'ಆದಿಪುರುಷ್' ಫಿನಿಶ್..'ಸಲಾರ್' ಪ್ರೀ ರಿಲೀಸ್ ಬ್ಯುಸಿನೆಸ್ ಮೇಲೆ ಕಣ್ಣು:'RRR'ಗೂ ಅಧಿಕ ಮೊತ್ತಕ್ಕೆ ಸೇಲ್?

ಪ್ರಭಾಸ್ ನಸೀಬು ಯಾಕೋ ಈಗ ಸರಿಯಾಗಿಲ್ಲ. 'ಬಾಹುಬಲಿ' ಬಳಿಕ ಒಂದೇ ಒಂದು ಸಿನಿಮಾವೂ ಬಾಕ್ಸಾಫೀಸ್‌ನಲ್ಲಿ ಕಚ್ಚಿಕೊಂಡಿಲ್ಲ. ಯಂಗ್ ರೆಬೆಲ್ ಸ್ಟಾರ್ ಮೂರು ಬ್ಯಾಕ್ ಟು ಬ್ಯಾಕ್ ಫ್ಲಾಪ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಅದರಲ್ಲಿ ಬಹು ಕೋಟಿ ವೆಚ್ಚದ 'ಆದಿಪುರುಷ್' ಕೂಡ ಒಂದು.

'ಆದಿಪುರುಷ್' ಪ್ರಭಾಸ್ ನಟನೆಯ ಮೊದಲ ಪೌರಾಣಿಕ ಸಿನಿಮಾ ಆಗಿತ್ತು. ಶ್ರೀರಾಮನ ಅವತಾರದಲ್ಲಿ ಪ್ರಭಾಸ್ ಕಂಡಿದ್ದರೂ ಸಿನಿಪ್ರಿಯರು ಇಡೀ ಸಿನಿಮಾದ ವಿರುದ್ಧವೇ ತಿರುಗಿಬಿದ್ದಿದ್ದರು. ಇಲ್ಲಿಂದ ಪ್ರಭಾಸ್‌ಗೆ ಡಿಮ್ಯಾಂಡ್ ಕಡಿಮೆ ಆಗುತ್ತೆ ಅನ್ನೋ ಲೆಕ್ಕಾಚಾರ ಶುರುವಾಗಿತ್ತು. ಇನ್ನು ಸಿನಿಮಾ ಕೊಂಡುಕೊಳ್ಳುವವರು ಹಿಂದೆ ಮುಂದೆ ನೋಡುತ್ತಾರೆ ಅನ್ನೋ ಮಾತು ಹೇಳಿಬಂದಿತ್ತು.

Salaar- Pre- Release- Business

ಆದರೆ, ತೆಲುಗು ಚಿತ್ರರಂಗದಲ್ಲಿ ಈ ಲೆಕ್ಕಾಚಾರಕ್ಕೆ ತದ್ವಿರುದ್ಧವಾದ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ 'ಸಲಾರ್' ದಾಖಲೆ ಮೊತ್ತಕ್ಕೆ ಮಾತುಕತೆ ನಡೆದಿದೆ ಅನ್ನೋ ಮಾತು ಕೇಳಿ ಬರುತ್ತಿವೆ. ತೆಲುಗು ಚಿತ್ರರಂಗದಲ್ಲಿ ಹರಿದಾಡುತ್ತಿರುವ ಸುದ್ದಿ ಪ್ರಕಾರ, RRR ದಾಖಲೆಯನ್ನೇ ಮೀರಿಸಿ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡಿದೆ. ಅಷ್ಟಕ್ಕೂ 'ಸಲಾರ್' ಬ್ಯುಸಿನೆಸ್ ಎಷ್ಟು?

'ಸಲಾರ್' ಮೇಲೆ ಯಾಕಿಷ್ಟು ಕ್ರೇಜ್?

ತೆಲುಗು ಚಿತ್ರರಂಗದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ 'ಸಲಾರ್' ಕೂಡ ಒಂದು. 'ಕೆಜಿಎಫ್ 2' ಬಳಿಕ ಪ್ರಶಾಂತ್ ನೀಲ್ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಲ್ಲದೆ ಮೆಗಾ ಹಿಟ್‌ಗಳನ್ನು ಕೊಟ್ಟಿರೋ ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.

