ರಾಮ್‌ಚರಣ್‌ಗೆ ಮೇಷ್ಟ್ರಾದ ಶಿವಣ್ಣ? 'ಪೆದ್ದಿ'ಯಲ್ಲಿ ಸೆಂಚುರಿಸ್ಟಾರ್ ರೋಲ್ ಏನು ಗೊತ್ತೇ?

ಈ ವರ್ಷ ರಿಲೀಸ್ ಆಗುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ 'ಪೆದ್ದಿ' ಕೂಡ ಒಂದು. ರಾಮ್ ಚರಣ್‌ ನಟಿಸುತ್ತಿರುವ ಈ ಸಿನಿಮಾ ಈಗಾಗಲೇ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ಪಟ್ಟಿಯಲ್ಲಿ ಇದೆ. RRR ಬಳಿಕ ಗ್ಲೋಬಲ್ ಸ್ಟಾರ್ ಆಗಿ ಹೊರ ಹೊಮ್ಮಿರುವ ರಾಮ್‌ ಚರಣ್ ನಂತರ ನಟಿಸಿದ ಸಿನಿಮಾಗಳು ನೆಲಕ್ಕಚ್ಚಿದ್ದವು. ಹೀಗಾಗಿ 'ಪೆದ್ದಿ' ರಾಮ್ ಚರಣ್‌ ಪಾಲಿಗೆ ಗೆಲ್ಲಲೇ ಬೇಕಾದ ಸಿನಿಮಾ.

ಈಗಾಗಲೇ 'ಪೆದ್ದಿ' ಸಿನಿಮಾದ ಹಾಡುಗಳು ಕಿಕ್ ಕೊಟ್ಟಿವೆ. ಮೇಲ್ನೋಟಕ್ಕೆ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡೋದು ಪಕ್ಕಾ ಅನ್ನೋ ಅಭಿಪ್ರಾಯಗಳು ಎಲ್ಲಾ ಕಡೆಯಿಂದಲೂ ಕೇಳಿ ಬರುತ್ತಿದೆ. 'ಪುಷ್ಪ' ಸಿನಿಮಾದ ನಿರ್ದೇಶಕ ಸುಕುಮಾರ್ ಅವರ ಶಿಷ್ಯ 'ಉಪ್ಪೇನ' ಸಿನಿಮಾದ ಡೈರೆಕ್ಟರ್ ಬುಚ್ಚಿ ಬಾಬು ಸನಾ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹೀಗಾಗಿ ಟಾಲಿವುಡ್‌ನಲ್ಲಿ ನಿರೀಕ್ಷೆಗಳು ಗರಿಗೆದರಿವೆ.

Buzz Shivarajkumar is doing cricket couch in Ram Charan starrer Peddi Pan India film

ಇನ್ನೊಂದು ಕಡೆ ರಾಮ್ ಚರಣ್ ಜೊತೆಗೆ ಈ ಸಿನಿಮಾದಲ್ಲಿ ನಟಿಸುತ್ತಿರುವ ಶಿವರಾಜ್‌ಕುಮಾರ್ ಪಾತ್ರದ ಬಗ್ಗೆನೂ ಕುತೂಹಲ ಹೆಚ್ಚಾಗಿದೆ. ಕರ್ನಾಟಕದಲ್ಲಿ ಶಿವಣ್ಣ ಪಾತ್ರದ ಬಗ್ಗೆ ಚರ್ಚೆಯಾಗುತ್ತಿದೆ. ಸೆಂಚುರಿ ಸ್ಟಾರ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಅವರ ಪಾತ್ರದ ಬಗ್ಗೆ ಸಿನಿಮಾ ಮಂದಿ ಚರ್ಚೆ ಮಾಡುತ್ತಿದ್ದಾರೆ. ಹಾಗಿದ್ದರೆ, ಶಿವಣ್ಣನ ಪಾತ್ರವೇನು? ಎಷ್ಟು ನಿಮಿಷ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ? ಶಿವಣ್ಣ-ರಾಮ್‌ ಚರಣ್ ಮುಖಾ ಮುಖಿ ಹೇಗಿರುತ್ತೆ? ಅನ್ನೋ ಡಿಟೈಲ್ಸ್ ಇಲ್ಲಿದೆ.

