'ಪುಷ್ಪ' ಶ್ರೀವಲ್ಲಿ ಕನ್ನಡ ಸಾಂಗಿಗೆ ಹೆಜ್ಜೆ ಹಾಕಿದ ಡೇವಿಡ್ ವಾರ್ನರ್: ಸಿಕ್ಕಿದ್ದೆಷ್ಟು ವೀವ್ಸ್?

ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾದ ಮೂಲಕ ಭರ್ಜರಿ ಯಶಸ್ಸು ಕಂಡಿದ್ದಾರೆ ಮೊದಲ ಪ್ಯಾನ್ ಇಂಡಿಯಾ ಸಿನಿಮಾದಲ್ಲೇ ಬಾಕ್ಸಾಫೀಸ್‌ನಲ್ಲಿ ಬಂಪರ್ ಬೆಳೆ ತೆಗೆದಿದ್ದಾರೆ. ಸುಮಾರು 300 ಕೋಟಿ ಅಧಿಕ ಗಳಿಕೆ ಕಂಡಿರುವ ಸಿನಿಮಾ ಸದ್ಯ ಒಟಿಟಿಯಲ್ಲಿ ಬೇಜಾನ್ ಸದ್ದು ಮಾಡುತ್ತಿದೆ. ಇನ್ನೊಂದು ಕಡೆ 'ಪುಷ್ಪ' ಸಿನಿಮಾದ ಹಾಡುಗಳು, ಸ್ಟೆಪ್ಸ್ ಭರ್ಜರಿ ಸೌಂಡ್ ಮಾಡುತ್ತಿದೆ.

Recommended Video

ಅಲ್ಲು ಅರ್ಜುನ್ ಆಕ್ಟಿಂಗ್‌ಗೆ ಫಿದಾ ಆದಾ ಬಾಲಿವುಡ್ ನಿರ್ಮಾಪಕರು !

ದಕ್ಷಿಣ ಭಾರತದ ಸಿನಿಮಾವೊಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ಆಸ್ಟ್ರೇಲಿಯಾದ ಕ್ರಿಕೆಟರ್ ಡೇವಿಡ್ ವಾರ್ನರ್. ಹೌದು, 'ಪುಷ್ಪ' ಸಿನಿಮಾದ ಹಾಡೊಂದಕ್ಕೆ ಡೇವಿಡ್ ವಾರ್ನರ್ ಅಲ್ಲು ಅರ್ಜುನ್ ಹಾಗೆಯೇ ಹೆಜ್ಜೆ ಹಾಕಿದ್ದಾರೆ. ಇದೇ ವಿಡಿಯೋ ಬೇಜಾನ್ ಸದ್ದು ಮಾಡುತ್ತಿದೆ. 'ಪುಷ್ಪ' ಚಿತ್ರದ ಕನ್ನಡ ವರ್ಷನ್‌ಗೆ ಈ ಹಾಡಿಗೆ ಹೆಜ್ಜೆ ಹಾಕಿರುವುದು ವಿಶೇಷ. ಹಾಗಿದ್ದರೆ, ಆ ಹಾಡು ಯಾವುದು? ಸ್ಟೆಪ್ಸ್ ಹೇಗಿದೆ? ಅಂತ ನೋಡಲು ಮುಂದೆ ಓದಿ.

 ಪುಷ್ಪ ಹಾಡಿಗೆ ಡೇವಿಡ್ ವಾರ್ನರ್ ಸ್ಟೆಪ್ಸ್

ಪುಷ್ಪ ಹಾಡಿಗೆ ಡೇವಿಡ್ ವಾರ್ನರ್ ಸ್ಟೆಪ್ಸ್

ಡೇವಿಡ್ ವಾರ್ನರ್ ಹೈದರಾಬಾದ್ ಸನ್‌ರೈಸರ್ಸ್ ತಂಡ ಸೇರಿದ್ದಲ್ಲಿಂದ ದಕ್ಷಿಣ ಭಾರತದ ಸಿನಿಮಾಗಳ ಫ್ಯಾನ್ ಆದಂತಿದೆ. ಬಿಡುವು ಸಿಕ್ಕಿದಾಗಲೆಲ್ಲಾ ಡೇವಿಡ್ ವಾರ್ನರ್ ಸಿನಿಮಾದ ಯಾವುದಾದರೂ ಒಂದು ಹಾಡನ್ನು ತೆಗೆದುಕೊಂಡು ಗಮನ ಸೆಳೆಯುವಂತಹದ್ದು ಏನಾದರೂ ಮಾಡುತ್ತಲೇ ಇರುತ್ತಾರೆ. ಈಗ ಕೂಡ ಅಲ್ಲು ಅರ್ಜುನ್ ನಟಿಸಿದ 'ಪುಷ್ಪ' ಸಿನಿಮಾದ ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ. ಇದೇ ಹಾಡು ವೈರಲ್ ಆಗುತ್ತಿದೆ.

