ಮೆಗಾ ಕುಟುಂಬದಲ್ಲಿ ಮದುವೆಯ ಸದ್ದು: ಲಾವಣ್ಯ ತ್ರಿಪಾಠಿ ಜೊತೆ ವರುಣ್ ತೇಜ್ ನಿಶ್ಚಿತಾರ್ಥ.. ಗಾಳಿ ಸುದ್ದಿಗೆ ಬಿತ್ತಾ ಬ್ರೇಕ್?
ಮೆಗಾ ಕುಟುಂಬ ಮತ್ತೊಮ್ಮೆ ಒಟ್ಟಾಗುತ್ತಿದ್ದಾರೆ. ವರುಣ್ ತೇಜ್ ಹೊಸ ಜರ್ನಿಯನ್ನು ಸೆಲೆಬ್ರೆಟ್ ಮಾಡುವುದಕ್ಕೆ ಅವರೆಲ್ಲರೂ ಒಂದಾಗುತ್ತಿದ್ದಾರೆ. ಕೆಲವು ದಿನಗಳಿಂದ ಟಾಲಿವುಡ್‌ನಲ್ಲಿ ಕೆಲವು ದಿನಗಳಿಂದ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಇಬ್ಬರೂ ಡೇಟಿಂಗ್ ಮ್ಯಾಟರ್ ಹರಿದಾಡುತ್ತಿತ್ತು. ಆದರೆ, ಇಲ್ಲಿವರೆಗೂ ಅದು ಕೇವಲ ಗಾಳಿ ಸುದ್ದಿ ಅಂತಲೇ ಹೇಳಲಾಗುತ್ತಿತ್ತು.
ಹೌದು, ಮೆಗಾ ಕುಟುಂಬದ ಹೀರೊ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿರೋ ಬಗ್ಗೆ ವದಂತಿ ಇತ್ತು. ಇಬ್ಬರು ಮದುವೆನೂ ಆಗುತ್ತಾರೆ ಎನ್ನುವ ಸುದ್ದಿನೂ ಇತ್ತು. ಆದರೆ, ಮೆಗಾ ಕುಟುಂಬ ಆಗಲಿ, ಈ ಜೋಡಿಯಾಗಲಿ ತುಟಿಬಿಟ್ಟಿರಲಿಲ್ಲ.

ಕೊನೆಗೂ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಡುವ ಸಮಯ ಬಂದಿದೆ ಎನ್ನಲಾಗುತ್ತಿದೆ. ಬಾಲಿವುಡ್ ಸುದ್ದಿಗಳನ್ನು ಬಿತ್ತರಿಸುವ ಪಿಂಕ್‌ವಿಲ್ಲಾ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ನಿಶ್ವಿತಾರ್ಥದ ಬಗ್ಗೆ ಸುದ್ದಿ ಹಬ್ಬಿದೆ. ಅಷ್ಟಕ್ಕೂ ವರದಿ ಬಿತ್ತರವಾಗುತ್ತಿದ್ದಂತೆ ಟಾಲಿವುಡ್‌ನಲ್ಲಿ ಸಂಭ್ರಮ ಮನೆ ಮಾಡಿದೆ.
ಲಾವಣ್ಯ ತ್ರಿಪಾಠಿ- ವರುಣ್ ತೇಜ್ ನಿಶ್ವಿತಾರ್ಥ
ಮೆಗಾ ಕುಟುಂಬದ ಹೀರೊ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಡೇಟಿಂಗ್ ಮ್ಯಾಟರ್ ಕೆಲವು ತಿಂಗಳ ಹಿಂದೆನೇ ಲೀಕ್ ಆಗಿತ್ತು. ಇಬ್ಬರೂ ಪ್ರೀತಿಯಲ್ಲಿ ಬಿದ್ದಾರೆಂಬ ಸುದ್ದಿಯನ್ನು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ವರುಣ್ ತೇಜ್ ಹಾಗೂ ಲಾವಣ್ಯ ಮಾತ್ರ ತಮ್ಮ ವಿಷಯವನ್ನು ಖಾಸಗಿಯಾಗಿಯೇ ಇಟ್ಟಿದ್ದರು.
ಕೊನೆಗೂ ಈ ಜೋಡಿ ತಮ್ಮ ಸಂಬಂಧವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವುದಕ್ಕೆ ನಿರ್ಧರಿಸಿದ್ದಾರೆ. ಇದೇ ಜೂನ್ 9ರಂದು ಮೆಗಾ ಕುಟುಂಬದ ಸಮ್ಮುಖದಲ್ಲಿ ಲಾವಣ್ಯ ತ್ರಿಪಾಠಿ ಹಾಗೂ ವರುಣ್ ತೇಜ್ ನಿಶ್ವಿತಾರ್ಥ ಮಾಡಿಕೊಳ್ಳುತ್ತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಈಗಾಗಲೇ ಈ ಜೋಡಿ ಎಂಗೇಜ್‌ಮೆಂಟ್‌ಗೆ ಬೇಕಾಗಿರೋ ವಸ್ತ್ರಗಳನ್ನು ಪ್ರಸಿದ್ಧ ವಿನ್ಯಾಸಗಾರರಿಂದ ವಿನ್ಯಾಸಗೊಳಿಸಿದ್ದಾರೆ ಎನ್ನಲಾಗಿದೆ.

