ಬಾಕ್ಸಾಫೀಸ್‌ನಲ್ಲಿ 'ಆದಿಪುರುಷ' ಸಿನಿಮಾ ಏನಾಗುತ್ತೆ? ಪ್ರಭಾಸ್ ಭವಿಷ್ಯ ಬಿಚ್ಚಿಟ್ಟ ಸ್ವಾಮೀಜಿ

ಟಾಲಿವುಡ್ ಮಂದಿಗೆ ವೇಣು ಸ್ವಾಮಿ ದುಸ್ವಪ್ನವೂ ಹೌದು. ಕೆಲವರಿಗೆ ಅಪತ್ಭಾಂದವನೂ ಹೌದು. ಸೆಲೆಬ್ರೆಟಿಗಳು ಮದುವೆಯಿಂದ ಹಿಡಿದು ಅವರ ಭವಿಷ್ಯ ನುಡಿಯುವ ವೇಣು ಸ್ವಾಮಿ ತೆಲುಗು ಚಿತ್ರರಂಗದಲ್ಲಿ ಸಖತ್ ಸಂಚಲನ ಸೃಷ್ಟಿಸಿದ್ದಾರೆ.

ಈಗ ವೇಣು ಸ್ವಾಮಿ ಮತ್ತೊಂದು ಸಂಚಲನ ಸೃಷ್ಟಿಸಿದ್ದು, ಆದಿಪುರುಷ್ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ. ಪ್ರಭಾಸ್ ಅಭಿನಯದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದ ಭವಿಷ್ಯ ನುಡಿದಿದ್ದಾರೆ. ಇದು ಸದ್ಯಕ್ಕೆ ತೆಲುಗು ಚಿತ್ರರಂಗದ ಟಾಕ್ ಆಪ್‌ ದಿ ಟೌನ್ ಆಗಿದೆ.

'ಆದಿಪುರುಷ್' ಪ್ರಭಾಸ್‌ ವೃತ್ತಿ ಬದುಕಿನ ಪ್ರಮುಖವಾದ ಸಿನಿಮಾ. ಅಲ್ಲದೆ ಸತತ ಎರಡು ಸೋಲುಗಳನ್ನು ಕಂಡಿರೋ ಪ್ರಭಾಸ್‌ಗೆ 'ಆದಿಪುರುಷ್' ಗೆಲ್ಲಲೇ ಬೇಕಾದ ಅನಿವಾರ್ಯತೆಯಿದೆ. ಈ ಮಧ್ಯೆ ವೇಣುಸ್ವಾಮಿ ನುಡಿದ ಭವಿಷ್ಯದ ಬಗ್ಗೆ ಟಾಲಿವುಡ್ ತಲೆ ಕೆಡಿಸಿಕೊಂಡಿದೆ.

Astrologer Venu Swamy revealed Prabhas movie Adipurushs box office result

ವೇಣು ಸ್ವಾಮಿ ನುಡಿದ ಭವಿಷ್ಯವೇನು?

ತನಗನ್ನಿಸಿದ್ದನ್ನು ನೇರವಾಗಿ ಹೇಳುವ ವೇಣು ಸ್ವಾಮಿ 'ಆದಿಪುರುಷ್' ಸಿನಿಮಾ ಹಾಗೂ ಪ್ರಭಾಸ್ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಬಾಕ್ಸಾಫೀಸ್‌ನಲ್ಲಿ ಆದಿಪುರುಷ್ ಗೆಲ್ಲುತ್ತಾ? ಇಲ್ಲಾ ಸೋಲುತ್ತಾ? ಪ್ರಭಾಸ್ ಮುಂದಿನ ಭವಿಷ್ಯ ಏನಾಗುತ್ತೆ? ಅನ್ನೋದನ್ನು ವೇಣು ಸ್ವಾಮಿ ಹೇಳಿದ್ದಾರೆ.

"ಪ್ರಭಾಸ್ ಜಾತಕದ ಪ್ರಕಾರ, ಆದಿಪುರುಷ್ ಸಿನಿಮಾ ಬಾಹುಬಲಿ ರೇಂಜ್‌ನಷ್ಟು ಸಕ್ಸಸ್ ಕಾಣುವುದಿಲ್ಲ. ಅಂತಹದ್ದೊಂದು ನಿರೀಕ್ಷೆ ಬೇಡ. ಈ ಸಿನಿಮಾ ಸಾಧಾರಾಣ ಯಶಸ್ಸು ಕಾಣುತ್ತದೆ." ಎಂದು ಬಿಡುಗಡೆಗೂ ಮುನ್ನವೇ ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆನೇ ಈಗ ಚರ್ಚೆ ಶುರುವಾಗಿದೆ.

