RRR ಸಲಿಂಗ ಪ್ರೇಮ ಎಂದ ಆಸ್ಕರ್ ವಿಜೇತ: ತಿರುಗೇಟು ಕೊಟ್ಟ ಬಾಹುಬಲಿ ನಿರ್ಮಾಪಕ!

ಒಂದೇ ಸಿನಿಮಾದಲ್ಲಿ ಇಬ್ಬರು ಸೂಪರ್‌ಸ್ಟಾರ್‌ಗಳು. ಮೂವಿ ಮಾಂತ್ರಿಕ ರಾಜಮೌಳಿ ನಿರ್ದೇಶನ. ಈ ಮೂವರು ಬಾಕ್ಸಾಫೀಸ್‌ನಲ್ಲಿ ಮಾಡಿದ ಮೋಡಿಯನ್ನು ಹೇಳಬೇಕಿಲ್ಲ. 400 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಆಗಿದ್ದ ಸಿನಿಮಾ 1130 ಕೋಟಿ ರೂ. ಲೂಟಿ ಮಾಡಿತ್ತು. ರಾಜಮೌಳಿಯ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡಿತ್ತು.

ಇದೇ RRR ಸಿನಿಮಾ ನೋಡಿ ಬಹಳಷ್ಟು ಒಪ್ಪಿಕೊಂಡಿದ್ದಾರೆ. ಮತ್ತೆ ಕೆಲವು ಮಂದಿ ಚೆನ್ನಾಗಿಲ್ಲ ಎಂದವರೂ ಇದ್ದಾರೆ. ಆದ್ರೀಗ ಆಸ್ಕರ್ ಪ್ರಶಸ್ತಿ ಗೆದ್ದ ಭಾರತ ತಂತ್ರಜ್ಞರೊಬ್ಬರು ಈ ಸಿನಿಮಾದ ಬಗ್ಗೆ ಅಸಂಬಂಧ ಹೇಳಿಕೆ ನೀಡಿದ್ದರು. ಅದಕ್ಕೆ 'ಬಾಹುಬಲಿ' ಸಿನಿಮಾದ ನಿರ್ಮಾಪಕ ಶೋಭು ಯರ್ಲಗಡ್ಡ ಖಡಕ್ ತಿರುಗೇಟು ನೀಡಿದ್ದಾರೆ.

'ರೌದ್ರಂ ರಣಂ ರುಧಿರಂ'

'ರೌದ್ರಂ ರಣಂ ರುಧಿರಂ'

RRR.. ಜೂ. ಎನ್‌ಟಿಆರ್, ರಾಮ್ ಚರಣ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ. 'ರೌದ್ರಂ ರಣಂ ರುಧಿರಂ' (RRR) ಎಂಬ ಟೈಟಲ್‌ ಇಟ್ಟು ತೆಲುಗು, ಮಲಯಾಳಂ, ಕನ್ನಡ, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲಾಗಿತ್ತು. ಭಾರತದಲ್ಲಿ ಸಿಕ್ಕಿರೋ ಅದ್ಭುತ ಯಶಸ್ಸಿನ ಬೆನ್ನಲೇ ಈ ಚಿತ್ರವನ್ನು ಐದು ವಿದೇಶಿ ಭಾಷೆಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಆಲೋಚಿಸಿದ್ದಾರೆ.

