ನಾಡಹಬ್ಬ ದಸರಾಗೆ ಶುಭ ಕೋರಿದ ಚಾಲೆಂಜಿಂಗ್‌ಸ್ಟಾರ್ ದರ್ಶನ್!
ನಾಡ ಹಬ್ಬ ದಸರಾಗೆ ಇಡೀ ಮೈಸೂರು ಸಿಂಗಾರಗೊಂಡಿದೆ. ಅರಮನೆ ದಸರಾ ಹಬ್ಬಕ್ಕೆ ಕಂಗೊಳಿಸುತ್ತಿದೆ. ಮೈಸೂರಿನ ಬೀದಿ ಬೀದಿಗಳು ಅಲಂಕಾರಗೊಂಡು ಪ್ರವಾಸಿಗರನ್ನು ಸ್ವಾಗತ ಕೋರುತ್ತಿದೆ. ಇತ್ತ ಮೈಸೂರಿನ ಜನತೆಗೂ ದಸರಾ ಹಬ್ಬ ಅಂದರೆ ಎಲ್ಲಿಲ್ಲದ ಸಂಭ್ರಮ.
ಇನ್ನೊಂದು ಕಡೆ ಕನ್ನಡ ಚಿತ್ರರಂಗಕ್ಕೂ ಮೈಸೂರು ದಸರಾಗೂ ಬಹಳ ವರ್ಷಗಳ ನಂಟಿದೆ. ನಾಡಹಬ್ಬ ಆರಂಭ ಆಯಿತು ಅಂದರೆ, ಇತ್ತ ಕನ್ನಡ ಚಿತ್ರರಂಗ ಕೂಡ ಸಂಭ್ರಮದಲ್ಲಿ ಮುಳುಗಿ ಏಳುತ್ತೆ. ಅದರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೂ ನಾಡಹಬ್ಬ ದಸರಾಗೂ ಬಿಡಲಾರದ ನಂಟಿದೆ.
ದಸರಾ ಹಬ್ಬಕ್ಕೆ ವಿಶ್ ಮಾಡಿದ ದರ್ಶನ್
ದಸರಾ ಹಾಗೂ ಆಯುಧ ಪೂಜೆಯಲ್ಲಿ ದರ್ಶನ್ ಮನೆಯಲ್ಲಿ ಸಂಭ್ರಮ ಮನೆ ಮಾಡುತ್ತೆ. ದರ್ಶನ್ ಗ್ಯಾರೇಜ್‌ನಲ್ಲಿದ್ದ ಕಾರುಗಳೆಲ್ಲ ಮನೆಯಿಂದ ಆಚೆ ಬರುತ್ತವೆ. ಅವುಗಳಿಗೆಲ್ಲ ಪೂಜೆ ಪುನಸ್ಕಾರಗಳು ನಡೆಯುತ್ತವೆ. ದರ್ಶನ್ ಮೈಸೂರು ಭಾಗದವರೇ ಆಗಿರುವುದರಿಂದ ದಸರಾ ಹಬ್ಬ ಜೋರಾಗಿಯೇ ನಡೆಯುತ್ತೆ. ಈಗಾಗಿ ತಮ್ಮ ಅಭಿಮಾನಿಗಳಿಗೆ ಹಾಗೂ ಕನ್ನಡಿಗರಿಗೆ ಶುಭ ಕೋರಿದ್ದಾರೆ.

"ಬರುವ ದಿನಮಾನಗಳಲ್ಲಿ ನೀವು ಕಂಡ ಕನಸು ಈಡೇರಲಿ, ನಾಡ ದೇವತೆ ಚಾಮುಂಡೇಶ್ವರಿಯ ಆಶೀರ್ವಾದ ಸದಾಕಾಲವೂ ನಿಮ್ಮ ಮೇಲೆ ಇರಲಿ.. ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ನಾಡ ಹಬ್ಬ ದಸರಾ ಹಾಗೂ ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು." ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್ ಮಾಡಿದ್ದಾರೆ.
'ಕ್ರಾಂತಿ'ಗೆ ಎದುರು ನೋಡುತ್ತಿರುವ ಫ್ಯಾನ್ಸ್
ದರ್ಶನ್ ಸದ್ಯ 'ಕ್ರಾಂತಿ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ವಿ ಹರಿಕೃಷ್ಣ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಈಗಾಗಲೇ ಬಹುತೇಕ ಸಿನಿಮಾ ಶೂಟಿಂಗ್ ಮುಗಿದಿದೆ. ಇನ್ನು ಚಿಕ್ಕಪುಟ್ಟ ಪೋಷನ್ ಶೂಟ್ ಮಾಡಿದೆ ಸಿನಿಮಾ ಬಹುತೇಕ ಬಿಡುಗಡೆ ರೆಡಿಯಾಗುತ್ತೆ.
ಇನ್ನೊಂದು ಕಡೆ ದರ್ಶನ್ 'ಡಿ 56' ಸಿನಿಮಾ ಕೂಡ ಸೆಟ್ಟೇರಿದೆ. ತರುಣ್ ಸುಧೀರ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದ ಶೂಟಿಂಗ್ ಕೂಡ ನಡೆಯುತ್ತಿದೆ. ಮಾಲಾಶ್ರೀ ಪುತ್ರಿ ಈ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.

ದಸರಾಗೆ 'ಕ್ರಾಂತಿ' ಝಲಕ್ ಇಲ್ಲ
ದಸರಾ ಹಬ್ಬಕ್ಕೆ 'ಕ್ರಾಂತಿ' ಸಿನಿಮಾ ಬಿಡುಗಡೆಯಾಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಕನ್ನಡ ರಾಜ್ಯೋತ್ಸವಕ್ಕೆ 'ಕ್ರಾಂತಿ' ಸಿನಿಮಾ ರಿಲೀಸ್ ಆಗುತ್ತೆ ಅನ್ನೋ ಪುಕಾರ ಹಬ್ಬಿತ್ತು. ಆದ್ರೀಗ ಇನ್ನೂ ಶೂಟಿಂಗ್ ನಡೆಯುತ್ತಿರೋದ್ರಿಂದ ಇನ್ನೂ ತಡವಾಗಬಹುದು ಎನ್ನಲಾಗುತ್ತಿದೆ.
'ಕ್ರಾಂತಿ' ಈ ವರ್ಷ ಬಿಡುಗಡೆಯಾಗುತ್ತಿರುವ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. ಈ ವರ್ಷ ಬಾಕ್ಸಾಫೀಸ್‌ನಲ್ಲಿ 'ಕ್ರಾಂತಿ' ಸದ್ದು ಮಾಡೇ ಮಾಡುತ್ತೆ ಅನ್ನೋ ನಿರೀಕ್ಷೆಯಲ್ಲಿ ಡಿ ಬಾಸ್ ಫ್ಯಾನ್ಸ್ ಕೂಡ ಇದ್ದಾರೆ. ಸದ್ಯ ಇಡೀ ತಂಡ ದಸರಾ ಸಂಭ್ರಮದಲ್ಲಿದ್ದು, ಶೀಘ್ರದಲ್ಲಿಯೇ ರಿಲೀಸ್ ಡೇಟ್ ಅನೌನ್ಸ್ ಆಗಬಹುದು.


Click it and Unblock the Notifications











