Bigg Boss 9: "ಆ ಬಾಲಿವುಡ್ ನಿರ್ಮಾಪಕ ನನ್ನ ಜೀವನವನ್ನೇ ಹಾಳು ಮಾಡ್ಬಿಟ್ಟ" ನಟಿ ಆಶಾ ಸೈನಿ
ಫ್ಲೋರಾ ಸೈನಿ ಉರ್ಫ್ ಆಶಾ ಸೈನಿ. ಒಂದು ಕಾಲದಲ್ಲಿ ದಕ್ಷಿಣ ಭಾರತದ ಜನಪ್ರಿಯ ನಟಿ ಕನ್ನಡ, ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ನಟಿಸಿದ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರು. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಗಮನಾರ್ಹ ಯಶಸ್ಸು ಕೂಡ ಸಿಕ್ಕಿತ್ತು. ಬಳಿಕ ಬಾಲಿವುಡ್ ಹಾರಿದ ನಟಿ ಅಲ್ಲಿ ಕೂಡ ಸಾಕಷ್ಟು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದರು.
ಕನ್ನಡದಲ್ಲೂ ಫ್ಲೋರಾ ಸೈನಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಶಿವಣ್ಣ, ರವಿಚಂದ್ರನ್ ನಟಿಸಿದ್ದ 'ಕೊಂದಂಡ ರಾಮ' ಕನ್ನಡದಲ್ಲಿ ನಟಿಸಿದ ಚೊಚ್ಚಲ ಸಿನಿಮಾ. ಆ ಬಳಿಕ ಕಿಚ್ಚ ಸುದೀಪ್ ಜೊತೆ ನಮ್ಮಣ್ಣ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಆನಂತರ 'ಗಿರಿ', 'ಧೀಮಾಕು', 'ವಾರೇ ವ್ಹಾ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಲಿವುಡ್‌ಗೆ ಹೋದ್ಮೇಲೆ ಈ ನಟಿ ಮತ್ತೆ ಇತ್ತ ತಿರುಗಿ ನೋಡಲಿಲ್ಲ.

ಒಂದಿಷ್ಟು ದಿನ ಸಿನಿಮಾರಂಗದಿಂದಲೇ ದೂರ ಉಳಿದಿದ್ದ ಫ್ಲೋರಾ ಸೈನಿ ಮತ್ತೆ ದಕ್ಷಿಣ ಭಾರತದ ಕಡೆ ಮುಖ ಮಾಡಿದ್ದಾರೆ. ಹಾಗಂತ ಸಿನಿಮಾಗಾಗಿ ಅಲ್ಲ. ಬದಲಾಗಿ ಬಿಗ್ ಬಾಸ್ ರಿಯಾಲಿಟಿ ಶೋಗಾಗಿ. ಕಳೆದ ವಾರವಷ್ಟೇ ಬಿಗ್ ಬಾಸ್‌ನಲ್ಲಿ 9ನೇ ಸೀಸನ್ ಆರಂಭ ಆಗಿದೆ. ಇದರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿರುವ ಫ್ಲೋರಾ ಸೈನಿ ತಾವು ಎದುರಿಸಿದ ಕಷ್ಟಗಳ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ಬಾಲಿವುಡ್ ನಿರ್ಮಾಪಕನ ಜೊತೆಗಿನ ಸಂಬಂಧ. ಅದರಿಂದ ತನ್ನ ಜೀವನವೇ ಹಾಳಾಯ್ತು ಎಂದು ಪಶ್ಚಾತಾಪ ಪಟ್ಟಿದ್ದಾರೆ.
ಪೊಲೀಸ್ ಪ್ರಕರಣಗಳು
ಬಿಗ್ ಬಾಸ್ ಮನೆಯೊಳಗೆ ಫ್ಲೋರಾ ಸೈನಿ ಪ್ರವೇಶ ಪಡೆಯುತ್ತಿದ್ದಂತೆ ತಮ್ಮ ಬದುಕಿನ ವಿವಾದಾತ್ಮಕ ಕ್ಷಣಗಳನ್ನು ಮೆಲುಕು ಹಾಕುವುದಕ್ಕೆ ಶುರು ಮಾಡಿದ್ದಾರೆ. ತಮ್ಮ ಮೇಲೆ ದಾಖಲಾಗಿದ್ದ ಪ್ರಕರಣಗಳು ವೃತ್ತಿ ಜೀವನವನ್ನೇ ಹಾಳು ಮಾಡಿದೆ ಎಂದು ನೆನಪಿಸಿಕೊಂಡಿದ್ದಾರೆ. ಹೀಗಾಗಿ ಫ್ಲೋರಾ ಸೈನಿ ಕೆಲವು ಕಾಲ ಸಿನಿಮಾರಂಗದಿಂದಲೇ ದೂರ ಉಳಿಯಬೇಕಾಯ್ತು. ಅದರಲ್ಲೂ ತೆಲುಗು ಚಿತ್ರರಂಗದಿಂದ ಸುಮಾರು 12 ವರ್ಷಗಳ ಕಾಲ ದೂರವಿದ್ದರು.
ನಿರ್ಮಾಪಕನಿಂದ ಹಿಂಸೆ
ಬಿಗ್ ಬಾಸ್‌ಗೆ ಎಂಟ್ರಿ ಕೊಡುವುದಕ್ಕೂ ಮುನ್ನ ಫ್ಲೋರಾ ಸೈನಿ ಸಂದರ್ಶನವೊಂದರಲ್ಲಿ ನಿರ್ಮಾಪಕನಿಂದ ತಮಗಾದ ತೊಂದರೆಯನ್ನು ರಿಕಾಲ್ ಮಾಡಿದ್ದಾರೆ. ತೆಲುಗು ಚಿತ್ರರಂಗದಿಂದ ಬಾಲಿವುಡ್‌ಗೆ ಪಯಣ ಬೆಳೆಸಿದ್ದರು. ಅಲ್ಲಿ ಒಂದು ಸಿನಿಮಾದಲ್ಲಿ ರಿಜೆಕ್ಟ್ ಆದ ಬಳಿಕ ಒಬ್ಬ ನಿರ್ಮಾಪಕರೊಂದಿಗೆ ಪ್ರೀತಿ ಹುಟ್ಟಿತ್ತು. ಆ ಸಂಬಂಧದಿಂದ ಬಹಳಷ್ಟು ಹಿಂಸೆ ಅನುಭವಿಸಬೇಕಾಯಿತೆಂದು ಫ್ಲೋರಾ ಸೈನಿ ಹೇಳಿಕೊಂಡಿದ್ದಾರೆ. "ನನ್ನ ದವಡೆಯ ಮೂಳೆಗಳು ಮುರಿಯುವಷ್ಟು ನನ್ನನ್ನು ಹೊಡೆಯುತ್ತಿದ್ದರು. ಆ ನಿರ್ಮಾಪಕ ನನ್ನನ್ನು ಸಂಪೂರ್ಣವಾಗಿ ಬಳಸಿಕೊಂಡರು. ನನ್ನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸಿಸಿದರು. ಆ ಸಂಬಂಧ ಸಂಪೂರ್ಣವಾಗಿ ಕತ್ತು ಹಿಸುಕುತ್ತಿದೆ ಎಂದು ಎನಿಸುತ್ತಿತ್ತು. ಆ ನಿರ್ಮಾಪಕನಿಂದ ನನ್ನ ವೃತ್ತಿ ಬದುಕೇ ನಾಶವಾಯ್ತು" ಎಂದು ಹೇಳಿಕೊಂಡಿದ್ದಾರೆ.

