'ಅಖಂಡ 2' ಇನ್ನೂ ರಿಲೀಸ್ ಆಗಿಲ್ಲ.. ಅಷ್ಟರಲ್ಲೇ 'ಅಖಂಡ 3' ಟೈಟಲ್ ಸೋರಿಕೆ; ಇದೇನಾ ಶೀರ್ಷಿಕೆ?

ನಂದಮೂರಿ ಬಾಲಕೃಷ್ಣ ನಟನೆಯ 'ಅಖಂಡ 2' ಬಿಡುಗಡೆಗೆ ಇನ್ನು ಎರಡೇ ದಿನಗಳು ಉಳಿದಿವೆ. ಈ ಹಿಂದೆ ನಂದಮೂರಿ ಬಾಲಕೃಷ್ಣ ಮತ್ತು ಬೋಯಪಾಟಿ ಶ್ರೀನು ಕಾಂಬಿನೇಷನ್‌ನಲ್ಲಿ ಬಂದಿದ್ದ ಸಿನಿಮಾ 'ಅಖಂಡ' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಇದೇ ಜೋಷ್‌ನಲ್ಲಿ ಇವರಿಬ್ಬರೂ ಸೇರಿ 'ಅಖಂಡ 2' ಅನೌನ್ಸ್ ಮಾಡಿದ್ದರು. ಈ ಸಿನಿಮಾ ಡಿಸೆಂಬರ್ 5ರಂದು ವಿಶ್ವದಾದ್ಯಂತ ರಿಲೀಸ್ ಆಗಿದೆ.

ಮಾಸ್ ಸಿನಿಮಾಗಳನ್ನು ಇಷ್ಟಪಡುವ ಮಾಸ್ ಪ್ರೇಕ್ಷಕರಿಗಾಗಿ 'ಅಖಂಡ 2: ತಾಂಡವಂ' ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ. ಈಗಾಗಲೇ 'ಅಖಂಡ 2' ಟೀಸರ್ ಹಾಗೂ ಟ್ರೈಲರ್ ಸಿನಿಮಾ ಮೇಲಿನ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿದೆ. 'ಅಖಂಡ' ಮೊದಲನೇ ಚಾಪ್ಟರ್‌ಗಿಂತ ಎರಡನೇ ಚಾಪ್ಟರ್ ಇನ್ನೂ ಮಾಸ್ ಆಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. 'ಅಖಂಡ 2'ನಲ್ಲಿ ಬಾಲಯ್ಯ ಇನ್ನಷ್ಟು ರೌದ್ರಾವತಾರ ತಾಳಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಇಷ್ಟೇ ಅಲ್ಲದೆ, ಈ ಸಿನಿಮಾ ಆಧ್ಯಾತ್ಮಿಕ ಅಂಶಗಳು ಹೇರಳವಾಗಿ ನೋಡುವುದಕ್ಕೆ ಸಿಗಲಿವೆ ಎನ್ನಲಾಗಿದೆ.

Before Akhanda 2 release Akhanda 3 title speculation goes viral as Jai Akhanda

ಎಲ್ಲೆಡೆ 'ಅಖಂಡ 2' ಕ್ರೇಜ್ ಜೋರಾಗಿದೆ. ಆಂಧ್ರ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ಸಿನಿಮಾ ನೋಡುವುದಕ್ಕೆ ಜನರು ತುದಿಗಾಲಿನಲ್ಲಿ ನಿಂತಿದ್ದಾರೆ. ಎಲ್ಲಾ ಕಡೆಗಳಲ್ಲೂ ಪೇಯ್ಡ್‌ ಪ್ರೀಮಿಯರ್ ಕೂಡ ನಡೆಯುತ್ತಿದೆ. ಈ ಬೆನ್ನಲ್ಲೇ 'ಅಖಂಡ 3' ಬರೋದು ಬಹುತೇಕ ಕನ್ಫರ್ಮ್ ಆದಂತೆ ಆಗಿದೆ. ಇನ್ನೇನು 'ಅಖಂಡ 2' ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿಯಿದೆ ಎನ್ನುವಾಗಲೇ ಚಾಪ್ಟರ್ 3 ಟೈಟಲ್ ಲೀಕ್ ಆಗಿದೆ ಎಂದು ಟಾಲಿವುಡ್‌ನಲ್ಲಿ ಸುದ್ದಿಯಾಗಿದೆ.

ಸೋಶಿಯಲ್ ಮೀಡಿಯಾದಲ್ಲಿಯೂ ಕೆಲವು ಫೋಟೋಗಳು ಹರಿದಾಡುತ್ತಿದ್ದು, 'ಅಖಂಡ 3' ಬರಲಿದೆ ಎಂಬ ಗುಲ್ಲೆದ್ದಿದೆ. ಈ ಹಿಂದೆ ಮ್ಯೂಸಿಕ್ ಡೈರೆಕ್ಟರ್ ಥಮನ್ ಸಂದರ್ಶನವೊಂದರಲ್ಲಿ 'ಅಖಂಡ' ಐದು ಭಾಗಗಳಾಗಿ ಮಾಡಿದವರೂ ಅದರಲ್ಲಿ ಬಾಲಯ್ಯ ನಟಿಸುವುದಕ್ಕೆ ಸಿದ್ಧರಿದ್ದಾರೆಂದು ಹೇಳಿದ್ದರು. ಈಗ ಈ ಮಾತು 'ಅಖಂಡ 3' ಸಿನಿಮಾ ಆಗುತ್ತೆ ಎನ್ನುವ ಬಗ್ಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ.

