'ಫ್ಯಾಮಿಲಿ ಸ್ಟಾರ್' ಸರ್ವನಾಶ ಆಗಿದ್ದು ಇದೇ ಕಾರಣಕ್ಕೆ; ವಿಜಯ್ ದೇವರಕೊಂಡ ಬಗ್ಗೆ ಜ್ಯೋತಿಷಿ ವೇಣು ಸ್ವಾಮಿ ಕಾಮೆಂಟ್ ಏನು?
ಜ್ಯೋತಿಷಿ ವೇಣು ಸ್ವಾಮಿ ತೆಲುಗು ಸಿನಿಮಾ ತಾರೆಯರ ಭವಿಷ್ಯ ಹೇಳಿ ಭೇಷ್ ಎನಿಸಿಕೊಳ್ಳುತ್ತಿದ್ದರು. ಅವರ ದೋಷಕ್ಕೆ ಪರಿಹಾರವನ್ನು ಸೂಚಿಸುತ್ತಿದ್ದರು. ಹೀಗಾಗಿ ಕೆಲ ನಟಿಯರು ಅವರು ಹೇಳಿದಂತೆ ಪೂಜೆ ಪುನಸ್ಕಾರಗಳನ್ನು ಮಾಡಿದ್ದಾರೆ. ಆದ್ರೀಗ ಜ್ಯೋತಿಷಿ ವೇಣುಸ್ವಾಮಿ ವಿರುದ್ಧ ಸ್ಟಾರ್ ನಟರ ಅಭಿಮಾನಿಗಳು ತಿರುಗಿ ಬೀಳುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ. ಅದಕ್ಕೆ ಕಾರಣ ಏನು ಅನ್ನೋದನ್ನು ವಿಶೇಷವಾಗಿ ಹೇಳಬೇಕಿಲ್ಲ.
ಜ್ಯೋತಿಷಿ ವೇಣುಸ್ವಾಮಿ ಇತ್ತೀಚೆಗೆ ಡಾರ್ಲಿಂಗ್ ಪ್ರಭಾಸ್ ಹಾಗೂ ನಯನತಾರಾ ಅವರ ಭವಿಷ್ಯ ನುಡಿದಿದ್ದರು. ಆಗಲೂ ಅಭಿಮಾನಿಗಳು ವೇಣುಸ್ವಾಮಿ ಅವರನ್ನು ಟ್ರೋಲ್ ಮಾಡಿದ್ದರು. ಇದೇ ಸಂದರ್ಭದಲ್ಲಿ ವಿಜಯ್ ದೇವರಕೊಂಡ ಅವರ ಬಗ್ಗೆ ಸೆನ್ಸೇಷನಲ್ ಕಾಮೆಂಟ್‌ಗಳನ್ನು ಮಾಡಿದ್ದಾರೆ. 'ಫ್ಯಾಮಿಲಿಸ್ಟಾರ್' ಸೋಲಿಗೆ ಅಸಲಿ ಕಾರಣವೇನು? ಅನ್ನೋದನ್ನು ಹೇಳಿದ್ದಾರೆ.

