Bigg Boss: 2ನೇ ವಾರ ಬಿಗ್‌ಬಾಸ್ ಮನೆಯಿಂದ ಹೊರ ಬರೋರು ಯಾರು? ಸಂಜನಾ ಫ್ಲೋರಾ ಕಥೆಯೇನು?

ಎಲ್ಲಿ ನೋಡಿದರೂ ಬಿಗ್ ಬಾಸ್ ರಿಯಾಲಿಟಿ ಶೋನದ್ದೇ ಹವಾ. ಒಂದೊಂದೇ ಪ್ರಮುಖ ಭಾಷೆಯಲ್ಲಿ ಬಿಗ್ ಬಾಸ್‌ನ ಹೊಸ ಸೀಸನ್‌ಗಳು ಆರಂಭ ಆಗುತ್ತಿವೆ. ಕಳೆದ ವಾರವಷ್ಟೇ ಬಿಗ್ ಬಾಸ್ ತೆಲುಗಿನ 9ನೇ ಸೀಸನ್ ಆರಂಭ ಆಗಿತ್ತು. ಅಕ್ಕಿನೇನಿ ನಾಗಾರ್ಜುನ ನಡೆಸಿಕೊಡುವ ಈ ಶೋ ಈಗ ಎರಡನೇ ವಾರದ ನಾಮಿನೇಷನ್ ಪ್ರಕ್ರಿಯೆಯನ್ನು ಮುಗಿಸಿದೆ. ಈ ವಾರ ತೆಲುಗು ಮಂದಿಗೆ ಸ್ಪರ್ಧಿಗಳು ಸಿಕ್ಕಾಪಟ್ಟೆ ಮನರಂಜನೆಯನ್ನು ನೀಡಿದ್ದರು.

ತೆಲುಗು ಬಿಗ್ ಬಾಸ್ 9ನೇ ಸೀಸನ್‌ನಲ್ಲಿ ಕನ್ನಡದ ಇಬ್ಬರು ನಟಿಯರು ಭಾಗವಹಿಸಿದ್ದಾರೆ. ಸಂಜನಾ ಗಲ್ರಾನಿ, ತನುಜಾ ಗೌಡ ಈ ಶೋನಲ್ಲಿದ್ದಾರೆ. ಹೀಗಾಗಿ ಈ ಶೋ ಬಿಗ್ ಬಾಸ್ ಪ್ರಿಯರನ್ನು ಸೆಳೆಯುತ್ತಿದೆ. ಬಿಗ್ ಬಾಸ್ ಸೀಸನ್ 9ರ ಎರಡನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಆರಂಭ ಆಗಿದೆ. ಈ ಪ್ರಕ್ರಿಯೆಯಲ್ಲಿ ಮಾತಿನ ಚಕಮಕಿಗಳು ನಡೆದಿವೆ. ಮನೆಯಿಂದ ಯಾರು ಹೊರಹೋಗಬೇಕು ಎfನುವ ಕಾರಣಕ್ಕೆ ಅವರದ್ದೇ ಕಾರಣಗಳನ್ನು ನೀಡಲಾಗಿದೆ.

Bigg Boss Telugu 9 2nd week nominations for elimination Sanjana Galrani Flora Saini in the list

ಎರಡನೇ ವಾರದಲ್ಲಿ ಯಾರು ಬಿಗ್ ಬಾಸ್ ಮನೆಯಿಂದ ಯಾರು ಆಚೆ ಹೋಗಬೇಕು? ಮನೆಯೊಳಗೆ ಇರಲು ಯಾರು ಯೋಗ್ಯರಲ್ಲ ಅನ್ನೋದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿದೆ. ಇನ್ನು ಮೊದಲನೇ ವಾರದ ಎಲಿಮಿನೇಷನ್ ಕೂಡ ಕೂತೂಹಲಕ್ಕೆ ಎಡೆ ಮಾಡಿಕೊಟ್ಟಿತ್ತು. ಮನೆಯೊಳಗೆ ತಮ್ಮ ಅಸ್ತಿತ್ವವನ್ನು ಸಾಬೀತು ಮಾಡಲು ಸಾಧ್ಯವಾಗದೇ ನೃತ್ಯ ನಿರ್ದೇಶಕಿ ಸೃಷ್ಟಿ ವರ್ಮಾ ಎಲಿಮಿನೇಟ್ ಆಗಿದ್ದರು. ಹೀಗಾಗಿ ಎರಡನೇ ವಾರ 8 ಮಂದಿ ನಾಮಿನೇಟ್ ಆಗಿದ್ದು ಇವರಲ್ಲಿ ಯಾರು ಹೊರ ಬರುತ್ತಾರೆ ಎನ್ನುವ ಕುತೂಹಲ ಮೂಡಿದೆ.

ಬಿಗ್ ಬಾಸ್ 9ನೇ ಸೀಸನ್‌ನಲ್ಲಿ ಕೊರಿಯೋಗ್ರಾಫರ್ ಸೃಷ್ಟಿ ವರ್ಮಾ ಪ್ರಬಲ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಆದರೆ, ಮೊದಲ ವಾರ ತಮ್ಮ ಆಟದಿಂದ ವೀಕ್ಷಕರನ್ನು ಸೆಳೆಯುವಲ್ಲಿ ವಿಫಲರಾದರು. ಉಳಿದವರಿಗಿಂತ ಕಡಿಮೆ ಅಂಕ ಪಡೆದಿದ್ದರಿಂದ ಅವರನ್ನು ಎಲಿಮಿನೇಟ್ ಮಾಡಲಾಗಿತ್ತು. ಮೊದಲ ವಾರದ ಎಲಿಮಿನೇಷನ್ ಮುಗಿದ ಬಳಿಕ 2ನೇ ವಾರದ ನಾಮಿನೇಷನ್ ಪ್ರಕ್ರಿಯೆ ಆರಂಭ ಆಗಿದೆ.