ಇದು ಸಲಿಂಗ ಪ್ರೇಮಕಥೆ

ಇದು ಸಲಿಂಗ ಪ್ರೇಮಕಥೆ

ರಾಮ್ ಚರಣ್ ತೇಜಾ, ಆಲಿಯಾ ಭಟ್, ಒಲಿವಿಯಾ ಮೋರಿಸ್, ಅಜಯ್ ದೇವಗನ್, ಶ್ರಿಯಾ ಸರಣ್, ರಾಹುಲ್ ರಾಮಕೃಷ್ಣ, ಮಕರಂದ ದೇಶ ಪಾಂಡೆ, ಛತ್ರಪತಿ ಶೇಖರ್, ಅಲಿಸನ್ ಡಡ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸುಮಾರು 400 ಕೋಟಿ ರೂ. ಬಜೆಟ್‌ನಲ್ಲಿ ಈ ಸಿನಿಮಾ ಬಿಡುಗಡೆಯಾಗಿದೆ. ಎಂಎಂ ಕೀರವಾಣಿ ಸಂಗೀತ ಈ ಚಿತ್ರಕ್ಕಿದೆ. ಇಷ್ಟು ದೊಡ್ಡ ಯಶಸ್ಸು ಕಂಡ ಸಿನಿಮಾಗೆ ಆಸ್ಕರ್ ಪ್ರಶಸ್ತಿ ಗೆದ್ದ ಭಾರತೀಯ ತಂತ್ರಜ್ಞ ರಸುಲ್ ಪೂಕುಟ್ಟಿ ಕಮೆಂಟ್ ಮಾಡಿದ್ದರು. "ಈ ಚಿತ್ರ ಸಲಿಂಗಕಾಮಿ ಪ್ರೇಮಕಥೆ" ಎಂದು ಟ್ವೀಟ್ ಮಾಡಿದ್ದರು.

'ಬಾಹುಬಲಿ' ನಿರ್ಮಾಪಕ ಆಕ್ರೋಶ

'ಬಾಹುಬಲಿ' ನಿರ್ಮಾಪಕ ಆಕ್ರೋಶ

ರಸುಲ್ ಪೂಕುಟ್ಟಿ ಅಭಿಪ್ರಯಾಕ್ಕೆ ಬಾಹುಬಲಿ ನಿರ್ಮಾಪಕ ಶೋಭು ಯರ್ಲಗಡ್ಡ ತಿರುಗೇಟು ನೀಡಿದ್ದಾರೆ. " ರಸುಲ್ ಪೂಕುಟ್ಟಿ RRR ಸಿನಿಮಾ ನೋಡಿ 'ಗೇ ಲವ್ ಸ್ಟೋರಿ' ಎಂದು ಭಾವಿಸಿರಲಿಲ್ಲ ಎಂದು ಹೇಳಿದ್ದಾರೆ. ಇದು ನಿಜವಾಗಿಯೂ 'ಗೇ ಲವ್ ಸ್ಟೋರಿ' ಆಗಿದ್ದರೆ ಅದರಲ್ಲಿ ತಪ್ಪೇನಿದೆ?" ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ "ನಿಮ್ಮ ಕಾಮೆಂಟ್‌ಗಳನ್ನು ಸಮರ್ಥಿಸಿಕೊಳ್ಳುತ್ತೀರಾ? ನಿಮ್ಮಂತಹವರು ಇಂತಹ ಕಾಮೆಂಟ್ ಮಾಡುವುದು ಒಳ್ಳೆಯದಲ್ಲ." ಎಂದು ಟ್ವೀಟ್ ಮಾಡಿದ್ದಾರೆ.

ರಾಜಮೌಳಿ ಹೇಳಿದ್ದೇನು?

ರಾಜಮೌಳಿ ಹೇಳಿದ್ದೇನು?

'RRR' ಸಿನಿಮಾ ಬಗ್ಗೆ ರಾಜಮೌಳಿ ಮೊದಲ ಪ್ರೆಸ್ ಮೀಟ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದರು. ಈ ಚಿತ್ರದಲ್ಲಿ ರೊಮ್ಯಾನ್ಸ್ ಇರುವುದಿಲ್ಲ ಎಂದು ರಾಜಮೌಳಿ ಸ್ಪಷ್ಟಪಡಿಸಿದ್ದರು. ಈ ಚಿತ್ರದಲ್ಲಿ ಇಬ್ಬರು ನಾಯಕರನ್ನು ಸಹೋದರರು ಸಮಾನರು ಎಂದು ಹೇಳಿದ್ದರು. ಆದ್ರೀಗ ಅನಗತ್ಯವಾಗಿ ಕೆಲವರು ಗೇ ವಾದವನ್ನು ಎತ್ತುತ್ತಿದ್ದಾರೆ. ಈ ಸಂದರ್ಭದಲ್ಲಿ ಸಲಿಂಗಕಾಮನ್ನು ಮುನ್ನೆಲೆಗೆ ತರಬೇಕಾದ ಅನಿವಾರ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

More from Filmibeat

English summary
Baahubali Producer Shobu Yarlagadda Counter To Resul Pookutty's Comments on RRR Is A Gay Story, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X