'ಪುಷ್ಪ 2' 2024ರ ಅತೀ ಉದ್ದದ ಸಿನಿಮಾ; ಫಸ್ಟ್ ಹಾಫ್ 1 ಗಂಟೆ 40 ನಿಮಿಷ.. ಸೆಕೆಂಡ್ ಹಾಫ್ ಎಷ್ಟು?

ಐಕಾನ್ ಸ್ಟಾರ್ ಅಲ್ಲು ಅರ್ಜುನ್ 'ಪುಷ್ಪ 2' ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಆಗಲೇ ಟಾಲಿವುಡ್‌ನ ಈ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಒಂದೊಂದೇ ಸುದ್ದಿ ಹೊರಬೀಳುತ್ತಿದೆ. ಈ ಸಿನಿಮಾ ಡಿಸೆಂಬರ್ 5 ರಂದು ಐದು ಪ್ರಮುಖ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಸದ್ಯಕ್ಕೀಗ ಸಿನಿಮಾ ರನ್‌ ಟೈಮ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

ಸುಕುಮಾರ್ ಹಾಗೂ ಅಲ್ಲು ಅರ್ಜುನ್ ಕಾಂಬಿನೇಷನ್‌ನ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯುತ್ತೆ ಅನ್ನೋ ಅನ್ನುವ ನಿರೀಕ್ಷೆಯಲ್ಲಿ ಸಿನಿಮಾ ಮಂದಿ ಇದ್ದಾರೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ 'ಪುಷ್ಪ 2' 2024ರಲ್ಲಿಯೇ ಬಿಡುಗಡೆಯಾಗುತ್ತಿರುವ ಅತೀ ಉದ್ದದ ಸಿನಿಮಾ ಎಂಬ ಸುದ್ದಿ ಹಬ್ಬಿದೆ. ಇದನ್ನೇ ಇಟ್ಟುಕೊಂಡು ಇದು ಭಾರತದ ಅತೀ ಉದ್ದದ ಸಿನಿಮಾಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ.

Buzz is that Allu Arjun Rashmika Mandanna movie Pushpa 2 movie runtime is more than 3 hours

'ಪುಷ್ಪ' ಪಾರ್ಟ್ 1 ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ಹಿಂದಿ ಏರಿಯಾಗಳಲ್ಲಿ ಸಿನಿಮಾದ ಕಲೆಕ್ಷನ್ ತಂಡಕ್ಕೆ ಸರ್ಪ್ರೈಸ್ ಕೊಟ್ಟಿತ್ತು. ಹೀಗಾಗಿ ಪಾರ್ಟ್‌ 2 ಅನ್ನು ಮತ್ತಷ್ಟು ದೊಡ್ಡ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ. ಸಿನಿಮಾ ರನ್‌ ಟೈನ್ ಬಾಕ್ಸಾಫೀಸ್ ವೇಗಕ್ಕೆ ಮಾರಕ ಆಗಬಹುದಾ ಎಂಬ ಪ್ರಶ್ನೆ ಸಿನಿಮಾತಂಡವನ್ನು ಕಾಡುತ್ತಿದೆ. ಅಷ್ಟಕ್ಕೂ 'ಪುಷ್ಪ 2' ರನ್‌ ಟೈಮ್ ಎಷ್ಟು? ಫಸ್ಟ್ ಹಾಫ್ ಎಷ್ಟಿದೆ? ಸೆಕೆಂಡ್ ಹಾಫ್ ಎಷ್ಟಿದೆ?

ಹೌದು, 'ಪುಷ್ಪ 2' ರನ್‌ ಟೈಮ್ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಬಾಕ್ಸಾಫೀಸ್ ದಾಖಲೆ ಮೇಲೆ ಕಣ್ಣಿಟ್ಟಿದೆ. ಆದ್ರೀಗ 'ಪುಷ್ಪ 2' ಸಿನಿಮಾ ಸುಮಾರು 3 ಗಂಟೆ 21 ನಿಮಿಷ ಉದ್ದವಿದೆ ಎಂಬ ಸುದ್ದಿ ಹಬ್ಬಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲೂ ಚರ್ಚೆ ಶುರುವಾಗಿದೆ.

