Salaar Teaser: 'KGF' ಪ್ರಶಾಂತ್ ನೀಲ್ ಬತ್ತಳಿಕೆಯಲ್ಲಿದ್ದ ಸಣ್ಣ ಕಥೆ.. ಹಾಗದ್ರೆ 'ಸಲಾರ್'?
'ಸಲಾರ್' ಟೀಸರ್ ರಿಲೀಸ್ ಬಗ್ಗೆ ಅನೌನ್ಸ್ ಮಾಡಿದ್ದೇ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಹಾವಳಿ ತಡೆಯೋಕೆ ಆಗುತ್ತಿಲ್ಲ. ಒಬ್ಬೊಬ್ಬರು ಒಂದೊಂದು ಕಥೆಯನ್ನು ಹುಟ್ಟಾಕಿದ್ದಾರೆ. ಕ್ಷಣ ಕ್ಷಣಕ್ಕೂ ಒಂದೊಂದು ಸ್ಟೋರಿ ಹುಟ್ಟಿಕೊಳ್ಳುತ್ತಿದೆ.
ಕೆಲವು ದಿನಗಳಿಂದ 'ಸಲಾರ್' ಸಿನಿಮಾಗೂ 'ಕೆಜಿಎಫ್ 2' ಕಥೆ ಮಾಡಿದ್ದರು. ಅದೂ ಕೂಡ ವೈರಲ್ ಆಗಿದೆ. ಪ್ರಶಾಂತ್ ನೀಲ್‌ಗೆ ಪುಕ್ಕಟೆಯಾಗಿ ನೆಟ್ಟಿಗರೇ ಸ್ಟೋರಿ ಐಡಿಯಾಗಳನ್ನು ಕೊಡುತ್ತಿರೋ ಹಾಗಿದೆ. ಆದರೆ, 'ಸಲಾರ್' ಅದೆಷ್ಟೇ ಸದ್ದು ಮಾಡುತ್ತಿದ್ದರೂ ಅಲ್ಲಿ 'ಕೆಜಿಎಫ್' ಸಿನಿಮಾವನ್ನು ಎಳೆದು ತರುತ್ತಿದ್ದಾರೆ.

'ಕೆಜಿಎಫ್ 2' ಕಳೆದ ವರ್ಷ ಬಾಕ್ಸಾಫೀಸ್‌ನಲ್ಲಿ ಅತೀ ಹೆಚ್ಚು ಕಳೆದ ಕಂಡ ಸಿನಿಮಾ. ಈಗ ಇದೇ 'ಕೆಜಿಎಫ್' ನಿರ್ದೇಶಕ ಹಾಗೂ ನಿರ್ಮಾಣ ಸಂಸ್ಥೆ ಒಟ್ಟಿಗೆ ಸೇರಿ 'ಸಲಾರ್' ಮಾಡಿದ್ದಾರೆ. ಆದರೆ, ಯಶ್ ಬದಲು ಪ್ರಭಾಸ್ ಲೀಡ್ ರೋಲ್‌ನಲ್ಲಿದ್ದಾರೆ. ಸಿನಿಮಾದ ಟೀಸರ್ ರಿಲೀಸ್ ಆಗುತ್ತಿರುವ ಬೆನ್ನಲ್ಲೇ ಪ್ರಶಾಂತ್ ನೀಲ್ ಕಥೆ ಬಗ್ಗೆ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಸೋಶಿಯಲ್ ಮೀಡಿಯಾದಲ್ಲಿ ಏನಾಗುತ್ತಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
'KGF' ದೊಡ್ಡ ಸಿನಿಮಾ 'ಸಲಾರ್'?
ಪ್ರಶಾಂತ್ ನೀಲ್ ಹಾಗೂ ಯಶ್ ಕಾಂಬಿನೇಷನ್‌ನಲ್ಲಿ ಬಂದ 'KGF' ಸಿನಿಮಾ ಕನ್ನಡದ ಮಟ್ಟಿಗೆ ಬಿಗ್ ಬಜೆಟ್ ಸಿನಿಮಾ. ಇಷ್ಟೊಂದು ಹಣವನ್ನು ಯಾರೂ ಸುರಿದು ಸಿನಿಮಾ ಮಾಡುವ ಗೋಜಿಗೆ ಹೋಗಿರಲಿಲ್ಲ. ಖರ್ಚು ಮಾಡಿದ್ದಕ್ಕೆ ತಕ್ಕಂತೆ 5 ಪಟ್ಟು ಹೆಚ್ಚು ಕಲೆಕ್ಷನ್ ಮಾಡಿ ಬೆರಗಾಗಿಸಿತ್ತು. ಆದ್ರೀಗ 'ಸಲಾರ್' ದಾಖಲೆ ಬರೆದ 'KGF' ಸಿನಿಮಾಗಿಂತ ದೊಡ್ಡದು ಅಂತ ಚರ್ಚೆಯಾಗಿತ್ತಿದೆ.

