'ಸಲಾರ್ 2' ಶೂಟಿಂಗ್ ಶುರುವಾಗೋದು ಯಾವಾಗ? ಪ್ರಶಾಂತ್ ನೀಲ್ ಪ್ಲ್ಯಾನ್ ಏನು?
ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ಸಿನಿಮಾ ಬ್ಯಾಕ್ ಟು ಬ್ಯಾಕ್ ಸೋಲು ಕಾಣುತ್ತಿರುವಾಗ ಮತ್ತೆ ಹಿಟ್ ಕೊಟ್ಟಿದ್ದು ಪ್ರಶಾಂತ್ ನೀಲ್. 'ಕೆಜಿಎಫ್ 2' ಅಂತಹ ಮೆಗಾ ಸಿನಿಮಾ ಬಳಿಕ ನಿರ್ದೇಶಿಸಿದ 'ಸಲಾರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡಿತ್ತು. ಸದಾ ಸೋಲಿನಿಂದ ಕಂಗೆಟ್ಟಿದ್ದ ಪ್ರಭಾಸ್‌ಗೆ ಮತ್ತೊಂದು ಮೆಗಾ ಹಿಟ್ ಸಿನಿಮಾ ಸಿಕ್ಕಿತ್ತು.
ಒಂದೆರಡು ವರ್ಷ ಅಲ್ಲ. ಬರೋಬ್ಬರಿ ಏಳು ವರ್ಷಗಳ ಬಳಿಕ ಪ್ರಭಾಸ್ ಒಂದು ಸಕ್ಸಸ್‌ಫುಲ್ ಸಿನಿಮಾ ನೋಡಿದ್ದಾರೆ. ಆ ಸಿನಿಮಾ ಪ್ರಶಾಂತ್ ನೀಲ್ ಕಡೆಯಿಂದ ಸಿಕ್ಕಿದೆ. ಹೀಗಾಗಿ ಈ ಕ್ರಿಯೇಟಿವ್ ನಿರ್ದೇಶಕ 'ಸಲಾರ್ 2' ಸಿನಿಮಾದ ಚಿತ್ರೀಕರಣವನ್ನು ಯಾವಾಗ ಆರಂಭ ಮಾಡುತ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಅದರಲ್ಲೂ ಅವರ ಅಭಿಮಾನಿಗಳು ಈ ವಿಷಯ ತಿಳಿದು ಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.

ಪ್ರಭಾಸ್ ಅಭಿಮಾನಿಗಳ ಈ ಕುತೂಹಲಕ್ಕೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಪ್ರಶಾಂತ್ ನೀಲ್ 'ಸಲಾರ್ 2' ಸಿನಿಮಾವನ್ನು ಶೀಘ್ರದಲ್ಲಿಯೇ ಆರಂಭ ಮಾಡಲಿದ್ದಾರೆ ಅನ್ನೋ ಬಗ್ಗೆ ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಇದೇ ಸಿನಿಮಾದಲ್ಲಿ ನಟಿಸಿರೋ ಸ್ಟಾರ್ ನಟನೊಬ್ಬರ 'ಸಲಾರ್ 2' ಶೂಟಿಂಗ್ ಮಾಹಿತಿ ಹೊರ ಹಾಕಿದ್ದಾರೆಂದು ತೆಲುಗು ಮಾಧ್ಯಮಗಳು ವರದಿ ಮಾಡುತ್ತಿವೆ.
'ಸಲಾರ್' ಸಿನಿಮಾದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಜೊತೆಗೆ ಹೈಲೈಟ್ ಆಗಿದ್ದ ಮತ್ತೊಬ್ಬ ನಟ ಬಾಬಿ ಸಿಂಹ. ಬಾಬಿ ಸಿಂಹ 'ಸಲಾರ್' ಮೊದಲನೇ ಪಾರ್ಟ್‌ನಲ್ಲಿ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಒಂದರಲ್ಲಿ ಕಾಣಿಸಿಕೊಂಡಿದ್ದರು. ಅದೇ ನಟನೀಗ 'ಸಲಾರ್ 2' ಶೂಟಿಂಗ್ ಏಪ್ರಿಲ್ ತಿಂಗಳಲ್ಲಿ ಆರಂಭ ಆಗುತ್ತೆ ಎಂದು ಹೇಳಿದ್ದಾರೆಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.
ಪ್ರಶಾಂತ್ ನೀಲ್ 'ಸಲಾರ್ 2' ಸಿನಿಮಾವನ್ನು ಆದಷ್ಟು ಬೇಗ ಮುಗಿಸುವುದಕ್ಕೆ ನಿರ್ಧರಿಸಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ. ಈಗಾಗಲೇ ಜೂ.ಎನ್‌ಟಿಆರ್ ಸೇರಿದಂತೆ ಕೆಲವು ಪ್ರಾಜೆಕ್ಟ್‌ಗಳನ್ನು ತ್ವರಿತಗತಿಯಲ್ಲಿ ಮುಗಿಸಬೇಕಿರುವುದರಿಂದ ಪ್ರಶಾಂತ್ ನೀಲ್ ಆದಷ್ಟು ಬೇಗ 'ಸಲಾರ್ 2' ಸಿನಿಮಾವನ್ನು ಆರಂಭ ಮಾಡುತ್ತಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

ಇತ್ತ ಪ್ರಭಾಸ್ ಮತ್ತೊಂದು ಮೆಗಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಾಗ ಅಶ್ವಿನ್ ನಿರ್ದೇಶಿಸುತ್ತಿರುವ 'ಕಲ್ಕಿ 2898 ಎಡಿ' ಸಿನಿಮಾ ರಿಲೀಸ್ ಅನ್ನು ಎದುರು ನೋಡುತ್ತಿದ್ದಾರೆ. ಈ ಸಿನಿಮಾ ಇದೇ ವರ್ಷ ಬಿಡುಗಡೆಯಾಗಲಿದ್ದು, ಪ್ರಭಾಸ್ ಸೂಪರ್ ಹೀರೊ ಲುಕ್ ಕೊಟ್ಟಿದ್ದಾರೆ. ಹೀಗಾಗಿ ಈ ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
ಇದರ 'ಕಲ್ಕಿ' ಸಿನಿಮಾ ಜೊತೆಗೆ ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳನ್ನು ಪೂರೈಸಬೇಕಿದೆ. 'ಸಲಾರ್' ಸಿನಿಮಾ ಬಿಗ್ ಹಿಟ್ ಆಗಿದ್ದರಿಂದ ಪಾರ್ಟ್ 2ಗೂ ತಯಾರಿ ಮಾಡಿಕೊಳ್ಳಬೇಕಿದೆ. ಸದ್ಯ ಏಪ್ರಿಲ್‌ನಿಂದ ಶೂಟಿಂಗ್ ಶುರು ಅನ್ನೋದು ರಿವೀಲ್ ಆಗಿದೆ. ಇನ್ನೇನಿದ್ದರೂ ಚಿತ್ರತಂಡದಿಂದ ಮಾಹಿತಿ ಹೊರಬರಬೇಕಿದೆ ಅಷ್ಟೇ.


Click it and Unblock the Notifications











