40 ಜನರಲ್ಲಿ 5 ಮಂದಿ ಬಿಗ್ ಬಾಸ್ ಮನೆಗೆ ಎಂಟ್ರಿ.. ಆಯ್ಕೆ ಪ್ರಕ್ರಿಯೆ ಜಿಯೋ ಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರ
ಭಾರತದದ್ಯಂತ ಎಲ್ಲಾ ಕಡೆಗಳಲ್ಲಿ ಬಿಗ್ ಬಾಸ್ ಹೊಸ ಸೀಸನ್ ಆರಂಭ ಆಗುತ್ತಿದೆ. ಹಿಂದಿ, ಮಲಯಾಳಂ, ತೆಲುಗು ಹಾಗೂ ಕನ್ನಡದ ಬಿಗ್ ಬಾಸ್‌ನ ಹೊಸ ಸೀಸನ್‌ಗೆ ಈಗಾಗಲೇ ಸದ್ದು ಮಾಡುತ್ತಿವೆ. ತೆಲುಗು ಹಾಗೂ ಕನ್ನಡದ ಬಿಗ್ ಬಾಸ್‌ನ ಹೊಸ ಸೀಸನ್‌ಗಳು ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಆರಂಭ ಆಗುತ್ತಿವೆ. ಕಿಚ್ಚ ಸುದೀಪ್ ಬಿಗ್ ಬಾಸ್ ಕನ್ನಡ ಸೀಸನ್ 12ರ ನಿರೂಪಣೆ ಮಾಡುವುದು ಕೂಡ ಕನ್ಫರ್ಮ್ ಆಗಿದೆ.
ಇನ್ನೊಂದು ಕಡೆ ಬಿಗ್ ಬಾಸ್ ತೆಲುಗು ಸೀಸನ್ 9ರ ಸಿದ್ಧತೆಗಳು ನಡೆಯುತ್ತಿವೆ. ಈ ಬಾರಿ ಹೊಸ ಕಲ್ಪನೆಯೊಂದಿಗೆ ವೀಕ್ಷಕರ ಮುಂದೆ ಬರುವುದಕ್ಕೆ ಟೀಮ್ ನಿರ್ಧರಿಸಿದೆ. ಯಾವುದೇ ಭಾಷೆಯಲ್ಲಿ ಬಿಗ್ ಬಾಸ್ ಸೀಸನ್ ಆರಂಭ ಆದರೂ, ಅಲ್ಲಿ ಸ್ಪರ್ಧಿಗಳ ಆಯ್ಕೆಗೆ ಮೊದಲ ಆಧ್ಯತೆ ನೀಡಲಾಗುತ್ತೆ. ಬಿಗ್ ಬಾಸ್ ಟೀಮ್ ವಿಶಿಷ್ಟ ವ್ಯಕ್ತಿತ್ವ ಇರುವವರಿಗಾಗಿ ಹುಡುಕಾಡುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಬಿಗ್ ಬಾಸ್ ತೆಲುಗಿನ ಈ ಸೀಸನ್‌ನಲ್ಲಿ ಸಾಮಾನ್ಯ ಜನರನ್ನು ಮನೆಯೊಳಗೆ ಕಳುಹಿಸುವುದಕ್ಕೆ ನಿರ್ಧರಿಸಲಾಗಿದೆ.