Astrologer Venu Swamy revealed Prabhas movie Adipurushs box office result

ಪ್ರಭಾಸ್ ಇದ್ದರೆ ಸೂಪರ್ ಹಿಟ್ ಆಗುತ್ತಾ?

ಇಷ್ಟೇ ಅಲ್ಲದೆ, ಸಿನಿಮಾ ಹಿಂದೂ ಧರ್ಮದ ಕುರಿತಾಗಿ ಇದೆ ಅಂದ ಮಾತ್ರಕ್ಕೆ ಗೆಲ್ಲುವುದಿಲ್ಲ. ಅದರಲ್ಲಿ ಕಂಟೆಂಟ್ ಇರಬೇಕು. ಅಲ್ಲದೆ 3ಡಿಯಲ್ಲಿ ಸಿನಿಮಾ ತೋರಿಸಿದರೆ ಮಕ್ಕಳು ನೋಡಬಹುದು. ಆದರೆ, ಮಕ್ಕಳಿಂದಲೇ ಸಿನಿಮಾ ಗೆಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

"ಜಾತಕದ ಪ್ರಕಾರ ಯೋಗವಿರಬೇಕು. ಪ್ರಭಾಸ್ ಅಂತ ಹೆಸರಿಟ್ಟ ಮಾತ್ರ ಸಿನಿಮಾ ಸೂಪರ್‌ಹಿಟ್ ಆಗುವುದಿಲ್ಲ. ಸಾಹೋ, ರಾಧೆ ಶ್ಯಾಮ್ ಸಿನಿಮಾ ಏನಾಯ್ತು? ಪ್ರಭಾಸ್‌ಗೆ ಈ ಡಿಮ್ಯಾಂಡ್ ಇದೆ. ಒಂದು ಸಿನಿಮಾ 150 ಕೋಟಿ ರೂ. ತೆಗೆದುಕೊಳ್ಳಬಹುದು. ಏನೇ ಆದರೂ, ಜನರು ಸಿನಿಮಾವನ್ನು ಇಷ್ಟ ಪಡಬೇಕು. ಎರಡು ಸಿನಿಮಾ ಬಂದವು ಸೋತವು. ಈಗ 'ಆದಿಪುರುಷ್' ಅಷ್ಟೇ. ಇದಕ್ಕೆ ಜಾತಕ ಯೋಗ" ಏಂದು ವೇಣುಸ್ವಾಮಿ ಹೇಳಿದ್ದಾರೆ.

"ಶಾಕುಂತಲಂ ರಾಜಮೌಳಿ ಮಾಡಿದ್ರೆ ಗೆಲ್ತಿತ್ತು"

'ಆದಿಪುರುಷ್' ಬಗ್ಗೆ ಅಷ್ಟೇ ಅಲ್ಲ. ಸಮಂತಾ ಸಿನಿಮಾ 'ಶಾಕುಂತಲಂ' ಬಗ್ಗೆನೂ ಹೇಳಿಕೆ ಕೊಟ್ಟಿದ್ದಾರೆ. ಈ ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡಿದ್ದರೆ, ಮತ್ತೊಂದು ಆಸ್ಕರ್ ಸಿಗುತ್ತಿತ್ತು ಎಂದು ಹೇಳಿದ್ದಾರೆ. ಅಲ್ಲದೆ ಯಾಕೆ ಅಂತಾನೂ ಹೇಳಿಕೆ ಕೊಟ್ಟಿದ್ದಾರೆ. ಈ ಮ್ಯಾಟರ್ ಕೂಡ ಚರ್ಚೆಯಾಗುತ್ತಿದೆ.

ರಾಜಮೌಳಿಗೆ ಸಿನಿಮಾವನ್ನು ಮಾರ್ಕೆಟಿಂಗ್ ಮಾಡುವುದು ಗೊತ್ತಿದೆ. 10 ಪೈಸೆಯನ್ನು ನೂರು ರೂಪಾಯಿಗೆ ಕನ್ವರ್ಟ್ ಮಾಡುವ ಶಕ್ತಿಯಿದೆ. ಅವರದ್ದು ಪ್ರಬಲವಾದ ಜಾತಕ. ಬೇರೆ ಯಾರಾದರೂ, ರಾಜಮೌಳಿಗಿಂತ ಒಂದು ಕೋಟಿ ಜಾಸತಿ ಹಾಕಿದರೂ, ಸಿನಿಮಾ ಸೋಲುತ್ತೆ" ಎಂದು ವೇಣು ಸ್ವಾಮಿ ಭವಿಷ್ಯ ನುಡಿದಿದ್ದಾರೆ.

More from Filmibeat

English summary
Astrologer Venu Swamy revealed Prabhas movie Adipurush's box office result, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X