For Quick Alerts
  ALLOW NOTIFICATIONS  
  For Daily Alerts

  ಅಲ್ಲು ಅರ್ಜುನ್ ಸಿನಿಮಾ ಹಾಡಿಗೆ ಟಿಕ್ ಟಾಕ್ ಮಾಡಿದ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್

  |

  ಅಂತಾರಾಷ್ಟ್ರೀಯ ಕ್ರಿಕೆಟಿಗರಿಗೆ ಭಾರತದ ಚಿತ್ರೋದ್ಯಮದ ಜತೆಗಿರುವ ನಂಟು ಗೊತ್ತಿರುವುದೇ. ಐಪಿಎಲ್ ಮೂಲಕ ಅನೇಕ ಕ್ರಿಕೆಟಿಗರು ಭಾರತದ ವಿವಿಧ ಭಾಷೆಗಳ ಸಿನಿಮಾ ರಂಗದೊಂದಿಗೆ ನಂಟು ಬೆಸೆದುಕೊಂಡಿದ್ದಾರೆ. ಕೆಲವರು ಸಿನಿಮಾ, ಹಾಡುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

  ಮದುವೆ ಮೂಡ್ ನಲ್ಲಿದ್ದರೂ ನಿಖಿಲ್ ಬ್ಯುಸಿ | Nikhil weds Revathi | Kumarswamy | AP Arjun

  ಐಪಿಎಲ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿರುವ ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಕೂಡ ತಾವು ಪ್ರತಿನಿಧಿಸುವ ಹೈದರಾಬಾದ್‌ನ ಭಾಷೆ ಮತ್ತು ಅಲ್ಲಿನ ಮನರಂಜನಾ ರಂಗದ ಜತೆಗೂ ನಂಟು ಬೆಸೆದುಕೊಂಡಿದ್ದಾರೆ. ಅದಕ್ಕೆ ಮತ್ತೊಂದು ಉದಾಹರಣೆಯಾಗಿ ಟಿಕ್ ಟಾಕ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಮುಂದೆ ಓದಿ...

  ಟಿಕ್ ಟಾಕ್ ಪ್ರಿಯರಿಗೆ ಅಚ್ಚುಮೆಚ್ಚು

  ಟಿಕ್ ಟಾಕ್ ಪ್ರಿಯರಿಗೆ ಅಚ್ಚುಮೆಚ್ಚು

  ಅಲ್ಲು ಅರ್ಜುನ್ ಅವರ ಇತ್ತೀಚಿನ ಸಿನಿಮಾ, ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ 'ಅಲಾ ವೈಕುಂಠಪುರಮ್ಲೂ' ಚಿತ್ರ ಬ್ಲಾಕ್ ಬಸ್ಟರ್ ಆಗಿತ್ತು. ಎಸ್ ಎಸ್ ತಮನ್ ನಿರ್ದೇಶನದ ಹಾಡುಗಳಂತೂ ಸೂಪರ್ ಡೂಪರ್ ಹಿಟ್ ಆಗಿದ್ದವು. ಅದರಲ್ಲಿಯೂ 'ಬುಟ್ಟ ಬೊಮ್ಮಾ' ಹಾಡು ಸಾಕಷ್ಟು ವೈರಲ್ ಆಗಿತ್ತು. ಟಿಕ್ ಟಾಕ್ ಪ್ರಿಯರ ಅಚ್ಚುಮೆಚ್ಚಿನ ಗೀತೆಯಾಗಿದೆ.

  'ಬುಟ್ಟ ಬೊಮ್ಮಾ' ಹಾಡಿಗೆ ಆನೆ ಜತೆ ಟಿಕ್ ಟಾಕ್ ಮಾಡಿದ ಅಲ್ಲು ಅರ್ಜುನ್ ಅಭಿಮಾನಿ: ವಿಡಿಯೋ ವೈರಲ್'ಬುಟ್ಟ ಬೊಮ್ಮಾ' ಹಾಡಿಗೆ ಆನೆ ಜತೆ ಟಿಕ್ ಟಾಕ್ ಮಾಡಿದ ಅಲ್ಲು ಅರ್ಜುನ್ ಅಭಿಮಾನಿ: ವಿಡಿಯೋ ವೈರಲ್