ಇದೆಲ್ಲ ಕೇವಲ ವದಂತಿಗಳು ಎನ್ನುವಾಗಲೇ ನಿರ್ದೇಶಕ ಬೋಯಪಾಟಿ ಮತ್ತು ತಂಡದೊಂದಿಗೆ ಥಮನ್ ಇತ್ತೀಚೆಗೆ ತೆಗೆದ ಫೋಟೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದು ಹೊಸ ಚರ್ಚೆಗೆ ನಾಂದಿ ಹಾಡಿದೆ. ಈ ಫೋಟೋದಲ್ಲಿ ನಂದಮೂರಿ ಬಾಲಕೃಷ್ಣ ಹಾಗೂ ನಿರ್ದೇಶಕ ಬೋಯಪಾಟಿ ಜೊತೆಯಲ್ಲಿ ಇದ್ದಾರೆ. ಅವರ ಹಿಂದೆ ಬಿಗ್ ಸ್ಕ್ರೀನ್ ಇದೆ. ಅದರಲ್ಲಿ 'ಜೈ ಅಖಂಡ' ಎಂದು ಟೈಟಲ್ ಇದೆ. ಅದನ್ನು ನೋಡಿ ಅಭಿಮಾನಿಗಳು 'ಅಖಂಡ 3' ಟೈಟಲ್ ಇದೆ ಎಂದು ವಾದ ಮಂಡಿಸುತ್ತಿದ್ದಾರೆ.

ಇದು ಈಗಾಗಲೇ ಹಬ್ಬಿರುವ ಸುದ್ದಿಗಳಿಗೆ ಮತ್ತಷ್ಟು ಬಲ ನೀಡಿದಂತಾಗಿದೆ. 'ಅಖಂಡ 2' ಹಿಂದೆನೇ 'ಅಖಂಡ 3' ಕೂಡ ಸಿದ್ದವಾಗುತ್ತಿದೆ ಎಂದು ಮಾತಾಡಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಕೂಡ 'ಅಖಂಡ 3' ಟೈಟಲ್ 'ಜೈ ಅಖಂಡ' ಎಂದು ವೈರಲ್ ಮಾಡುತ್ತಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು "ಜೈ ಅಖಂಡ.. ಮತ್ತೆ ಬಾಲಯ್ಯ ರೌದ್ರ ತಾಂಡವ ನೋಡಬಹುದು" ಎಂದು ಕಮೆಂಟ್ ಮಾಡಿದರೆ, ಇನ್ನೊಬ್ಬರು "ಅಖಂಡ 2 ಬಿಡುಗಡೆಗೂ ಮುನ್ನವೇ ಅಖಂಡ 3 ಅನೌನ್ಸ್ ಆಗಿದೆ. ಇದು ಸರ್ಪ್ರೈಸ್ ಅಲ್ಲ.. ಇದು ಶಾಕ್" ಎಂದು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ.

ಆದರೆ, 'ಅಖಂಡ 3' ಬಗ್ಗೆ ಸಿನಿಮಾ ನಿರ್ಮಾಪಕರು ಅಧಿಕೃತ ಘೋಷಣೆ ಮಾಡಿಲ್ಲ. ಆದರೆ, 'ಅಖಂಡ 2'ನ ಕ್ಲೈಮ್ಯಾಕ್ಸ್ 'ಅಖಂಡ 3' ಬಗ್ಗೆ ಘೋಷಣೆಯಾಗಲಿದೆ ಎಂದೂ ಹೇಳಲಾಗುತ್ತಿದೆ. ಇನ್ನು 'ಸಿಂಹ', 'ಲೆಜೆಂಡ್' ಮತ್ತು 'ಅಖಂಡ'ದಂತಹ ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನು ಕೊಟ್ಟಿರುವ ಈ ಜೋಡಿಯ ಮತ್ತೊಂದು ಸಿನಿಮಾ 'ಅಖಂಡ 2'ಗೆ ಪ್ರೇಕ್ಷಕರು ಯಾವ ರೀತಿ ರೆಸ್ಪಾನ್ಸ್ ಕೊಡುತ್ತಾರೆಂದು ಟಾಲಿವುಡ್ ಕಾದು ನೋಡುತ್ತಿದೆ.

More from Filmibeat

English summary
Before Akhanda 2 release Akhanda 3 title speculation goes viral as Jai Akhanda.
Read more about: balakrishna akhanda telugu movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X