64 ವರ್ಷದ ಬಾಲಕೃಷ್ಣ ಜೊತೆ ಊರ್ವಶಿ ರೌಟೇಲಾ ಪೋಸ್; ಹೆವಿ ಟ್ರೋಲ್ ಆಯ್ತು ಈ ವಿಡಿಯೋ

ಟಾಲಿವುಡ್ ಸೂಪರ್‌ಸ್ಟಾರ್ ಬಾಲಕೃಷ್ಣ ಹೊಸ ಸಿನಿಮಾ 'ಡಾಕು ಮಹಾರಾಜ್' ರಿಲೀಸ್‌ಗೆ ರೆಡಿಯಾಗಿದೆ. ಸಂಕ್ರಾಂತಿ ಹಬ್ಬಕ್ಕೆ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಈ ಕಾರಣಕ್ಕೆ ಬಾಲಕೃಷ್ಣ ಹಾಗೂ ನಟಿ ಊರ್ವಶಿ ರೌಟೇಲಾ ಇಬ್ಬರೂ ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ಇಬ್ಬರ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ತೆಲುಗು ಚಿತ್ರರಂಗದ ಕ್ರೇಜಿ ನಟ ಬಾಲಯ್ಯ. ತೆರೆಮೇಲೆ ಇವರ ಆವೇಶಕ್ಕೆ, ಆಕ್ರೋಶಕ್ಕೆ, ಡೈಲಾಗ್ ಡಿಲೇವರಿಗೆ, ಎಲ್ಲಕ್ಕಿಂತ ಹೆಚ್ಚಾಗಿ ಡ್ಯಾನ್ಸ್‌ನ ವೇಗಕ್ಕೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. 64 ವರ್ಷ ಆದರೂ ಇವರಷ್ಟು ಸ್ಪೀಡ್ ಆಗಿ ಡ್ಯಾನ್ಸ್ ಮಾಡೋ ಮತ್ತೊಬ್ಬ ನಟ ಟಾಲಿವುಡ್‌ನಲ್ಲಿ ಇಲ್ಲ. ಈಗ ಸಂಕ್ರಾಂತಿಗೆ (ಜನವರಿ 12) ಡಾಕೂ ಮಹಾರಾಜ್ ಅವತಾರದಲ್ಲಿ ಅಬ್ಬರಿಸುವುದಕ್ಕೆ ಸಜ್ಜಾಗಿದ್ದಾರೆ.

Bollywood Actress Urvashi Rautela pose with 64 year old Balakrishna netizens trolled heavly

ಆದರೆ, ಬಾಲಯ್ಯನ ಸಿನಿಮಾ ರಿಲೀಸ್ ಆಗುವಾಗುವ ಅವರ ಹೀರೋಯಿನ್ ಮಾತ್ರ ಟ್ರೋಲ್ ಆಗುತ್ತಲೇ ಇರುತ್ತಾರೆ. ಈ ಬಾರಿ ಟ್ರೋಲ್ ಆಗಿದ್ದು ಬಾಲಯ್ಯನಿಗೆ ನಾಯಕಿಯಾಗಿ ನಟಿಸಿರುವ ಊರ್ವಶಿ ರೌಟೇಲ. ಇತ್ತೀಚೆಗೆ 'ಡಾಕು ಮಹಾರಾಜ್' ಪ್ರಚಾರದ ವೇಳೆ ಇಬ್ಬರೂ ಜೊತೆಯಲ್ಲಿ ನಿಂತು ಪೋಸ್ ಕೊಟ್ಟ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.

ಸೋಶಿಯಲ್ ಮೀಡಿಯಾಲ್ಲಿ ಬಾಲಕೃಷ್ಣ ಹಾಗೂ ಊರ್ವಶಿ ರೌಟೇಲಾ ಒಟ್ಟಿಗೆ ಫೋಟೊಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ಇಬ್ಬರೂ ಪಕ್ಕಕ್ಕೆ ನಿಂತು ಕ್ಯಾಮರಾಗೆ ಪೋಸ್ ಕೊಡುವುದನ್ನು ಕಾಣಬಹುದು. ಈ ವಿಡಿಯೋ ಕೆಲವರಿಗೆ ಇಷ್ಟ ಆಗಿಲ್ಲ. ಅದಕ್ಕೆ ಈ ವಿಡಿಯೋವನ್ನು ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹೆವಿ ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ.

