'ಸೀತಾ ರಾಮಂ' ಬಳಿಕ ತೆಲುಗು ಮಂದಿ ನಿದ್ದೆ ಕದ್ದ ಮೃಣಾಲ್ ಠಾಕೂರ್: 2ನೇ ಸಿನಿಮಾ ಶುರು
ತೆಲುಗು ಚಿತ್ರರಂಗದಲ್ಲಿ ಬಾಲಿವುಡ್ ನಟಿಯರು ದರ್ಬಾರ್ ನಡೆಸೋದು ದೊಡ್ಡ ವಿಷಯವೇನೂ ಅಲ್ಲ. ಈ ಹಿಂದೆ ಉತ್ತರ ಭಾರತದ ನಟಿಯರೇ ಹೆಚ್ಚು ಮಿಂಚಿ ಹೋಗಿದ್ದಾರೆ. ಈ ಬಾರಿ ಮತ್ತೊಬ್ಬ ನಟಿಯ ದಕ್ಷಿಣದಲ್ಲಿ ಗಟ್ಟಿಯಾಗಿ ನೆಲೆಯೂರುವ ಎಲ್ಲಾ ಲಕ್ಷಣಗಳೂ ಗೋಚರವಾಗುತ್ತಿದೆ.
ಹೌದು, ಬಾಲಿವುಡ್ ನಟಿ ಮೃಣಾಲ್ ಠಾಕೂರ್ 'ಸೀತಾ ರಾಮಂ' ಮೂಲಕ ದಕ್ಷಿಣ ಭಾರತೀಯರ ಗಮನ ಸೆಳೆದಿದ್ದರು. ದುಲ್ಖರ್ ಸಲ್ಮಾನ್ ಜೊತೆ ಕ್ಲಾಸಿಕ್ ರೊಮ್ಯಾಂಟಿಕ್ ಸ್ಟೋರಿಯಲ್ಲಿ ಮಿಂಚಿದ್ದ ಈ ಬ್ಯೂಟಿಗೆ ತೆಲುಗು ಮಂದಿ ಮನಸೋತಿದ್ದಾರೆ. ಈ ಕಾರಣಕ್ಕೆ ಮೃಣಾಲ್ ಠಾಕೂರ್ ಮತ್ತೊಂದು ತೆಲುಗು ಸಿನಿಮಾ ಸೆಟ್ಟೇರಿದೆ.

ಟಾಲಿವುಡ್ ನ್ಯಾಚುರಲ್ ಸ್ಟಾರ್ ನಾನಿಯ 30ನೇ ಸಿನಿಮಾ ನಿನ್ನೆ (ಜನವರಿ 31) ಅದ್ಧೂರಿಯಾಗಿ ಸೆಟ್ಟೇರಿದೆ. ಮೆಗಾಸ್ಟಾರ್ ಚಿರಂಜೀವಿ, ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಸಿನಿಮಾಗೆ ಶುಭಕೋರಿ ಹೋಗಿದ್ದಾರೆ. ಟಾಲಿವುಡ್‌ನ ಈ ಬಿಗ್ ಬಜೆಟ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದರೆ, ಟಾಲಿವುಡ್‌ನಲ್ಲಿ ಮೃಣಾಲ್ ಠಾಕೂರ್ ಗೆದ್ದಂತೆ.
ಅಂದ್ಹಾಗೆ, ವೈರ ಎಂಟಟೈನ್ಮೆಂಟ್ಸ್ ಬ್ಯಾನರ್ ನಾನಿಯ 30ನೇ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಮೆಗಾ ಸ್ಟಾರ್ ಚಿರಂಜೀವಿ ಚಿತ್ರಕ್ಕೆ ಕ್ಲ್ಯಾಪ್ ಮಾಡಿದ್ದಾರೆ. ವಿಜಯೇಂದ್ರ ಪ್ರಸಾದ್ ಸಿನಿಮಾದ ಸ್ಕ್ರಿಪ್ಟ್ ಸಿನಿಮಾತಂಡಕ್ಕೆ ಹಸ್ತಾಂತರಿಸಿದ್ದಾರೆ. ಹೀಗಾಗಿ ಸಿನಿಮಾ ಬಗ್ಗೆ ಪಾಸಿಟಿವ್ ವೈಬ್ಸ್ ಇದೆ.

ಈ ಸಿನಿಮಾವನ್ನು ಶೌರ್ಯುವ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಇವರ ಮೊದಲ ಸಿನಿಮಾ. ಈಗಾಗಲೇ ಚಿಕ್ಕ ತುಣುಕಿನಲ್ಲಿ ಇದೊಂದು ಎಮೋಶನಲ್ ಫ್ಯಾಮಿಲಿ ಸಿನಿಮಾ ಅನ್ನೋದು ಗೊತ್ತಾಗಿದೆ. ಅಪ್ಪ-ಮಗಳ ಬಾಂದವ್ಯದ ಸುತ್ತ ಹೆಣೆಯಲಾದ ಈ ವಿಭಿನ್ನ ಕಥೆ ಆರಂಭದಲ್ಲೇ ಗೆಲುವಿನ ಸೂಚನೆ ನೀಡಿದೆ.
'ಸೀತಾ ರಾಮಂನಲ್ಲಿ ಎಮೋಷನಲ್ ಸೀನ್‌ಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ಮೃಣಾಲ್ ಟಾಲಿವುಡ್‌ನಲ್ಲಿ ನೆಲೆಯೂರೋದು ಪಕ್ಕಾ ಅನ್ನೋ ಮಾತು ಟಾಲಿವುಡ್‌ನಲ್ಲಿ ಕೇಳಿ ಬರುತ್ತಿದೆ.


Click it and Unblock the Notifications











