ಉತ್ತರ ಅಮೆರಿಕದಲ್ಲಿ ಚಿರಂಜೀವಿ, ಬಾಲಕೃಷ್ಣ, ದಳಪತಿ ವಿಜಯ್ ಸಿನಿಮಾಗಳಿಗೆ ಬುಕಿಂಗ್ ಓಪನ್!
ಟಾಲಿವುಡ್‌ನಲ್ಲಿ 2023ರ ಆರಂಭದಲ್ಲಿಯೇ ಬಾಕ್ಸಾಫೀಸ್‌ನಲ್ಲಿ ಮೂರು ಸೂಪರ್‌ಸ್ಟಾರ್ ಸಿನಿಮಾಗಳು ಕಾದಾಟಕ್ಕೆ ಇಳಿಯಲಿವೆ. ಆರಂಭದಲ್ಲೇ ಬಾಕ್ಸಾಫೀಸ್‌ನಲ್ಲಿ ಕಿಚ್ಚು ಹಚ್ಚುವುದಕ್ಕೆ ತೆಲುಗು ಚಿತ್ರರಂಗ ತುದಿಗಾಲಲ್ಲಿ ನಿಂತಿದೆ.
ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿರೋದ್ರಿಂದ ಮೂರು ಸಿನಿಮಾಗಳು ಭರ್ಜರಿ ಪ್ರಚಾರಕ್ಕೆ ಮುಂದಾಗಿವೆ. ಕೇವಲ ತೆಲುಗು ರಾಜ್ಯಗಳಲ್ಲಷ್ಟೇ ಅಲ್ಲ. ಉತ್ತರ ಅಮೆರಿಕದಲ್ಲೂ ಈ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಗಿದೆ.
ಉತ್ತರ ಅಮೆರಿಕದಲ್ಲಿ ಈಗಾಗಲೇ ಮೂರು ಸಿನಿಮಾಗಳಿಗೂ ಟಿಕೆಟ್ ಬುಕಿಂಗ್ ಓಪನ್ ಆಗಿದೆ. ಸಂಕ್ರಾಂತಿ ಹಬ್ಬಕ್ಕೆ ಸೂಪರ್‌ಸ್ಟಾರ್ ಸಿನಿಮಾಗಳು ಜನರನ್ನು ರಂಜಿಸುವುದಕ್ಕೆ ಸಜ್ಜಾಗಿವೆ. ಅಂದ್ಹಾಗೆ ಉತ್ತರ ಅಮೆರಿಕದಲ್ಲಿ ಶ್ಲೋಕ ಎಂಟರ್‌ಟೈನ್ಮೆಂಟ್ ಕಂಪನಿ ಈ ಸಿನಿಮಾಗಳನ್ನು ಬಿಡುಗಡೆ ಮಾಡುತ್ತಿದೆ.

ತೆಲುಗಿನ ಮೂರು ಸಿನಿಮಾಗಳಿಗೆ ಬುಕಿಂಗ್ ಓಪನ್
ಉತ್ತರ ಅಮೆರಿಕದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ವಾಲ್ಟೈರ್ ವೀರಯ್ಯ', ಲೆಜೆಂಡ್ ಬಾಲಕೃಷ್ಣ ನಟನೆಯ ವೀರ ಸಿಂಹ ರೆಡ್ಡಿ ಹಾಗೂ ದಳಪತಿ ವಿಜಯ್ ಅಭಿನಯದ 'ವಾರಸುಡು' ಸಿನಿಮಾಗೆ ಬುಕಿಂಗ್ ಓಪನ್ ಆಗಿದೆ. ಶ್ಲೋಕ ಎಂಟರ್‌ಟೈನ್ಮೆಂಟ್ ಈಗಾಗಲೇ ಬುಕಿಂಗ್ ಓಪನ್ ಮಾಡಿದ್ದು, ಅನಿವಾಸಿ ಭಾರತೀಯರಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ ಎದು ವರದಿಯಾಗಿದೆ.