  ಶೀಲಾ ಕಿ ಜವಾನಿ

  ಶೀಲಾ ಕಿ ಜವಾನಿ

  ಮಗಳ ಮನವಿಯಂತೆ ಡೇವಿಡ್ ವಾರ್ನರ್ ಇತ್ತೀಚೆಗಷ್ಟೇ ಟಿಕ್‌ಟಾಕ್‌ಗೆ ಕಾಲಿರಿಸಿದ್ದರು. ಮೊದಲು ಇಂಗ್ಲಿಷ್ ಹಾಡೊಂದಕ್ಕೆ ಮಕ್ಕಳೊಂದಿಗೆ ನರ್ತಿಸಿದ್ದ ಅವರು, ನಂತರ ಮಗಳೊಂದಿಗೆ ಎರಡು ಬಾರಿ ಬಾಲಿವುಡ್‌ನ ಜನಪ್ರಿಯ 'ಶೀಲಾ ಕಿ ಜವಾನಿ' ಹಾಡಿಗೆ ಕುಣಿದು ಗಮನ ಸೆಳೆದಿದ್ದರು.

  ಪತ್ನಿ ಜತೆ ಬುಟ್ಟ ಬೊಮ್ಮಾ ನೃತ್ಯ

  ಪತ್ನಿ ಜತೆ ಬುಟ್ಟ ಬೊಮ್ಮಾ ನೃತ್ಯ

  ಗುರುವಾರ ಮತ್ತೊಂದು ಟಿಕ್ ಟಾಕ್ ವಿಡಿಯೋ ಹಾಕಿರುವ ಅವರು ಪತ್ನಿ ಕ್ಯಾಂಡಿಸ್ ವಾರ್ನರ್ ಜತೆಗೆ ತೆಲುಗಿನ 'ಬುಟ್ಟ ಬೊಮ್ಮಾ' ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈಗ ಟಿಕ್ ಟಾಕ್ ಸಮಯ. ನಿಮ್ಮ ಕಂಪರ್ಟ್ ಝೋನ್‌ನಿಂದ ಹೊರಬನ್ನಿ ಎಂದು ಬರೆದುಕೊಂಡಿದ್ದಾರೆ.

  ಕನ್ನಡತಿಯಾದರು ಜರ್ಮನಿಯ ಈ ಯುವತಿ: ಟಿಕ್‌ಟಾಕ್‌ನಲ್ಲಿಯೂ ಸ್ಟಾರ್ ಈಕೆಕನ್ನಡತಿಯಾದರು ಜರ್ಮನಿಯ ಈ ಯುವತಿ: ಟಿಕ್‌ಟಾಕ್‌ನಲ್ಲಿಯೂ ಸ್ಟಾರ್ ಈಕೆ

  ವಾರ್ನರ್ ಮಗಳ ತುಂಟಾಟ

  ಸನ್ ರೈಸರ್ಸ್ ತಂಡ ಜೆರ್ಸಿ ಹಾಕಿಕೊಂಡೇ ವಾರ್ನರ್ ಟಿಕ್ ಟಾಕ್ ಮಾಡಿದ್ದಾರೆ. ಈ ಹಾಡಿನ ನಡುವೆ ಡೇವಿಡ್ ವಾರ್ನರ್ ಮಗಳು ಹಿಂದಿನಿಂದ ತನ್ನದೇ ಶೈಲಿಯಲ್ಲಿ ನರ್ತಿಸಿ ತರಲೆ ಮಾಡಿದ್ದಾಳೆ. ಆಕೆಯ ತುಂಟಾಟದ ಕಾರಣದಿಂದ ಈ ವಿಡಿಯೋ ಮತ್ತಷ್ಟು ವೈರಲ್ ಆಗಿದೆ.

  ಥ್ಯಾಂಕ್ಯೂ ಎಂದ ಅಲ್ಲು ಅರ್ಜುನ್

  ಥ್ಯಾಂಕ್ಯೂ ಎಂದ ಅಲ್ಲು ಅರ್ಜುನ್

  ಈ ಟಿಕ್ ಟಾಕ್ ಕಂಡು ಅಲ್ಲು ಅರ್ಜುನ್ ಪುಳಕಿತರಾಗಿದ್ದಾರೆ. ತುಂಬಾ ಧನ್ಯವಾದಗಳು. ನಿಜಕ್ಕೂ ಶ್ಲಾಘನಾರ್ಹ ಎಂದು ವಾರ್ನರ್ ದಂಪತಿಯ ಪ್ರಯತ್ನವನ್ನು ಅವರು ಕೊಂಡಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಡೇವಿಡ್ ವಾರ್ನರ್, ಅದ್ಭುತ ಹಾಡಿಗಾಗಿ ಧನ್ಯವಾದಗಳು ಎಂದಿದ್ದಾರೆ.

  English summary
  Australian cricketer David Warner and his wife made a ticktok video of Tollywood actor Allu Arjun's Ala Vaikuntapurramloo movie's Butta Bomma song.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X