ಚಿರಂಜೀವಿ ಜೊತೆ ನಟಿಸುವುದಕ್ಕೆ 'ನಯನತಾರಾ' ಪಡೆದ ಸಂಭಾವನೆ ಎಷ್ಟು? ಏನಂತಿದೆ ಟಾಲಿವುಡ್?

ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಸಂಭಾವನೆ ಪಡೆಯುವುದರಲ್ಲಿ ಮುಂಚೂಣಿಯಲ್ಲಿದ್ದಾರೆ. ಭಾರತದ ಜನಪ್ರಿಯ ಸ್ಟಾರ್‌ಗಳೊಂದಿಗೆ ನಟಿಸುವುದಷ್ಟೇ ಅಲ್ಲದೆ, ನಾಯಕಿ ಪ್ರಧಾನ ಸಿನಿಮಾಗಳಲ್ಲೂ ನಟಿಸಿದ್ದಾರೆ. ಈ ಮೂಲಕ ತಮ್ಮ ತಾಕತ್ತೇನು ಅನ್ನೋದನ್ನು ಸಾಬೀತುಪಡಿಸಿ ಸಿನಿಮಾರಂಗದಲ್ಲಿ ಗಟ್ಟಿಯಾಗಿ ನೆಲೆ ಕಂಡುಕೊಂಡಿದ್ದಾರೆ. ಈಗ ನಯನತಾರಾಗೆ ಇರುವ ಇಮೇಜ್‌ಗೆ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಈ ಬೇಡಿಕೆಯ ನಟಿ ಪ್ರಸ್ತುತ ಮೆಗಾಸ್ಟಾರ್ ಚಿರಂಜೀವಿ ಅವರ 'ಮನ ಶಂಕರ ವರಪ್ರಸಾದ್ ಗಾರು' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾಗಾಗಿ ಸೌತ್ ಇಂಡಿಯಾದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಭಾರಿ ಸಂಭಾವನೆ ಪಡೆದಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ತನ್ನ ಅಭಿನಯ ಹಾಗೂ ಸೌಂದರ್ಯದಿಂದ ಪ್ರೇಕ್ಷಕರ ಗಮನ ಸೆಳೆದಿರುವ ನಯನತಾರಾ ತೆಲುಗಿನ ಪ್ರಮುಖ ನಾಯಕರೊಂದಿಗೆ ನಟಿಸಿದ್ದಾರೆ.

Buzz Nayanathara charged huge remuneration for Chiranjeevi film Mana Shankara Varaprasad Garu

ಇಷ್ಟೇ ಅಲ್ಲದೆ ಕನ್ನಡದ 'ಸೂಪರ್' ಸಿನಿಮಾದಲ್ಲೂ ನಟಿಸಿದ್ದರು. ಇತ್ತೀಚೆಗೆ ಬಾಲಿವುಡ್‌ನಲ್ಲಿ 'ಜವಾನ್' ಸಿನಿಮಾದಲ್ಲಿ ಶಾರುಕ್ ಖಾನ್‌ಗೆ ನಾಯಕಿಯಾಗಿದ್ದರು. ನಯನತಾರಾ ಈಗ ಮೆಗಾಸ್ಟಾರ್ ಚಿರಂಜೀವಿ ಜೊತೆ 'ಮನ ಶಂಕರ ವರಪ್ರಸಾದ್ ಗಾರು'ನಲ್ಲಿ ಮೋಡಿ ಮಾಡುತ್ತಿದ್ದಾರೆ. ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿದ್ದಂತೆ ಅವರು ಈ ಸಿನಿಮಾಗಾಗಿ ತೆಗೆದುಕೊಂಡಿರುವ ಸಂಭಾವನೆ ಬಗ್ಗೆ ಚರ್ಚೆಯಾಗುತ್ತಿದೆ.

