ಬಿಗ್ ಬಾಸ್ ಟಕ್ಕರ್ ಕೋಡೋಕೆ ಮತ್ತೊಂದು ರಿಯಾಲಿಟಿ ಶೋ.. ಒಂದೇ ಬಂಗಲೆ.. 10 ಜೋಡಿ.. 70 ದಿನ

ಕಳೆದ ಕೆಲವು ವರ್ಷಗಳಿಂದ ಬಿಗ್ ಬಾಸ್ ರಿಯಾಲಿಟಿ ಶೋ ಕಿರುತೆರೆ ವೀಕ್ಷಕರಿಗೆ ಸಿಕ್ಕಾಪಟ್ಟೆ ಮನರಂಜನೆ ನೀಡಿದೆ. ಭಾರತದಲ್ಲಿ ಕೇವಲ ಒಂದು ಭಾಷೆಯಲ್ಲಿ ಅಷ್ಟೇ ಅಲ್ಲ. ಆರೇಳು ಭಾಷೆಯಲ್ಲಿ ಯಶಸ್ವಿಯಾಗಿ ಪ್ರಸಾರ ಆಗುತ್ತಿದೆ. ಪ್ರತಿ ಸೀಸನ್‌ಗೂ ವೀಕ್ಷಕರ ಸಂಖ್ಯೆ ಕೂಡ ದುಪ್ಪಟ್ಟು ಆಗುತ್ತಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಣ ಭಾಷೆಗಳಲ್ಲಿ ಈ ಶೋ ಯಶಸ್ಸು ಕಂಡಿದೆ.

ಒಂದೂ ಒಂದೂವರೆ ದಶಕದಿಂದ ಬಿಗ್ ಬಾಸ್ ರಿಯಾಲಿಟಿ ಶೋಗೆ ಟಕ್ಕರ್ ಕೊಡುವ ಮತ್ತೊಂದು ಶೋ ಬಂದಿಲ್ಲ. ಆ ರೇಂಜ್‌ಗೆ ಟಕ್ಕರ್ ಕೊಡುವ ಪ್ರಯತ್ನ ಮಾಡುವುದಕ್ಕೂ ಹೋಗಿರಲಿಲ್ಲ. ಆದ್ರೀಗ ಬಿಗ್ ಬಾಸ್ ಅನ್ನೂ ಮೀರಿಸುವ ಶೋಗಳನ್ನು ಡಿಸೈನ್ ಮಾಡುವುದಕ್ಕೆ ಕಿರುತೆರೆಯ ಕೆಲವು ಜನಪ್ರಿಯ ವಾಹಿನಿಗಳು ರೆಡಿಯಾಗಿವೆ. ಇತ್ತೀಚೆಗೆ ಹಿಂದಿಯಲ್ಲಿ '50' ಅನ್ನೋ ಶೋ ಅನ್ನು ಪ್ರಸಾರ ಆಗುತ್ತಿದೆ. ಈ ಬೆನ್ನಲ್ಲೇ ತೆಲುಗಿನಲ್ಲೊಂದು ಶೋ ಸದ್ಯದ್ರಲ್ಲೇ ಪ್ರಸಾರ ಆಗಲಿದೆ.

Bigg Boss like reality show Mad For Each Other will start soon in Star Maa here is details

ತೆಲುಗು ಬಿಗ್ ಬಾಸ್ ಮುಗಿಯುತ್ತಿದ್ದಂತೆ ಸ್ಟಾರ್ ಮಾ ಹೊಸದೊಂದು ಶೋ ಅನ್ನು ಡಿಸೈನ್ ಮಾಡಿದೆ. ಅದನ್ನು ಪ್ರೇಕ್ಷಕರ ಮುಂದೆ ತರುತ್ತಿದೆ. ಆ ಶೋಗೆ 'ಮ್ಯಾಡ್ ಫರ್ ಇಚ್ ಅದರ್' ಎಂದು ಹೆಸರನ್ನು ಕೊಟ್ಟಿದೆ. ಇದು ಬಿಗ್ ಬಾಸ್‌ಗಿಂತಲೂ ಭಿನ್ನವಾಗಿದ್ದು, 'ಮ್ಯಾಡ್ ಫರ್ ಇಚ್ ಅದರ್' ಹೊಸ ರಿಯಾಲಿಟಿ ಶೋ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಬಿಗ್ ಬಾಸ್ ಮಾದರಿಯಲ್ಲಿಯೇ ಒಂದಿಷ್ಟು ಟ್ಚಿಸ್ಟ್ ಅಂಡ್ ಟರ್ನ್ ಅನ್ನು ನೀಡಿ ತೆಲುಗಿನ ಮನರಂಜನಾ ವಾಹಿನಿ 'ಸ್ಟಾರ್ ಮಾ' (Star Maa) ಹೊಸ ರಿಯಾಲಿಟಿ ಶೋ ಅನ್ನು ವೀಕ್ಷಕರಿಗೆ ಪರಿಚಯಿಸುತ್ತಿದೆ. ಬಿಗ್ ಬಾಸ್‌ಗೂ ಹಾಗೂ 'ಮ್ಯಾಡ್ ಫರ್ ಇಚ್ ಅದರ್' (Mad For Each Other) ಈ ಎರಡೂ ರಿಯಾಲಿಟಿ ಶೋಗಳಿಗೆ ಸಾಮ್ಯತೆನೂ ಇದೆ. ಹಾಗೂ ಕೆಲವು ವ್ಯತ್ಯಾಸಗಳೂ ಇವೆ. ಹೀಗಾಗಿ ಈ ಶೋ ಬಗ್ಗೆ ಈಗಾಗಲೇ ಸಾಕಷ್ಟು ಕುತೂಹಲ ಮೂಡಿದೆ.