ಹೌದು, 'KGF' ಸುಮಾರು 100 ರಿಂದ 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗಿತ್ತು. ಆದರೆ, 'ಸಲಾರ್' ಬಜೆಟ್ 200 ಕೋಟಿ ರೂ. ದಾಟಿದೆ ಎಂದು ಅಂದಾಜಿಸಲಾಗಿದೆ. 'KGF' ಪ್ರಭಾಸ್ ಹಾಗೂ ಸಂಜಯ್ ದತ್ ಪ್ರಮುಖ ಆಕರ್ಷಣೆಯಾಗಿದ್ದರೆ, ಸಲಾರ್‌ನಲ್ಲಿ ಪ್ರಭಾಸ್ ಹಾಗೂ ಪ್ರಥ್ವಿರಾಜ್ ಸುಕುಮಾರನ್ ಹೈಲೈಟ್. ಇವರೊಂದಿಗೆ ಶ್ರುತಿ ಹಾಸನ್, ಜಗಪತಿ ಬಾಬು ಅಂತ ದಿಗ್ಗಜರೇ ಇದ್ದಾರೆ. ಹೀಗಾಗಿ 'KGF'ಗಿಂತ ಸಲಾರ್ ದೊಡ್ಡ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ.
ಪ್ರಶಾಂತ್ ನೀಲ್ ಬಳಿಯಿದ್ದ ಸಣ್ಣ ಕಥೆ 'KGF'
'ಸಲಾರ್' ಟೀಸರ್ ರಿಲೀಸ್ ಆಗುತ್ತಿರುವ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ಚರ್ಚೆ ಆರಂಭ ಆಗಿದೆ. ಇದೂವರೆಗೂ 'KGF' ದೊಡ್ಡದಾಗಿ ಕಂಡಿತ್ತು. ಆದರೆ, 'ಸಲಾರ್' ಮುಂದೆ 'KGF' ಏನಿಲ್ಲ ಎಂದು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.
'KGF' ನೋಡಿ ಜನರು ಎಂಜಾಯ್ ಮಾಡಿದ್ದರು. ಇಡೀ ದೇಶವೇ ಸೆಲೆಬ್ರೆಟ್ ಮಾಡಿತ್ತು. ಇದು ಪ್ರಶಾಂತ್ ನೀಲ್ ನಿರೂಪಣೆ ಮಾಡಿದ ಅತ್ಯಂತ ಸಣ್ಣ ಕಥೆ ಎಂದು ಚರ್ಚೆಯಾಗುತ್ತಿದೆ ಎಂದು ದಕ್ಷಿಣ ಭಾರತದ ಫಿಲ್ಮ್ ಕ್ರಿಟಿಕ್ ಮನೋಬಲ ವಿಜಯಬಾಲನ್ ಟ್ವೀಟ್ ಮಾಡಿದ್ದಾರೆ. ಈ ಮೂಲಕ 'KGF'ಗಿಂತ 'ಸಲಾರ್' ಪ್ರಪಂಚ ಮತ್ತಷ್ಟು ದೊಡ್ಡದು ಎಂದು ವಾದ ಮಾಡುತ್ತಿದ್ದಾರೆ.
ಪ್ರಭಾಸ್‌ಗೂ ಈ ಪ್ರಚಾರ ಬೇಕಿತ್ತು
'ಆದಿಪುರುಷ್' ಸಿನಿಮಾ ವಿವಾದಕ್ಕೆ ಸಿಕ್ಕಿಕೊಂಡು ಸೋಲುಂಡ ಬಳಿಕ ಪ್ರಭಾಸ್‌ಗೆ ಇಂತಹದ್ದೊಂದು ಹೈಪ್ ಬೇಕಿತ್ತು. ಅದಕ್ಕೆ ಪ್ರಶಾಂತ್ ನೀಲ್ 'ಸಲಾರ್' ವೇದಿಕೆ ಮಾಡಿಕೊಡುತ್ತಿದೆ. ಒಂದು ವೇಳೆ ಸಿನಿಮಾವೂ ಸೋತರೆ, ಮತ್ತೊಂದು ಬಿಗ್ ಬಜೆಟ್ ಸಿನಿಮಾ 'ಪ್ರಾಜೆಕ್ಟ್ ಕೆ' ಮೇಲೆ ನೇರೆ ಪರಿಣಾಮ ಬೀರಬಹುದು.
ಪ್ರಶಾಂತ್ ನೀಲ್ 'KGF' ಅಂತಹ ಮೆಗಾ ಹಿಟ್ ಕೊಟ್ಟಿದ್ದರಿಂದ 'ಸಲಾರ್' ಮೇಲೆ ನಂಬಿಕೆ ಉಳಿದುಕೊಂಡಿದೆ. ಪ್ರಭಾಸ್ ನಟಿಸಿದ ಕಳೆದ ಮೂರು ಸಿನಿಮಾಗಳೂ ನೆಲಕ್ಕಚ್ಚಿದ್ದರಿಂದ 'ಸಲಾರ್' ಮೇಲೆ ಅಭಿಮಾನಿಗಳು ನಂಬಿಕೆ ಇಟ್ಟು ಕೂತಿದ್ದಾರೆ. ಆದರೆ, 'KGF'ಗಿಂತ 'ಸಲಾರ್' ದೊಡ್ಡ ಸಿನಿಮಾ ಅಂತ ಟೀಸರ್ ಸಾಬೀತು ಮಾಡುತ್ತಾ? ಅನ್ನೋದೇ ಅತೀ ದೊಡ್ಡ ಕುತೂಹಲ.


Click it and Unblock the Notifications