ನಯನತಾರಾ ತಾವೇ ನಟಿಸಿದ ಸಿನಿಮಾದ ಪ್ರಚಾರ ಮಾಡದೇ ಅದೆಷ್ಟೋ ವರ್ಷಗಳಾಗಿತ್ತು. ಆದರೆ, ಈ ಬಾರಿ ತಾವೇ ಹಾಕಿಕೊಂಡಿದ್ದ ಷರತ್ತುಗಳನ್ನು ಬ್ರೇಕ್ ಮಾಡಿದ್ದಾರೆ. ಸಿನಿಮಾದ ನಟನೆ ಮುಗಿಸಿದ ಬಳಿಕ ಗಾಯಬ್ ಆಗುತ್ತಿದ್ದ ನಯನತಾರಾ ಈ ಸಿನಿಮಾದ ಪ್ರಚಾರದಲ್ಲಿ ತೊಡಗಿರುವುದು ತೆಲುಗು ಮಂದಿಗೆ ಅಚ್ಚರಿ ಮೂಡಿಸಿವೆ. 'ಮನ ಶಂಕರ ವರಪ್ರಸಾದ್' ಚಿತ್ರದ ಹಲವು ಕಡೆ ಪ್ರಚಾರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

Buzz Nayanathara charged huge remuneration for Chiranjeevi film Mana Shankara Varaprasad Garu

'ಮನ ಶಂಕರ ವರಪ್ರಸಾದ್' ಸಿನಿಮಾದಲ್ಲಿ ನಯನತಾರಾ, ಚಿರಂಜೀವಿ ಪತ್ನಿ 'ಶಶಿಲೇಖಾ' ಪಾತ್ರದಲ್ಲಿ ನಟಿಸಿದ್ದಾರೆ. ಇದು ಚಿರಂಜೀವಿ ಜೊತೆ ನಯನತಾರಾ ಅವರ ಮೂರನೇ ಚಿತ್ರ. 'ಸೈರಾ ನರಸಿಂಹ ರೆಡ್ಡಿ' ಮತ್ತು 'ಗಾಡ್‌ಫಾದರ್' ಸಿನಿಮಾಗಳಲ್ಲಿ ನಟಿಸಿ ಮೆಚ್ಚುಗೆ ಗಳಿಸಿದ್ದರು. ಈಗ 'ಮನ ಶಂಕರ ವರಪ್ರಸಾದ್' ಸಿನಿಮಾದಲ್ಲಿ ಈ ಜೋಡಿಯ ಕೆಮಿಸ್ಟ್ರಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.

ನಯನತಾರಾ ಈ ಸಿನಿಮಾದಲ್ಲಿ ನಟಿಸುತ್ತಿರೋದಕ್ಕೆ ನಿರ್ಮಾಪಕರು ದೊಡ್ಡ ಮೊತ್ತದ ಸಂಭಾವನೆಯನ್ನು ನೀಡಿದ್ದಾರೆ ಎನ್ನಲಾಗಿದೆ. ಈ ಸಂಭಾವನೆ ದಕ್ಷಿಣ ಭಾರತದ ಚಿತ್ರರಂಗದ ಇತಿಹಾಸದಲ್ಲಲಿಯೇ ಅತೀ ದೊಡ್ಡ ಮೊತ್ತ ಹೇಳಲಾಗುತ್ತಿದೆ. ಅಂದ್ಹಾಗೆ ಈ ಸಿನಿಮಾಗೆ ಸರಿ ಸುಮಾರು ₹5 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆಯೆಂದು ಎಂದು ಟಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ.

ನಯನತಾರಾ ಶಾರುಖ್ ಖಾನ್ ಜೊತೆ 'ಜವಾನ್', ತಮಿಳಿನಲ್ಲಿ 'ಇರೈವನ್' ಮತ್ತು 'ಟೆಸ್ಟ್' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಯಶ್ ಅವರ 'ಟಾಕ್ಸಿಕ್', 'ಮುಕಿತ್ತಿ ಅಮ್ಮನ್ 2', 'ಮನಗಟ್ಟಿ ಸಿನ್ಸ್ 1960', 'ಡಿಯರ್ ಸ್ಟೂಡೆಂಟ್ಸ್', 'ಪೇಟ್ರಿಯಾಟ್', 'ಹೈನಾ', 'ರಕ್ಕಾಯಿ' ಹಾಗೂ ನಂದಮೂರಿ ಬಾಲಕೃಷ್ಣ ಅವರ 111ನೇ ಸಿನಿಮಾ ಸೇರಿಕೊಂಡಿದೆ.

More from Filmibeat

English summary
Buzz Nayanathara charged huge remuneration for Chiranjeevi film Mana Shankara Varaprasad Garu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X