ಜೂ.ಎನ್‌ಟಿಆರ್ 30ನೇ ಸಿನಿಮಾಗೆ ಅತಿಲೋಕ ಸುಂದರಿಯ ಪುತ್ರಿ: ಟಾಲಿವುಡ್‌ ಎಂಟ್ರಿಗೆ ಹೇಗಿದೆ ಸಿದ್ಧತೆ?

ಬಾಲಿವುಡ್‌ನಲ್ಲಿ ಜಾಹ್ನವಿ ಕಪೂರ್‌ ತಕ್ಕ ಮಟ್ಟಿಗೆ ಹೆಸರು ಮಾಡಿದ್ದಾಗಿದೆ. ಶ್ರೀದೇವಿ ಪುತ್ರಿ ಬಾಲಿವುಡ್‌ ಸಿನಿಮಾ ಥಿಯೇಟರ್‌ಗಳಲ್ಲಿ ಹೆಚ್ಚು ಸದ್ದು ಮಾಡದೇ ಹೋದರೂ, ಓಟಿಟಿಯಲ್ಲಿ ಮೆಚ್ಚುಗೆ ಗಳಿಸಿದೆ. ಈ ಬೆನ್ನಲ್ಲೇ ಕೆಲವು ದಿನಗಳಿಂದ ಟಾಲಿವುಡ್ ಎಂಟ್ರಿ ಬಗ್ಗೆನೂ ಚರ್ಚೆ ನಡೆಯುತ್ತಿತ್ತು.

RRR ಬಳಿಕ ಜೂ.ಎನ್‌ಟಿಆರ್ 30ನೇ ಸಿನಿಮಾಗೆ ಜಾಹ್ನವಿ ಕಪೂರ್ ಕರ್ಕೊಂಡು ಬರುತ್ತಾರೆ ಅನ್ನೋ ಸುದ್ದಿ ಹಬ್ಬಿತ್ತು. ಆದರೆ, ಈ ಬಗ್ಗೆ ಚಿತ್ರತಂಡ ಆಗಲಿ, ಜೂ.ಎನ್‌ಟಿಆರ್ ಆಗಲಿ, ಜಾಹ್ನವಿ ಕಪೂರ್ ಆಗಲಿ ಮಾಹಿತಿಯನ್ನು ನೀಡಿರಲಿಲ್ಲ. ಈಗ ಜಾಹ್ನವಿ ಕಪೂರ್ ಟಾಲಿವುಡ್‌ಗೆ ಎಂಟ್ರಿ ಕೊಡೋದು ಕನ್ಫರ್ಮ್ ಅಂತಲೇ ಸುದ್ದಿ ಹಬ್ಬಿದೆ.

ಕೊರಟಾಲ ಶಿವ ನಿರ್ದೇಶಿಸುತ್ತಿರುವ ಜೂ.ಎನ್‌ಟಿಆರ್ 30ನೇ ಸಿನಿಮಾ ಇನ್ನೂ ಸೆಟ್ಟೇರಿಲ್ಲ. ಈಗಾಗಲೇ ಈ ಸಿನಿಮಾ ಆರಂಭ ಆಗಬೇಕಿತ್ತು. ಆದರೆ, 'ಆಚಾರ್ಯ' ಹೀನಾಯ ಸೋಲಿನ ಬಳಿಕ ಕೊರಟಾಲ ಶಿವ ಅಲರ್ಟ್ ಆಗಿದ್ದು, ಕಥೆ ಹಾಗೂ ಸ್ಕ್ರೀನ್‌ ಮತ್ತಷ್ಟು ಗಟ್ಟಿಗೊಳಿಸುತ್ತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

Bollywood Actress Janhvi Kapoor Gave Green Signal To Jr.NTR 30 She Will Join In Feb

ಜೂ.ಎನ್‌ಟಿಆರ್ 30ನೇ ಸಿನಿಮಾಗೆ ಜಾಹ್ನವಿ ಕಪೂರ್ ಫಿಕ್ಸ್?

