"ಅನುಷ್ಕಾ ಶೆಟ್ಟಿ ಪ್ರತಿ ಭಾಷೆಯಲ್ಲೂ ಒಬ್ಬೊಬ್ಬ ಮ್ಯಾನೇಜರ್ ಇಟ್ಟುಕೊಂಡಿದ್ರು.. ಆಕೆ ಮನೆ ಬಿಟ್ಟು ಹೊರಬರಲೇ ಇಲ್ಲ"
ದಕ್ಷಿಣ ಭಾರತದ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ. 'ಅರುಂಧತಿ' ಸಿನಿಮಾ ಬಳಿಕ ಕನ್ನಡತಿ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಉತ್ತುಂಗದಲ್ಲಿ ಏರಿದರು. ಸೂಪರ್ ಸ್ಟಾರ್‌ಗಳೇ ಅನುಷ್ಕಾ ಜೊತೆ ಕೆಲಸ ಮಾಡುವುದಕ್ಕೆ ಉತ್ಸಾಹ ತೋರುತ್ತಿದ್ದರು. ಆ ಮಟ್ಟಿಗೆ ಜನಪ್ರಿಯತೆ ಇತ್ತು.
ಅನುಷ್ಕಾ ಶೆಟ್ಟಿಯ ಒಂದೊಂದೇ ಸಿನಿಮಾಗಳು ಗೆಲ್ಲುತ್ತಿದ್ದಂತೆ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಕೈತುಂಬ ಅವಕಾಶಗಳು ಸಿಕ್ಕಿದವು. ಅನುಷ್ಕಾ ಶೆಟ್ಟಿ ಪ್ರಭಾಸ್, ನಾಗಾರ್ಜುನಾ, ದಳಪತಿ ವಿಜಯ್, ಅಜಿತ್ ಮತ್ತು ಸೂರ್ಯ ಅಂತಹ ಸೂಪರ್‌ಸ್ಟಾರ್‌ಗಳ ಸಿನಿಮಾಗಳನ್ನು ಗಿಟ್ಟಿಸಿಕೊಂಡರು.

ಇಷ್ಟೊಂದು ಜನಪ್ರಿಯತೆಗೆ ಕಾರಣ ಅನುಷ್ಕಾ ಆಯ್ಕೆ ಮಾಡಿಕೊಂಡ ಸಿನಿಮಾಗಳು. 2009ರಲ್ಲಿ ರಿಲೀಸ್ ಆಗಿದ್ದ 'ಅರುಂಧತಿ' ದಕ್ಷಿಣ ಭಾರತದಲ್ಲೇ ದೊಡ್ಡ ಸಂಚಲವನ್ನು ಸೃಷ್ಟಿಸಿತ್ತು. ಅನುಷ್ಕಾ ಶೆಟ್ಟಿಯನ್ನು ಸ್ಟಾರ್ ಮಾಡಿದ್ದೇ ಈ ಸಿನಿಮಾ. ಈ ವೇಳೆ ಅನುಷ್ಕಾ ಶೆಟ್ಟಿ ಎಷ್ಟು ಬ್ಯುಸಿಯಾಗಿದ್ದರು? ತೆಲುಗು-ತಮಿಳು ಭಾಷೆಯಲ್ಲಿ ಸಿಕ್ಕ ಆಫರ್‌ಗಳನ್ನು ಮ್ಯಾನೇಜ್ ಮಾಡಲು ಏನು ಮಾಡಿದ್ದರು ಅನ್ನೋದನ್ನು ತಮಿಳು ಪತ್ರಕರ್ತ ಚೆಯ್ಯರು ಬಾಲು ವಿವರಿಸಿದ್ದಾರೆ.
ಅನುಷ್ಕಾ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್
'ಅರುಂಧತಿ' ಸಿನಿಮಾ ಬಳಿಕ ಅನುಷ್ಕಾ ಶೆಟ್ಟಿಯ ಇಮೇಜ್ ಬದಲಾಗಿದ್ದು ನಿಜ. ಈ ಸಿನಿಮಾ ಅನುಷ್ಕಾ ಶೆಟ್ಟಿ ವೃತ್ತಿ ಬದುಕಿಗೆ ಹೊಸ ತಿರುವನ್ನೇ ನೀಡಿತ್ತು. 'ಬಾಹುಬಲಿ' ಬಳಿಕವಂತೂ ಅನುಷ್ಕಾ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಆದರೆ, ಈ ಜನಪ್ರಿಯತೆಯನ್ನು ಅನುಷ್ಕಾ ಶೆಟ್ಟಿ ಯಾಕೋ ಸಮರ್ಥವಾಗಿ ಬಳಸಿಕೊಂಡಿಲ್ಲ. ಸದ್ಯ ಅನುಷ್ಕಾ ಶೆಟ್ಟಿ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರುವುದಕ್ಕೆ ಬರಲಿದ್ದಾರೆ. ಈ ಸಿನಿಮಾ ಮೂಲಕ ಶೆಫ್ ಆಗಿ ಅನುಷ್ಕಾ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ಅನುಷ್ಕಾ ಶೆಟ್ಟಿ ಕರಿಯರ್ ಗ್ರಾಫ್ ಬಗ್ಗೆ ಪತ್ರಕರ್ತ ಚೆಯ್ಯರು ಬಾಬು ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಬಿಚ್ಚಿದ್ದಾರೆ.
ಪ್ರತಿ ಭಾಷೆಯಲ್ಲೊಬ್ಬ ಮ್ಯಾನೇಜರ್
ತಮಿಳು ಪತ್ರಕರ್ತ ಚೆಯ್ಯರು ಬಾಲು ಚಿತ್ರರಂಗದ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹೊರಹಾಕುತ್ತಿದ್ದಾರೆ. ಇತ್ತೀಚೆಗೆ ತಮಿಳು ಚಾನೆಲ್ ಒಂದಕ್ಕೆ ಅನುಷ್ಕಾ ಶೆಟ್ಟಿ ಬಗ್ಗೆ ಇಂಟ್ರೆಸ್ಟಿಂಗ್ ವಿಷಯವನ್ನು ತಿಳಿಸಿದ್ದಾರೆ. ಅನುಷ್ಕಾ ಶೆಟ್ಟಿ ಕರಿಯರ್ ಗ್ರಾಫ್ ಬಗ್ಗೆ ಚೆಯ್ಯರು ಬಾಲು ಆಸಕ್ತಿಕರ ವಿಷಯವನ್ನು ಹೊರ ಹಾಕಿದ್ದಾರೆ. ಅನುಷ್ಕಾ ಶೆಟ್ಟಿಗೆ ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಅವಕಾಶಗಳ ಮಹಾಪೂರವೇ ಹರಿದು ಬಂದಿತ್ತು. ಆ ವೇಳೆ ಅನುಷ್ಕಾ ಶೆಟ್ಟಿ ಪ್ರತಿ ಭಾಷೆಯಲ್ಲೂ ಪ್ರತ್ಯೇಕವಾಗಿ ಮ್ಯಾನೇಜರ್ ಅನ್ನು ಇಟ್ಟು ಕೆಲಸ ಮಾಡುತ್ತಿದ್ದರು ಎಂದು ಚೆಯ್ಯರು ಬಾಲು ಹೇಳಿದ್ದಾರೆ.