ಈಗಾಗಲೇ ತೆಲುಗು ಬಿಗ್ ಬಾಸ್ ಸೀಸನ್ 9ರಲ್ಲಿ ಸಾಮಾನ್ಯ ಜನರನ್ನೂ ಮನೆಯೊಳಗೆ ಪ್ರವೇಶ ಪಡೆಯುತ್ತಾರೆ ಎನ್ನುವುದನ್ನು ಘೋಷಣೆ ಮಾಡಲಾಗಿದೆ. ಆದರೆ, ಜನರನ್ನು ಹೇಗೆ ಆಯ್ಕೆ ಮಾಡುತ್ತಾರೆ? ಎಷ್ಟು ಜನರನ್ನು ಮನೆಯೊಳಗೆ ಕಳುಹಿಸುತ್ತಾರೆ ಅನ್ನೋದು ಕೂಡ ಈಗ ರಿವೀಲ್ ಆಗಿದೆ. ಸಾಮಾನ್ಯ ಜನರು ಬಿಗ್‌ಬಾಸ್ ಮನೆಯೊಳಗೆ ಹೋಗುವುದಕ್ಕೆ ಅಗ್ನಿ ಪರೀಕ್ಷೆಯನ್ನು ಎದುರಿಸಬೇಕಾಗಿದೆ.
ಬಿಗ್ ಬಾಸ್ ತೆಲುಗು ಸೀಸನ್ 9 ರ ಪ್ರತಿ ಸೀಸನ್‌ನಲ್ಲಿಯೂ ಹೊಸ ಟ್ವಿಸ್ಟ್‌ಗಳನ್ನು ನೀಡಲಾಗುತ್ತಿದೆ. ಅದಂತೆ ಈ ಬಾರಿ ಬಿಗ್ ಬಾಸ್‌ನಲ್ಲಿ 'ಅಗ್ನಿಪರೀಕ್ಷೆ' ಎಂಬ ಹೊಸ ಕಾನ್ಸೆಪ್ಟ್ ಅನ್ನು ತರಲಾಗಿದೆ. ಈ ಮೂಲಕ ಸಾಮಾನ್ಯ ಜನರಿಗೆ ಅವಕಾಶ ನೀಡುವುದಕ್ಕೆ ಮುಂದಾಗಿದೆ. ಈ 'ಅಗ್ನಿಪರೀಕ್ಷೆ' ಸದ್ಯ ತೆಲುಗು ಮಂದಿಯನ್ನು ಅಚ್ಚರಿಗೊಳಿಸಿದೆ. ಹಾಗೇ ಮುಂದೆ ಪ್ರಸಾರ ಆಗಲಿರುವ OTT ಸಂಚಿಕೆಗಳ ಬಗ್ಗೆ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ಇನ್ನು 'ಅಗ್ನಿ ಪರೀಕ್ಷೆ' ಏನು ಅಂತ ನೋಡುವುದಾರೇ, ಬಿಗ್ ಬಾಸ್ ತೆಲುಗು 9 ರಲ್ಲಿ ಸೆಲೆಬ್ರಿಟಿಗಳ ಜೊತೆಗೆ ಸಾಮಾನ್ಯ ಜನರನ್ನೂ ಮನೆಯೊಳಗೆ ಪ್ರವೇಶ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಇಂತಹದ್ದೊಂದು ಅನೌನ್ಸ್‌ಮೆಂಟ್ ಮಾಡುತ್ತಿದ್ದಂತೆ ತೆಲುಗು ಜನರಲ್ಲಿ ಹೊಸ ಚರ್ಚೆ ಶುರುವಾಗಿದೆ. ಇಂತಹದ್ದೊಂದು ಘೋಷಣೆಯಾಗುತ್ತಿದ್ದಂತೆ ಸಾವಿರಾರು ಮಂದಿ ಬಿಗ್ ಬಾಸ್ ಮನೆಯೊಳಗೆ ಹೋಗುವುದಕ್ಕೆ ಉತ್ಸಾಹ ತೋರಿದ್ದಾರೆ.

ಬಿಗ್ ಬಾಸ್ ಟೀಮ್ ಸಾಮಾನ್ಯ ಜನರಿಗೆ ಅವರ ಕುರಿತು 3 ನಿಮಿಷಗಳ ವಿಡಿಯೋವನ್ನು ಕಳುಹಿಸಲು ತಿಳಿಸಿದ್ದರು. ಈಗಾಗಲೇ ಸಾವಿರಾರು ಮಂದಿ ವಿಡಿಯೋಗಳನ್ನು ಕಳುಹಿಸುತ್ತಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲಿಯೇ ಅಂತಿಮ ಆಯ್ಕೆಯನ್ನು ಮಾಡುವ ಬಗ್ಗೆ ಚಿಂತನೆ ನಡೆಸಿದೆ. ಸಾಮಾನ್ಯ ಜನರ ಆಯ್ಕೆ ಪ್ರಕ್ರಿಯೆಯನ್ನು ನೇರ ಪ್ರಸಾರ ಮಾಡುವುದಕ್ಕೆ ಈ ತಂಡ ನಿರ್ಧರಿಸಿದೆ. ಇನ್ನು ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ ಎಂದು ನೋಡುವುದಾದರೇ, ಸಾವಿರಾರು ಮಂದಿ ಕಳಿಸಿದ ವಿಡಿಯೋಗಳಲ್ಲಿ ಸುಮಾರು 40 ಮಂದಿಯನ್ನು ಆಯ್ಕೆ ಮಾಡಲಾಗುತ್ತೆ. ಆ 40 ಮಂದಿಯಲ್ಲಿ 5 ಮಂದಿಯನ್ನು ಸಾಮಾನ್ಯ ಸ್ಪರ್ಧಿಗಳಾಗಿ ಆಯ್ಕೆ ಮಾಡಲಾಗುತ್ತೆ.
ಈಗಾಗಲೇ ಆ 40 ಮಂದಿಯನ್ನು ಆಯ್ಕೆ ಮಾಡಲಾಗಿದ್ದು, ಅವರಲ್ಲಿ 5 ಮಂದಿಯನ್ನು ಸೆಲೆಕ್ಟ್ ಮಾಡುವುದಕ್ಕೆ 'ಅಗ್ನಿ ಪರೀಕ್ಷೆ' ಕಾನ್ಸೆಪ್ಟ್ ಹುಟ್ಟಿಕೊಂಡಿದೆ. ಮೂವರು ತೀರ್ಪುಗಾರರು ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಬಿಗ್ ಬಾಸ್ ವಿಜೇತರಾದ ಅಭಿಜಿತ್, ಬಿಂದು ಮಾಧವಿ ಮತ್ತು ಬಿಗ್ ಬಾಸ್ ಸ್ಪರ್ಧಿ ನವದೀಪ್ ತೀರ್ಪುಗಾರರಾಗಿದ್ದು, ಆಗಸ್ಟ್ 22 ರಿಂದ ಜಿಯೋ ಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರವಾಗಲಿದೆ ಎನ್ನಲಾಗಿದೆ.


Click it and Unblock the Notifications











