ನಟ ಪವನ್ ಕಲ್ಯಾಣ್ ಜೊತೆ ಸಪ್ತಪದಿ ತುಳಿದ ಬಿಗ್‌ಬಾಸ್ ಸ್ಪರ್ಧಿ ವಾಸಂತಿ ಕೃಷ್ಣನ್; ಸುದ್ದಿ ವೈರಲ್ ಆಗಿದ್ದೇಕೆ?
ದಕ್ಷಿಣ ಭಾರತದ ಚಿತ್ರರಂಗದಲ್ಲಿ ಒಬ್ಬೊಬ್ಬರೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ನಟ-ನಟಿಯರು ಬ್ಯಾಚುಲರ್ ಲೈಫ್‌ಗೆ ಗುಡ್‌ಬೈ ಹೇಳಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮತ್ತೆ ಕೆಲವರು ಮದುವೆ ಆಗುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಕೆಲವರು ಅರೇಂಜ್ಡ್ ಮ್ಯಾರೇಜ್ ಆಗಿದ್ದರೆ, ಮತ್ತೆ ಕೆಲವರು ಪ್ರೀತಿಸಿದವನ್ನೇ ಮದುವೆ ಆಗಿದ್ದಾರೆ. ಇಂತಹವರಲ್ಲಿ ಬಿಗ್‌ಬಾಸ್ ತೆಲುಗು 6 ಖ್ಯಾತಿಯ ವಾಸಂತಿ ಕೃಷ್ಣನ್ ಕೂಡ ಒಬ್ಬರು.
ಬಿಗ್‌ಬಾಸ್ ತೆಲುಗು ಸೀಸನ್ 6 ರಲ್ಲಿ ಭಾಗವಹಿಸಿದ್ದ ವಾಸಂತಿ ಕೃಷ್ಣನ್ ಜನಪ್ರಿಯತೆ ಗಳಿಸಿದ್ದರು. ಬಿಗ್‌ಬಾಸ್‌ನಿಂದ ಹೊರ ಬಂದ ಬಳಿಕ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೇ ನಟಿಯ ಮದುವೆ ಈಗ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. ಸಿನಿ ಪ್ರಿಯರಂತೂ ವಾಸಂತಿ ಕೃಷ್ಣನ್ ಮದುವೆ ಫೋಟೊಗಳನ್ನು ಮುಗಿಬಿದ್ದು ನೋಡುತ್ತಿದ್ದಾರೆ. ಅದಕ್ಕೆ ಕಾರಣ ಆಕೆ ಮದುವೆ ಆಗಿರುವ ಹುಡುಗ.