ಶಿವಣ್ಣ 'ಪೆದ್ದಿ' ಸಿನಿಮಾ ಒಪ್ಪಿಕೊಂಡಾಗ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಿದ್ದರೂ ರಾಮ್ ಚರಣ್ ಟೀಮ್ ಶಿವಣ್ಣನನ್ನು ಬಿಟ್ಟು ಕೊಟ್ಟಿಲ್ಲ. ಈ ಪಾತ್ರಕ್ಕೆ ಮತ್ತೊಬ್ಬ ನಟನನ್ನು ಆಲೋಚನೆ ಮಾಡುವ ಆಲೋಚನೆಯನ್ನೂ ಮಾಡಿರಲಿಲ್ಲ. ಶಿವಣ್ಣನಿಗಾಗಿ ಕಾದು ಅವರಿಂದಲೇ ಪಾತ್ರವನ್ನು ಮಾಡಿಸಿದ್ದಾರೆ. ಹೀಗಾಗಿ 'ಪೆದ್ದಿ' ಸಿನಿಮಾದಲ್ಲಿ ಶಿವಣ್ಣನ ಪಾತ್ರ ಹೇಗಿರುತ್ತೆ? ಅನ್ನೋ ಕುತೂಹಲ ಇದ್ದೇ ಇರುತ್ತೆ.

Also Read
ಶಿವಣ್ಣ-ಡಾಲಿಯ 'ಆಪರೇಷನ್ ಡ್ರೀಮ್ ಥಿಯೇಟರ್ 666'ನಲ್ಲಿ ಏಜೆಂಟ್ ಕಾವೇರಿ; ನಟಿ ಅದಿತಿ ಬಾಲನ್
ಶಿವಣ್ಣ-ಡಾಲಿಯ 'ಆಪರೇಷನ್ ಡ್ರೀಮ್ ಥಿಯೇಟರ್ 666'ನಲ್ಲಿ ಏಜೆಂಟ್ ಕಾವೇರಿ; ನಟಿ ಅದಿತಿ ಬಾಲನ್

ಸ್ಯಾಂಡಲ್‌ವುಡ್ ಮಂದಿ 'ಪೆದ್ದಿ'ಯಲ್ಲಿ ಶಿವಣ್ಣನ ಪಾತ್ರದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಗಾಂಧಿನಗರದ ಗಲ್ಲಿಯಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಶಿವಣ್ಣ ಈ ಸಿನಿಮಾಗಾಗಿ ಸುಮಾರು 35 ರಿಂದ 40 ದಿನಗಳ ಕಾಲ ಚಿತ್ರೀಕರಣ ಮಾಡಿದ್ದಾರೆ. ಹೀಗಾಗಿ ಈ ಸಿನಿಮಾದಲ್ಲಿ ಸುಮಾರು 30 ನಿಮಿಷಗಳಿಗೂ ಅಧಿಕ ಕಾಲ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ರಾಮ್ ಚರಣ್ ಹಾಗೂ ಶಿವಣ್ಣ ಜೊತೆಗಿನ ಸೀನ್‌ಗಳು ಹೆಚ್ಚಿವೆ ಎಂದು ಮಾತಾಡಿಕೊಳ್ಳುತ್ತಿದ್ದಾರೆ.

