Don't Miss!
- Technology
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- News
Breaking: ಭವಾನಿ ರೇವಣ್ಣಗೆ ಹಾಸನದಿಂದ ಟಿಕೆಟ್ ನೀಡುವಂತೆ ಪ್ರತಿಭಟನೆ
- Sports
Women's Premier League : ಫೆಬ್ರವರಿ 2ನೇ ವಾರ ಆಟಗಾರರ ಹರಾಜು: ದೆಹಲಿಯಲ್ಲಿ ಹರಾಜು ಪ್ರಕ್ರಿಯೆ
- Automobiles
ಬಾಕ್ಸ್ ಆಫೀಸ್ನಲ್ಲಿ 'ಪಠಾಣ್' ಅಬ್ಬರ: ಈ ಚಿತ್ರದಲ್ಲಿ ಕಾಣಿಸಿಕೊಂಡ ಆಕರ್ಷಕ ಕಾರುಗಳಿವು...
- Finance
ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹುಟ್ಟುಹಬ್ಬಕ್ಕೆ NBK107 ಟೀಸರ್ ರಿಲೀಸ್ ಆದರೂ 'ಬ್ರೋ ಐ ಡೋಂಟ್ ಕೇರ್' ಎಂದ ಬಾಲಕೃಷ್ಣ!
ಟಾಲಿವುಡ್‌ನ 'ಲೆಜೆಂಡ್' ಬಾಲಕೃಷ್ಣ ಸಿಕ್ಕಾಪಟ್ಟೆ ರಫ್ ಅಂಡ್ ಟಫ್. ರೀಲ್ ಮುಂದೆನೂ ಅಷ್ಟೇ.. ರೀಲ್ ಹಿಂದೆನೂ ಅಷ್ಟೇ. ಅದಕ್ಕೆ ಬಾಲಕೃಷ್ಣಗೆ ಟಾಲಿವುಡ್ ಸೇರಿದಂತೆ ವಿಶ್ವದಲ್ಲೆಲ್ಲಾ ಅಭಿಮಾನಿಗಳು ಇದ್ದಾರೆ. ಇಂದು (ಜೂನ್ 10) ಬಾಲಕೃಷ್ಣ ಅಭಿಮಾನಿಗಳಿಗೆ ಸಂಭ್ರವೋ ಸಂಭ್ರಮ. ಅದಕ್ಕೆ ಕಾರಣ ಬಾಲಯ್ಯ ಬರ್ತ್‌ಡೇ.
ಇಂದು (ಜೂನ್ 10) ಬಾಲಕೃಷ್ಣ 62ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಬಾಲಯ್ಯ ಹುಟ್ಟುಹಬ್ಬಕ್ಕಾಗಿ ಟಾಲಿವುಡ್ ಕೂಡ ಭರ್ಜರಿಯಾಗಿ ತಯಾರಿ ನಡೆಸಿತ್ತು. ಟಾಲಿವುಡ್ ಲೆಜೆಂಟ್ ಸ್ಪೀಡ್‌ಗೆ ತಕ್ಕಂತೆ ಅವರ ಸಿನಿಮಾ ನಿರ್ದೇಶನ ಮಾಡುತ್ತಿರುವ ನಿರ್ದೇಶಕರು ಕೂಡ ಸ್ಪೀಡ್ ಆಗಿದ್ದಾರೆ. ಈ ಬಾರಿ ಹುಟ್ಟುಹಬ್ಬಕ್ಕೆ ಬಾಲಕೃಷ್ಣ ನಟಿಸುತ್ತಿರುವ 107ನೇ ಸಿನಿಮಾ ಟೀಸರ್ ರಿಲೀಸ್ ಮಾಡಲಾಗಿದೆ. ಆದರೂ ಬಾಲಯ್ಯ 'ಬ್ರೋ ಐ ಡೋಂಟ್ ಕೇರ್ ಅಂತಿದ್ದಾರಂತೆ. ಅದ್ಯಾಕೆ ಹೀಗಂದ್ರು? ಅನ್ನುವುದನ್ನು ತಿಳಿಯಲು ಮುಂದೆ ಓದಿ..
₹100
ಕೋಟಿ
ಸಿನಿಮಾ
ಕೊಟ್ಟ
ನಿರ್ದೇಶಕನಿಗೆ
ಸ್ಕ್ರಿಪ್ಟ್
ಬದಲಾಯಿಸು
ಎಂದ
ಬಾಲಕೃಷ್ಣ?

