ಉಪ್ಪಿನಕಾಯಿ ಮಾರುತ್ತಿದ್ದ ಹುಡುಗಿಗೆ ಸಿನಿಮಾದಲ್ಲಿ ಚಾನ್ಸ್; ಸೋಶಿಯಲ್ ಮೀಡಿಯಾದಲ್ಲೂ ಬಾರೀ ಫೇಮಸ್.. ಯಾರೀಕೆ?
ಇತ್ತೀಚೆಗೆ ಸೋಶಿಯಲ್ ಮೀಡಿಯಾ ಅದೆಷ್ಟೋ ಮಂದಿಯ ಹಣೆ ಬರಹವನ್ನು ಬರೆದಿದೆ. ರಾತ್ರೋ ರಾತ್ರಿ ಅದೆಷ್ಟೋ ಮಂದಿಯನ್ನು ಸ್ಟಾರ್ ಮಾಡಿದೆ. ಅದೆಷ್ಟೋ ಮಂದಿಯ ಸ್ಟಾರ್ ಪಟ್ಟವನ್ನು ಕಿತ್ತುಕೊಂಡಿದೆ. ರೀಲ್ಸ್ ಮಾಡಿ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡವರಿಗೇನು ಕಮ್ಮಿಯಿಲ್ಲ. ಪ್ರಿಯಾ ಪ್ರಕಾಶ್ ವಾರಿಯರ್ ಅಂತ ನಟಿಯರ ಒಂದು ಕಣ್ಸನ್ನೆಯಿಂದ ಸೆನ್ಸೇಷನಲ್ ಆದವರು. ಈಗ ಮತ್ತೊಬ್ಬ ಯುವತಿ ಕೂಡ ಹಾಗೇ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಲ್ಲಿದ್ದಾಳೆ.
ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಅಲೇಖ್ಯ ಚಿಟ್ಟಿ ಪಿಕಲ್ಸ್ ಎನ್ನುವ ಉಪ್ಪಿನ ಕಾಯಿ ಬ್ರ್ಯಾಂಡ್ ಚರ್ಚೆಯಲ್ಲಿದೆ. ಮೂವರು ಸಹೋದರಿಯವರು ಸೇರಿ ಈ ಉಪ್ಪಿನ ಕಾಯಿಯನ್ನು ವ್ಯಾಪಾರ ಮಾಡುತ್ತಿದ್ದರು. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಜನಪ್ರಿಯರಾಗಿದ್ದರು. ಇತ್ತೀಚೆಗೆ ಈ ಮೂವರು ಯುವತಿಯವರು ಉಪ್ಪಿನಕಾಯಿ ವಿಚಾರಕ್ಕೆ ವಿವಾದಕ್ಕೂ ಒಳಗಾಗಿದ್ದರು. ಈಗ ಈ ಮೂವರು ಯುವತಿಯಲ್ಲಿ ಒಬ್ಬರು ಮತ್ತೆ ಸುದ್ದಿಯಲ್ಲಿದ್ದಾರೆ.