Buzz Shivarajkumar is doing cricket couch in Ram Charan starrer Peddi Pan India film

ಇನ್ನು ಶಿವಣ್ಣ ಈ ಸಿನಿಮಾದಲ್ಲಿ ಕ್ರಿಕೆಟ್ ಕೋಚ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಈಗಾಗಲೇ ಹೊರ ಬಿದ್ದಿರುವ ತುಣುಕುಗಳಲ್ಲಿ ರಾಮ್‌ ಚರಣ್ ಬ್ಯಾಟ್ ಹಿಡಿದು ಕಾಣಿಸಿಕೊಂಡಿದ್ದಾರೆ. ಹೀಗಾಗಿ ಸಿನಿಮಾದಲ್ಲಿ ರಾಮ್ ಚರಣ್ ಕ್ರಿಕೆಟ್ ಆಟಗಾರನಾಗಿದ್ದರೆ, ಇನ್ನೊಂದು ಕಡೆ ಶಿವಣ್ಣ ಕ್ರಿಕೆಟ್ ಕೋಚ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಗಾಂಧಿನಗರದ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ.

ರಜನಿಕಾಂತ್ ಜೊತೆ ನಟಿಸಿದ 'ಜೈಲರ್' ಸಿನಿಮಾದ ಬಳಿಕ ಶಿವಣ್ಣನನ್ನು ಹುಡುಕಿಕೊಂಡು ಪರಭಾಷೆಯ ಫಿಲ್ಮ್ ಮೇಕರ್ಸ್ ಬರುತ್ತಿದ್ದಾರೆ. ಹೀಗಾಗಿ 'ಪೆದ್ದಿ' ಸಾಕಷ್ಟು ಕುತೂಹಲವನ್ನು ಮೂಡಿಸಿದೆ. 'ಜೈಲರ್‌'ನಲ್ಲಿ ಲುಕ್‌ನಿಂದಲೇ ಕಿಕ್ ಕೊಟ್ಟಿದ್ದ ಶಿವಣ್ಣ ಈ ಸಿನಿಮಾ ಮೂಲಕ ತೆಲುಗು ಮಂದಿಯನ್ನು ರಂಚಿಸಬಹುದೆಂಬ ನಿರೀಕ್ಷೆಯಿದೆ. ಗ್ರಾಮೀಣ ಭಾಗದ ಕಥೆಯಾಗಿರುವುದರಿಂದ ಶಿವಣ್ಣನ ಲುಕ್ ಹೇಗಿರುತ್ತೆ? ಅನ್ನೋ ಕಾತುರ ಇದ್ದೇ ಇದೆ.

ಇನ್ನು ಶಿವಣ್ಣ ಇತ್ತೀಚೆಗ್ಯಾಕೋ ಕ್ಲಾಸ್ ಸಿನಿಮಾಗಳ ಕಡೆಗೆ ಒಲವು ತೋರುತ್ತಿದ್ದಾರೆ ಎಂದೆನಿಸುತ್ತಿದೆ. ಅನಾರೋಗ್ಯದ ಬಳಿಕ ಒಪ್ಪಿಕೊಂಡ ಸಿನಿಮಾಗಳಲ್ಲಿ ಆಕ್ಷನ್ ಹೆಚ್ಚಿಲ್ಲ. ಮುಂದೆ ರಿಲೀಸ್ ಆಗುತ್ತಿರುವ ಶಿವಣ್ಣನ ಸಿನಿಮಾಗಳು ಕೂಡ ಕ್ಲಾಸ್ ಸಿನಿಮಾಗಳೇ ಹೆಚ್ಚಿವೆ. ಇವೆಲ್ಲ ಏನೇ ಇದ್ದರೂ, ಶಿವಣ್ಣನ ಅಭಿಮಾನಿಗಳಿಗೆ ಈ ವರ್ಷ ಹಬ್ಬ. ಯಾಕಂದ್ರೆ, ಸೆಂಚುರಿ ಸ್ಟಾರ್ ನಟಿಸುತ್ತಿರುವ ಕಮ್ಮಿ ಅಂದರೂ 2 ಸಿನಿಮಾಗಳು ಇದೇ ವರ್ಷ ರಿಲೀಸ್ ಆಗಲಿದೆ.

More from Filmibeat

English summary
Buzz Shivarajkumar is doing cricket couch in Ram Charan starrer Peddi Pan India film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X