ನಿಹಾರಿಕಾ ಮದುವೆ ಒಟ್ಟಿಗೆ ಸೇರುತ್ತಿದೆ ಮೆಗಾ ಫ್ಯಾಮಿಲಿ
ಈ ನಿಶ್ವಿತಾರ್ಥ ಸಮಾರಂಭ ಮೆಗಾ ಕುಟುಂಬಕ್ಕೆ ತುಂಬಾನೇ ಮುಖ್ಯ ಎನ್ನಲಾಗುತ್ತಿದೆ. ಇಡೀ ಮೆಗಾ ಕುಟುಂಬ ಈ ನಿಶ್ವಿತಾರ್ಥ ಸಮಾರಂಭದಲ್ಲಿ ಭಾಗಿಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ನಿಹಾರಿಕಾ ಮದುವೆ ಬಳಿಕ ಮೆಗಾ ಕುಟುಂಬ ಮತ್ತೆ ಒಟ್ಟಿಗೆ ಸೇರುತ್ತಿದ್ದು, ಕಾರ್ಯಕ್ರಮ ಅದ್ಧೂರಿಯಾಗಿರುತ್ತೆ ಎನ್ನಲಾಗಿದೆ.
ವರುಣ್ ಮತ್ತು ಲಾವಣ್ಯ ಡೇಟಿಂಗ್ ಮ್ಯಾಟರ್ ಕಳೆದ ಒಂದು ವರ್ಷದಿಂದ ಹಾಟ್ ಟಾಪಿಕ್ ಆಗಿತ್ತು. ಇನ್ನೇನು ಇಬ್ಬರು ಮದುವೆ ಆಗೇ ಬಿಡುತ್ತಾರೆ ಅಂತಾನೂ ಸುದ್ದಿ ಹಬ್ಬಿತ್ತು. ಆದರೆ, ಈ ಸುದ್ದಿಯನ್ನು ನಿರಾಕರಿಸುತ್ತಲೇ ಬಂದಿದ್ದರು. ಈಗ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದು, ಇಡೀ ಮೆಗಾ ಕುಟುಂಬ ಸೇರುತ್ತಿದೆ.
ಇಬ್ಬರ ಕೆರಿಯರ್ ಅಷ್ಟಕ್ಕಷ್ಟೇ
ವರಣ್ ತೇಜ್, ಲಾವಣ್ಯ ತ್ರಿಪಾಠಿ ನಿಶ್ವಿತಾರ್ಥಕ್ಕೆ ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ತೇಜ, ಉಪಾಸನಾ, ಸಾಯಿ ಧರಂ ತೇಜ್, ಅಲ್ಲು ಶಿರಿಶ್ ಸೇರಿದಂತೆ ಅಲ್ಲು ಅರ್ಜುನ್ ಭಾಗವಹಿಸುವ ಸಾಧ್ಯತೆಯಿದೆ. ಹಾಗೇ ಆತ್ಮೀಯರು ಹಾಗೂ ಕುಟುಂಬಸ್ಥರಿಗೆ ಮಾತ್ರ ಆಹ್ವಾನ ನೀಡಲಾಗಿದೆ.
ಇನನ್ನು ಲಾವಣ್ಯ-ವರುಣ್ ಜೊತೆಯಾಗಿ 'ಮಿಸ್ಟರ್' ಸಿನಿಮಾ ಮಾಡಿದ್ದರು. ವರುಣ್ ತೇಜ್‌ಗೆ ಕೆಲವು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆದ್ದಿವೆ. ಆದರೆ, ಬ್ಲಾಕ್ ಬಸ್ಟರ್ ಲಿಸ್ಟ್ ಸೇರಿಲ್ಲ. ಇತ್ತ ಲಾವಣ್ಯ ತ್ರಿಪಾಠಿ ಕೂಡ ಗಟ್ಟಿಯಾಗಿ ನೆಲೆಯೂರುವುದಕ್ಕೆ ಸಾಧ್ಯವಾಗಿಲ್ಲ. ಸಿನಿಮಾ ಅಲ್ಲದೆ ವೆಬ್ ಸೀರಿಸ್‌ಗಳಲ್ಲಿ ನಟಿಸಿದ್ದರೂ, ಅವು ಕೂಡ ಸೋಲುಂಡಿವೆ. ಸದ್ಯಕ್ಕೀಗ ಲಾವಣ್ಯ ತ್ರಿಪಾಠಿ ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ.


Click it and Unblock the Notifications