ಅಲೇಖ್ಯ ಚಿಟ್ಟಿ ಪಿಕಲ್ಸ್ ಆರಂಭಿಸಿದ ಮೂವರು ಸಹೋದರಿಯರಲ್ಲಿ ಒಬ್ಬರು ರಮ್ಯಾ. ಈಕೆ ತಾವು ಮಾರುತ್ತಿದ್ದ ಉಪ್ಪಿನಕಾಯಿಯ ಬಗ್ಗೆ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದರು. ನೋಡಲು ಸುಂದರವಾಗಿರುವ ಈ ಯುವತಿಗೆ ಇತ್ತೀಚೆಗೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಟಾಲಿವುಡ್ ಮಂದಿ ಈಕೆಗೆ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದಾರೆಂಬ ಸುದ್ದಿ ವೇಗವಾಗಿ ಹಬ್ಬುವುದಕ್ಕೆ ಶುರುವಾಗಿದೆ. ಅಷ್ಟಕ್ಕೂ ಅಲೇಖ್ಯ ಚಿಟ್ಟಿ ಪಿಕಲ್ಸ್ ರಮ್ಯಾ ಟಾಲಿವುಡ್‌ನಲ್ಲಿ ಇಷ್ಟೊಂದು ಸದ್ದು ಮಾಡುತ್ತಿರುವುದು ಯಾಕೆ? ಉಪ್ಪಿನಕಾಯಿ ಸಹೋದರಿಯರು ಮಾಡಿಕೊಂಡ ವಿವಾದವೇನು? ಸಿನಿಮಾದಲ್ಲಿ ಅವಕಾಶ ಸಿಕ್ಕಿದೆಯೇ? ಎಂಬುವುದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಇತ್ತೀಚೆಗೆ ತೆಲುಗು ರಾಜ್ಯಗಳಲ್ಲಿ ಅಲೇಖ್ಯ ಚಿಟ್ಟಿ ಪಿಕಲ್ಸ್ ಸಿಕ್ಕಾಪಟ್ಟೆ ಜನಮನ್ನಣೆ ಪಡೆದುಕೊಂಡಿತ್ತು. ಮೂವರು ಸಹೋದರಿಯರು ಸೇರಿ ಆರಂಭಿಸಿದ್ದ ಈ ಬ್ರ್ಯಾಂಡ್ ಜನಪ್ರಿಯತೆ ಪಡೆದುಕೊಂಡಿತ್ತು. ಸೋಶಿಯಲ್ ಮೀಡಿಯಾದಲ್ಲಿಯೂ ಈ ಉಪ್ಪಿನಕಾಯಿ ಫ್ಯಾನ್ ಬೇಸ್ ಹೆಚ್ಚಾಗಿದ್ದರು. ಈ ಮೂವರು ಸಹೋದರಿಯರಲ್ಲಿ ರಮ್ಯಾ ರೀಲ್ಸ್ ಮಾಡಿ ಹಾಕುತ್ತಿದ್ದರಿಂದ ಇವರಿಗೂ ಫಾಲೋವರ್ಸ್ ಹೆಚ್ಚಾಗಿದ್ದರು. ನೆಟ್ಟಿಗರು ಕೇವಲ ಉಪ್ಪಿನಕಾಯಿ ಅಷ್ಟೇ ಅಲ್ಲ. ಅದರನ್ನು ಹಿಡಿದು ರೀಲ್ಸ್ ಮಾಡಿದ್ದ ರಮ್ಯಾ ಅವರನ್ನು ಇಷ್ಟು ಪಡುವುದಕ್ಕೆ ಶುರುಮಾಡಿದ್ದರು. ಕೆಲವರಂತೂ ಸಿನಿಮಾದಲ್ಲಿ ಹೀರೋಯಿನ್ ಆಗಿಬಿಡಿ ಅಂತೆಲ್ಲ ಈಕೆಗೆ ಕಮೆಂಟ್ ಮಾಡಿದ್ದೇ ಮಾಡಿದ್ದು.

