"ಆಫರ್‌ಗಳಿಗಾಗಿ ಮಲಗುವುದರಲ್ಲಿ ತಪ್ಪೇನಿದೆ? ಅವರಿಗಿಲ್ಲದೆ ಸಮಸ್ಯೆ ನಿಮಗೇಕೆ"; 37 ವರ್ಷದ ನಟಿ ಬೋಲ್ಡ್ ಹೇಳಿಕೆ

ಸಿನಿಮಾ ಅಂದ್ಮೇಲೆ ಇಲ್ಲಿ ಗಾಸಿಪ್, ಕಾಂಟ್ರವರ್ಸಿಗಳಿಗೇನು ಕಮ್ಮಿ ಇರೋದಿಲ್ಲ. ಸಿನಿಮಾಗಳಲ್ಲಿ ಅವಕಾಶಗಳನ್ನು ನೀಡುವ ಹೆಸರಿನಲ್ಲಿ ಕಾಸ್ಟಿಂಗ್ ಕೌಚ್‌ನಂತಹ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಮೀಟೂ ಅಭಿಯಾನ ಆರಂಭವಾದ ಬಳಿಕ ಅನೇಕ ನಟಿಯರು ತಮ್ಮ ವೃತ್ತಿ ಜೀವನದಲ್ಲಿ ಎದುರಿಸಿದ ಇಂತಹ ಕಷ್ಟಗಳ ಬಗ್ಗೆ ಬಹಿರಂಗವಾಗಿ ಮಾತನಾಡುವುದಕ್ಕೆ ಶುರು ಮಾಡಿದ್ದಾರೆ.

ಸಿನಿಮಾಗಳಲ್ಲಿ ಅವಕಾಶ ನೀಡುವ ನೆಪದಲ್ಲಿ ತಮ್ಮೊಂದಿಗೆ ಗೌರವಾನ್ವಿತ ವ್ಯಕ್ತಿಗಳಂತೆ ನಟಿಸಿ ತಮ್ಮ ಬದುಕನ್ನೇ ಹಾಳು ಮಾಡಿದ್ದಾರೆಂದು ಸಾಕಷ್ಟು ನಟಿಯರು ಆರೋಪಿಸಿದ್ದಾರೆ. ಇತ್ತೀಚೆಗೆ ತೆಲುಗು ಚಿತ್ರರಂಗದ ಜನಪ್ರಿಯ ನಟಿ ದೀಕ್ಷಾ ಪಂತ್ ಕೂಡ ಚಿತ್ರರಂಗದಲ್ಲಿ ಇರುವ ಕಾಸ್ಟಿಂಗ್ ಕೌಚ್ ಪಿಡುಗಿನ ಬಗ್ಗೆ ಶಾಕಿಂಗ್ ಕಮೆಂಟ್‌ ಅನ್ನು ಕೊಟ್ಟಿದ್ದಾರೆ. ಸದ್ಯಕ್ಕೆ ಇದು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.

Bigg Boss Telugu Fame Diksha Panth Bold Statement About Casting Couch in Film Industry creating Buzz

ತೆಲುಗು ಚಿತ್ರರಂಗದಲ್ಲಿ ಸೆಕೆಂಡ್ ಹೀರೋಯಿನ್ ಆಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೂಲತ: ಉತ್ತರ ಭಾರತದವರಾಗಿದರುವ ದೀಕ್ಷಾ ಪಂತ್ ಟಾಲಿವುಡ್‌ನಲ್ಲಿ ನೆಲೆಯೂರಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಒಳ್ಳೊಳ್ಳೆ ಪ್ರಾಜೆಕ್ಟ್‌ಗಳಲ್ಲಿ ನಟಿಸಿದ್ದಾರೆ. ಅಂದ್ಹಾಗೆ ದೀಕ್ಷಾ ಪಂತ್ ಅವರು ಅಲ್ಲು ಅರ್ಜುನ್ ನಟಿಸಿದ 'ವರುಡು' ಸಿನಿಮಾ ಮೂಲಕ ಎಂಟ್ರಿ ಕೊಟ್ಟರು. ಇಲ್ಲಿಂದ 'ರಚ್ಚಾ', 'ಒಕ ಲೈಲಾ ಕೋಸಂ', 'ನೂತಿಲೋ ಕಪ್ಪಲು', 'ಗೋಪಾಲ ಗೋಪಾಲ', 'ಶಂಕರಭರಣಂ', 'ಸೊಗ್ಗಾಡೆ ಚಿನ್ನಿ ನಾಯನ', 'ಬಂತಿಪೂಲ ಜಾನಕಿ' ಹಾಗೂ 'ಈಗೋ' ಅಂತಹ ಸಿನಿಮಾಗಳಲ್ಲಿ ಮೂಲಕ ತೆಲುಗು ಪ್ರೇಕ್ಷಕರಿಗೆ ಹತ್ತಿರವಾದ್ದಾರೆ.