ಫ್ಲೋರಾ ಸೈನಿ ಬಂಧನ
ಫ್ಲೋರಾ ಸೈನಿ ವಿರುದ್ಧ ಪ್ರಕರಣ ಕೂಡ ದಾಖಲಾಗಿ ಜೈಲು ಶಿಕ್ಷೆ ಅನುಭವಿಸಿದ್ದರು. ನಿರ್ಮಾಪಕನಿಂದ ಕಷ್ಟಗಳನ್ನು ಎದುರಿಸುತ್ತಿರುವಾಗಲೇ ಹೈದರಾಬಾದ್‌ನಿಂದ ಅಮೆರಿಕದ ಕಾರ್ಯಕ್ರಮವೊಂದಕ್ಕೆ ತೆರಳುವುದಕ್ಕೆ ಆಹ್ವಾನ ಬಂದಿತ್ತು. ಆ ಸಮಯಕ್ಕೆ ಒಬ್ಬ ಮಹಿಳಾ ಮೇಕಪ್ ಆರ್ಟಿಸ್ಟ್ ಅನ್ನು ಕಳುಹಿಸಿದ್ದರು. ಆಕೆಯ ಬಳಿ ಇದ್ದ ಪಾಸ್‌ಪೋರ್ಟ್ ಸೇರಿದಂತೆ ದಾಖಲೆಗಳೆಲ್ಲವೂ ನಕಲಿಯಾಗಿತ್ತು. ಇದರಿಂದ ತಾನು ಜೈಲು ಸೇರಿಬೇಕಾಯ್ತು" ಎಂದು ಹೇಳಿಕೊಂಡಿದ್ದಾರೆ.
ಸಂಜನಾ ವಿರುದ್ಧ ಗರಂ
ಫ್ಲೋರಾ ಸೈನಿ ವೈಯಕ್ತಿಕ ಬದುಕು ಹಾಗೂ ಸಂಬಂಧಗಳ ಬಗ್ಗೆ ಸಹ ಸ್ಪರ್ಧಿಯೊಂದಿಗೆ ಹಂಚಿಕೊಂಡಿದ್ದಾರೆ. ಇವರ ಬಗ್ಗೆ ಸಂಜನಾ ಗಲ್ರಾನಿ ಕೂಡ ಚರ್ಚೆ ಮಾಡಿದಾಗ ಫ್ಲೋರಾ ಸೈನಿ ತಿರುಗಿಬಿದ್ದಿದ್ದರು. ತನ್ನ ಅನುಮತಿ ಇಲ್ಲದೆ ಹೇಗೆ ಮಾತಾಡುತ್ತೀಯಾ? ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಸಂಜನಾ ಕ್ಷಮೆ ಯಾಚಿಸಿದ ಬಳಿಕ ಬಿಗ್ ಬಾಸ್ ಮನೆ ಕೂಲ್ ಆಗಿತ್ತು.


Click it and Unblock the Notifications











