"ಪ್ರಭಾಸ್ ಅಂದ್ರೆ ನನಗೆ ಹುಚ್ಚು.. ಅವರನ್ನು ತುಂಬಾನೇ ಪ್ರೀತಿಸುತ್ತೇನೆ" ಎಂದ ಬಿಗ್ ಬಾಸ್ ಸ್ಪರ್ಧಿ

ಟಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಅಂದರೆ ಅದ್ಯಾರಿಗೆ ಇಷ್ಟವಿಲ್ಲ ಹೇಳಿ. ಅದೆಷ್ಟೋ ಹುಡುಗಿಯರ ಪಾಲಿಗೆ ಪ್ರಭಾಸ್ ಡಾರ್ಲಿಂಗ್ ಆಗಿಬಿಟ್ಟಿದ್ದಾರೆ. ಅದೆಷ್ಟೋ ಮಂದಿ ಮನಸ್ಸಿನಲ್ಲೇ ಇಟ್ಟುಕೊಂಡು ಕನಸು ಕಾಣುತ್ತಿದ್ದಾರೆ. ಈ ಪ್ಯಾನ್ ಇಂಡಿಯಾ ಸ್ಟಾರ್ ಮಾತ್ರ ತಾನಾಯ್ತು ತನ್ನ ಕೆಲಸ ಆಯ್ತು ಅಂತ ಇದ್ದು ಬಿಟ್ಟಿದ್ದಾರೆ. ಟಾಲಿವುಡ್‌ನ ಈ ಆರಡಿ ಕಟೌಟ್‌ಗೆ ಬಿಗ್‌ಬಾಸ್ ಸ್ಪರ್ಧಿಯೊಬ್ಬರು ಮನಸೋತಿದ್ದಾರೆ.

ಡಾರ್ಲಿಂಗ್ ಪ್ರಭಾಸ್‌ಗೆ ಲೆಕ್ಕವಿಲ್ಲದಷ್ಟು ಹುಡುಗಿಯರು ಪ್ರಪೋಸ್ ಮಾಡುತ್ತಲೇ ಇರುತ್ತಾರೆ. ಅವರನ್ನು ಮದುವೆ ಆಗಬೇಕು ಅಂತ ಬಯಸುತ್ತಾರೆ. ಟಾಲಿವುಡ್‌ನ ರೆಬೆಲ್ ಸ್ಟಾರ್ ಜೊತೆ ಮಾತಾಡಬೇಕು. ಅವರೊಂದಿಗೆ ಡಿನ್ನರ್‌ಗೆ ಹೋಗಬೇಕು, ಡೇಟಿಂಗ್ ಮಾಡಬೇಕು ಅಂತ ಕನಸು ಕಾಣುತ್ತಾರೆ. ಅಂತಹವರಲ್ಲಿ ಈ ಬಿಗ್‌ಬಾಸ್ ಸ್ಪರ್ಧಿ ಕೂಡ ಸೇರಿಕೊಂಡಿದ್ದಾರೆ.

Bigg Boss Telugu contestant Divi Vadthya said she wants to go on a date with Prabhas

ಅಂದ್ಹಾಗೆ ಪ್ಯಾನ್ ಇಂಡಿಯಾ ಸ್ಟಾರ್‌ ಜೊತೆ ಡೇಟಿಂಗ್ ಮಾಡುವ ಕನಸು ಕಾಣುತ್ತಿರುವ ಆ ನಟಿಯ ಹೆಸರು ದಿವಿ ವದ್ಯ. ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಜನಪ್ರಿಯರಾಗಿರುವ ದಿವಿ ವದ್ಯ ನಟಿ ಕೂಡ ಹೌದು. ತೆಲುಗಿನ ವೆಬ್‌ ಸೀರಿಸ್‌ನಲ್ಲಿ ನಟಿ ಸಿನಿಪ್ರಿಯರ ಮನಗೆದ್ದಿದ್ದರು. ಈಕೆಗೆ ಸಂದರ್ಶನವೊಂದರಲ್ಲಿ ಡಾರ್ಲಿಂಗ್ ಪ್ರಭಾಸ್ ಅನ್ನು ಪ್ರೀತಿಸುತ್ತಿದ್ದೇನೆ. ಅವರೊಂದಿಗೆ ಡೇಟಿಂಗ್ ಹೊಗಬೇಕು ಅಂತ ಹೇಳಿಕೊಂಡಿದ್ದಾರೆ.

ದಿವಿ ವದ್ಯ ಬಿಗ್‌ ಬಾಸ್‌ಗೆ ಎಂಟ್ರಿ ಕೊಟ್ಟು ತೆಲುಗು ಮಂದಿಗೆ ಹತ್ತಿರವಾಗಿದ್ದರು. ಈ ಶೋನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದರು. ಬಿಗ್‌ ಬಾಸ್‌ ಈಕೆಗೆ ಹೊಸ ಇಮೇಜ್ ಕೊಟ್ಟಿದೆ. ಇವರ ಜನಪ್ರಿಯತೆಯನ್ನು ಮನಗಂಡು ಸಿನಿಮಾ ಮಂದಿ ಅವರಿಗೆ ಆಫರ್‌ಗಳನ್ನು ಕೊಡುತ್ತಿದ್ದಾರೆ. ಈಗಾಗಲೇ ಒಳ್ಳೆಯ ಕಥೆ ಸಿಕ್ಕು ಇಷ್ಟವಾದರೆ, ಸಂಭಾವನೆ ತೆಗೆದುಕೊಳ್ಳದೆ ಸಿನಿಮಾ ಮಾಡಲು ಸಿದ್ಧ ಎಂದು ಈ ಹಿಂದೆಯೇ ಹೇಳಿಕೊಂಡಿದ್ದರು.