ವಿಜಯ್ ದೇವರಕೊಂಡ ನಟಿಸಿದ ಸಿನಿಮಾ 'ಫ್ಯಾಮಿಲಿ ಸ್ಟಾರ್' ಇತ್ತೀಚೆಗೆ ರಿಲೀಸ್ ಆಗಿತ್ತು. ತೆಲುಗಿನ ಲಕ್ಕಿ ನಾಯಕಿ ಮೃಣಾಲ್ ಠಾಕೂರ್ ನಟಿಸಿದ ಹೊರತಾಗಿಯೂ ಸಿನಿಮಾ ಹೇಳ ಹೆಸರಿಲ್ಲದಂತೆ ಹೋಯ್ತು. 'ಲೈಗರ್' ವಿಜಯ್ ದೇವರಕೊಂಡ ಈ ಮಟ್ಟಿಗೆ ಸೋಲು ಕಂಡಿದ್ದು ಈ ಸಿನಿಮಾ ಮೂಲಕವೇ. ಇದೇ ವೇಳೆ ಜ್ಯೋತಿಷಿ ವೇಣುಸ್ವಾಮಿ ಕಾಮೆಂಟ್‌ಗಳು ಚರ್ಚೆಗೆ ಗ್ರಾಸವಾಗಿವೆ.
ವೇಣುಸ್ವಾಮಿ ಪ್ರತಿ ಬಾರಿ ನಟ -ನಟಿಯರ ಭವಿಷ್ಯವನ್ನು ನುಡಿಯುವಾಗ ದೋಷಗಳು ಕಾರಣ ಎಂದು ಹೇಳುತ್ತಿದ್ದರು. ಗ್ರಹಗತಿ ಚೆನ್ನಾಗಿಲ್ಲ, ಜಾತಕದಲ್ಲಿ ದೋಷವಿದೆ. ಇಂತಹದ್ದೇ ಒಂದಿಷ್ಟು ಕಾರಣಗಳನ್ನು ನೀಡುತ್ತಿದ್ದರು. ಆದರೆ, ವಿಜಯ್ ದೇವರಕೊಂಡ ಸಿನಿಮಾ 'ಫ್ಯಾಮಿಲಿ ಸ್ಟಾರ್' ಹೀನಾಯ ಸೋಲಿಗೆ ಕಾರಣವನ್ನು ತಿಳಿಸುವಾಗ ಜಾತಕ, ದೋಷ ಅನ್ನುವ ಪದವನ್ನು ಬಳಸಿಲ್ಲ.
ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ "ಯಾರದ್ದೇ ಭವಿಷ್ಯವನ್ನು ಹೇಳಿದಾಗ ಒಳ್ಳೆಯದನ್ನು ಹಾಗೂ ಕೆಟ್ಟದ್ದನ್ನು ಆರಿಸಿಕೊಳ್ಳುತ್ತೇನೆ. ಅವರಿಂದ ಆಗುವ ತೊಂದರೆ ಬಗ್ಗೆ ಹೇಳಿದರೆ, ಟ್ರೋಲ್ ಮಾಡುತ್ತಾರೆ. ನನ್ನ ಮೇಲೆ ಕೋಪಗೊಳ್ಳುತ್ತಾರೆ. ನನ್ನ ವಿರುದ್ಧ ಅನಗತ್ಯವಾಗಿ ಉದ್ಧಟತನವನ್ನು ತೋರುತ್ತಾರೆ. ಆದರೆ, ಹೇಳುತ್ತಿರುವ ಸತ್ಯ ಅವರಿಗೆ ಅರ್ಥವೇ ಆಗುವುದಿಲ್ಲ. ಹೀಗೆ ಟ್ರೋಲ್ ಮಾಡುವುದರಿಂದ ತನಗೇನು ನಷ್ಟವಿಲ್ಲ" ಎಂದೂ ಹೇಳಿಕೊಂಡಿದ್ದಾರೆ.

ವಿಜಯ್ ದೇವರಕೊಂಡ ಸಿನಿಮಾ 'ಫ್ಯಾಮಿಲಿ ಸ್ಟಾರ್' ಸೋಲುವುದಕ್ಕೆ ನೆಗೆಟಿವ್ ವಿಮರ್ಶೆಗಳೇ ಕಾರಣ ಎಂದಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನ ಸಿನಿಮಾವನ್ನು ಪ್ರೀಮಿಯರ್ ಮಾಡಲಾಗಿತ್ತು. ಈ ಸಿನಿಮಾ ನೋಡಿದ ಬಳಿಕ ನೆಗೆಟಿವ್ ವಿಮರ್ಶೆಗಳು ಹರಿದಾಡಿದ್ದವು. ಹೀಗಾಗಿ ಸಿನಿಮಾ ನೋಡಬೇಕು ಅಂತ ಇದ್ದವರೂ, ಥಿಯೇಟರ್‌ಗೆ ಬರಲು ಮನಸ್ಸು ಮಾಡಿಲ್ಲ ಎಂದು ಹೇಳಿದ್ದಾರೆ.
ಟ್ರೋಲರ್‌ಗಳು, ಮೀಮ್ಸ್ ಮಾಡುವವರು, ಸೋಶಿಯಲ್ ಮೀಡಿಯಾದಿಂದಲೇ 'ಫ್ಯಾಮಿಲಿ ಸ್ಟಾರ್' ಸಿನಿಮಾ ಸರ್ವನಾಶವಾಯ್ತು. ಮಹೇಶ್ ಬಾಬು ನಟಿಸಿದ್ದ 'ಗುಂಟೂರು ಖಾರಂ' ಸಿನಿಮಾಗೂ ಹೀಗೆ ಆಗಿತ್ತು ಎಂದು ಹೇಳಿಕೊಂಡಿದ್ದಾರೆ. 'ಲೈಗರ್' ಹಾಗೂ 'ಫ್ಯಾಮಿಲಿ ಸ್ಟಾರ್' ಸಿನಿಮಾ ಸೋಲಿನ ಬಳಿಕ ಸಿನಿಮಾರಂಗದಲ್ಲಿ ಇವರ ವೃತ್ತಿ ಬದುಕು ಅತಂತ್ರದಲ್ಲಿದೆ ಎಂದು ಸಿನಿಮಾವಲಯದಲ್ಲಿ ಚರ್ಚೆಯಾಗುತ್ತಿದೆ.


Click it and Unblock the Notifications











