Niharika Konidela: ವಿವಾಹವಾಗಿ ಮೂರು ವರ್ಷದೊಳಗೆ ಚೈತನ್ಯರಿಂದ ವಿಚ್ಛೇದನ ಪಡೆದ ನಿಹಾರಿಕಾ ಕೊನಿಡೆಲಾ?
ಸಿನಿಮಾರಂಗದಲ್ಲಿ ಇತ್ತೀಚೆಗೆ ವಿಚ್ಛೇದನ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಆರಂಭದಲ್ಲಿ ಬಾಲಿವುಡ್‌ನಲ್ಲಿ ಇಂತಹ ಸುದ್ದಿಗಳು ಹೆಚ್ಚಾಗಿ ಓಡಾಡುತ್ತಿದ್ದವು. ಆದ್ರೀಗ ದಕ್ಷಿಣ ಭಾರತದ ಚಿತ್ರರಂಗದಲ್ಲೂ ಡಿವೋರ್ಸ್ ಅನ್ನೋದು ಕಾಮನ್ ಆಗಿಬಿಟ್ಟಿದೆ.
ತೆಲುಗು ಚಿತ್ರರಂಗದಲ್ಲಿ ಮೆಗಾ ಕುಟುಂಬಕ್ಕೆ ಅದರದ್ದೇ ಆದ ಗೌರವವಿದೆ. ಮೆಗಾಸ್ಟಾರ್ ಚಿರಂಜೀವಿ, ಸಹೋದರ ನಾಗೇಂದ್ರ ಬಾಬು ಮೇಲೆ ಎಲ್ಲಿಲ್ಲದ ಗೌರವ. ಇವರ ಮಕ್ಕಳೂ ಕೂಡ ಚಿತ್ರರಂಗದಲ್ಲಿ ತಮ್ಮದೇ ಆದ ಹೆಸರನ್ನು ಗಳಿಸಿದ್ದಾರೆ. ಎಲ್ಲವೂ ಅದ್ಭುತ ಎನ್ನುವಾಗಲೇ ಚಿರಂಜೀವಿ ಸಹೋದರನ ಪುತ್ರಿ ನಿಹಾರಿಕಾ ಕೊನಿಡೆಲಾ ವಿಚ್ಛೇದನದ ಸುದ್ದಿ ಹೊರಬಿದ್ದಿದೆ.

ಕಳೆದ ಕೆಲವು ದಿನಗಳಿಂದ ನಿಹಾರಿಕಾ ಕೊನಿಡೆಲಾ ವಿಚ್ಛೇದನ ಸುದ್ದಿ ಓಡಾಡುತ್ತಲೇ ಇತ್ತು. ಆದರೆ, ಈ ಬಗ್ಗೆ ಮೆಗಾ ಕುಟುಂಬ ಆಗಲಿ, ಇಲ್ಲ ಸ್ವತ: ನಿಹಾರಿಕಾ ಆಗಲಿ ಅಧಿಕೃತವಾಗಿ ಎಲ್ಲೂ ಹೇಳಿಕೆಯನ್ನು ಕೊಟ್ಟಿರಲಿಲ್ಲ. ಈಗ ನಿಹಾರಿಕಾ ಡಿವೋರ್ಸ್ ಪಡೆದಿರೋದು ಅಧಿಕೃತ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.
ನಿಹಾರಿಕಾ ಡಿವೋರ್ಸ್ ಅಧಿಕೃತ?
ಮೆಗಾ ಕುಟುಂಬದ ಕುಡಿ ನಿಹಾರಿಕಾ ಕೊನಿಡೆಲಾ ಚಿತ್ರರಂಗದಲ್ಲಿ ತನ್ನದೇ ಹೆಸರು ಸಂಪಾದಿಸಿದ್ದಾರೆ. ನಿರ್ಮಾಪಕಿಯಾಗಿ, ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಅದರಲ್ಲೂ ಓಟಿಟಿ ಫ್ಲಾಟ್‌ಫಾರ್ಮ್‌ಗಳಿಗೆ ಸಿನಿಮಾ, ವೆಬ್ ಸೀರಿಸ್ ಮಾಡುವುದರಲ್ಲಿ ನಿರತರಾಗಿದ್ದಾರೆ. ವೃತ್ತಿ ಬದುಕಿನಲ್ಲಿ ನಿಹಾರಿಕಾ ಸಕ್ಸಸ್‌ಫುಲ್ ಆಗಿದ್ದಾರೆ.