'ಮ್ಯಾಡ್ ಫರ್ ಇಚ್ ಅದರ್' ರಿಯಾಲಿಟಿ ಶೋನ ವಿಶೇಷತೆ ಏನು ಅಂದ್ರೆ, ಸ್ಪರ್ಧಿಗಳು ಸಿಂಗಲ್ ಆಗಿ ಹೋಗುವ ಬದಲು ಜೋಡಿಗಳಾಗಿ ಮನೆಯೊಳಗೆ ಪ್ರವೇಶ ಮಾಡುತ್ತಾರೆ. ಇಲ್ಲಿ ಕಂಪ್ಲೀಟ್ ಆಗಿ ಜೋಡಿಗಳೇ ಟಾಸ್ಕ್‌ಗಳಲ್ಲಿ ಸ್ಪರ್ಧೆ ಮಾಡುತ್ತಾರೆ. ವಿವಾಹಿತ ದಂಪತಿಗಳು ಹಾಗೂ ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿರುವ ಜೋಡಿ ಈ ಶೋನಲ್ಲಿ ಭಾಗವಹಿಸುತ್ತಾರೆ ಎಂದು ವರದಿಯಾಗಿದೆ.

ತೆಲುಗಿನ ಅತೀ ದೊಡ್ಡ ಈ ರಿಯಾಲಿಟಿ ಶೋನಲ್ಲಿ ಒಟ್ಟು 10 ಜೋಡಿಗಳು ಮನೆಯೊಳಗೆ ಪ್ರವೇಶ ಮಾಡಲಿವೆ. ಸುಮಾರು 70 ದಿನಗಳ ಈ ಶೋ ಒಂದೇ ಮನೆಯಲ್ಲಿ ಇರುತ್ತಾರೆ. ಶೋ ಉದ್ದಕ್ಕೂ ಇವರ ಮಧ್ಯೆ ಪ್ರೀತಿ, ನಂಬಿಕೆ, ತಿಳುವಳಿಕೆ, ಅಹಂ ಮತ್ತು ಸಂಘರ್ಷಗಳನ್ನು ಪರೀಕ್ಷೆ ಮಾಡಲಾಗುತ್ತದೆ. 'ಬಿಗ್ ಬಾಸ್'ನಂತೆ ಇಲ್ಲಿ ವೀಕ್ಷಕರಿಗೆ ವೋಟ್ ಮಾಡುವುದಕ್ಕೆ ಅವಕಾಶವಿರುವುದಿಲ್ಲ. ಹೀಗಾಗಿ ವೋಟಿಂಗ್ ಮೂಲಕ ಎಲಿಮಿನೇಷನ್ ಇರುವುದಿಲ್ಲ. ಇನ್ನು ಡೇಂಜರ್ ಝೋನ್‌ನಲ್ಲಿರುವ ಜೋಡಿಯನ್ನು ಸೇಫ್ ಝೋನ್‌ನಲ್ಲಿರುವ ಜೋಡಿಗಳು ಹಾಗೂ ಶೋನ ತೀರ್ಪುಗಾರರು ನಿರ್ಧರಿಸುತ್ತಾರೆ. ಹಾಗೇ ಪ್ರತಿ ವಾರ ಒಂದೊಂದು ಜೋಡಿ ಮನೆಯಿಂದ ಹೊರಹೋಗಲಿದೆ.

ತೆಲುಗಿನ ಈ ದುಬಾರಿ ರಿಯಾಲಿಟಿ ಶೋ 'ಸ್ಟಾರ್ ಮಾ'ದಲ್ಲಿ ಪ್ರಸಾರವಾಗಲಿದ್ದು, ಡಿಜಿಟಲ್ ಸ್ಟ್ರೀಮಿಂಗ್ ಜಿಯೋ ಹಾಟ್‌ಸ್ಟಾರ್‌ನಲ್ಲಿಯೂ ನೋಡಬಹುದಾಗಿದೆ. ಪ್ರಸ್ತುತ 'ಸ್ಟಾರ್ ಮಾ'ದಲ್ಲಿ 'ಬಿಬಿ ಜೋಡಿ 2' ರಿಯಾಲಿಟಿ ಶೋ ಪ್ರಸಾರ ಆಗುತ್ತಿದೆ. ಅದು ಮುಗಿಯುತ್ತಿದ್ದಂತೆಯೇ 'ಮ್ಯಾಡ್ ಫರ್ ಇಚ್ ಅದರ್' ಆರಂಭ ಆಗುತ್ತೆ ಎಂದು ಹೇಳಲಾಗುತ್ತಿದೆ. ತೆಲುಗು ಕಿರುತೆರೆಯಲ್ಲಿ ಹಬ್ಬಿರುವ ಮಾಹಿತಿ ಪ್ರಕಾರ, ಮಾರ್ಚ್ ಮಾರ್ಚ್ 14ರಿಂದ ಈ ಕಾರ್ಯಕ್ರಮ ಪ್ರಸಾರ ಆಗುವ ಸಾಧ್ಯತೆಯಿದೆ. ಆಗ ಈ ಶೋನಲ್ಲಿ ಯಾರು ಭಾಗವಹಿಸುತ್ತಾರೆ? ಇದರ ಸಂಪೂರ್ಣ ಪರಿಕಲ್ಪನೆ ಏನು? ಮತ್ತು ಶೋ ಹೇಗೆ ಮೂಡಿಬರಲಿದೆ ಎಂಬುವುದು ಗೊತ್ತಾಗಲಿದೆ.

More from Filmibeat

English summary
Bigg Boss like reality show Mad For Each Other will start soon in Star Maa here is details.
Read more about: reality show tv show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X