'ಮತ್ತೆ ತಿರುಗೇಟು ನೀಡುತ್ತೇವೆ' ಎಂದ ಚಾರ್ಮಿ: 'ಲೈಗರ್' ಸೋಲಿನ ಬಳಿಕ ಸೋಶಿಯಲ್ ಮೀಡಿಯಾಗೆ ಬ್ರೇಕ್!

ಅತಿ ದೊಡ್ಡ ಸೋಲು ಕಂಡ ದಕ್ಷಿಣ ಭಾರತದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ಲೈಗರ್'. ಈ ಸಿನಿಮಾ ಮೂಲಕ ತನಗೆ ಬಾಲಿವುಡ್‌ನಲ್ಲಿ ದೊಡ್ಡ ಬ್ರೇಕ್ ಸಿಗಬಹುದೆಂದೇ ವಿಜಯ್ ದೇವರಕೊಂಡ ನಿರೀಕ್ಷೆ ಮಾಡಿದ್ದರು. ಅದು ಮೊದಲ ದಿನವೇ ಗೊತ್ತಾಗಿ ಹೋಗಿತ್ತು.

'ಲೈಗರ್' ಇನ್ನು ಏನೇ ಮಾಡಿದರೂ ಬಾಕ್ಸಾಫೀಸ್‌ನಲ್ಲಿ ಚೇತರಿಸಿಕೊಳ್ಳೋದಿಲ್ಲ ಅನ್ನೋದನ್ನು ತಿಳಿಯೋಕೆ ಹೆಚ್ಚು ದಿನ ಬೇಕಾಗಿರಲಿಲ್ಲ. ಪುರಿ ಜಗನ್ನಾಥ್ ಹಾಗೂ ವಿಜಯ್ ದೇವರಕೊಂಡ ಕಾಂಬಿನೇಷನ್‌ನಲ್ಲಿ ಬಂದ ಮೊದಲ ಸಿನಿಮಾ ಮೋಡಿ ಮಾಡುವಲ್ಲಿ ಹಿಂದಿಬಿದ್ದಿತ್ತು. ಅದೆಷ್ಟೇ ಪ್ರಮೋಷನ್ ಮಾಡಿದ್ದರೂ, 'ಲೈಗರ್' ಗೆಲ್ಲೋಕ್ಕೆ ಸಾಧ್ಯವೇ ಇರಲಿಲ್ಲ. ಮೊದಲ ವಾರದಲ್ಲೇ 'ಲೈಗರ್' ಬಾಕ್ಸಾಫೀಸ್‌ ಸೋಲು ಅಂತ ಟ್ರೇಡ್ ಅನಲಿಸ್ಟ್‌ಗಳು ಡಿಕ್ಲೇರ್ ಮಾಡಿದ್ದರು.

ಪುರಿ ಜಗನ್ನಾಥ್, ಚಾರ್ಮಿ ಕೌರ್ ಹಾಗೂ ಕರಣ್ ಜೋಹರ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಅದರಲ್ಲೂ ಪುರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್‌ಗೆ ಈ ಸಿನಿಮಾ ಗೆಲ್ಲಲೇ ಬೇಕಿತ್ತು. ಸೋಲಿನಿಂದ ಚಾರ್ಮಿ ಕೌರ್ ಬೇಸಗೊಂಡಿದ್ದರೂ ಖಡಕ್ ಸಂದೇಶ ಕೊಟ್ಟು ಸೋಶಿಯಲ್ ಮೀಡಿಯಾದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾಗೆ ಬ್ರೇಕ್

ಸೋಶಿಯಲ್ ಮೀಡಿಯಾಗೆ ಬ್ರೇಕ್

ಚಾರ್ಮಿ ಹಾಗೂ ಪುರಿ ಜಗನ್ನಾಥ್ ಇಬ್ಬರಿಗ ಈ ಸಿನಿಮಾ ಗೆಲ್ಲಲೇ ಬೇಕಿತ್ತು. ಪುರಿ ಜಗನ್ನಾಥ್ ಹಾಗೂ ಚಾರ್ಮಿ ಇಬ್ಬರೂ ಈ ಹಿಂದೆ ನಿರ್ಮಿಸಿದ್ದ ಸಿನಿಮಾಗಳು ಸೋಲುಂಡಿದ್ದರು. ಆದರೆ, 2019ರಲ್ಲಿ ತೆರೆಕಂಡಿದ್ದ 'ಇಸ್ಮಾರ್ಟ್ ಶಂಕರ್' ಸೂಪರ್‌ ಡೂಪರ್ ಹಿಟ್ ಆಗಿತ್ತು. ಆ ಬಳಿಕ ನಿರ್ಮಿಸಿದ ಸಿನಿಮಾವೇ 'ಲೈಗರ್'. ಆದರೆ ಈ ಸಿನಿಮಾ ಹೀನಾಯವಾಗಿ ಸೋಲುಂಡಿದೆ. ಸಿನಿಮಾ ಬಿಡುಗಡೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಹೀಗಾಗಿ ಸದ್ಯ ಸೋಶಿಯ್ ಮೀಡಿಯಾದಿಂದ ಚಾರ್ಮಿ ಬ್ರೇಕ್ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.