ಈಗಾಗಲೇ ದಿವಿ ವದ್ಯ 'ಕ್ಯಾಬ್ ಸ್ಟೋರೀಸ್' ಅನ್ನುವ ವೆಬ್ ಸೀರಿಸ್‌ನಲ್ಲಿ ನಟಿಸಿದ್ದಾರೆ. ಈ ವೆಬ್‌ ಸೀರಿಸ್‌ಗೆ ವೀಕ್ಷಕರಿಂದ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಇದೇ ನಟಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಅದರಲ್ಲಿ ಪ್ರಭಾಸ್ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ಪ್ರಭಾಸ್ ಅವರನ್ನು ಭೇಟಿ ಮಾಡಬೇಕು. ಅವರೊಂದಿಗೆ ಡೇಟಿಂಗ್‌ಗೆ ಹೋಗಬೇಕು ಅಂತ ಹೇಳಿಕೊಂಡಿದ್ದಾರೆ.

Bigg Boss Telugu contestant Divi Vadthya said she wants to go on a date with Prabhas

ಪ್ರಭಾಸ್ ಒಳ್ಳೆಯ ವ್ಯಕ್ತಿ ಎಂದು ಹೇಳಿದ್ದೇನೆ. ಅವರು ಮನೆಗೆ ಬಂದವರಿಗೆ ಒಳ್ಳೆಯ ಆತಿಥ್ಯ ನೀಡುತ್ತಾರೆ ಎಂದು ಹೇಳುವುದನ್ನು ಕೇಳಿದ್ದೇನೆ. ಅತಿಥಿಗಳಿಗೆ ಹೊಟ್ಟೆ ತುಂಬಾ ಊಟ ಹಾಕಿ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಪ್ರಭಾಸ್ ನನ್ನ ಅಚ್ಚು ಮೆಚ್ಚಿನ ವ್ಯಕ್ತಿ. ಅವರನ್ನು ನಾನು ಮನಸಾರೆ ಪ್ರೀತಿಸುತ್ತೇನೆ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಅದೇ ಸಂದರ್ಶನದಲ್ಲಿ ನಿರೂಪಕರು ಪ್ರಭಾಸ್ ಅವರನ್ನು ಭೇಟಿ ಮಾಡುವುದಕ್ಕೆ ಅವಕಾಶ ಸಿಕ್ಕರೆ ಏನು ಮಾಡುತ್ತೀರಿ ಎಂದು ಪ್ರಶ್ನೆ ಮಾಡುತ್ತಾರೆ. ಪ್ರಭಾಸ್ ಜೊತೆ ಡಿನ್ನರ್ ಪ್ಲಾನ್ ಮಾಡುತ್ತೀರಾ?, ಡೇಟ್ ಪ್ಲಾನ್ ಮಾಡುತ್ತೀರಾ?, ಅವರ ಜೊತೆ ಕಾಫಿ ಕುಡಿತೀರಾ? ಮನಸ್ಸು ಏನು ಹೇಳುತ್ತಿದೆ ಎಂದು ಪ್ರಶ್ನೆ ಮಾಡಿದ್ದರು.

ಈ ಪ್ರಶ್ನೆಗೆ ದಿವಿ ವದ್ಯ ಒಮ್ಮೆಯಾದರೂ ಪ್ರಭಾಸ್ ಅವರನ್ನು ಭೇಟಿ ಮಾಡಬೇಕು. ಅವರನ್ನು ನಾನು ತುಂಬಾನೇ ಇಷ್ಟ ಪಡುತ್ತೇನೆ ಎಂದಿದ್ದಾರೆ. ಹಾಗೇ ಒಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಸಂದೇಶವನ್ನು ಕಳುಹಿಸಿದ್ದರು. ಅದಕ್ಕೆ ಒಮ್ಮೆಯಾದರೂ ಅವರು ಪ್ರತಿಕ್ರಿಯೆ ನೀಡುತ್ತಾರೆ ಎಂದು ಆಸೆಯಿಂದ ಎದುರು ನೋಡುತ್ತಿದ್ದೇನೆ ಎಂದು ಬಿಗ್ ಬಾಸ್ ಖ್ಯಾತಿಯ ನಟಿ ದಿವಿ ವದ್ಯ ಹೇಳಿಕೊಂಡಿದ್ದಾರೆ.

More from Filmibeat

English summary
Bigg Boss Telugu contestant Divi Vadthya said she wants to go on a date with Prabhas
Read more about: bigg boss prabhas tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X