ್ಮಿಬೀಟ್ ಕನ್ನಡಕ್ಕೆ ಸಿಕ್ಕಿದೆ ಅದರ ಪೂರ್ಣ ವಿವರಗಳು ಹೀಗಿದೆ.

ಗೋಲ್ಡನ್ ಅವರ್ ಟ್ರೀಟ್ಮೆಂಟ್!
ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆ ಪಾಲಾಗಿರುವ ನಟ ಸಾಯಿ ಧರ್ಮತೇಜ ಅಪಾಯದಿಂದ ಪಾರಾಗಿದ್ದಾರೆ. ಅವರನ್ನು ಪ್ರಾಣಾಪಾಯದಿಂದ ಹೇಗೆ ಪಾರು ಮಾಡಲಾಯಿತು ಎಂಬುದರ ಮಾಹಿತಿಯನ್ನು ಮೆಡಿಕವರ್ ಆಸ್ಪತ್ರೆಯ ಡಾ. ಸತೀಶ್ ಅವರು ವಿವರವಾಗಿ ವಿವರಿಸಿದ್ದು ಹೀಗೆ.

apollo-hospital-doctors-revealed-about-treatment-of-sai-dharam-tej

ಈ ಆಕ್ಸಿಡೆಂಟ್ ಸುಮಾರು 7:45ರ ಸಮಯದಲ್ಲಿ ನಡೆದಿದೆ. ತಕ್ಷಣ ಪೊಲೀಸ್ ಮತ್ತು 108 ಸಿಬ್ಬಂದಿ ನಮ್ಮ ಮೆಡಿಕವರ್ ಆಸ್ಪತ್ರೆಗೆ ಕರೆತಂದರು. ಅವರನ್ನು ಕರೆತಂದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಆಕ್ಸಿಡೆಂಟ್ ಆದ ಮೊದಲ ಒಂದು ಗಂಟೆ ಅದನ್ನು 'Golden hour' ಅ0ತ ಕನ್ಸಿಡರ್ ಮಾಡಲಾಗುತ್ತದೆ. ಆ ಸಮಯದಲ್ಲಿ ಯಾವ ಚಿಕಿತ್ಸೆ ಪೇಷಂಟ್ ಗೆ ದೊರೆಯುತ್ತದೆ ಅದರ ಮೇಲೆ ಆ ಪೇಷಂಟ್ ನ ಪ್ರಾಣ ಉಳಿಯುವುದು ಅವಲಂಬಿತವಾಗಿರುತ್ತದೆ. ಆ ಗಂಟೆಯಲ್ಲಿ ಯಾವ ಟ್ರೀಟ್ಮೆಂಟ್ ಕೊಡಲಾಗುತ್ತದೆ ಅದರ ಮೇಲೆ ಆ ಪೇಷಂಟ್ ನ್ನು ಹೇಗೆ ಪ್ರಾಣಾಪಾಯದಿಂದ ಪಾರು ಮಾಡಬಹುದು ಮತ್ತು ಆ ಪೇಷಂಟ್ ಎಷ್ಟು ಬೇಗ ರಿಕವರ್ ಆಗಬಹುದು ಎಂಬುದು ಕೂಡ ನಿರ್ಧಾರವಾಗುತ್ತದೆ.

ಇವರು ನಮ್ಮಲ್ಲಿ ಬಂದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು, Airway protection ಮೂಲಕ ಮೊದಲು ಕೃತಕ ಆಮ್ಲಜನಕ ನೀಡಿ ಅವರ ಪ್ರಾಣ ಉಳಿಸುವ ಪ್ರಕ್ರಿಯೆಯನ್ನು ಆರಂಭಿಸಿದ್ದಿವಿ. Pan CT protocol ಅಂದರೆ ಬ್ರೈನ್, ಸ್ಪೇನ್, ಚೆಸ್ಟ್, ಹೊಟ್ಟೆ ಭಾಗಗಳಿಗೆ CT ಸ್ಕ್ಯಾನ್ ಮಾಡಲಾಯಿತು. ಅದೃಷ್ಟವಶಾತ್ ಯಾವುದೇ ದೊಡ್ಡ ಪ್ರಮಾಣದ ಅಪಾಯ ಅಥವಾ ಪ್ರಮಾದ ಮೊದಲ ಹಂತದಲ್ಲಿ ಕಂಡುಬರಲಿಲ್ಲ. ಇಂಟರ್ನಲ್ ಆಗಿ ಒಳಗೆ ರಕ್ತಸ್ರಾವ ಅಥವಾ ಬ್ರೈನ್ ಇಂಜುರಿ ಯಾವುದು ಕಂಡುಬರಲಿಲ್ಲ. ದೇಹದ ಕೆಲ ಭಾಗಗಳಲ್ಲಿ ಫ್ಯಾಕ್ಚರ್ ಆಗಿದೆ ಆದರೆ ಅದರ ಬಗ್ಗೆ ಯಾವುದೇ ಭಯ ಪಡುವ ಅಗತ್ಯವಿಲ್ಲ. ಅವರನ್ನು ಕರೆದುಕೊಂಡು ಬಂದಾಗ ಮೊದಲು ಒಂದು ಬಾರಿ ಫಿಟ್ಸ್ ಬಂತು. ಅದಕ್ಕೂ ಕೂಡ ಮುಂಜಾಗ್ರತೆಯಿಂದ ಮತ್ತೆ ಫಿಟ್ಸ್ ಬರದಂತೆ ಟ್ರೀಟ್ಮೆಂಟ್ ಕೊಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರ ಕುಟುಂಬಕ್ಕೆ ಸೇರಿದ ಅಪೋಲೊ ಆಸ್ಪತ್ರೆಗೆ ಅವರನ್ನು ಕಳುಹಿಸಿಕೊಡಲಾಯಿತು.

ಸಮಯಕ್ಕೆ ಸರಿಯಾಗಿ ನಾವು ನೀಡಿದ ಟ್ರೀಟ್ಮೆಂಟ್ ಇಂದ ಈಗ ಸಾಯಿ ಧರ್ಮತೇಜ ಅಪಾಯದಿಂದ ಪಾರಾಗಿದ್ದಾರೆ ಅಂತ ಡಾ.ಸತೀಶ್ ಅವರು ತಿಳಿಸಿದ್ದಾರೆ.

More from Filmibeat

English summary
Telugu Actor Sai Dharam Tej Bike Accident: Apollo Hospital Doctors Revealed about Treatment of Sai Dharam Tej.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X