ಪ್ರಭಾಸ್‌ನ 'ಭಾವ' ಎಂದ ಹುಡುಗಿ ಯಾರು? ಈ ಹುಡುಗಿ ಜೊತೆನೇನಾ ಡಾರ್ಲಿಂಗ್ ಮದುವೆ? ವಿಡಿಯೋ ನೋಡಿ!

ಪ್ರಭಾಸ್ ಅಭಿಮಾನಿಗಳು ಸಲಾರ್ ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು. 'ಬಾಹುಬಲಿ' ಬಳಿಕ ಸತತ ಸೋಲುಗಳಿಂದ ಕಂಗೆಟ್ಟಿದ್ದ ಪ್ರಭಾಸ್‌ಗೆ 'ಸಲಾರ್' ಬ್ರೇಕ್ ಕೊಡುತ್ತೆ ಉತ್ಸಾಹದಲ್ಲಿದ್ದರು. ಮಧ್ಯರಾತ್ರಿ ಶೋ ನೋಡಿ ಸಂಭ್ರಮಿಸುವುದಕ್ಕೆ ಸಜ್ಜಾಗಿದ್ದರು. ಇದೇ ವೇಳೆ ಪ್ರಭಾಸ್ ಕುರಿತಾದ ವಿಡಿಯೋ ಒಂದು ವೈರಲ್ ಆಗಿತ್ತು.

'ಬಾಹುಬಲಿ' ಬಳಿಕ ಪ್ರಭಾಸ್‌ಗೆ ಬಿಗ್ ಬ್ರೇಕ್ ಸಿಗೋದು ಕನ್ಫರ್ಮ್ ಆಗಿದೆ. 'ಸಲಾರ್' ನೋಡಿದ ಪ್ರೇಕ್ಷಕರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕನ್ನಡಿಗರು ಈಗಾಗಲೇ 'ಉಗ್ರಂ' ನೋಡಿದ್ದರಿಂದ ಅಷ್ಟಾಗಿ ಆಸಕ್ತಿ ತೋರದೇ ಹೋದರೂ, ಉಳಿದ ಭಾಗಗಳಲ್ಲಿ ಸಿನಿಮಾ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೀಗಾಗಿ ಪ್ರಭಾಸ್ ಫ್ಯಾನ್ಸ್ ಮತ್ತೆ ಗೆಲುವಿನ ಸಂಭ್ರಮದಲ್ಲಿದ್ದರೆ, ಇತ್ತ ಅವರಿಗೆ ಖುಷಿ ಕೊಡುವ ವಿಡಿಯೋ ಒಂದು ಹರಿದಾಡುತ್ತಿತ್ತು.

 Before Salaar release Prabhas sister in law video went viral do you know who is she?

ಪ್ರಭಾಸ್ ಫ್ಯಾನ್ಸ್ ಅವರ ಸಿನಿಮಾವನ್ನು ನೋಡುವುದಕ್ಕೆ ಎಷ್ಟು ಇಷ್ಟ ಪಡುತ್ತಾರೋ, ಹಾಗೇ ಅವರ ಮದುವೆ ನೋಡುವುದಕ್ಕೂ ಬಯಸುತ್ತಿದ್ದಾರೆ. ಆದರೆ, ಪ್ರಭಾಸ್ ಮಾತ್ರ ಅವರ ಮದುವೆ ಬಗ್ಗೆ ತುಟಿಬಿಚ್ಚುತ್ತಲೇ ಇಲ್ಲ. ಸಲಾರ್ ಬಿಡುಗಡೆಗೂ ಮುನ್ನ ಪ್ರಭಾಸ್ ಸಂಬಂಧಿಯ ವಿಡಿಯೋ ಒಂದು ವೈರಲ್ ಆಗಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಅಂತಹದ್ದೇನಿದೆ? ತಿಳಿಯುವುದಕ್ಕೆ ಮುಂದೆ ಓದಿ.

ಈ ಬಾರಿ ಪ್ರಭಾಸ್ ಗೆಲ್ಲೋದು ಬಹುತೇಕ ಖಚಿತ. ಸತತ ಸೋಲಿನಿಂದ ಕಂಗೆಟ್ಟಿದ್ದ ಪ್ರಭಾಸ್ 'ಸಲಾರ್' ಮೂಲಕ ಗೆಲುವಿನ ರುಚಿ ಕಾಣುತ್ತಿದ್ದಾರೆ. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 1000 ಕೋಟಿ ರೂಪಾಯಿ ಕಲೆ ಹಾಕುವ ಸಾಧ್ಯತೆಗಳಿವೆ ಅಂತ ಟ್ರೇಡ್ ಎಕ್ಸ್‌ಪರ್ಟ್ಸ್ ಭವಿಷ್ಯ ನುಡಿದಿದ್ದಾರೆ. ಒಂದು ವೇಳೆ ಈ ಮಟ್ಟಿಗೆ ಸಕ್ಸಸ್ ಸಿಕ್ಕಿದ್ದೇ ಆದರೆ, ಪ್ರಭಾಸ್ ವೃತ್ತಿ ಬದುಕಿಗೆ ಮತ್ತೊಂದು ಮೆಗಾ ಸಿಗೋದು ಗ್ಯಾರಂಟಿ.