ಎಲ್ಲವೂ ಸರಿಯಾಗಿ ನಡೆಯುತ್ತಿತ್ತು. ಆದರೆ, ಉಪ್ಪಿನಕಾಯಿ ಬೆಲೆಯ ವಿಚಾರಕ್ಕೆ ಗ್ರಾಹಕರನ್ನು ಮೌಖಿಕವಾಗಿ ನಿಂದಿಸಿದ್ದಾರೆಂಬ ಕಾರಣಕ್ಕೆ ಟ್ರೋಲ್ ಆಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಇವರ ಆಡಿಯೋಗಳು ಹರಿದಾಡುವುದಕ್ಕೆ ಓಡಾಡಿದ್ದವು. ಹೀಗಾಗಿ ಈ ಮೂವರು ಸಹೋದರಿಯರ ಅಲೇಖ್ಯ ಚಿಟ್ಟಿ ಪಿಕಲ್ಸ್ ವ್ಯಾಪಾರವನ್ನು ಬಂದ್ ಮಾಡಿದ್ದರು. ಸೀನ್ ಕಟ್ ಮಾಡಿದರೆ, ಉಪ್ಪಿನಕಾಯಿ ಹಿಡಿದು ರೀಲ್ಸ್ ಮಾಡುತ್ತಿದ್ದ ರಮ್ಯಾ ಸಿನಿಮಾದ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಅಶ್ವಿನ್ ಬಾಬು ನಾಯಕನಾಗಿ ನಟಿಸುತ್ತಿರುವ 'ವಚ್ಚಿನವಾಡು ಗೌತಮ್' ಎಂಬ ತೆಲುಗು ಸಿನಿಮಾದ ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ರಮ್ಯಾ ಪ್ರತ್ಯಕ್ಷ ಆಗಿದ್ದಾರೆ. ಕಪ್ಪು ಬಣ್ಣದ ಕಾಸ್ಟ್ಯೂಮ್‌ನಲ್ಲಿ ನಾಯಕಿಯನ್ನು ಸೈಡಿಗಟ್ಟುವ ಲುಕ್‌ನಲ್ಲಿ ಪೋಸ್ ಕೊಟ್ಟು ಹುಡಗರ ನಿದ್ದೆಗೆಡಿಸಿಬಿಟ್ಟಿದ್ದಾರೆ. ಟೀಸರ್ ರಿಲೀಸ್ ವೇಳೆ ತೆಗೆದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅಲ್ಲಿಗೆ ಆಕೆಯ ಫಾಲೋವರ್ಸ್ ರಮ್ಯಾ ಸಿನಿಮಾಗೆ ಬರೋದು ಗ್ಯಾರಂಟಿ ಫಿಕ್ಸ್ ಆಗಿದ್ದಾರೆ.
ಹೈದರಾಬಾದ್‌ನಲ್ಲಿ ನಡೆದ 'ವಚ್ಚಿನವಾಡು ಗೌತಮ್' ಸಿನಿಮಾದ ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ದಿಗ್ಗಜರ ಪಟ್ಟಿದಲ್ಲಿ ರಮ್ಯಾ ನಿಂತಿದ್ದರು. ಮುಖ್ಯ ಅತಿಥಿಗಳಾಗಿ ಬಂದಿದ್ದ ಸಂಗೀತ ನಿರ್ದೇಶಕ ಥಮನ್, ನಿರ್ದೇಶಕ ಶೈಲೇಶ್ ಕೊಲನು, ನಿರ್ಮಾಪಕರಾದ ಕೆ.ಎಸ್. ರಾಮರಾವ್ ಮತ್ತು ಕೆ.ಎಲ್. ದಾಮೋದರ್ ಪ್ರಸಾದ್ ಜೊತೆ ರಮ್ಯಾ ಕೂಡ ಕಾಣಿಸಿಕೊಂಡಿದ್ದರು. ಹೀಗಾಗಿ ಇವರು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆಯೇ ಎಂಬ ಅನುಮಾನ ಮೂಡಿದೆ. ರಮ್ಯಾ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆಂದು ಆಕೆಯ ಅಭಿಮಾನಿಗಳು ಮೀಮ್ಸ್ ಮಾಡುತ್ತಿದ್ದಾರೆ. ಅಲೇಖ್ಯ ಚಿಟ್ಟಿ ಪಿಕಲ್ಸ್‌ನ ರಮ್ಯಾ ಈಗಾಗಲೇ ಸೆಲೆಬ್ರಿಟಿ ಆಗಿದ್ದು, ಪೂರ್ಣ ಪ್ರಮಾಣದಲ್ಲಿ ಸಿನಿಮಾಗೆ ಎಂಟ್ರಿ ಕೊಡುತ್ತಾರಾ? ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











