ಬೆಂಗಳೂರು ಫಾರ್ಮ್ ಹೌಸ್‌ನಲ್ಲಿ ರೇವ್ ಪಾರ್ಟಿ: ತೆಲುಗು ನಟಿ ಹೇಮಾ ಹೇಳಿದ ನಾಲ್ಕು ಸುಳ್ಳುಗಳೇನು?
ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿ ಮೇಲೆ ನಿನ್ನೆ (ಮೇ 21) ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಪಾರ್ಟಿಯಲ್ಲಿ ಭಾಗಿಯಾಗಿದ್ದ ಜನರನ್ನು ವಶಕ್ಕೂ ಪಡೆದಿದ್ದರು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿ. ಆರ್ ಫಾರ್ಮ್‌ಹೌಸ್‌ನಲ್ಲಿ ಈ ರೇವ್ ಪಾರ್ಟಿಯಲ್ಲಿ ತೆಲುಗಿನ ಕೆಲವು ನಟ-ನಟಿಯರು ಭಾಗಿಯಾಗಿದ್ದರು ಎಂದು ವರದಿಯಾಗಿತ್ತು. ಅದರಲ್ಲಿ ನಟಿ ಹೇಮಾ ಹೆಸರು ಕೇಳಿ ಬಂದಿತ್ತು.
ತೆಲುಗು ನಟಿ ಹೇಮಾ ಹೆಸರು ಕೇಳಿ ಬರುತ್ತಿದ್ದಂತೆ ಒಂದು ವಿಡಿಯೋ ರಿಲೀಸ್ ಮಾಡಿದ್ದರು. ಈ ವಿಡಿಯೋದಲ್ಲಿ ರೇವ್ ಪಾರ್ಟಿ ಹೋಗಿಲ್ಲ. ಹೈದರಾಬಾದ್‌ನ ಫಾರ್ಮ್ ಹೌಸ್‌ನಲ್ಲಿ ಆರಾಮಾಗಿ ಎಂಜಾಯ್ ಮಾಡುತ್ತಿದ್ದೇನೆ ಎಂದು ವಿಡಿಯೋ ಮಾಡಿದ್ದರು. ಅಲ್ಲದೆ ಹೊರಗಡೆ ಹರಿದಾಡುತ್ತಿರುವುದು ಸುಳ್ಳು ಸುದ್ದಿ ಎಂದು ಹೇಳಿ ವಿಡಿಯೋ ಬಿಡುಗಡೆ ಮಾಡಿದ್ದರು.