ಆದ್ರೀಗ ಪ್ರಭಾಸ್ ಫ್ಯಾನ್ಸ್ 'ಸಲಾರ್' ಜೊತೆ ಜೊತೆಗೆ ಮದುವೆ ಬಗ್ಗೆ ತಿಳಿದುಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. 2024ರಲ್ಲಿ ಡಾರ್ಲಿಂಗ್ ಮದುವೆ ಆಗಬಹುದಾ? ಅಂತ ಕಾದು ಕೂತಿದ್ದಾರೆ. ಅದಕ್ಕೆ ಕಾರಣ ಪ್ರಭಾಸ್ ಸಂಬಂಧಿಯ ಈ ಹಳೇ ವಿಡಿಯೋ.

ತೆಲುಗಿನ ಯೂಟ್ಯೂಬ್ ಚಾನೆಲ್ ಒಂದು ಇತ್ತೀಚೆಗೆ ಒಬ್ಬ ಹುಡುಗಿಯ ಸಂದರ್ಶನ ಮಾಡಿತ್ತು. ಈ ಸಂದರ್ಶನದಲ್ಲಿ ಯೂಟ್ಯೂಬರ್ ಆ ಹುಡುಗಿಗೆ ಪ್ರಭಾಸ್ ಬಗ್ಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಮಾಡಿದ್ದರು. "ಪ್ರಭಾಸ್ ಹುಟ್ಟುಹಬ್ಬಕ್ಕೆ ಶುಭಕೋರುವ ಸಂದರ್ಭದಲ್ಲಿ ಹ್ಯಾಪಿ ಬರ್ತ್‌ಡೇ ಬಾವ ಅಂತ ಪೋಸ್ಟ್ ಹಾಕಿದ್ರಿ ಅಂತ ಪ್ರಶ್ನೆ ಮಾಡಿದ್ರು. ಅದಕ್ಕೆ ಆ ಹುಡುಗಿ "ನಾನು ನನ್ನ ಫೋನ್‌ನಲ್ಲಿ ಸ್ಟೇಟಸ್ ಮಾತ್ರ ಹಾಕಿದ್ದೆ. ನೇರವಾಗಿ ಸಂದೇಶ ಕಳುಹಿಸಿಲ್ಲ ಎಂದು ಉತ್ತರಿಸಿದ್ದರು. ಅಲ್ಲದೆ ಪ್ರಭಾಸ್ ತನ್ನ ಸೋದರ ಮಾವ ಎಂದು ಒಪ್ಪಿಕೊಂಡಿರುವ ವಿಡಿಯೋ ವೈರಲ್ ಈಗ ವೈರಲ್ ಆಗಿದೆ.

ಅಂದ್ಹಾಗೆ ಈಕೆಯ ಹೆಸರು ಲಕ್ಷ್ಮಿ ವರ್ಮಾ. ನಿರೂಪಕಿ ಹಾಗೂ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಪ್ರಭಾಸ್ ಹುಟ್ಟುಹಬ್ಬಕ್ಕೆ ಬಾವ ಅಂತ ಪೋಸ್ಟ್ ಮಾಡಿ ವೈರಲ್ ಆಗಿದ್ದರು. ಅಲ್ಲಿಂದ ಸಾಕಷ್ಟು ಯೂಟ್ಯೂಬ್ ಚಾನೆಲ್‌ಗಳಿಗೆ ಲಕ್ಷ್ಮಿ ಸಂದರ್ಶನ ನೀಡಿದ್ದಾರೆ. ಅದರಲ್ಲೊಂದು ವಿಡಿಯೋವನ್ನು 'ಸಲಾರ್' ಬಿಡುಗಡೆಗೆ ಕೆಲವೇ ಗಂಟೆಗಳ ಮುನ್ನ ವೈರಲ್ ಮಾಡಲಾಗಿದೆ.

ಟಾಲಿವುಡ್ ರೆಬೆಲ್ ಸ್ಟಾರ್ ಕೃಷ್ಣಂ ರಾಜು ಅವರ ಪತ್ನಿ ಶ್ಯಾಮಲಾ ದೇವಿ ಇತ್ತೀಚೆಗೆ 2024ರಲ್ಲಿ ಪ್ರಭಾಸ್ ಮದುವೆ ಆಗುತ್ತೆ ಎಂದು ಹೇಳಿದ್ದರು. ಅಲ್ಲಿಂದ ಅಭಿಮಾನಿಗಳು ಡಾರ್ಲಿಂಗ್ ಮದುವೆ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. 2024ರಲ್ಲಾದರೂ ಮದುವೆ ಆಗುತ್ತಾರಾ? ಅಂತ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.

More from Filmibeat

English summary
Prabhas sister in law video went viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X