ಜೂ.ಎನ್‌ಟಿಆರ್ ಸಿನಿಮಾಗೆ ಜಾಹ್ನವಿ ಕಪೂರ್ ಎಂಟ್ರಿ ಕೊಡೋದು ಬಹುತೇಕ ಫಿಕ್ಸ್ ಅಂತಲೇ ಹೇಳಲಾಗುತ್ತಿದೆ. ಶ್ರೀದೇವಿ ಪುತ್ರಿ ಮೇಲೆ ಬಹಳ ದಿನಗಳಿಂದ ಕಣ್ಣಿಟ್ಟಿದ್ದ ಚಿತ್ರತಂಡ ಅವರನ್ನೇ ಕರೆದುಕೊಂಡು ಬರುವಲ್ಲಿ ಯಶಸ್ವಿಯಾಗಿದೆ ಎನ್ನಲಾಗುತ್ತಿದೆ.

ಜೂ.ಎನ್‌ಟಿಆರ್ 30ನೇ ಸಿನಿಮಾ ಇದೇ ಫೆಬ್ರವರಿಯಿಂದ ಆರಂಭ ಆಗುತ್ತಿದೆ ಅನ್ನೋ ಮಾತಿದೆ. ಫೆಬ್ರವರಿ 23ರಂದು ಸಿನಿಮಾ ಮುಹೂರ್ತ ಕೂಡ ನಡೆಯಲಿದೆಯಂತೆ. ಹಾಗೇ ಸಿನಿಮಾ ಶೂಟಿಂಗ್ ಕೂಡ ಆರಂಭ ಆಗಲಿದೆ ಅನ್ನೋ ಮಾತುಗಳು ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ.

Bollywood Actress Janhvi Kapoor Gave Green Signal To Jr.NTR 30 She Will Join In Feb

ಆಲಿಯಾ ಮೇಲೆ ಕಣ್ಣಿಟ್ಟಿದ್ದ ಚಿತ್ರತಂಡ

ಜಾಹ್ನವಿ ಕಪೂರ್‌ಗಿಂತಲೂ ಮುನ್ನ ಜೂ.ಎನ್‌ಟಿಆರ್ 30ನೇ ಸಿನಿಮಾಗೆ ಆಲಿಯಾ ಭಟ್ ಬರಬೇಕಿತ್ತು. RRR ಸಿನಿಮಾ ಬಳಿಕ ಆಲಿಯಾ ಭಟ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದರು ಅನ್ನೋ ಸುದ್ದಿ ಹಬ್ಬಿತ್ತು. ಆದ್ರೆ, ಆಲಿಯಾ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದರಿಂದ ಈ ಪ್ರಾಜೆಕ್ಟ್‌ನಿಂದ ಹಿಂದೆ ಸರಿದ್ದರು ಎನ್ನಲಾಗಿತ್ತು.

ಈಗ ಅದೇ ಸ್ಥಾನಕ್ಕೆ ಜಾಹ್ನವಿ ಕಪೂರ್ ಆಯ್ಕೆಯಾಗಿದ್ದಾರೆಂದು ಟಾಲಿವುಡ್‌ನಲ್ಲಿ ಸುದ್ದಿ ಹಬ್ಬಿದೆ. ಸದ್ಯ ಜಾಹ್ನವಿ ಕಪೂರ್ ಬಳಿ 'ಮಿಸ್ಟರ್ ಅಂಡ್ ಮಿಸ್ಸಸ್ ಮಾಹಿ' ಸಿನಿಮಾ ಕೈಯಲ್ಲಿದೆ. ಈ ಸಿನಿಮಾ ರಿಲೀಸ್ ಆಗಬೇಕಿದೆ.

More from Filmibeat

English summary
Bollywood Actress Janhvi Kapoor Gave Green Signal To Jr.NTR 30 She Will Join In Feb, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X