ಆದರೆ, ವೈಯಕ್ತಿಕ ಬದುಕಿನಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಕೇವಲ ಎರಡೂವರೆ ವರ್ಷಗಳ ಹಿಂದಷ್ಟೇ ಚೈತನ್ಯ ಜೊನ್ನಲಗಡ್ಡ ಜೊತೆ ವಿವಾಹವಾಗಿದ್ದರು. ಆದ್ರೀಗ ದಾಂಪತ್ಯ ಬದುಕಿಗೆ ಅಂತ್ಯ ಹಾಡಿದ್ದಾರೆ. ಇದು ಮೆಗಾ ಅಭಿಮಾನಿಗಳಿಗೆ ಬೇಸರ ತರಿಸಿದೆ.
3 ವರ್ಷ ತುಂಬುವುದರೊಳಗೆ ಡಿವೋರ್ಸ್
ಚಿರಂಜೀವಿ ಸಹೋದರ ನಾಗೇಂದ್ರ ಬಾಬು 2020 ಡಿಸೆಂಬರ್ 9ರಂದು ತಮ್ಮ ಪುತ್ರಿಗೆ ನಿಹಾರಿಕಾಗೆ ವಿವಾಹ ಮಾಡಿದ್ದರು. ಚೈತನ್ಯ ಜೊನ್ನಲಗಡ್ಡ ಜೊತೆ ನಿಹಾರಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ಇತ್ತೀಚೆಗೆ ಇಬ್ಬರ ನಡುವೆ ವೈಮನಸ್ಸು ಮೂಡಿತ್ತು. ಹೀಗಾಗಿ ಇಬ್ಬರೂ ಪ್ರತ್ಯೇಕವಾಗಿ ವಾಸವಿದ್ದರು ಎಂದು ಹೇಳಲಾಗುತ್ತಿದೆ.
ಇಷ್ಟು ಗಾಳಿಸುದ್ದಿಯಾಗಿಯೇ ಓಡಾಡುತ್ತಿದ್ದ ಈ ಸುದ್ದಿ, ಅಧಿಕೃತ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಇದು ಟಾಲಿವುಡ್ ಮಂದಿಗೆ ಹಾಗೂ ಮೆಗಾ ಕುಟುಂಬದ ಅಭಿಮಾನಿಗಳಿಗೆ ಬೇಸರದಲ್ಲಿ ಮುಳುಗುವಂತೆ ಮಾಡಿದೆ.
ಒಂದರ ಮೇಲೊಂದು ವಿಚ್ಛೇದನ ಪ್ರಕರಣ
ನಿಹಾರಿಕಾ ಕೊನಿಡೆಲಾ ಹಾಗೂ ಚೈತನ್ಯಗೂ ಮುನ್ನ ಹಲವು ಸೆಲೆಬ್ರೆಟಿಗಳು ವಿಚ್ಛೇದನಕ್ಕೆ ಮುಂದಾಗಿದ್ದರು. ಇತ್ತೀಚೆಗೆ ರಜನಿಕಾಂತ್ ಪುತ್ರಿ ಐಶ್ವರ್ಯಾ ನಟ ಧನುಷ್‌ರಿಂದ ಬೇರೆಯಾಗಿದ್ದರು. ಈ ವಿಷಯ ಕೂಡ ಸೂಪರ್‌ಸ್ಟಾರ್ ಹಾಗೂ ಧನುಷ್ ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು.
ಸಮಂತಾ ಹಾಗೂ ನಾಗಚೈತನ್ಯ, ಆಮಿರ್ ಖಾನ್ ಹಾಗೂ ಕಿರಣ್ ರಾವ್ ಸೇರಿದಂತೆ ಹಲವು ಮಂದಿ ಸೆಲೆಬ್ರೆಟಿಗಳು ದಾಂಪತ್ಯ ಜೀವನದಿಂದ ದೂರ ಉಳಿಯುತ್ತಿದ್ದಾರೆ. ಈ ಆ ಸಾಲಿಗೆ ನಿಹಾರಿಕಾ ಸೇರಿದ್ದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.


Click it and Unblock the Notifications