ತೆಲುಗು ಸಿನಿಮಾಗಳಲ್ಲಿ ಹೆಸರು ಮಾಡಿರುವ ದೀಕ್ಷಾ ಪಂತ್ ಅವರು ಬಿಗ್ ಬಾಸ್ ತೆಲುಗು ಸೀಸನ್ 1 ರಲ್ಲಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ತಮ್ಮ ಸೌಂದರ್ಯ ಹಾಗೂ ಚಾಣಾಕ್ಷತನದಿಂದ ಬಿಗ್ ಬಾಸ್ ಮನೆಯಲ್ಲಿ ಗಮನ ಸೆಳೆಯುವಲ್ಲಿ ದೀಕ್ಷಾ ಪಂತ್ ಯಶಸ್ವಿಯಾಗಿದ್ದರು. ಇನ್ನೇನು ಫೈನಲ್‌ಗೆ ಎಂಟ್ರಿ ಕೊಡಬೇಕು ಎನ್ನುವಷ್ಟರಲ್ಲಿ ಎಲಿಮಿನೇಟ್ ಆದರು. ಟಾಪ್ 5 ಸ್ಥಾನದಲ್ಲಿ ಇರಬೇಕಿದ್ದ ಅನಿರೀಕ್ಷಿತವಾಗಿ ಹೊರಬೇಕಾಯ್ತು.

ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಮೇಲೆ ದೀಕ್ಷಾ ಪಂತ್‌ಗೆ ಉತ್ತಮ ಜನಪ್ರಿಯತೆ ಸಿಕ್ಕರೂ, ಕಳೆದ 8 ವರ್ಷಗಳಿಂದ ಸಿನಿಮಾಗಳಿಂದ ದೂರವಿದ್ದಾರೆ. ದೀಕ್ಷಾ ಕೊನೆಯದಾಗಿ ನಟಿಸಿದ ಸಿನಿಮಾ 'ಈಗೋ'. ಇತ್ತೀಚೆಗೆ ದೀಕ್ಷಾ ನೀಡಿದ ಒಂದು ಸಂದರ್ಶನದಲ್ಲಿ ತಮ್ಮ ವೃತ್ತಿ ಬದುಕು, ಬಿಗ್ ಬಾಸ್ ಜೊತೆಗೆ ಕಾಸ್ಟಿಂಗ್ ಕೌಚ್ ವಿಚಾರವಾಗಿ ಶಾಕಿಂಗ್ ಹೇಳಿಕೆಯನ್ನು ಕೊಟ್ಟಿದ್ದಾರೆ.

Bigg Boss Telugu Fame Diksha Panth Bold Statement About Casting Couch in Film Industry creating Buzz

ಈ ಸಂದರ್ಶನದಲ್ಲಿ ನಿರೂಪಕರೊಬ್ಬರು "ಸೆಕ್ಸ್ ಅಂಡ್ ಸಕ್ಸಸ್ ಎರಡೂ ಸಂತೋಷಮಯವಾಗಿರುತ್ತೆ. ಮೊದಲನೆಯದನ್ನು ನೀವು ನೀಡಿದರೆ, ಎರಡನೆಯದು ತಾನಾಗಿಯೇ ಬರುತ್ತದೆ" ಎಂಬ ಸಿದ್ಧಾಂತವನ್ನು ಅನೇಕರಲ್ಲಿ ಕೇಳಿದ್ದೇನೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂದು ಚಿತ್ರರಂಗದಲ್ಲಿರುವ ಕಾಸ್ಟಿಂಗ್ ಕೌಚ್ ಬಗ್ಗೆ ಕೇಳಿದ್ದರು. ಅದಕ್ಕೆ ದೀಕ್ಷಾ ಪಂತ್ ಕೊಟ್ಟ ಉತ್ತರ ನೆಟ್ಟಿಗರನ್ನು ಗೊಂದಲಕ್ಕೆ ಸಿಲುಕಿಸಿದೆ.