ಬಾಲಕೃಷ್ಣ ಬರ್ತ್‌ಡೇಗೆ ಟೀಸರ್ ರಿಲೀಸ್
'ಅಖಂಡ' ಸಿನಿಮಾ ಬಳಿಕ ಬಾಲಕೃಷ್ಣ ಮತ್ತೆ ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿರುವುದು ಗೊತ್ತೇ ಇದೆ. ಇದೇ ಯಶಸ್ಸಿನ ಹಿನ್ನೆಲೆಯಲ್ಲಿ ಬಾಲಯ್ಯ 107ನೇ ಸಿನಿಮಾದ ಶೂಟಿಂಗ್ ಕೂಡ ಭರ್ಜರಿಯಾಗಿಯೇ ನಡೆಯುತ್ತಿದೆ. ಹುಟ್ಟುಹಬ್ಬದ ಅಂಗಾವಾಗಿ ನಿರ್ದೇಶಕ ಗೋಪಿಚಂದ್ ಮಲಿನೇನಿ ಮಾಸ್ ಹಾಗೂ ಪವರ್‌ಫುಲ್ ಟೀಸರ್ ಅನ್ನು ರಿಲೀಸ್ ಮಾಡಿದ್ದಾರೆ. ಬಾಲಕೃಷ್ಣ ಸಾಲ್ಟ್ ಅಂಡ್ ಪೆಪ್ಪರ್ ಲುಕ್ ಹಾಗೂ ಡೈಲಾಗ್ ಡಿಲೇವರಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
'ಅಖಂಡ'
ಮೂಲಕ
ಟಾಲಿವುಡ್ನಲ್ಲಿ
ಹೊಸ
ಇತಿಹಾಸ
ಬರೆದ
ಬಾಲಯ್ಯ-
ಬೋಯಪಾಟಿ
ಕಾಂಬಿನೇಷನ್!

ಸರ್ಕಾರಕ್ಕೆ ಟಾಂಗ್ ಕೊಟ್ಟ ಬಾಲಯ್ಯ
ಬಾಲಕೃಷ್ಣ ಮ್ಯಾನರಿಸಂಗೆ ತೆಲುಗು ಪ್ರೇಕ್ಷಕರು ಫಿದಾ ಆಗಿದ್ದಾರೆ. ಇನ್ನೊಂದು ಟೀಸರ್‌ನಲ್ಲಿ ಬಾಲಯ್ಯನ ಡೈಲಾಗ್ ಸಖತ್ ಇಂಟ್ರೆಸ್ಟಿಂಗ್ ಅಂತ ಅನಿಸಿದೆ. ಬಾಲಕೃಷ್ಣ 107ನೇ ಸಿನಿಮಾದ ಟೀಸರ್‌ನಲ್ಲಿ ಒಂದು ಡೈಲಾಗ್ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. " ನಿಮಗೆ ಗೌರ್ಮೆಂಟ್ ಆರ್ಡರ್, ನನಗೆ ದೇವರ ಆರ್ಡರ್" ಅನ್ನುವ ಡೈಲಾಗ್ ಪ್ರೇಕ್ಷಕರ ಕಿಕ್ ಕೊಟ್ಟಿದೆ. ಇದೇ ಡೈಲಾಗ್ ಎಲ್ಲರ ಗಮನ ಸೆಳೆದಿದ್ದು, ಇದು ಸರ್ಕಾರಕ್ಕೆ ಕೊಟ್ಟ ಟಾಂಗ್ ಎನ್ನಲಾಗುತ್ತಿದೆ.

108ನೇ ಸಿನಿಮಾದ ಟೈಟಲ್ ಏನು?
ಒಂದ್ಕಡೆ ಮಾಸ್ ಟೀಸರ್ ರಿಲೀಸ್ ಆಗಿದೆ. ಅದೇ ಇನ್ನೊಂದು ಕಡೆ 108ನೇ ಸಿನಿಮಾ ಟೈಟಲ್ ಕೂಡ ಫಿಕ್ಸ್ ಆಗಿದೆ ಅಂತ ಟಾಲಿವುಡ್ ಹೇಳುತ್ತಿದೆ. ಮೂಲಕ ಪ್ರಕಾರ, ಅನಿಲ್ ರವಿಪುಡಿ ನಿರ್ದೇಶಿಸುತ್ತಿರುವ 108ನೇ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದ್ಯಂತೆ. ' ಬ್ರೊ.. ಐ ಡೋಂಟ್ ಕೇರ್' ಎಂದು ಟೈಟಲ್ ಇಡಲಾಗಿದ್ದು, ಅಧಿಕೃತವಾಗಿ ಅನೌನ್ಸ್ ಮಾಡುವುದಷ್ಟೇ ಬಾಕಿ ಉಳಿದಿದೆ ಎಂದು ಹೇಳಲಾಗುತ್ತಿದೆ.
ಬಾಲಕೃಷ್ಣ
107ನೇ
ಸಿನಿಮಾದ
ಟೈಟಲ್
'ಜೈ
ಬಾಲಯ್ಯ'

ಬಾಲಯ್ಯ ಗಾಢ್ ಆಫ್ ಮಾಸ್
ಬಾಲಕೃಷ್ಣ ಅಭಿನಯದ 107ನೇ ಸಿನಿಮಾ ನೋಡಿದ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಹಾಡಿ ಹೊಗಳಿದ್ದಾರೆ. ಕೆಲವು ಅಭಿಮಾನಿಗಳಂತೂ, ಮಾಸ್ ಸಿನಿಮಾಗಳಿಗೆ ದೇವರು ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಮಾಸ್ ಡೈಲಾಗ್ ಹಾಗೂ ಮಾಸ್ ಎಂಟ್ರಿ ಎಂದು ಹೇಳಿದ್ದಾರೆ. ಬರ್ತ್‌ಡೇ 107ನೇ ಸಿನಿಮಾ ಟೈಟಲ್ ರಿವೀಲ್ ಆಗಬಹುದು ಎಂದುಕೊಂಡಿದ್ದರು. ಆದ್ರೀಗ ಟೈಟಲ್ ರಿವೀಲ್ ಆಗಿಲ್ಲ.