 ಕನ್ನಡ ಹಾಡಿಗೆ ಹೆಜ್ಜೆ ಹಾಕಿದ ವಾರ್ನರ್

ಕನ್ನಡ ಹಾಡಿಗೆ ಹೆಜ್ಜೆ ಹಾಕಿದ ವಾರ್ನರ್

ಅಂದಹಾಗೇ ಆಸ್ಟ್ರೇಲಿಯಾ ಕ್ರಿಕೆಟಿಗೆ ಡೇವಿಡ್ ವಾರ್ನರ್ 'ಪುಷ್ಪ' ಸಿನಿಮಾದ ಕನ್ನಡ ವರ್ಷನ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಹಾಗಾಗಿ ಇದು ಕರ್ನಾಟಕದಲ್ಲಿ ಹೆಚ್ಚು ಟ್ರೆಂಡ್ ಆಗುತ್ತಿದೆ. ಸಾಮಾನ್ಯವಾಗಿ ತೆಲುಗು ಹಾಡುಗಳಿಗೆ, ಟ್ರೈಲರ್‌ಗಳನ್ನು ಅನುಕರಿಸುವ ಡೇವಿಡ್ ವಾರ್ನರ್ ಈ ಬಾರಿ ಕನ್ನಡ ಹಾಡನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ವಾರ್ನರ್ ಮಿಸ್ ಆಗಿ ಕನ್ನಡ ಸಾಂಗ್‌ಗೆ ಹೆಜ್ಜೆ ಹಾಕಿಬಿಟ್ಟರಾ ಅನ್ನುವ ಅನುಮಾನ ಕಾಡದೆ ಇರುವುದಿಲ್ಲ.

 ಆರ್‌ಸಿಬಿ ಪರ ಬ್ಯಾಟ್ ಬೀಸುತ್ತಾರಾ ವಾರ್ನರ್?

ಆರ್‌ಸಿಬಿ ಪರ ಬ್ಯಾಟ್ ಬೀಸುತ್ತಾರಾ ವಾರ್ನರ್?

ಹೈದರಾಬಾದ್ ಸನ್ ರೈಸರ್ಸ್ ತಂಡಿದ ಪರ ಆಡಿದ್ದ ಡೇವಿಡ್ ವಾರ್ನರ್ ಆರ್‌ಸಿಬಿ ತಂಡ ಸೇರಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಕಾರಣಕ್ಕೆ ಕನ್ನಡ ಹಾಡನ್ನು ಆಯ್ಕೆ ಮಾಡಿಕೊಂಡಿರುವ ಸಾಧ್ಯತೆಗಳಿವೆ. ವಿರಾಟ್ ಕೊಹ್ಲಿ ಆರ್‌ಸಿಬಿ ನಾಯಕತ್ವದಿಂದ ಕೆಳಗೆ ಇಳಿದಿದ್ದರಿಂದ ಆ ಸ್ಥಾನಕ್ಕೆ ಡೇವಿಡ್ ವಾರ್ನರ್‌ಗೆ ಸ್ಕೆಚ್ ಹಾಕಲಾಗಿದೆ ಎನ್ನಲಾಗುತ್ತದೆ. ಈ ಕಾರಣಕ್ಕೆ ಕನ್ನಡ ಹಾಡನ್ನು ಆಯ್ಕೆ ಮಾಡಿಕೊಂಡಿದ್ದಾರೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

 ಡೇವಿಡ್ ವಾರ್ನರ್ ಹೆಜ್ಜೆ 9 ಲಕ್ಷ ಲೈಕ್ಸ್

ಡೇವಿಡ್ ವಾರ್ನರ್ ಹೆಜ್ಜೆ 9 ಲಕ್ಷ ಲೈಕ್ಸ್

ಡೇವಿಡ್ ವಾರ್ನರ್ ಶ್ರೀವಲ್ಲಿ ಕನ್ನಡ ಹಾಡನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಈಗಾಗಲೇ ಸುಮಾರು 25 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಲೈಕ್ಸ್ 9 ಲಕ್ಷ ಸಮೀಪಿಸಿದೆ. ಐಪಿಎಲ್‌ನಲ್ಲಿ ವಿದೇಶಿ ಆಟಗಾರರ ಪೈಕಿ ಎಬಿಡಿಯನ್ನು ಬಿಟ್ಟರೆ ಅತೀ ಹೆಚ್ಚು ಫ್ಯಾನ್ ಫಾಲೋಯಿಂಗ್ ಇರುವ ವಿದೇಶಿ ಕ್ರಿಕೆಟಿಗ ಡೇವಿಡ್ ವಾರ್ನರ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

More from Filmibeat

English summary
Australia Cricketer David Warner dances to Pushpa Srivalli Kannada version song. Allu Arjun Starrer Pan India movie Pushpa became boxoffice success.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X