ರಶ್ಮಿಕಾ ಹೆಜ್ಜೆ ಹಾಕಿದ 'ಸಾಮಿ ಸಾಮಿ' ಹಾಡಿಗೆ ಸೊಂಟ ಬಳುಕಿಸಿದ ವಿದೇಶಿ ಮೂಲದ ಗರ್ಭಿಣಿ: ವಿಡಿಯೋ ವೈರಲ್

ರಶ್ಮಿಕಾ ಮಂದಣ್ಣ ಹಾಗೂ ಅಲ್ಲು ಅರ್ಜುನ್ ಸಿನಿಮಾ 'ಪುಷ್ಪ' ಥಿಯೇಟರ್ ಅಷ್ಟೇ ಅಲ್ಲ ಒಟಿಟಿಯಲ್ಲೂ ಬಿಡುಗಡೆಯಾಗಿದೆ. ಆದರೂ 'ಪುಷ್ಪ' ಕ್ರೇಜ್ ಮಾತ್ರ ಕಮ್ಮಿಯಾಗಿಲ್ಲ. ಈ ಚಿತ್ರದ ಡೈಲಾಗ್, ಮ್ಯಾನರಿಸಂ, ಹಾಡು ಎಲ್ಲವೂ ಇನ್ನೂ ಟ್ರೆಂಡಿಂಗ್‌ನಲ್ಲೇ ಇದೆ. ಈ ಕ್ರೇಜ್ ಕೇವಲ ಭಾರತದಲ್ಲಷ್ಟೇ ಅಲ್ಲ. ವಿಶ್ವದ ಮೂಲೆ ಮೂಲೆಯಲ್ಲೂ 'ಪುಷ್ಪ' ಕ್ರೇಜ್ ಇನ್ನೂ ಇದೆ. ಸೆಲೆಬ್ರಿಟಿಗಳು ಕೂಡ ಪುಷ್ಪ ಸಿನಿಮಾದ ಹಾಡುಗಳನ್ನು ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

ಹೌದು.. ಸೋಶಿಯಲ್ ಮೀಡಿಯಾದಲ್ಲಿ 'ಪುಷ್ಪ' ಕ್ರೇಜ್ ಪ್ರತಿದಿನ ಹೆಚ್ಚಾಗುತ್ತಲೇ ಇದೆ. ಅಲ್ಲು ಅರ್ಜುನ್ ಮ್ಯಾನರಿಸಂ ಅನ್ನು ಕಾಪಿ ಮಾಡಿ ರೀಲ್ಸ್ ಮಾಡುವವರ ಸಂಖ್ಯೆ ಕಮ್ಮಿಯಾಗಿಲ್ಲ. ಅದೇ ರೀತಿ ಸಮಂತಾ ನಟನೆಯ ಊ ಅಂಟವಾ ಹಾಡು, ರಶ್ಮಿಕಾ ಅಭಿನಯದ ಸಾಮಿ ಸಾಮಿ ಸಾಂಗ್ ಇನ್ನೂ ಟ್ರೆಂಡಿಂಗ್‌ನಲ್ಲಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಒಂದು ಹಾಡು ಟ್ರೆಂಡ್ ಆಗುತ್ತಿದೆ. ರಶ್ಮಿಕಾ ಹೆಜ್ಜೆ ಹಾಕಿದ್ದ ಸಾಮಿ ಸಾಮಿ ಹಾಡು ವಿದೇಶದಲ್ಲೂ ಸದ್ದು ಮಾಡುತ್ತಿದೆ.

'ಸಾಮಿ ಸಾಮಿ' ಹಾಡಿದೆ ವಿದೇಶಿ ಮಹಿಳೆ ಸ್ಟೆಪ್ಸ್

'ಸಾಮಿ ಸಾಮಿ' ಹಾಡಿದೆ ವಿದೇಶಿ ಮಹಿಳೆ ಸ್ಟೆಪ್ಸ್

'ಪುಷ್ಪ' ಸಿನಿಮಾದ ಹಾಡುಗಳು ಸೂಪರ್‌ಡೂಪರ್ ಹಿಟ್ ಆಗಿವೆ. ಎಲ್ಲಾ ಹಾಡುಗಳಲ್ಲೂ ಒಂದೊಂದು ಸಿಗ್ನೇಚರ್ ಸ್ಟೆಪ್ಸ್ ಇದೆ. ರಶ್ಮಿಕಾ ಹೆಜ್ಜೆ ಹಾಕಿದ ಸಾಮಿ ಸಾಮಿ ಹಾಡಿನಲ್ಲೂ ಸೊಂಟ ಬಳುಕಿಸುವ ಸ್ಟೆಪ್ ಇದೆ. ಈ ಸ್ಟೆಪ್ ವಿದೇಶಿಗರನ್ನೂ ಸೆಳೆಯುತ್ತಿದೆ. ನ್ಯೂಜಿಲ್ಯಾಂಡಿನ ಆಕ್‌ಲ್ಯಾಂಡ್‌ನಲ್ಲಿ ನೆಲೆಸಿರುವ ಮಹಿಳೆಯೊಬ್ಬರು ಸಾಮಿ ಸಾಮಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ವಿಶೇಷ ಅಂದರೆ, ಆಕೆ ಗರ್ಭಿಣಿಯಾಗಿದ್ದು, ಸಾಮಿ ಸಾಮಿ ಹಾಡಿಗೆ ಫಿದಾ ಆಗಿದ್ದಾರೆ. ಇದೇ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಬೇಜಾನ್ ವೈರಲ್ ಆಗುತ್ತಿದೆ.

