ಬಿಗ್ ಬಾಸ್‌ಗೆ 'ಹುಚ್ಚ' ನಟಿ ರೇಖಾ ಎಂಟ್ರಿ? ಭಾರೀ ಸಂಭಾವನೆ ಪಡೆದಿದ್ದಾರೆ ಅನ್ನೋದೆ ಚರ್ಚೆ

ಎಲ್ಲಾ ಭಾಷೆಯಲ್ಲೂ ಬಿಗ್ ಬಾಸ್ ರಿಯಾಲಿಟಿ ಶೋ ಏಕಕಾಲಕ್ಕೆ ಆರಂಭ ಆಗುವ ಸೂಚನೆ ಸಿಗುತ್ತಿದೆ. ಒಂದೇ ಸಮಯಕ್ಕೆ ಎಲ್ಲಾ ಭಾಷೆಯಲ್ಲೂ ಸ್ಪರ್ಧಿಗಳ ಹುಡುಕಾಟ ಶುರುವಾಗಿದೆ. ಪ್ರತಿದಿನ ಒಂದೊಂದು ಇಂಡಸ್ಟ್ರಿಯಿಂದ ಒಂದೊಂದು ಸುದ್ದಿ ಕೇಳಿ ಬರುತ್ತಿದೆ. ಒಬ್ಬೊಬ್ಬ ಸೆಲೆಬ್ರೆಟಿಗಳು ಹೆಸರು ಸುದ್ದಿಯಾಗುತ್ತಿದೆ. ಸದ್ಯಕ್ಕೀಗ 'ಹುಚ್ಚ' ಸಿನಿಮಾದ ಹೀರೋ ರೇಖಾ ವೇದವ್ಯಾಸ ಹೆಸರು ಕೇಳಿ ಬರುತ್ತಿದೆ.

ಹಿಂದಿಯಂತೆ ದಕ್ಷಿಣ ಭಾರತದಲ್ಲಿಯೂ ಬಿಗ್ ಬಾಸ್‌ ರಿಯಾಲಿಟಿ ಶೋಗೆ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಕೊಂಡಿದೆ. ಅದರಲ್ಲೂ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಬಿಗ್ ಬಾಸ್ ಕನ್ನಡ ಸೀಸನ್ 12 ಅತೀ ಹೆಚ್ಚು ಯಶಸ್ಸು ಕಂಡಿರೋದೇ ಇದಕ್ಕೆ ಸಾಕ್ಷಿ. ಹಾಗೇ ಬಿಗ್ ಬಾಸ್ ತೆಲುಗು ಕೂಡ ಅಷ್ಟೇ ಜನಪ್ರಿಯತೆ ಪಡೆದುಕೊಂಡಿತ್ತು. ಅದೇ ಹುರುಪಿನೊಂದಿಗೆ ಬಿಗ್ ಬಾಸ್ ತೆಲುಗು ಸೀಸನ್‌ 10 ಆರಂಭ ಆಗುತ್ತಿದೆ. ಅದಕ್ಕೆ ಹುಚ್ಚ ಹೀರೋಯಿನ್ ರೇಖಾ ವೇದವ್ಯಾಸ ಸ್ಪರ್ಧಿಯಾಗಿ ಎಂಟ್ರಿ ಕೊಡುತ್ತಿದ್ದಾರೆ ಅನ್ನೋದು ಸುದ್ದಿ.

Buzz Huchcha Actress Rekha Vedavyas will enter Bigg Boss Telugu 10 with huge remuneration

ಹೌದು, ತೆಲುಗಿನ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ರಿಯಾಲಿಟಿ ಶೋ 'ಬಿಗ್ ಬಾಸ್ ತೆಲುಗು ಸೀಸನ್ 10' ಆರಂಭಕ್ಕೆ ಇನ್ನೇನು ದಿನಗಣನೆ ಶುರುವಾಗಿದೆ. 10ನೇ ಸೀಸನ್‌ನಲ್ಲಿ ಯಾರೆಲ್ಲಾ ಎಂಟ್ರಿ ಕೊಡಬಹುದು ಅನ್ನೋ ಲೆಕ್ಕಾಚಾರಗಳು ಈಗಾಗಲೇ ಶುರುವಾಗಿದೆ. ಈ ಬೆನ್ನಲ್ಲೇ 'ಹುಚ್ಚ' ಸಿನಿಮಾದ ನಟಿ ರೇಖಾ ವೇದವ್ಯಾಸ ಬಿಗ್ ಬಾಸ್‌ಗೆ ಪ್ರವೇಶ ಮಾಡುತ್ತಾರೆಂಬ ಸುದ್ದಿ ಹರಿದಾಡುತ್ತಿದೆ. ಅಲ್ಲದೇ ಅವರ ಸಂಭಾವನೆ ಬಗ್ಗೆನೂ ಟಾಲಿವುಡ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ.

ಕನ್ನಡ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ನಟಿ ರೇಖಾ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡುತ್ತಾರೆಂಬ ಸುದ್ದಿ ಹರಿದಾಡುತ್ತಿದೆ. 'ಆನಂದಂ' ಸಿನಿಮಾ ಮೂಲಕ ತೆಲುಗು ಮಂದಿಯ ನೆಚ್ಚಿನ ನಟಿಯಾಗಿ ರೇಖಾ ವೇದವ್ಯಾಸ್ ಗುರುತಿಸಿಕೊಂಡಿದ್ದಾರೆ. ಈ ಬಾರಿ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ಕೊಡ್ತಿದ್ದಾರೆಂಬ ಬಲವಾದ ವದಂತಿಗಳು ಕೇಳಿಬರುತ್ತಿವೆ.