"ಇಬ್ಬರಿಗೂ ಇಷ್ಟವಿದ್ದರೆ ನಿಮಗೇನು ಸಮಸ್ಯೆ? ಇದೆಲ್ಲ ಇಲ್ಲದೆ ಇದ್ದಿದ್ದರೆ, ಇಷ್ಟು ಪ್ರತಿಭೆ ಉದ್ಯಮಕ್ಕೆ ಬರುತ್ತಲೇ ಇರಲಿಲ್ಲ. ಸೆಕ್ಸ್ ಅಂಡ್ ಸಕ್ಸಸ್ ಇಬ್ಬರಿಗೂ ಇಷ್ಟವಿರುವಾಗ ಮಧ್ಯದಲ್ಲಿರು ಇರೋರಿಗೆ ಏನು ಸಮಸ್ಯೆ?" ಎಂದು ದೀಕ್ಷಾ ಪ್ರಶ್ನಿಸಿದ್ದಾರೆ. ಹಾಗೇ "ನಾನು ಇದೂವರೆಗೆ ಕಾಸ್ಟಿಂಗ್ ಕೌಚ್ ಅಂತಹ ಸಮಸ್ಯೆಗಳನ್ನು ಎದುರಿಸಿಲ್ಲ. ಹೀಗಾಗಿ ಯಾರಿಗೆ ಯಾವುದು ಸರಿ ಎನ್ನಿಸುತ್ತದೆಯೋ ಅದನ್ನೇ ಮಾಡಬೇಕು. ವೈಯಕ್ತಿಕವಾಗಿ ನಾನು 'ಹ್ಯಾಂಡ್ ಇನ್ ಹ್ಯಾಂಡ್' ನೀತಿಯನ್ನು ಒಪ್ಪುವುದಿಲ್ಲ. ಈ ವಿಷಾರದಲ್ಲಿ ನಾನು ದೂರವಿರುತ್ತೇನೆ." ಎಂದಿದ್ದಾರೆ.

ಹಾಗೇ ಆರಂಭದ ದಿನಗಳಲ್ಲಿ ತಮಗಾದ ಅನುಭವಗಳನ್ನೂ ಹಂಚಿಕೊಂಡಿದ್ದಾರೆ. "ಪ್ರಾರಂಭದಲ್ಲಿ ಅವಕಾಶಗಳಿಗಾಗಿ ಪ್ರಯತ್ನಿಸಿದಾಗ, ಕೆಲವರು ಬೇರೆ ಇಂತಹ ಸುಳಿವು ನೀಡುತ್ತಿದ್ದರು. ಆದರೆ, ನಾನು ನೇರವಾಗಿ 'ನೋ' ಎಂದು ಹೇಳುತ್ತಿದ್ದೆ. ಕೂಡಲೇ ಅವರು ನನ್ನನ್ನು ಆ ಸಿನಿಮಾದಿಂದ ತೆಗೆದು ಹಾಕುತ್ತಿದ್ದರು. ಅವಕಾಶಗಳಿಗಾಗಿ ನಾನು ಎಲ್ಲರೊಂದಿಗೆ ಅನ್ಯೋನ್ಯವಾಗಿ ಇರಲು ಸಾಧ್ಯವಿಲ್ಲ. ಈ ಕಾರಣಕ್ಕೆ ನಾನು ನಟಿಯಾಗಿ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ" ಎಂದು ದೀಕ್ಷಾ ಪಂತ್ ಹೇಳಿದ್ದಾರೆ.

More from Filmibeat

English summary
Actress and Bigg Boss fame Diksha Panth reveals her shocking experience with casting couch in the film industry. Read what she said about the harsh reality faced by women in cinema.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X