ತೆಲುಗಿನ 'ಸಿರಿಸಿರಿ ಮುವ್ವಲು' ಅನ್ನೋ ಧಾರಾವಾಹಿ ಮೂಲಕ ವಾಸಂತಿ ಕೃಷ್ಣನ್ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಆ ಬಳಿಕ ಹಲವು ಧಾರಾವಾಹಿಗಳಲ್ಲಿ ನಟಿಸಿ ತೆಲುಗು ಮಂದಿಯ ಮನಸ್ಸು ಗೆದ್ದಿದ್ದರು. ಹಾಗಂತ ಧಾರಾವಾಹಿ ಅಷ್ಟೇ ಅಲ್ಲ. ಸಿನಿಮಾಗಳಲ್ಲಿಯೂ ವಾಸಂತಿ ನಟಿಸಿ ಸೈ ಎನಿಸಿಕೊಂಡಿದ್ದರು. ವಾಸಂತಿ ಕೃಷ್ಣನ್ ಕನ್ನಡ ಸಿನಿಮಾದಲ್ಲಿಯೇ ಮೊದಲು ನಟಿಸಿದ್ದಾರೆಂದು ವರದಿಯಾಗಿದೆ. ಆದರೆ ಯಾವ ಸಿನಿಮ ಅನ್ನುವ ಬಗ್ಗೆ ಮಾಹಿತಿ ಇಲ್ಲ. ಸದ್ಯ ಇವರ ಮದುವೆ ಸುದ್ದಿಯಲ್ಲಿರೋಕೆ ಕಾರಣ ಪತಿಯ ಹೆಸರು.
ಹೌದು.. ವಾಸಂತಿ ಕೃಷ್ಣನ್ ತೆಲುಗು ನಟ ಪವನ್ ಕಲ್ಯಾಣ್‌ರನ್ನು ಮದುವೆ ಆಗಿದ್ದಾರೆ ಅಂದಾಕ್ಷಣ ಗಾಬರಿ ಆಗೋದು ಸಹಜ. ಆದರೆ, ಈಕೆಯ ಪತಿಯ ಹೆಸರು ಕೇಳಿ ಪವನ್ ಕಲ್ಯಾಣ್ ನಾಲ್ಕನೇ ಮದುವೆ ಆದ್ರಾ? ಅಂದುಕೊಳ್ಳಬೇಡಿ. ಇದು ಪವರ್‌ಸ್ಟಾರ್ ಪವನ್ ಕಲ್ಯಾಣ್ ಅಲ್ಲ. ತೆಲುಗು ಚಿತ್ರರಂಗದಲ್ಲಿ ಮತ್ತೊಬ್ಬ ಪವನ್ ಕಲ್ಯಾಣ್ ಹೆಸರಿನ ನಟನಿದ್ದಾನೆ. ಆತನನ್ನೇ ವಾಸಂತಿ ಕೃಷ್ಣನ್ ವಿವಾಹವಾಗಿದ್ದಾರೆ. ಈ ಹೆಸರಿನಿಂದಲೇ ಈ ಮದುವೆ ಫುಲ್ ಟ್ರೆಂಡಿಂಗ್‌ನಲ್ಲಿದೆ.
ಇತ್ತೀಚೆಗಷ್ಟೇ ವಾಸಂತಿ ಕೃಷ್ಣನ್ ಹಾಗೂ ಪವನ್ ಕಲ್ಯಾಣ್ ಜೋಡಿ ವೈರಲ್ ಆಗಿತ್ತು. ಕೆಲವು ದಿನಗಳ ಹಿಂದಷ್ಟೇ ಪ್ರೇಮಿಗಳ ದಿನದ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ಕ್ಯಾಮರಾ ಮುಂದೆನೇ ದ್ರಾಕ್ಷಿ ತಿನ್ನಿಸುವ ಗೇಮ್‌ನಲ್ಲಿ ಆಡಿ ಟ್ರೆಂಡ್ ಆಗಿದ್ದರು. ವಾಸಂತಿ ಕೃಷ್ಣನ್ ಹಾಗೂ ಪವನ್ ಕಲ್ಯಾಣ್ ಇಬ್ಬರನ್ನೂ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರು. ಕೆಲವರಂತೂ ಕ್ಯಾಮರಾ ಮುಂದೆ ಇವರ ವರ್ತನೆಯನ್ನು ಖಂಡಿಸಿದ್ದರು.

ಈಗ ವಾಸಂತಿ ಕೃಷ್ಣನ್ ಹಾಗೂ ಪವನ್ ಕಲ್ಯಾಣ್ ಮದುವೆ ಬಗ್ಗೆನೇ ಚರ್ಚೆಯಾಗುತ್ತಿದೆ. ವಾಸಂತಿ ತನ್ನ ಕುಟುಂಬದ ಸ್ನೇಹಿತ ಪವನ್ ಕಲ್ಯಾಣ್‌ರನ್ನು ಪ್ರೀತಿಸುತಿದ್ದರು ಎನ್ನಲಾಗಿತ್ತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಇವರಿಬ್ಬರೂ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಷ್ಟಕ್ಕೂ ಪವನ್ ಕಲ್ಯಾಣ್ ಕೂಡ ನಟನಾಗಿದ್ದು, ಈಗಾಗಲೇ ಹೀರೋ ಆಗಿ ಎರಡು ಸಿನಿಮಾ ಮಾಡಿದ್ದಾರೆ.
ತಿರುಪತಿಯಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ವಾಸಂತಿ ಕೃಷ್ಣನ್ ಹಾಗೂ ಪವನ್ ಕಲ್ಯಾಣ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆಗೆ ಬಿಗ್ ಬಾಸ್ ಸ್ಪರ್ಧಿಗಳು ಹಾಗೂ ಧಾರಾವಾಹಿ ನಟರು ಭಾಗವಹಿಸಿದ್ದರು ಎನ್ನಲಾಗಿತ್ತು. ಸದ್ಯ ಈ ಜೋಡಿಯ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದು, ಟ್ರೆಂಡಿಂಗ್‌ನಲ್ಲಿವೆ.


Click it and Unblock the Notifications