Also Read
BBK 13: ಬಿಗ್ ಬಾಸ್‌ಗೆ ಹೋಗ್ಬೇಕಾ..? ಹನುಮಂತನ ಮಾತು ಕೇಳಿ.. ಕೊನೆ ದಿನ ಬಂದೇ ಬಿಡ್ತು.. ವಿಡಿಯೋ ಕಳಿಸಿ
BBK 13: ಬಿಗ್ ಬಾಸ್‌ಗೆ ಹೋಗ್ಬೇಕಾ..? ಹನುಮಂತನ ಮಾತು ಕೇಳಿ.. ಕೊನೆ ದಿನ ಬಂದೇ ಬಿಡ್ತು.. ವಿಡಿಯೋ ಕಳಿಸಿ

ಕನ್ನಡಿಗರ ಫೇವರಿಟ್ ನಟಿ ರೇಖಾ

ರೇಖಾ ವೇದವ್ಯಾಸ ತೆಲುಗು ಮಂದಿಗೆ ಎಷ್ಟು ಚಿರಪರಿಚಿತರೋ ಅಷ್ಟೇ ಕನ್ನಡಿಗರಿಗೂ ಗೊತ್ತು. ಕಿಚ್ಚ ಸುದೀಪ್ ನಟನೆಯ ಸೂಪರ್‌ ಹಿಟ್ ಸಿನಿಮಾ 'ಹುಚ್ಚ' ಮೂಲಕ ಜನಪ್ರಿಯರಾದರು. ಹಾಗೇ 'ಚಿತ್ರ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇಲ್ಲಿಂದ ಕನ್ನಡಿಗರ ಅಚ್ಚುಮೆಚ್ಚಿನ ನಟಿಯಾಗಿದ್ದರು. ಬಹಳ ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿರುವ ರೇಖಾ, ಈಗ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡುತ್ತಿದ್ದಾರೆ ಎನ್ನಲಾಗಿದೆ.

Buzz Huchcha Actress Rekha Vedavyas will enter Bigg Boss Telugu 10 with huge remuneration

ರೇಖಾ ಸಂಭಾವನೆ ಕೇಳಿ ಬೆರಗಾದ ಬಿಗ್ ಬಾಸ್ ತಂಡ

ನಟಿ ರೇಖಾ ವೇದವ್ಯಾಸ್ ಬಿಗ್ ಬಾಸ್ ತೆಲುಗು ಸೀಸನ್ 10ಕ್ಕೆ ಎಂಟ್ರಿ ಕೊಡುತ್ತಿದ್ದಾರೆಂಬ ಸುದ್ದಿ ಹರಿದಾಡುತ್ತಿದ್ದಂತೆ ಅವರ ಸಂಭಾವನೆ ಬಗ್ಗೆನೂ ಚರ್ಚೆಯಾಗುತ್ತಿದೆ. ಬಹಳ ವರ್ಷಗಳ ನಂತರ ಕಮ್ ಬ್ಯಾಕ್ ಮಾಡುತ್ತಿರುವ ರೇಖಾ ಬಿಗ್ ಬಾಸ್ ಮನೆಗೆ ಪ್ರವೇಶಿಸಲು ಭಾರಿ ಮೊತ್ತದ ಸಂಭಾವನೆಯನ್ನು ಡಿಮ್ಯಾಂಡ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇತ್ತ ಬಿಗ್‌ಬಾಸ್ ಆಯೋಜಕರು ಕೂಡ ರೇಖಾ ಕೇಳಿದ ಸಂಭಾವನೆಯನ್ನು ನೀಡುವುದಕ್ಕೆ ನಿರ್ಧಾರಿಸಿದ್ದಾರೆಂದು ತೆಲುಗು ಕಿರುತೆರೆಯಲ್ಲಿ ಸುದ್ದಿಯಾಗಿದೆ.

ರೇಖಾ ಅವರ ಜನಪ್ರಿಯತೆ ಮತ್ತು ಸ್ಟಾರ್ ವ್ಯಾಲ್ಯೂ, ಶೋನ ಟಿಆರ್‌ಪಿಯನ್ನು ಗಮನದಲ್ಲಿ ಇಟ್ಟುಕೊಂಡು ಬಿಗ್ ಬಾಸ್ ನಿರ್ಮಾಪಕರು ಕೂಡ ಕೇಳಿದ ಮೊತ್ತದ ಸಂಭಾವನೆಯನ್ನು ನೀಡಲು ಸಮ್ಮತಿಸಿದ್ದಾರೆಂದು ವರದಿಯಾಗಿವೆ. ಈ ಸೀಸನ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಪರ್ಧಿಗಳಲ್ಲಿ ರೇಖಾ ಕೂಡ ಒಬ್ಬರು ಎನ್ನಲಾಗಿದೆ. 'ಹುಚ್ಚ' ನಟಿ ಬಿಗ್ ಬಾಸ್‌ಗೆ ಎಂಟ್ರಿ ಕೊಡುವುದರಿಂದ ಕನ್ನಡಿಗರು ರಿಯಾಲಿಟಿ ಶೋ ನೋಡಬಹುದು ಎಂಬ ಲೆಕ್ಕಾಚಾರವೂ ಸೇರಿದೆ ಎನ್ನಲಾಗಿದೆ. ಸದ್ಯ ರೇಖಾ ಎಂಟ್ರಿ ಬಗ್ಗೆ ಸುದ್ದಿ ಹರಿದಾಡುತ್ತಿದ್ದು, ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

English summary
Buzz: Huchcha Actress Rekha Vedavyas will enter Bigg Boss Telugu 10 with huge remuneration
Read more about: bigg boss rekha reality show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X