ಪ್ರಶಾಂತ್ ನೀಲ್-ಜೂ.ಎನ್‌ಟಿಆರ್ ಟೈಟಲ್ ಬಗ್ಗೆ ಗೊಂದಲ; ಅದೇನಾ ಇಲ್ಲ ಬೇರೆನಾ?
'ಕೆಜಿಎಫ್ 2' ನಿರ್ದೇಶಕ ಒಂದ್ಕಡೆ.. RRR ಹೀರೋ ಇನ್ನೊಂದ್ಕಡೆ.. ಇಬ್ಬರೂ ಒಟ್ಟಿಗೆ ಸೇರಿದರೆ ಆ ಸಿನಿಮಾ ಮಾಮೂಲಿಯಾಗಿರಲ್ಲ ಅನ್ನೋ ಅವರವರ ಅಭಿಮಾನಿಗಳ ನಂಬಿಕೆ. 'ಕೆಜಿಎಫ್ 2' ಸಿನಿಮಾ ಮಾಡುವಾಗಲೇ ಜೂ.ಎನ್‌ಟಿಆರ್ ಕಡೆಯಿಂದ ಪ್ರಶಾಂತ್ ನೀಲ್‌ಗೆ ಆಫರ್ ಬಂದಿತ್ತು. ಅಲ್ಲಿಂದ ಮಾತುಕತೆ ನಡೆದು ಇಬ್ಬರೂ ಸಿನಿಮಾ ಮಾಡೋದು ಅಂತ ಕನ್ಫರ್ಮ್ ಆಗಿತ್ತು.
ಇತ್ತ ಪ್ರಶಾಂತ್ ನೀಲ್ 'ಕೆಜಿಎಫ್ 2' ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದಿತ್ತು. ಅತ್ತ RRR ಗ್ಲೋಬಲ್ ಮಟ್ಟದಲ್ಲಿ ಸದ್ದು ಮಾಡಿತ್ತು. ಹೀಗಿರುವ ಇಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಸೆಟ್ಟೇರಬೇಕಿತ್ತು. ಆದರೆ, ಅದಕ್ಕೂ ಮುನ್ನ ಪ್ರಶಾಂತ್ ನೀಲ್ 'ಸಲಾರ್' ಜೂ. ಎನ್‌ಟಿಆರ್ 'ದೇವರ' ಮುಗಿಸಬೇಕಿತ್ತು. ಈಗ ಪ್ರಶಾಂತ್ ನೀಲ್ ಹಾಗೂ ಜೂ.ಎನ್‌ಟಿಆರ್ ಕಾಂಬಿನೇಷನ್ ಸಿನಿಮಾ ಮುಹೂರ್ತ ಕೂಡಿ ಬಂದಿದ್ದು ಶೂಟಿಂಗ್ ಕೂಡ ಶುರುವಾಗುತ್ತೆ ಎನ್ನಲಾಗಿದೆ.

ಇದೂವರೆಗೂ ಪೋಸ್ಟ್ ಪ್ರೋಡಕ್ಷನ್‌ನಲ್ಲಿ ಬ್ಯುಸಿಯಾಗಿದ್ದ ಪ್ರಶಾಂತ್ ನೀಲ್ ಎರಡು ಸಿನಿಮಾ ಮುಗಿಸಬೇಕಿದೆ. 'ಸಲಾರ್ 2' ಹಾಗೂ ಜೂ.ಎನ್‌ಟಿಆರ್ ಸಿನಿಮಾ. ಹೀಗಾಗಿ ಯಾವುದು ಮೊದಲು ಅನ್ನೋ ಗೊಂದಲವಿತ್ತು. ಅದಕ್ಕೀಗ ತೆರೆಬಿದ್ದಿದೆ. ಶೀಘ್ರದಲ್ಲಿಯೇ ಹೈದರಾಬಾದ್‌ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಎನ್‌ಟಿಆರ್ 31ನೇ ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ ಎನ್ನಲಾಗಿದೆ. ಅಲ್ಲದೆ ಟೈಟಲ್ ಕೂಡ ಲಾಕ್ ಮಾಡಾಗಿದೆಯಂತೆ.
ಜೂನಿಯರ್ ಎನ್‌ಟಿಆರ್ ಸಿನಿಮಾ ಶುರು ಮಾಡುವುದಕ್ಕೆ ಪ್ರಶಾಂತ್ ನೀಲ್ ರೆಡಿಯಾಗಿದ್ದಾರೆಂದು 123 ತೆಲುಗು ವರದಿ ಮಾಡಿದೆ. ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಈಗಾಗಲೇ ಸೆಟ್ಟು ಹಾಕಲಾಗಿದ್ದು, ಹೈವೋಲ್ಟೇಜ್ ಆಕ್ಷನ್ ಸೀನ್‌ಗಳ ಮೂಲಕ ಜೂ.ಎನ್‌ಟಿಆರ್ ಸಿನಿಮಾ ಶೂಟಿಂಗ್ ಆರಂಭ ಆಗಿದೆ. ನೂರಾರು ಮಂದಿ ಜೂನಿಯರ್ ಆರ್ಟಿಸ್ಟ್‌ಗಳು ಈ ಆಕ್ಷನ್ ಸೀನ್‌ಗಳಲ್ಲಿ ಭಾಗವಹಿಸುತ್ತಿದ್ದಾರೆ.

ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುವ ಶೂಟಿಂಗ್‌ನಲ್ಲಿ ಜೂ.ಎನ್‌ಟಿಆರ್ ಭಾಗವಹಿಸುವುದಿಲ್ಲ ಅಂತಾನೂ ವರದಿಯಾಗಿದೆ. ಕೆಲವೇ ದಿನಗಳು ನಡೆಯೋ ಶೂಟಿಂಗ್‌ನಲ್ಲಿ ಕೇವಲ ಜೂನಿಯರ್ ಆರ್ಟಿಸ್ಟ್‌ಗಳು ಹಾಗೂ ಕಲಾವಿದರನ್ನು ಇಟ್ಟುಕೊಂಡು ಕೆಲವು ದೃಶ್ಯಗಳನ್ನು ಚಿತ್ತೀಕರಿಸಲಿದ್ದಾರೆ. ಇದರಲ್ಲಿ 2 ಸಾವಿರ ಮಂದಿ ಜೂನಿಯರ್ ಆರ್ಟಿಸ್ಟ್ ಹಾಗೂ 500 ಮಂದಿ ಪೊಲೀಸ್ ಪಾತ್ರದ ಆರ್ಟಿಸ್ಟ್‌ಗಳು ಭಾಗವಹಿಸಲಿದ್ದಾರೆ. ಮಾರ್ಚ್ ತಿಂಗಳಲ್ಲಿ ಇನ್ನೊಂದು ಹಂತದ ಶೂಟಿಂಗ್ ನಡೆಯಲಿದ್ದು, ಅದರಲ್ಲಿ ಜೂನಿಯರ್ ಎನ್‌ಟಿಆರ್ ಎಂಟ್ರಿ ಆಗುತ್ತೆ ಎನ್ನಲಾಗಿದೆ. ಮಾರ್ಚ್ ತಿಂಗಳಲ್ಲಿ ದೊಡ್ಡ ಹಂತದ ಶೂಟಿಂಗ್ ನಡೆಯುತ್ತೆ ಎನ್ನಲಾಗಿದೆ.
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಜೂನಿಯರ್ ಎನ್‌ಟಿಆರ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಸಿನಿಮಾದ ಬಗ್ಗೆನೂ ಚರ್ಚೆಯಾಗುತ್ತಿದೆ. ಈ ಹಿಂದೆ ಪ್ರಶಾಂತ್ ನೀಲ್ ನಿರ್ದೇಶಿಸಿದ ಎರಡು ಸಿನಿಮಾಗಳ ಟೈಟಲ್ ಕೂಡ ಮಾಸ್ ಆಗಿತ್ತು. ಹೀಗಾಗಿ ಜೂನಿಯರ್ ಎನ್‌ಟಿಆರ್ ಸಿನಿಮಾ ಟೈಟಲ್ ಕೂಡ ಅಷ್ಟೇ ಮಾಸ್ ಆಗಿರುತ್ತೆ ಎಂಬ ನಿರೀಕ್ಷೆಯಿತ್ತು. ಅದರಲ್ಲಿ ಎನ್‌ಟಿಆರ್ 31ನೇ ಸಿನಿಮಾಗೆ 'ಡ್ರ್ಯಾಗನ್' ಅನ್ನೋ ಟೈಟಲ್ ಫಿಕ್ಸ್ ಆಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇನ್ನೂ ಪ್ರಶಾಂತ್ ನೀಲ್ ಅಥವಾ ನಿರ್ಮಾಣ ಸಂಸ್ಥೆ ಅಧಿಕೃತವಾಗಿ ಎಲ್ಲೂ ಹೇಳಿಲ್ಲ.
ಜೂನಿಯರ್ ಎನ್‌ಟಿಆರ್ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಹೃತಿಕ್ ರೋಷನ್ ನಟಿಸುತ್ತಿರುವ 'ವಾರ್ 2' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತ ಪ್ರಶಾಂತ್ ನೀಲ್ 'ಸಲಾರ್ 2' ಸಿನಿಮಾವನ್ನೂ ಮುಗಿಸಬೇಕಿದೆ. ಜೂನಿಯರ್ ಎನ್‌ಟಿಆರ್ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಹಾಗೇ 'ಕೆಜಿಎಫ್ 3' ಶೂಟಿಂಗ್ ಮಾಡಿದ್ದೀನಿ ಅಂತ ಸಂದರ್ಶನದಲ್ಲಿ ಮಾಳವಿಕ ಅವಿನಾಶ್ ಹೇಳಿಕೊಂಡಿದ್ದಾರೆ. ಪ್ರಶಾಂತ್ ನೀಲ್ ಸದ್ಯ ಯಾವ ಸಿನಿಮಾ ಮಾಡುತ್ತಿದ್ದಾರೆ. ಯಾವುದು ಮೊದಲು ರಿಲೀಸ್ ಆಗುತ್ತೆ ಅನ್ನೋದು ಸಿನಿ ಪ್ರಿಯರಿಗೆ ಗೊಂದಲದ ಗೂಡಾಗಿದೆ.


Click it and Unblock the Notifications