ಎರಡನೇ ವಾರದ ನಾಮಿನೇಷನ್ ಪ್ರಕ್ರಿಯೆ ಸುಮಾರು ಎರಡು ದಿನಗಳ ಕಾಲ ನಡೆದಿದೆ. ಇದರಲ್ಲಿ ಒಟ್ಟು 8 ಮಂದಿ ಸದಸ್ಯರು ನಾಮಿನೇಟ್ ಆಗಿದ್ದಾರೆ. ಅವರಲ್ಲಿ ಮೊದಲಿಗೆ ಹರಿತಾ ಹರೀಶ್ ನಾಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅತೀ ಹೆಚ್ಚು ಮಂದಿ ಇವರನ್ನೇ ಟಾರ್ಗೆಟ್ ಮಾಡಿದ್ದರು. ಬಳಿಕ ಭರಣಿ ಶಂಕರ್, ಫ್ಲೋರಾ ಸೈನಿ, ಮರ್ಯಾದಾ ಮನೀಶ್, ಪ್ರಿಯಾ ಶೆಟ್ಟಿ, ಡೀಮನ್ ಪವನ್ ಹಾಘೂ ಸಂಜನಾ ಗಲ್ರಾನಿ ಸೇರಿಕೊಂಡಿದ್ದಾರೆ.

ಇನ್ನೊಂದು ವಿಶೇಷ ಅಂದರೆ, ಈ ನಾಮಿನೇಷನ್ ಪ್ರಕ್ರಿಯೆ ವೇಳೆ ನಟಿ ಸಂಜನಾ ಗಲ್ರಾನಿಗೆ ವಿಶೇ‍ ಅಧಿಕಾರವನ್ನು ನೀಡಲಾಗಿತ್ತು. ಮನೆಯ ಸದಸ್ಯರಲ್ಲಿ ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡುವುದಕ್ಕೆ ಸೂಚಿಸಿದಾಗ, ಸಂಜನಾ ಸುಮನ್ ಶೆಟ್ಟಿಯವರ ಹೆಸರನ್ನು ಸೂಚಿಸಿದ್ದಾರೆ. ಈ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಮನೆಯಿಂದ ಯಾರು ಹೊರ ಹೋಗಬೇಕು ಅನ್ನೋದಕ್ಕೆ ವೋಟಿಂಗ್ ಪ್ರಕ್ರಿಯೆ ಆರಂಭ ಆಗಿದೆ.

ಸದ್ಯ ಈ ಎಂಟು ಮಂದಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ ಇಬ್ಬರು ನಟಿಯರು ಇದ್ದಾರೆ. ಒಬ್ಬರು ಫ್ಲೋರಾ ಸೈನಿ, ಇನ್ನೊಬ್ಬರು ಸಂಜನಾ ಗಲ್ರಾನಿ. ಇಬ್ಬರಲ್ಲಿ ಯಾರು ಹೊರ ಬರುತ್ತಾರೆ? ಇಲ್ಲಾ ಇಬ್ಬರೂ ಸೇಫ್ ಆಗುತ್ತಾರಾ? ಅನ್ನೋದು ವೀಕೆಂಡ್‌ನಲ್ಲಿ ಗೊತ್ತಾಗಲಿದೆ. ಸದ್ಯ ವೋಟಿಂಗ್ ಪ್ರಕ್ರಿಯೆ ಆರಂಭ ಆದ ಕೆಲವೇ ಗಂಟೆಗಳಲ್ಲಿ ಭಾರಿ ಮತದಾನವಾಗಿದೆ ಎಂದು ಫಿಲ್ಮಿಬೀಟ್ ವರದಿ ಮಾಡಿದೆ. ಈ ಪ್ರಕ್ರಿಯೆಯಲ್ಲಿ ಪ್ರಮುಖ ತಾರೆಯರು ಇರುವುದರಿಂದ ಇನ್ನಷ್ಟು ವೋಟಿಂಗ್ ಆಗಬಹುದೆಂಬ ನಿರೀಕ್ಷೆಯಿದೆ.

ಈಗಾಗಲೇ ವರದಿಯಾಗಿರುವಂತೆ ಭರಣಿ ಶಂಕರ್‌ಗೆ ಶೇ.45 ಕ್ಕಿಂತ ಹೆಚ್ಚು ವೋಟ್ ಮಾಡಲಾಗಿದೆ. ಇವರ ಹಿಂದೆ ಸುಮನ್ ಶೆಟ್ಟಿಗೆ ಶೇ.35, ಸಂಜನಾ ಗಲ್ರಾನಿಗೆ ಶೇ.20, ಫ್ಲೋರಾ ಸೈನಿಗೆ ಶೇ.15, ಡೀಮನ್ ಪವನ್‌ಗೆ ಶೇ.14, ಪ್ರಿಯಾ ಶೆಟ್ಟಿಗೆ ಶೇ.9 ಹಾಗೂ ಮನೀಷ್ ಮರ್ಯಾದಾಗೆ ಶೇ. 8ರಷ್ಟು ವೋಟ್‌ಗಳು ದಾಖಲಾಗಿವೆ. ಹೀಗಾಗಿ ಯಾರು ಹೊರಬರಬಹುದೆಂಬ ಕುತೂಹಲ ಮೂಡಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X