Buzz is that Allu Arjun Rashmika Mandanna movie Pushpa 2 movie runtime is more than 3 hours

ಅಲ್ಲು ಅರ್ಜುನ್ ಹಾಗೂ ಸುಕುಮಾರನ್ ಲೆಕ್ಕಾಚಾರ ತಪ್ಪಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಈ ಸಿನಿಮಾದ ಫಸ್ಟ್ ಹಾಫ್ 1 ಗಂಟೆ 40 ಇದ್ದು, ಸೆಕೆಂಡ್ ಹಾಪ್ 1 ಗಂಟೆ 41 ನಿಮಿಷಗಳು ಇದೆಯೆಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಹೀಗಾಗಿ ಪ್ರೇಕ್ಷಕರು ಥಿಯೇಟರ್‌ನಲ್ಲಿ ಹೆಚ್ಚು ಕಡಿಮೆ ಮೂರುವರೆ ಗಂಟೆಗಳ ಕಾಲ ಇರಬೇಕಾಗುತ್ತೆ. ಸ್ವಲ್ಪ ಯಾಮಾರಿದ್ದರೂ ಸಿನಿಮಾ ಸಕ್ಸಸ್‌ಗೆ ದೊಡ್ಡ ಏಟು ಬೀಳುವ ಸಾಧ್ಯತೆಯಿದೆ.

ಜನರು ಈಗ ಥಿಯೇಟರ್‌ಗೆ ಬಂದು ಸಿನಿಮಾ ನೋಡುವುದನ್ನು ಕಡಿಮೆ ಮಾಡಿದ್ದಾರೆ. ಹೀಗಾಗಿ ಫಿಲ್ಮ್ ಮೇಕರ್ಸ್ ಸಿನಿಮಾದ ವೇಗವನ್ನು ಕಡಿಮೆ ಮಾಡುತ್ತಿದ್ದಾರೆ. ಒಂದೇ ಕಡೆ ಮೂರುವರೆ ಗಂಟೆ ಕೂತು ಜನರು ಸಿನಿಮಾ ನೋಡುವುದಕ್ಕೆ ಇಷ್ಟ ಪಡುವುದಿಲ್ಲ. ಸಾಮಾನ್ಯವಾಗಿ ಎರಡೂವರೆ ಗಂಟೆಗಳಲ್ಲಿ ಒಂದು ಸಿನಿಮಾ ಮುಗಿದು ಹೋಗುತ್ತೆ. ಇದು ಫಿಲ್ಮ್ಸ್ ಮೇಕರ್ಸ್ ಇಟ್ಟುಕೊಂಡಿರುವ ಸ್ಟ್ಯಾಂಡರ್ಡ್ ಟೈಮಿಂಗ್. ಆದರೆ, ಅದಕ್ಕಿಂತ ಒಂದು ಗಂಟೆ ಹೆಚ್ಚು ಉದ್ದವಿರುವುದರಿಂದ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತೆ? ಅನ್ನುವ ಕುತೂಹಲವಿದೆ.

'ಪುಷ್ಪ 2' ರನ್ ಟೈಮ್ ಬಗ್ಗೆ ಚಿತ್ರತಂಡ ಅಧಿಕೃತ ಹೇಳಿಕೆ ಕೊಟ್ಟಿಲ್ಲ. ಕನ್ನಡದಲ್ಲೂ ಈ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಇನ್ನೆರಡು ದಿನಗಳಲ್ಲಿ ಸೆನ್ಸಾರ್ ಆಗಲಿದೆ. ಆಗ ಸಿನಿಮಾ ರನ್‌ ಟೈಮ್ ಬಗ್ಗೆ ಖಚಿತ ಮಾಹಿತಿ ಸಿಗಬಹುದು. ಇನ್ನೊಂದು ಕಡೆ ಹೆಚ್ಚು ಶೋಗಳನ್ನು ಹಾಕುವುದಕ್ಕೆ ಆಗುವುದಿಲ್ಲ ಎಂದು ವಿತರಕರಲ್ಲಿ ಟೆನ್ಷನ್ ಶುರುವಾಗಿದೆ. ಸಿನಿಮಾ ಬಿಡುಗಡೆಗೂ ಮುನ್ನ ಒಂದು ವೇಳೆ ರನ್‌ ಟೈಮ್ ಮೂರುವರೆ ಗಂಟೆನೇ ಇದ್ದಿದ್ದೇ ಆದರೆ, ಸುಕುಮಾರ್ ಕತ್ತರಿ ಹಾಕುತ್ತಾರಾ? ಅನ್ನೋದನ್ನು ನೋಡಬೇಕಿದೆ.

More from Filmibeat

English summary
Buzz is that Allu Arjun, Rashmika Mandanna movie Pushpa 2 movie runtime is more than 3 hours;
Read more about: allu arjun pushpa filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X