CCL 2026: ಭೋಜ್‌ಪುರಿ ದಬಾಂಗ್ಸ್ ವಿರುದ್ಧ ಮೊದಲ ಪಂದ್ಯ ಕೈ ಚೆಲ್ಲಿದ ತೆಲುಗು ವಾರಿಯರ್ಸ್

ಸೆಲೆಬ್ರೆಟಿ ಕ್ರಿಕೆಟ್ ಲೀಗ್ (CCL) 2026ರ ಪಂದ್ಯಗಳು ಆರಂಭವಾಗಿವೆ. ನಿನ್ನೆ (ಜನವರಿ 16) ಎರಡು ಪಂದ್ಯಗಳು ವೈಜಾಗ್‌ನಲ್ಲಿ ನಡೆದಿದ್ದವು. ಮೊದಲ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಪಂಜಾಬ್ ದಿ ಶೇರ್ ಮಧ್ಯೆ ನಡೆದಿತ್ತು. ಇದರಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಕಳೆದ ಸೀಸನ್‌ನ ಚಾಂಪಿಯನ್ಸ್ ಅನ್ನು ಸೋಲಿಸಿತ್ತು. 2ನೇ ಪಂದ್ಯ ತೆಲುಗು ವಾರಿಯರ್ಸ್ ಹಾಗೂ ಭೋಜ್‌ಪುರಿ ದಬಾಂಗ್ಸ್ ಮಧ್ಯೆ ನಡೀತು.

ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ಸೀಸನ್ 12ರ 2ನೇ ಪಂದ್ಯದಲ್ಲಿ ತೆಲುಗು ವಾರಿಯಸ್ಸ್ ಹಾಗೂ ಭೋಜ್‌ಪುರಿ ಡಬಾಂಗ್ಸ್ ಟೀಮ್ ಕದನಕ್ಕೆ ಇಳಿದವು. ಆದರೆ, ಮೊದಲ ಪಂದ್ಯದಲ್ಲಿಯೇ ತೆಲುಗು ವಾರಿಯಸ್ಸ್ ತಂಡ ಭೋಜ್‌ಪುರಿ ಡಬಾಂಗ್ಸ್ ತಂಡದ ವಿರುದ್ಧ ಸೋಲುಂಡಿದೆ. ತೆಲುಗು ವಾರಿಯರ್ಸ್ ತಂಡದ ನಾಯಕ ಅಖಿಲ್ ಅಕ್ಕಿನೇನಿ ಟಾಸ್‌ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.

CCL 2026 Bhojpuri Dabanggs won first match against Telugu Warriors Asgar Khan Manoj Tiwari Shines

ಅಖಿಲ್ ತೆಗೆದುಕೊಂಡ ನಿರ್ಧಾರ ಸರಿಯಾಗಿಯೇ ಇತ್ತು. ಭೋಜ್‌ಪುರಿ ಡಬಾಂಗ್ಸ್ ತಂಡವನ್ನು 155 ರನ್‌ಗಳ ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಆದರೆ, ತೆಲುಗು ವಾರಿಯಸ್ಸ್ ತಂಡ ಬ್ಯಾಟಿಂಗ್ ಮಾಡುವುದಕ್ಕೆ ಇಳಿದಾಗ, ಅವರ ಲೆಕ್ಕಾಚಾರವೆಲ್ಲ ತಲೆಕೆಳಗಾಯ್ತು. ಮೊದಲು ಬ್ಯಾಟಿಂಗ್ ಮಾಡಿದ ಭೋಜ್‌ಪುರಿ ಡಬಾಂಗ್ಸ್ ತಂಡ, ಮೊದಲ ಓವರ್‌ನಲ್ಲಿಯೇ ತಂಡ 4 ರನ್ ಗಳಿಸಿದ್ದಾಗ, ನಾಯಕ ಮನೋಜ್ ತಿವಾರಿ ವಿಕೆಟ್ ಕಳೆದುಕೊಂಡಿತ್ತು.

ಭೋಜ್‌ಪುರಿ ಡಬಾಂಗ್ಸ್ ತಂಡದ ನಾಯಕ ನಿರ್ಗಮಿಸಿದ ಬಳಿಕ ಆದಿತ್ಯ ಓಝಾ ಮತ್ತು ರಾಮ್ ಯಾದವ್ ನಿಧಾನವಾಗಿ ಜೊತೆಯಾಟ ಆಡಿದರು. ಈ ಜೋಡಿ 65 ರನ್‌ಗಳ ಜೊತೆಯಾಟ ಆಡಿದರು. ಆದಿತ್ಯ ಔಟ್ ಆದ ಬಳಿಕ ಆಸ್ಗರ್ ಖಾನ್ ಅಖಾಡಕ್ಕೆಕ ಇಳಿದರು. ಕಳೆದ ವರ್ಷ ಉತ್ತಮ ಬ್ಯಾಟಿಂಗ್ ಮಾಡಿದ್ದ ಅಸ್ಗರ್ ಖಾನ್ ತಂಡಕ್ಕೆ ಬೃಹತ್ ಮೊತ್ತ ನೀಡುವಲ್ಲಿ ಯಶಸ್ವಿಯಾದರು. ಇವರು 60 ರನ್ ಬಾರಿಸಿದರು. ಈ ಮೂಲಕ ಭೋಜ್‌ಪುರಿ ಡಬಾಂಗ್ಸ್ ತಂಡ 155 ರನ್‌ಗಳನ್ನು ಕಲೆ ಹಾಕುವಲ್ಲಿ ಯಶಸ್ವಿಯಾದರು.

