ಅನುಮತಿ ಇಲ್ಲದೆ ಅನಸೂಯಾ ಸೊಂಟಕ್ಕೆ ಕೈ ಹಾಕಿ ಎತ್ತಿ ಗಾಳಿಯಲ್ಲಿ ತಿರುಗಿಸಿದ ಬಿಗ್‌ ಬಾಸ್ ಸ್ಪರ್ಧಿ; ವ್ಯಾಪಕ ಟೀಕೆ!

ಸಿನಿ ರಸಿಕರಿಗೆ ಟಾಲಿವುಡ್‌ನ ಜನಪ್ರಿಯರ ನಟಿ, ನಿರೂಪಕಿ ಅನಸೂಯಾ ಭಾರದ್ವಾಜ್ ಪರಿಚಯ ಚೆನ್ನಾಗಿಯೇ ಇರುತ್ತೆ. ಜಬರ್ದಸ್ತ್ ಎನ್ನುವ ಕಾರ್ಯಕ್ರಮವೊಂದರ ಮೂಲಕ ಅನಸೂಯಾ ಕಿರುತೆರೆ ವೀಕ್ಷಕರ ಮನಸ್ಸಿನೊಳಗೆ ಮನೆ ಮಾಡಿದ್ದರು. ಅವರ ನಿರೂಪಣೆ ಎಷ್ಟು ಮಂದಿ ಬೋಲ್ಡ್ ಆಗಿದ್ದರೋ ಅಷ್ಟೇ ಮಂದಿ ಅವರ ನೋಟಕ್ಕೆ, ಗ್ಲಾಮರ್‌ ಲುಕ್‌ಗೂ ಮನಸೋತಿದ್ದರು.

ಅನಸೂಯಾ ನಟಿಯಾಗಿ ಜನಪ್ರಿಯತೆ ಗಳಿಸುವುದಕ್ಕೂ ಮುನ್ನ ನಿರೂಪಕಿಯಾಗಿ ಕಿರುತೆರೆಯಲ್ಲಿ ಕ್ರೇಜ್ ಹುಟ್ಟಿಸಿದ್ದರು. ಆದರೆ, ಇತ್ತೀಚೆಗೆ ಕಿರುತೆರೆ ನಿರೂಪಣೆಗೆ ಗುಡ್‌ ಬೈ ಹೇಳಿ, ಸಿನಿಮಾ ಕಡೆಗೆ ಹೆಚ್ಚು ಗಮನವನ್ನು ಹರಿಸಿದ್ದರು. 'ಪುಷ್ಪ', 'ಪುಷ್ಪ 2' ಅಂತಹ ಸಿನಿಮಾಗಳ ಮೂಲಕ ಸಿನಿಮಾದಲ್ಲಿಯೂ ಬ್ಯುಸಿಯಾಗಿದ್ದಾರೆ. ಇಷ್ಟು ದಿನ ರಿಯಾಲಿಟಿ ಶೋನಿಂದ ದೂರವಿದ್ದ ಅನಸೂಯಾ ಮತ್ತೆ ಕಮ್‌ಬ್ಯಾಕ್ ಮಾಡಿದ್ದಾರೆ.

Bigg Boss Telugu contestant lifted Anasuya Bharadwaj in the show video went viral

ಇತ್ತೀಚೆಗೆ ಕಿರುತೆರೆಯ ರಿಯಾಲಿಟಿ ಶೋ ಒಂದರಲ್ಲಿ ಅನಸೂಯ ಕಾಣಿಸಿಕೊಂಡಿದ್ದರು. ಆ ಶೋನಲ್ಲಿ ಬಿಗ್‌ ಬಾಸ್ ಖ್ಯಾತಿಯ ನಟನೊಬ್ಬ ಅನಸೂಯಾ ಜೊತೆ ನಡೆದುಕೊಂಡ ರೀತಿ ಯಾಕೋ ತೆಲುಗು ಮಂದಿಗೆ ಇಷ್ಟ ಆಗಲಿಲ್ಲ. ಹೀಗಾಗಿ ಆ ರಿಯಾಲಿಟಿ ಶೋ ಪ್ರೋಮೋ ರಿಲೀಸ್ ಆಗುತ್ತಿದ್ದಂತೆ ನೆಟ್ಟಿಗರ ಕಣ್ಣುಗಳು ಕೆಂಪಾಗಿವೆ. ಅಷ್ಟಕ್ಕೂ ಆ ವೇದಿಕೆ ಮೇಲೆ ನಡೆದಿದ್ದು ಏನು? ಇಬ್ಬರ ಮಧ್ಯೆ ಅಂತಹದ್ದೇನಾಯ್ತು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಅನಸೂಯಾ ಭಾರದ್ವಾಜ್ ನಿರೂಪಣೆಗೆ ಬೋಲ್ಡ್ ಆಗದ ತೆಲುಗು ಮಂದಿನೇ ಇಲ್ಲ. ಜಬರ್ದಸ್ತ್ ಎನ್ನುವ ತೆಲುಗಿನ ಕಾಮಿಡಿ ಶೋಗೆ ಇವರು ನಿರೂಪಕಿಯಾಗಿದ್ದರು. ಈ ಶೋ ಇವರ ವೃತ್ತಿ ಬದುಕಿನ ಗತಿಯನ್ನೇ ಬದಲಿಸಿತ್ತು. ಈ ಶೋಗೆ ಎಂಟ್ರಿ ಕೊಡುವುದಕ್ಕೂ ಮುನ್ನ ಸಿನಿಮಾದಲ್ಲಿ ನಟಿಸಬೇಕು ಅಂತ ಸಿಕ್ಕಾಪಟ್ಟೆ ಪ್ರಯತ್ನ ಪಟ್ಟಿದ್ದರು. ಆದರೆ, ಅವರಿಗೆ ದೊಡ್ಡ ಆಫರ್ ಸಿಗಲೇ ಇಲ್ಲ. ಬಳಿಕ ಜಬರ್ದಸ್ತ್ ಕಾಮಿಡಿ ಶೋ ಈಕೆಯನ್ನು ನಿರೂಪಣೆಯಲ್ಲಿ ಸೂಪರ್‌ಸ್ಟಾರ್ ಮಾಡಿತ್ತು. ಅಲ್ಲಿಂದ ಅನಸೂಯಾ ಭಾರದ್ವಾಜ್ ಹಿಂತಿರುಗಿ ನೋಡುವ ಪರಿಸ್ಥಿತಿಯೇ ಬಂದಿಲ್ಲ.