ಮತ್ತೆ ಎದ್ದು ಬರುತ್ತೇವೆ

ಮತ್ತೆ ಎದ್ದು ಬರುತ್ತೇವೆ

'ಲೈಗರ್' ಸೋಲಿನ ಬಳಿಕ ಚಾರ್ಮಿ ಕೌರ್ ಕೆಲವು ದಿನಗಳು ಸೋಶಿಯಲ್ ಮೀಡಿಯಾದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಟ್ವಿಟರ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, " ಸೋಶಿಯಲ್ ಮೀಡಿಯಾದಿಂದ ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ. ಪುರಿ ಕನೆಕ್ಟ್ಸ್ ಮತ್ತೆ ಇದಕ್ಕಿಂತಲೂ ದೊಡ್ಡದಾಗಿ ಉತ್ತಮವಾಗಿ ಎದ್ದು ನಿಲ್ಲುತ್ತೆ. ಬದುಕಿ ಬದುಕಲು ಬಿಡಿ. ಎಂದು ಚಾರ್ಮಿ ಕೌರ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಟಾಲಿವುಡ್‌ನಲ್ಲಿ ದೊಡ್ಡ ಸಂಚಲವನ್ನೇ ಸೃಷ್ಟಿಸಿದೆ.

ಬ್ರೇಕ್ ಕೊಟ್ಟಿದ್ದು ಇದೇ ಮೊದಲಲ್ಲ!

ಬ್ರೇಕ್ ಕೊಟ್ಟಿದ್ದು ಇದೇ ಮೊದಲಲ್ಲ!

ಚಾರ್ಮಿ ಕೌರ್ ಸೋಶಿಯಲ್ ಮೀಡಿಯಾಗೆ ಬ್ರೇಕ್ ಕೊಟ್ಟಿದ್ದು ಇದೇ ಮೊದಲಲ್ಲ. 'ಲೈಗರ್' ಸಿನಿಮಾ ಶೂಟಿಂಗ್ ವೇಳೆನೂ ಚಾರ್ಮಿ ಕೌರ್ ಹೀಗೆ ಬ್ರೇಕ್ ತೆಗೆದುಕೊಂಡಿದ್ದರು. 'ಲೈಗರ್' ಸಿನಿಮಾ ಶೂಟಿಂಗ್ ವೇಳೆನೂ ಒಮ್ಮೆ ಚಾರ್ಮಿ ಕೌರ್ ಸೋಶಿಯಲ್ ಮೀಡಿಯಾದಿಂದ ಬ್ರೇಕ್ ತೆಗೆದುಕೊಂಡಿದ್ದರು." ಸೋಶಿಯಲ್ ಮೀಡಿಯಾದಿಂದ ಬ್ರೇಕ್ ತೆಗೆದು ಕೊಳ್ಲುತ್ತಿದ್ದೇನೆ. ಬೇಗ ಸಿಗುತ್ತೇನೆ." ಎಂದು ಟ್ವೀಟ್ ಮಾಡಿದ್ದರು. ಆಗ 'ಲೈಗರ್' ಸಿನಿಮಾ ಶೂಟಿಂಗ್ ನಡೆಯುತ್ತಿತ್ತು.

'ಲೈಗರ್'ಗೆ ಭಾರಿ ನಷ್ಟ

'ಲೈಗರ್'ಗೆ ಭಾರಿ ನಷ್ಟ

ಈ ವರ್ಷ ಟಾಲಿವುಡ್‌ನಲ್ಲಿ ಅತಿ ದೊಡ್ಡ ಸೋಲು ಕಂಡ ಸಿನಿಮಾ 'ಲೈಗರ್' ಎಂದು ಸಾಬೀತಾಗಿದೆ. 'ಲೈಗರ್' ಸಿನಿಮಾದಿಂದ ಸುಮಾರು 60 ರಿಂದ 70 ಕೋಟಿ ರೂ. ನಷ್ಟ ಆಗಿದೆ ಎನ್ನಲಾಗಿದೆ. ಆದರೆ, ಈ ಸೋಲನ್ನು ಸವಾಲಾಗಿ ಸ್ವೀಕರಿಸಿರೋ ಪುರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್ ಆಡಿಕೊಂಡವರಿಗೆ ಟಕ್ಕರ್ ಕೊಡುವುದಕ್ಕೆ ನಿರ್ಧರಿಸಿದ್ದಾರೆ.

More from Filmibeat

English summary
Charmme Kaur Taking Break From Social Media After Liger Movie Failure, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X