ಅಮೆರಿಕದ ಇತಿಹಾಸದಲ್ಲೇ ಬಿಗ್ ರಿಲೀಸ್
ಮೂವರು ಸೂಪರ್‌ಸ್ಟಾರ್ ಸಿನಿಮಾಗಳು ಸಂಕ್ರಾಂತಿಗೆ ರಿಲೀಸ್ ಆಗುತ್ತಿರೋದ್ರಿಂದ ದೊಡ್ಡ ಬ್ಯುಸಿನೆಸ್ ಅನ್ನು ನಿರೀಕ್ಷೆ ಮಾಡಲಾಗಿದೆ. ಉತ್ತರ ಅಮೆರಿಕದ ಅತೀ ದೊಡ್ಡ ಥಿಯೇಟರ್ ಚೈನ್ ಸಿನಿಮಾರ್ಕ್‌ನಲ್ಲಿ ಬುಕಿಂಗ್ ಓಪನ್ ಆಗಿದೆ. ಮುಂದಿನ ದಿನಗಳಲ್ಲಿ ಥಿಯೇಟರ್‌ಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ, ಉತ್ತರ ಅಮೆರಿಕದ ಇತಿಹಾಸದಲ್ಲಿಯೇ ಈ ಮೂರು ಸಿನಿಮಾಗಳದ್ದು ಬಿಗ್ಗೆಸ್ಟ್ ರಿಲೀಸ್ ಎನ್ನಲಾಗುತ್ತಿದೆ.

ಸಿನಿಮಾಗಳ ಪ್ರೀಮಿಯರ್ ಡೇಟ್ ಏನು?
ಮೆಗಾಸ್ಟಾರ್ ಚಿರಂಜೀವಿಯ ಮಾಸ್ ಮೂವಿ 'ವಾಲ್ಟೈರ್ ವೀರಯ್ಯ' ಜನವರಿ 13, 2023ಯಲ್ಲಿ ರಿಲೀಸ್ ಆಗುತ್ತಿದೆ. ಹೀಗಾಗಿ ಉತ್ತರ ಅಮೆರಿಕದಲ್ಲಿ ಒಂದು ದಿನ ಮುನ್ನ ಅಂದ್ರೆ, ಜನವರಿ 12ರಂದು ದೊಡ್ಡ ಮಟ್ಟದಲ್ಲಿ ಪ್ರೀಮಿಯರ್ ನಡೆಯಲಿದೆ. ಇನ್ನು ಬಾಲಕೃಷ್ಣ ಅಭಿನಯದ 'ವೀರ ಸಿಂಹ ರೆಡ್ಡಿ' ಜನವರಿ 12 ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದ ಪ್ರೀಮಿಯರ್ ಜನವರಿ 11ಕ್ಕೆ ಆಗಲಿದೆ. ದಳಪತಿ ವಿಜಯ್ ಸಿನಿಮಾ 'ವಾರಸುಡು' ಕೂಡ ಜನವರಿ 12ಕ್ಕೆ ರಿಲೀಸ್ ಆಗುತ್ತಿದ್ದು, ಒಂದು ಮುನ್ನ ಪ್ರೀಮಿಯರ್ ಆಗುತ್ತೆ ಎನ್ನಲಾಗಿದೆ.

'ವಾರಸುಡು' ಪ್ರೀಮಿಯರ್
ದಿಲ್ ರಾಜು ನಿರ್ಮಾಣದ 'ವಾರಸುಡು' ಸಿನಿಮಾವನ್ನು ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರೀಮಿಯರ್ ಮಾಡಲು ನಿರ್ಧರಿಸಲಾಗಿದೆ. ಸುಮಾರು 600 ಕ್ಕೂ ಅಧಿಕ ಸ್ಥಳಗಳಲ್ಲಿ 1000ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ಪ್ರೀಮಿಯರ್ ಮಾಡಲಾಗುತ್ತೆ. ತೆಲುಗು ಹಾಗೂ ತಮಿಳು ಎರಡೂ ಭಾಷೆಯಲ್ಲೂ ಈ ಸಿನಿಮಾದ ಪ್ರೀಮಿಯರ್ ನಡೆಯಲಿದೆ. ದಳಪತಿ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