ಆದ್ರೀಗ ಬೆಂಗಳೂರು ಪೊಲೀಸರು ರಿಲೀಸ್ ಮಾಡಿದ ವಿಡಿಯೋದಲ್ಲಿ ತೆಲುಗು ನಟಿ ಹೇಮಾ ರೇವ್ ಪಾರ್ಟಿಯಲ್ಲಿ ಇದ್ದರು. ತೆಲುಗು ನಟಿ ವಿಡಿಯೋದಲ್ಲಿ ಸುಳ್ಳು ಹೇಳುತ್ತಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡುತ್ತಿದೆ. ರೇವ್ ಪಾರ್ಟಿ ಹೋಗಿದ್ದರು. ಅವರು ಬೆಂಗಳೂರಿನಲ್ಲೇ ಇದ್ದು ವಿಡಿಯೋದ ಮಾಡಿದ್ದಾರೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಮಾ ನಾಲ್ಕು ಸುಳ್ಳುಗಳನ್ನು ಹೇಳಿದ್ದಾರೆ ಎಂದು ವರದಿಗಳಾಗಿವೆ.
ತೆಲುಗು ನಟಿ ಹೇಮಾ ರೇವ್ ಪಾರ್ಟಿಗೆ ಹೋಗಿಲ್ಲ ಅಂತ ಹೇಳಿ ಮಾಡಿದ ವಿಡಿಯೋದಲ್ಲಿ ಧರಿಸಿದ ಉಡುಪು ಹಾಗೂ ಪೊಲೀಸರು ರಿಲೀಸ್ ಮಾಡಿದ ವಿಡಿಯೋದಲ್ಲಿ ಒಂದೇ ಇದೆ. ಇದು ತೆಲುಗು ನಟಿ ಹೇಮಾ ಹೇಳಿದ ಮೊದಲನೇ ಸುಳ್ಳು ಎನ್ನಲಾಗಿದೆ. ನಟಿ ಹೇಮಾ ಬೆಂಗಳೂರು ಹಾಗೂ ಹೈದರಾಬಾದ್ ಎರಡೂ ಕಡೆ ಒಂದೇ ಡ್ರೆಸ್‌ನಲ್ಲಿ ಕಾಣಿಸಿಕೊಳ್ಳುವುದು ಹೇಗೆ? ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.
ಇನ್ನು ಹೈದರಾಬಾದ್ ಫಾರ್ಮ್ ಹೌಸ್‌ನಲ್ಲಿ ಇದ್ದೇನೆ ಎಂದು ಹೇಮಾ ವಿಡಿಯೋ ರಿಲೀಸ್ ಮಾಡಿದ್ದರು. ಮರಗಳ ಹಿಂದೆ ನಿಂತು ವಿಡಿಯೋ ಮಾಡಿ, ಹೈದರಾಬಾದ್ ಫಾರ್ಮ್‌ಹೌಸ್‌ನಲ್ಲಿ ಇದ್ದೇನೆ ಎಂದಿದ್ದರು. ಆದರೆ, ಆ ವಿಡಿಯೋವನ್ನು ಬೆಂಗಳೂರಿನ ಫಾರ್ಮ್ ಹೌಸ್‌ನಲ್ಲಿ ಮಾಡಿದ್ದು, ಹೈದರಾಬಾದ್‌ನಲ್ಲಿ ಅಲ್ಲ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ ಎಂದು ವರದಿಯಾಗಿದೆ. ಇದು ನಟಿ ಹೇಮಾ ಹೇಳಿದ ಎರಡನೇ ಸುಳ್ಳು.

ಹಾಗೇ ರೇವ್ ಪಾರ್ಟಿ ಬಗ್ಗೆ ತನಗೆ ಗೊತ್ತೇ ಇರಲಿಲ್ಲ. ಮಾಧ್ಯಮಗಳಲ್ಲಿ ನನ್ನ ಹೆಸರು ಬಂದಾಗ ಈ ವಿಷಯ ತಿಳಿಯಿತು ಎಂದಿದ್ದರು. ಇದು ಮೂರನೇ ಸುಳ್ಳು. ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪೊಲೀಸರು ನಟಿ ಹೇಮಾರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಹೇಮಾ ಮುಖ ಮುಚ್ಚಿಕೊಂಡು ಫಾರ್ಮ್ ಹೌಸ್‌ನಿಂದ ಹೊರಗೆ ಹೋಗುತ್ತಿರುವ ವಿಡಿಯೋ ಕೂಡ ಹೊರಬಿದ್ದಿದ್ದು, ನಾಲ್ಕನೇ ಸುಳ್ಳು ಹೇಳಿದ್ದಾರೆಂದು ವರದಿಯಾಗಿದೆ.
ತೆಲುಗು ನಟಿ ಹೇಮಾ ಪೊಲೀಸ್ ಕಸ್ಟಡಿಯಲ್ಲಿ ಇದ್ದಾಗಲೇ ಹೊರ ಬಂದು ವಿಡಿಯೋ ಮಾಡಿ ಮಾಧ್ಯಮಗಳಿಗೆ ಕಳುಹಿಸಿದ್ದಾರೆ. ಈ ಮೂಲಕ ನಟಿ ಹೇಮಾ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಂದು ಹೇಳಲಾಗಿದೆ. ತೆಲುಗು ನಟಿ ಹೇಮಾ ಫೋನ್ ಅನ್ನು ವಶಕ್ಕೆ ಪಡೆದಿರೋ ಬಗ್ಗೆ ವರದಿಗಳಾಗಿವೆ. ಒಟ್ಟಿನಲ್ಲಿ ತೆಲುಗು ನಟಿ ಹೇಮಾ ಮತ್ತೊಂದು ವಿವಾದಕ್ಕೆ ಸಿಕ್ಕಿಕೊಂಡಿದ್ದು, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದರೇ ಇಲ್ಲವೇ? ಹೊರಬೀಳಲಿದೆ.


Click it and Unblock the Notifications