ಅಷ್ಟಕ್ಕೂ ನೆಟ್ಟಿಗರ ಟ್ರೋಲ್ ಮಾಡುವುದಕ್ಕೆ ಇಬ್ಬರ ನಡುವಿನ ವಯಸ್ಸಿನ ಅಂತರವೇ ಕಾರಣ. ಟಾಲಿವುಡ್ ದಿಗ್ಗಜ ಬಾಲಕೃಷ್ಣ ಅವರಿಗೆ ಈಗ 64 ವರ್ಷ. ಅದೇ ಬಾಲಿವುಡ್ ನಟಿ ಊರ್ವಶಿ ರೌಟೇಲಾಗೆ ಕೇವಲ 30 ವರ್ಷ ವಯಸ್ಸು. ಇಬ್ಬರಿಗೂ ಹೆಚ್ಚು ಕಡಿಮೆ 34 ವರ್ಷಗಳ ನಡುವಿನ ಅಂತರವಿದೆ. ಇದನ್ನೇ ಇಟ್ಟುಕೊಂಡು ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಇಬ್ಬರೂ ವಯಸ್ಸಿನಲ್ಲಿ ತಂದೆ ಮತ್ತು ಮಗಳಂತೆ ಕಾಣುತ್ತಾರೆ ಅಂತ ಈ ವಿಡಿಯೋ ನೋಡಿ ಇಬ್ಬರ ಕಾಲೆಳೆಯುವುದಕ್ಕೆ ಶುರು ಮಾಡಿದ್ದಾರೆ.

ಈ ವಿಡಿಯೋಗೆ ನೆಟ್ಟಿಗರು ಮಾಡುತ್ತಿರೋ ಕಾಮೆಂಟ್‌ಗಳು ಅವರ ಅಭಿಮಾನಿಗಳನ್ನು ಕೆರಳಿಸುತ್ತಿವೆ. ನೆಟ್ಟಿಗರೊಬ್ಬರು "ಅಜ್ಜ ಮತ್ತು ಮೊಮ್ಮಗಳ ಜೋಡಿ" ಎಂದು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬರು "ಇವಳನ್ನು ನೋಡಿ ನನಗೆ ಕೋಪ ಉಕ್ಕಿ ಬರುತ್ತಿದೆ" ಎಂದು ಕಾಮೆಂಟ್ ಮಾಡಿದ್ದಾರೆ. " ಇವರೊಂದಿಗೆ ಡ್ಯಾನ್ಸ್ ಮಾಡುವಾಗ ನೀವು ಎಷ್ಟು ಯೋಚನೆ ಮಾಡಿದ್ದೀರಿ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ವೈರಲ್ ಆಗಿದ್ದಷ್ಟೇ ಅಲ್ಲದೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಆದರೆ, ಊರ್ವಶಿನೇ ಹೇಳಿಕೊಂಡಂತೆ ಈ ವಿಡಿಯೋಗೆ 16 ಮಿಲಿಯನ್ ವೀವ್ಸ್ ಬಂದಿದೆ.

ಇನ್ನು ಸಿನಿಮಾ ಕಡೆ ಬರೋದಾರೆ, ಇಂದು (ಜನವರಿ 9) ಆಂಧ್ರ ಪ್ರದೇಶದ ಅನಂತಪುರದಲ್ಲಿ 'ಡಾಕು ಮಹಾರಾಜ್' ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಇತ್ತು. ಆದರೆ, ಇತ್ತೀಚೆಗೆ ತಿರುಪತಿಯ ಕಾಲ್ತುಳಿತದಲ್ಲಿ ಸಾವು ನೋವುಗಳಾಗಿದ್ದರಿಂದ ಈ ಇವೆಂಟ್ ಅನ್ನು ಚಿತ್ರತಂಡ ಸ್ಥಗಿತಗೊಳಿಸಿದೆ. ಹಾಗೇ ಬಾಲಯ್ಯನ ಅಭಿಮಾನಿಗಳಿಗೆ ಚಿತ್ರತಂಡ ಕ್ಷಮೆ ಕೇಳಿದೆ. ಈ ಬಾರಿ ಸಂಕ್ರಾಂತಿಯಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾಗಳ ಪೈಕಿ 'ಡಾಕು ಮಹಾರಾಜ್' ಮೇಲೆ ನಿರೀಕ್ಷೆಗಳು ಹೆಚ್ಚಿದ್ದು ಬಾಕ್ಸಾಫೀಸ್‌ನಲ್ಲಿ ಹೇಗೆ ಸದ್ದು ಮಾಡಬಹುದೆಂದು ಕೂತೂಹಲದಿಂದ ನೋಡಲಾಗುತ್ತಿದೆ.

More from Filmibeat

English summary
Bollywood actress Urvashi Rautela posed with 64-year-old Balakrishna; netizens trolled heavily
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X