ಮನೆ ಬಿಟ್ಟು ಹೊರಗೆ ಬಂದಿರಲಿಲ್ಲ
ಯಶಸ್ಸಿನ ಉತ್ತುಂಗದಲ್ಲಿದ್ದ ಅನುಷ್ಕಾ ಶೆಟ್ಟಿ 'ಸೈಜ್ ಜೀರೊ' ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾಗಾಗಿ ಅನುಷ್ಕಾ ಶೆಟ್ಟಿ ದಪ್ಪಗಾಗಿದ್ದರು. ಆದರೆ, ಅಲ್ಲಿಂದ ಅನುಷ್ಕಾ ಶೆಟ್ಟಿ ಸಣ್ಣಗಾಗುವುದಕ್ಕೆ ತುಂಬಾನೇ ಪರದಾಡಿದ್ದರು. ಕೆಲವರು ಅನುಷ್ಕಾ ಶೆಟ್ಟಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸಲಹೆಯನ್ನೂ ನೀಡಿದ್ದರು. ಆದರೆ, ಅನುಷ್ಕಾ ಶೆಟ್ಟಿ ಒಪ್ಪಲಿಲ್ಲ. ಹೀಗಾಗಿ ಕೆಲವು ವರ್ಷಗಳು ಅನುಷ್ಕಾ ಶೆಟ್ಟಿ ಮನೆ ಬಿಟ್ಟು ಹೊರಗೇ ಬಂದಿರಲಿಲ್ಲ ಎಂದು ಚೆಯ್ಯರು ಬಾಲು ಸಂದರ್ಶನದ ವೇಳೆ ಹೇಳಿದ್ದಾರೆ.
ಪ್ರಭಾಸ್-ಅನುಷ್ಕಾ ಜೋಡಿ ಬಗ್ಗೆ ವದಂತಿ
'ಬಾಹುಬಲಿ' ಸಿನಿಮಾ ಗೆಲ್ಲುತ್ತಿದ್ದಂತೆ ಪ್ರಭಾಸ್-ಅನುಷ್ಕಾ ಜೋಡಿ ಬಗ್ಗೆ ವದಂತಿಗಳು ಹಬ್ಬಿದ್ದವು. ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ. ಇನ್ನೇನು ಮದುವೆ ಆಗುತ್ತಾರೆಂಬ ಮಾತು ಕೇಳಿ ಬಂದಿತ್ತು. ಆದರೆ, ಇದರಲ್ಲಿ ಎಷ್ಟು ಸತ್ಯವಿದೆಯೋ ಗೊತ್ತಿಲ್ಲ ಎಂದು ಚೆಯ್ಯರು ಬಾಲು ಹೇಳಿದ್ದಾರೆ. ಸದ್ಯ ಅನುಷ್ಕಾ ಶೆಟ್ಟಿ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುತ್ತಿದ್ದಾರೆ. ಇವರ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಸಿನಿಮಾ ಬಿಡುಗಡೆಯಾಗಬೇಕಿದೆ.


Click it and Unblock the Notifications