ತೆಲುಗು ವಾರಿಯರ್ಸ್ ತಂಡ ತನ್ನ ಮೊದಲ ಓವರ್‌ನಲ್ಲಿಯೇ ಸಚಿನ್ ಜೋಶಿ ವಿಕೆಟ್ ಕಳೆದುಕೊಂಡಿತ್ತು. ಡಬಾಂಗ್ಸ್ ತಂಡದ ನಾಯಕ ಮನೋಜ್ ತಿವಾರಿ ಮೊದಲ ವಿಕೆಟ್ ಒಪ್ಪಿಸಿದರು. ತೆಲುಗು ವಾರಿಯರ್ಸ್ ತಂಡದ ನಾಯಕ ಅಖಿಲ್ ಅಕ್ಕಿನೇನಿ ಅಖಾಡಕ್ಕೆ ಇಳಿದರು. ಇವರ ಬ್ಯಾಟಿಂಗ್ ತೆಲುಗು ಮಂದಿಯಲ್ಲಿ ವಿಶ್ವಾಸ ಮೂಡಿತ್ತು. ಈ ವೇಳೆ ಅಖಿಲ್ ರನ್‌-ಔಟ್ ವಿವಾದ ಸ್ವಲ್ಪ ಮಟ್ಟಿಗೆ ಪಂದ್ಯವನ್ನು ಸ್ಥಗಿತಗೊಳಿಸಿತ್ತು. ಬಳಿಕ ರನ್‌-ಔಟ್ ವಿವಾದ ತಿಳಿಗೊಂಡ ಬಳಿಕ ಮತ್ತೆ ಆಟ ಆರಂಭಿಸಿದರು. ದಬಾಂಗ್ಸ್ ತಂಡದ ನಾಯಕ ಅಖಿಲ್ ಅಕ್ಕಿನೇನಿಯನ್ನು ಎಲ್‌ಬಿಡ್ಯೂ ಮಾಡುವ ಮೂಲಕ ಔಟ್ ಮಾಡಿದರು.

ತೆಲುಗು ವಾರಿಯಸ್ಸ್ ತಂಡದ ಪರ ಬಿಗ್ ಹಿಟ್ಟರ್ ಅಶ್ವಿನ್ 6ನೇ ಓವರ್‌ನಲ್ಲಿ 42 ರನ್‌ಗಳಿಗೆ ರನ್ ಔಟ್ ಆದರು. ಇಲ್ಲಿಂದ ಒಂದೊಂದೇ ವಿಕೆಟ್‌ಗಳು ಉರುಳಿದವು. ಭೋಜ್‌ಪುರಿ ದಬಾಂಗ್ಸ್ ತಂಡದ ಆಟಗಾರ ಉತ್ತಮ ಫೀಲ್ಡಿಂಗ್‌ನಿಂದ ತೆಲುಗು ತಂಡದ ಆಟಗಾರು ರನ್-ಔಟ್ ಆಗಿದ್ದೇ ಹೆಚ್ಚು. ಮೊದಲ ಪಂದ್ಯ ಗೆಲ್ಲುತ್ತಾರೆ ಎಂದುಕೊಂಡಿದ್ದವರಿಗೆ ಭೋಜ್‌ಪುರಿ ದಬಾಂಗ್ಸ್ ಶಾಕ್ ಕೊಟ್ಟಿತ್ತು.

ತೆಲುಗು ವಾರಿಯರ್ಸ್ ತಂಡದ ಸ್ಟಾರ್ ಆಟಗಾರ ಥಮನ್ ಕೂಡ ಬಹುಬೇಗನೆ ಔಟ್ ಆದರು. ಈ ವೇಳೆ ತೆಲುಗು ವಾರಿಯರ್ಸ್ ತಂಡದ ಸ್ಕೋರ್ 45-5 ಆಗಿತ್ತು. ಸಾಂಬಾ ಹಾಗೂ ಸುಧೀರ್ ಕಣದಲ್ಲಿ ಇದ್ದರು. ಸಾಂಬಾ ಬಹುಬೇಗ ನಿರ್ಗಮಿಸಿದರು. ಸುಧೀರ್ 77 ರನ್‌ಗಳಿಗೆ ಔಟ್ ಆದರು. ವಿನಯ್ ತೆಲುಗು ತಂಡವನ್ನು ಗೆಲ್ಲಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಭೋಜ್‌ಪುರಿ ತಂಡ ತೆಲುಗು ವಾರಿಯರ್ಸ್‌ ಅನ್ನು 114 ರನ್‌ಗಳಿಗೆ ಆಲ್‌ಔಟ್ ಮಾಡಿತು.

More from Filmibeat

English summary
CCL 2026: Bhojpuri Dabanggs won first match against Telugu Warriors Asgar Khan, Manoj Tiwari Shines.
Read more about: ccl 2026 cricket akhil akkineni
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X