ಈ ಗರ್ಭಿಣಿ ಯಾರು?

ಈ ಗರ್ಭಿಣಿ ಯಾರು?

ಸಾಮಿ ಸಾಮಿ ಹಾಡಿಗೆ ಹೆಜ್ಜೆ ಹಾಕಿದ ಗರ್ಭಿಣಿ ಹೆಸರು ಅಬ್ಬೇ ಸಿಂಗ್. ಇವರು ನ್ಯೂಜಿಲ್ಯಾಂಡ್ ಮೂಲದ ಆಕ್‌ಲ್ಯಾಂಡ್ ನಗರದ ನಿವಾಸಿ. ಈಕೆ ಭಾರತೀಯ ಮೂಲದ ಮನಿ ಸಿಂಗ್ ಎಂಬುವವರನ್ನು ವಿವಾಹವಾಗಿ ಆಕ್‌ಲ್ಯಾಂಡ್‌ನಲ್ಲಿ ನೆಲೆಸಿದ್ದಾರೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಅಬ್ಬೆ ಸಿಂಗ್ 'ಪುಷ್ಪ' ಸಿನಿಮಾದ ಪೆಪ್ಪೆ ಸಾಂಗ್‌ಗೆ ಹೆಜ್ಜೆ ಹಾಕಿದ್ದು, ತನ್ನ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ವಿಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಹಾಡನ್ನು ತಲೆಯಿಂದ ಹೊರಹಾಕಲು ಆಗುತ್ತಿಲ್ಲ

ಸಾಮಿ ಸಾಮಿ ಹಾಡನ್ನು ಪೋಸ್ಟ್ ಮಾಡಿದ ಬಳಿಕ ಅಬ್ಬೆ ಸಿಂಗ್ ಈ ಹಾಡಿನ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. " ಈ ಹಾಡನ್ನು ನನ್ನ ತಲೆಯಿಂದ ಹೊರ ಹಾಕಲು ಆಗುತ್ತಿಲ್ಲ. ಈ ಟ್ರೆಂಡ್‌ನಲ್ಲಿ ನಾನು ತುಂಬಾನೇ ತಡವಾಗಿದ್ದೇನೆ ಎಂದು ನನಗೆ ಗೊತ್ತಿದೆ. ಆದರೆ, ನಾನು ಇದು ಟ್ರೈ ಮಾಡಲೇ ಬೇಕಿತ್ತು. ನಾನು ಮತ್ತು ಮನಿ (ಪತಿ) ಇದೂವರೆಗೂ ಈ ಸಿನಿಮಾವನ್ನು ನೋಡಿಲ್ಲ. ಈ ವಾರ ನಾವು ನೋಡುವ ಸಿನಿಮಾ ಪಟ್ಟಿಯಲ್ಲಿ ಈ ಸಿನಿಮಾ ಕೂಡ ಇದೆ." ಎಂದು ಹೇಳಿಕೊಂಡಿದ್ದಾರೆ.

ವಿಶ್ವದ ಮೂಲೆಯಿಂದ ಸಿಗುತ್ತಿದೆ ಶುಭಾಶಯ

ವಿಶ್ವದ ಮೂಲೆಯಿಂದ ಸಿಗುತ್ತಿದೆ ಶುಭಾಶಯ

ಗರ್ಭಿಣಿ ಅಬ್ಬೆ ಸಿಂಗ್ ಹಾಕಿದ ಹೆಜ್ಜೆಗೆ ವಿಶ್ವದ ಮೂಲೆ ಮೂಲೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಈಕೆಯ ಡ್ಯಾನ್ಸ್‌ ಕಂಡು ಮೆಚ್ಚುಗೆ ಸೂಚಿಸುತ್ತಿದ್ದಾರೆ. "ಇದುವರೆಗೂ ನಾನು ನೋಡಿರುವ ಅತ್ಯುತ್ತಮ ವಿಡಿಯೋ, ನೀವು ತುಂಬಾನೇ ಸುಂದರವಾಗಿ ಕಾಣಿಸುತ್ತಿದ್ದೀರಾ, ನಿಮ್ಮ ಎನರ್ಜಿ ನೋಡಿ ಆಶ್ಚರ್ಯ ಆಗುತ್ತಿದೆ." ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋಗೆ ಕಮೆಂಟ್ ಮಾಡುತ್ತಿದ್ದಾರೆ. 'ಪುಷ್ಪ' ಸಿನಿಮಾದ ಯಶಸ್ಸಿನ ಬಳಿಕ 'ಪುಷ್ಪ 2' ಅತೀ ಶೀಘ್ರದಲ್ಲಿಯೇ ಶೂಟಿಂಗ್ ಆರಂಭಿಸುವ ಸಾಧ್ಯತೆಯಿದೆ.

More from Filmibeat

English summary
Pregnant woman from Auckland was dancing Rashmika Mandanna starrer Pushpa movie song Saami Saami. Video goes viral in social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X