Salaar- Pre- Release- Business

'ಆದಿಪುರುಷ್' ಸಿನಿಮಾ ಬೇರೆ ಹೀನಾಯವಾಗಿ ಸೋತಿದೆ. ಹೀಗಾಗಿ 'ಸಲಾರ್' ಸಿನಿಮಾ ಮೇಲೆ ಟಾಲಿವುಡ್ ಹಾಗೂ ಪ್ರಭಾಸ್ ಅಭಿಮಾನಿಗಳು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅಲ್ಲದೆ 'ಕೆಜಿಎಫ್ 2' ಅಂತಹ ಮೆಗಾ ಹಿಟ್ ಕೊಟ್ಟ ನಿರ್ದೇಶಕ ಆಕ್ಷನ್ ಕಟ್ ಹೇಳಿರುವುದರಿಂದ ದೊಡ್ಡ ಮಟ್ಟಕ್ಕೆ ಬ್ಯುಸಿನೆಸ್ ಆಗಿದೆ ಎನ್ನಲಾಗಿದೆ.

'ಸಲಾರ್' ಪ್ರೀ ರಿಲೀಸ್ ಬ್ಯುಸಿನೆಸ್ ಎಷ್ಟು?

'ಆದಿಪುರುಷ್' ಸೋಲಿನ ಬೆನ್ನಲ್ಲೇ ಪ್ರಭಾಸ್ ಮುಂದಿನ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಗಬಹುದು ಅನ್ನೋ ಲೆಕ್ಕಾಚಾರವಿತ್ತು. ಆದ್ರೀಗ 'ಸಲಾರ್' ರಾಜಮೌಳಿಯ RRR ಸಿನಿಮಾದ ಪ್ರೀ ರಿಲೀಸ್ ಬ್ಯುಸಿನೆಸ್ ಅನ್ನೇ ಮೀರಿಸಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ವಿತರಕರೊಂದಿಗೆ ಮಾತುಕತೆ ನಡೆದಿದ್ದು ಡೀಲ್ ಸಹ ಕುದುರಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ, 'ಸಲಾರ್' ಸಿನಿಮಾದ ಥಿಯೆಟ್ರಿಕಲ್ ರೈಟ್ಸ್ ಭಾರತದಲ್ಲಿ 500 ಕೋಟಿ ರೂ. ದಾಟಿದೆ. ಇನ್ನೂ ವಿದೇಶಿ ಮಾರುಕಟ್ಟೆಯ ಹಕ್ಕುಗಳು ಮಾರಾಟ ಆಗಿಬೇಕಿದೆ ಎಂದು ಟಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ. ಆದರೆ, 'ಸಲಾರ್' ಚಿತ್ರತಂಡ ಇನ್ನೂ ಪ್ರಚಾರವನ್ನೇ ಶುರು ಮಾಡಿಲ್ಲ. ಅಷ್ಟರಲ್ಲೇ ಬ್ಯುಸಿನೆಸ್ ಮಾಡಿದೆಯಾ? ಅನ್ನೋ ಅನುಮಾನ ಮೂಡಿದೆ.

'ಸಲಾರ್' ಕ್ರೇಜ್ ಹೇಗಿದೆ?

'ಆದಿಪುರುಷ್' ನೆಲಕ್ಕಚ್ಚಿದ್ದರಿಂದ 'ಸಲಾರ್‌'ಗೆ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಪ್ರಭಾಸ್‌ಗಿಂತ ನಿರ್ದೇಶಕ ಪ್ರಶಾಂತ್ ನೀಲ್ ಮೇಲೆ ನಿರೀಕ್ಷೆ ಹೆಚ್ಚಿದೆ. ಜೊತೆಗೆ ದೊಡ್ಡ ತಾರಾಗಣವಿದೆ. ಪ್ರಭಾಸ್ ಜೊತೆ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಜಗಪತಿ ಬಾಬು ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.

ಎಲ್ಲಕ್ಕಿಂತ ಹೆಚ್ಚಾಗಿ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದ್ದರಿಂದ 'ಸಲಾರ್' ಬಿಡುಗಡೆಯನ್ನು ಪ್ಲಾನ್ ಆಗಿ ಮಾಡುತ್ತಿದೆ. ಸದ್ಯ ಬಿಡುಗಡೆಗೆ ರೆಡಿಯಾಗಿರೋ ಪ್ಯಾನ್ ಇಂಡಿಯಾ ಸಿನಿಮಾಗಳ ಪೈಕಿ 'ಸಲಾರ್' ಸಿನಿಮಾ ಮೊದಲಿದೆ. ಈ ಕಾರಣಕ್ಕೆ 'ಸಲಾರ್' ಪ್ರೀ ರಿಲೀಸ್ ಬ್ಯುಸಿನೆಸ್ ಪ್ರಕ್ರಿಯೆಯನ್ನು ಹೊಂಬಾಳೆ ಫಿಲ್ಮ್ಸ್ ಈಗಾಗಲೇ ಶುರು ಮಾಡಿರುವ ಸಾಧ್ಯತೆನೂ ಇದೆ.

More from Filmibeat

English summary
Buzz is that Prabhas, Prashanth Neel Combo Movie Salaar's theatrical rights crossed 500 crore, know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X