ಕೆಲವು ವರ್ಷ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಅನಸೂಯಾ ಮತ್ತೆ ಕಿರುತೆರೆಗೆ ಕಮ್‌ಬ್ಯಾಕ್ ಮಾಡಿದ್ದರು. ಸದ್ಯಕ್ಕೆ ತೆಲುಗಿನ 'ಕಿರಕ್ ಬಾಯ್ಸ್, ಖಿಲಾಡಿ ಗರ್ಲ್ಸ್ ಸೀಸನ್ 2'ನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಮತ್ತೆ ಕಿರುತೆರೆ ವೀಕ್ಷಕರ ರಂಜಿಸುತ್ತಿದ್ದಾರೆ. ಈ ಕಾರ್ಯಕ್ರಮದ ಹೊಸ ಪ್ರೋಮೋ ಒಂದು ಹೊರ ಬಿದ್ದಿದೆ. ಇದರಲ್ಲಿ ವೇದಿಕೆ ಮೇಲೆ ಹೆಜ್ಜೆ ಹಾಕುತ್ತಾ ಬಂದ ಅನಸೂಯಾ ಅವರನ್ನು ಬಿಗ್‌ ಬಾಸ್ ತೆಲುಗು ಖ್ಯಾತಿಯ ನಟ ಪೃಥ್ವಿ ಅನುಮತಿ ಇಲ್ಲದೆ ಏಕಾಏಕಿ ಎತ್ತಿ ಗಿರಗಿರನೇ ತಿರುಗಿಸಿದ್ದಾರೆ. ಈ ವಿಡಿಯೋ ಬಗ್ಗೆನೇ ಈಗ ವ್ಯಾಪಕ ಟೀಕೆಗೆ ಗುರಿಯಾಗಿದೆ.

'ಕಿರಕ್ ಬಾಯ್ಸ್, ಖಿಲಾಡಿ ಗರ್ಲ್ಸ್ ಸೀಸನ್ 2' ವೇದಿಕೆ ಮೇಲೆ ಅನಸೂಯಾ ಹಾಡೊಂದಕ್ಕೆ ಹೆಜ್ಜೆ ಹಾಕುತ್ತಾ ಮುಂದೆ ಬಂದಿದ್ದರು. ಆ ವೇಳೆ ಅನಿರೀಕ್ಷಿತವಾಗಿ ಪೃಥ್ವಿ ಅನಸೂಯಾ ಭಾರದ್ವಾಜ್ ಅವರ ಸೊಂಟಕ್ಕೆ ಕೈ ಹಾಕಿ ಎತ್ತಿ ಗಾಳಿಯಲ್ಲಿ ತಿರುಗಿಸುತ್ತಾನೆ. ದಿಢೀರನೇ ನಡೆದ ಈ ಘಟನೆಯನ್ನು ನೋಡಿ ಎಲ್ಲರೂ ಶಾಕ್ ಆಗಿದ್ದರು. ಆರಂಭದಲ್ಲಿ ಅನಸೂಯಾ ಕೂಡ ಶಾಕ್ ಆದಂತೆ ಕಂಡರೂ ಬಳಿಕ ಕ್ಯಾಮರಾ ಮುಂದೆ ನಗುವಿನ ಪ್ರದರ್ಶಿಸಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ವಿಡಿಯೋ ನೋಡಿ ಕೆಲವರು ಟೀಕೆ ಮಾಡುತ್ತಿದ್ದಾರೆ. ಅನಸೂಯಾ ಅವರ ಅನುಮತಿ ಇಲ್ಲದೆ ಅವನು ಹೇಗೆ ಎತ್ತಿದ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅನಸೂಯಾ ಜೊತೆ ಪೃಥ್ವಿ ಅಸಭ್ಯವಾಗಿ ಹೀಗೆ ವರ್ತಿಸುವುದಕ್ಕೆ ಹೇಗೆ ಸಾಧ್ಯ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು 'ಕಿರಕ್ ಬಾಯ್ಸ್, ಖಿಲಾಡಿ ಗರ್ಲ್ಸ್ ಸೀಸನ್ 2'ನಲ್ಲಿ 8 ಮಂದಿ ಪುರುಷರು ಹಾಗೂ 8 ಮಂದಿ ಮಹಿಳೆಯರು ಸ್ಪರ್ಧಿಗಳಾಗಿ ಭಾಗವಹಿಸುತ್ತಿದ್ದಾರೆ.

More from Filmibeat

English summary
Bigg Boss Telugu contestant lifted Anasuya Bharadwaj in the show video went viral;
Read more about: actress tollywood reality show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X